Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನವಿರುಗುಳ್ಳೆ ಮೂಡಿಸುವ 10 ಸಂಗತಿಗಳು
ನಿಮಗೆ ಗೊತ್ತೆ ನಿಮ್ಮ ಮೈಮೇಲೆ ಏಳುವ ಸಣ್ಣ ಸಣ್ಣ ಗುಳ್ಳೆಗಳನ್ನು ನವಿರುಗುಳ್ಳೆಗಳೆಂದು ಯಾಕೆ ಕರೆಯುತ್ತಾರೆ? ಈ ಗುಳ್ಳೆಗಳು ಕೆಲವೇ ಕೆಲವು ಕಾರಣಗಳಿಂದ ಬರುತ್ತದೆಯಂತೆ. ಆದರೆ ನಾವಿದನ್ನು ಗಮನಿಸಲು ಹೋಗುವುದಿಲ್ಲ.
ಬೋಲ್ಡ್ ಸ್ಕೈನಲ್ಲಿ ಇದರ ಬಗ್ಗೆ ಬರೆಯಲು ಒಂದು ಕಾರಣವೆಂದರೆ ನಿಮಗೆಲ್ಲ ಗೊತ್ತಿರುವಂತೆ ಈಗ ಚಳಿ ಹೆಚ್ಚಾಗುತ್ತಿದೆ. ಚಳಿ ಕೂಡ ಮೈಮೇಲೆ ಈ ರೀತಿಯ ಗುಳ್ಳೆಗಳನ್ನು ಉಂಟುಮಾಡುತ್ತೆ. ಆಗ ನಾವು ಈ ಗುಳ್ಳೆಗಳು ಚಳಿಯನ್ನು ಹೊರತು ಪಡಿಸಿ ಬೇರೆ ಯಾವಾಗ ಬರುತ್ತದೆ ಅಂತ ಯೋಚಿಸಿದಾಗ ನಮಗೆ ಈ ಕೆಲವು ಕಾರಣಗಳು ಹೊಳೆಯಿತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.
ನೀವು ಈ ಕಾರಣಗಳನ್ನು ಓದಿದಾಗ ನಿಮಗೆ ಅಚ್ಚರಿಯಾಗುತ್ತದೆ. ಈ ಸಣ್ಣ ಕಾರಣಗಳನ್ನು ಗಮನಿಸಿರಲಿಲ್ಲವಲ್ಲ ಎಂದು ಅನಿಸುತ್ತದೆ. ಇವು ಬಹಳ ಸಣ್ಣ ಸಂಗತಿಗಳು ಆದರೆ ನಮ್ಮನ್ನು ಅಚ್ಚರಿಗೊಳಿಸುವ ಸತ್ಯಗಳು. ಓದಿ ನೋಡಿ ನಿಮಗೆ ಗೊತ್ತಾಗುತ್ತದೆ.
ನವಿರುಗುಳ್ಳೆ ಮೂಡಿಸುವ 10 ಸಂಗತಿಗಳು

ಒಂದು ಹಾಡು
ನೀವು ಯಾವುದಾದರೂ ಸುಂದರ ಪ್ರೇಮ ಗೀತೆಯನ್ನು ಕೇಳಿದಾಗ ನಿಮ್ಮ ಹೃದಯದ ತಾಳ ತಪ್ಪುತ್ತದೆ. ಆಗ ನಿಮ್ಮ ಕೈ ನೋಡಿಕೊಳ್ಳಿ ಅಲ್ಲಿ ಕೂದಲಿನೊಂದಿಗೆ ಸಣ್ಣ ಸಣ್ಣ ನವಿರುಗುಳ್ಳೆಗಳು ಎದ್ದಿರುವುದನ್ನು ಕಾಣುವಿರಿ.

ಲವ್ ಎಫೆಕ್ಟ್
ನೀವು ಪ್ರೀತಿಯಲ್ಲಿ ಬಿದ್ದಾಗ ನಿಮ್ಮ ಸಂಗಾತಿ ನಿಮ್ಮನ್ನು ಮೊದಲ ಬಾರಿಗೆ ಮುಟ್ಟಿದಾಗ ನಿಮ್ಮ ಮೈನವಿರೇಳುತ್ತದೆ. ವಿಚಿತ್ರ ಆದರೂ ಸತ್ಯ ಮೈ ಮೇಲೆ ನವಿರುಗುಳ್ಳೆಗಳೇಳುತ್ತವೆ.

ಫಲಿತಾಂಶಕ್ಕೆ ಕಾಯುತ್ತಿರುವಾಗ
ನಿಮ್ಮ ಫಲಿತಾಂಶಕ್ಕೆ ಆತಂಕದಿಂದ ಕಾಯುತ್ತಿರುವಿರಾ? ಎಲ್ಲ ವಿದ್ಯಾರ್ಥಿಗಳು ಈ ಕತೆಯನ್ನು ಹೇಳಿರುವುದನ್ನು ಕೇಳಿರಬಹುದು. ಆಗ ಮಾತ್ರವಲ್ಲ ನೀವು ಮಗುವನ್ನು ನಿರೀಕ್ಷಿಸುತ್ತಿರುವಾಗ ನಿಮ್ಮ ಪ್ರೆಗ್ನೆಸಿ ಟೆಸ್ಟ್ ಏನಾಗುವುದೋ ಅನ್ನೋ ಕ್ಷಣಗಳಲ್ಲಿ ಕೂಡ ಮೈನವಿರೆದ್ದು ನವಿರುಗುಳ್ಳೆಗಳು ಮೂಡಿರುವುದನ್ನು ಕಾಣಬಹುದು.

ಹೊಸದನ್ನು ಸಂಧಿಸುವಾಗ
ನೀವು 'ಇಂಟರ್ವ್ಯೂ'ಗೆ ಹೋದಾಗ ಅಥವ ಯಾವುದಾದರೂ ಮುಖ್ಯವಾದ ಮೀಟಿಂಗ್ ಗೆ ಹೋದಾಗ ನರ್ವರ್ಸ್ ಆಗುತ್ತಿರಿ. ಈ ಸಮಯದಲ್ಲಿ ಕೂಡ ನವಿರುಗುಳ್ಳೆಗಳು ಏಳುತ್ತವೆ.

ಥ್ರಿಲ್ ಆದಾಗ
ನೀವು ಥ್ರಿಲ್ ಆದಾಗ ನಿಮ್ಮ ಮೈ ಇಡಿ ಈ ರೀತಿಯ ನವಿರುಗುಳ್ಳೆಗಳೇಳುವುದನ್ನು ಕಾಣಬಹುದು. ಮತ್ತೆಂದಾದರೂ ನೀವು ಥ್ರಿಲ್ ಆಗುವುದನ್ನು ನಿಮ್ಮ ದೇಹದಲ್ಲಾಗುವ ಈ ಅಚ್ಚರಿಯನ್ನು ಗಮನಿಸಿ.

ಒಳ್ಳೆಯ ಪುಸ್ತಕಗಳು
ನೀವು ಒಳ್ಳೆಯ ಪುಸ್ತಕವೊಂದನ್ನು ಓದಿದಾಗ ಇದನ್ನು ಅನುಭವಿಸುವಿರಿ.

ಮದುವೆಯ ಕ್ಷಣಗಳು
ನೀವು ಪ್ರೀತಿಸಿದ ಸಂಗಾತಿಯೊಂದಿಗೆ ಮದುವೆಯಾಗಿ ಜೀವನದ ಹೆಜ್ಜೆಗಳನ್ನು ಜೊತೆಯಾಗಿ ಇಡುವ ಸಂದರ್ಭದಲ್ಲಿನ ರೋಮಾಂಚನ ಮಾತಿಗೆ ನಿಲುಕದ್ದು. ಮದುವೆಯ ದಿನಾಂಕವನ್ನು ನೆನೆಸಿಕೊಂಡರೆ ಸಾಕು ಮೈನವಿರೇಳುತ್ತದೆ.

ಭಯಹುಟ್ಟಿಸುವ ಕತೆಗಳು
ಅಡಗೋಲಜ್ಜಿಯ ದೆವ್ವದ ಕತೆಗಳನ್ನು ಕೇಳಿದಾಗ ಥ್ರಿಲ್ ಆಗುವ ಜೊತೆಯಲ್ಲಿಯೇ ಮೈ ಮೇಲೆ ನವಿರುಗುಳ್ಳೆಗಳೇಳುತ್ತವೆ.

ತೀವ್ರವಾದ ಭಾವನೆಗಳು
ನಿಮಗೆ ತುಂಬ ಹತ್ತಿರವಾದವರು ಅಳುತ್ತಿರುವಾಗ ಅವರನ್ನು ಸಮಾಧಾನ ಮಾಡುತ್ತಿರುವಾಗಲೇ ನಿಮಗೆ ಅಳು ಬರುತ್ತದೆಯಲ್ಲವೆ. ಅಂತಹ ಸಂದರ್ಭಗಳಲ್ಲಿ ನವಿರುಗುಳ್ಳೆಗಳೇಳುತ್ತವೆ.

ಭಯ
ಎಲ್ಲಕ್ಕಿಂತ ಹೆಚ್ಚಾಗಿ ನಿಮಗೆ ಭಯವಾದಾಗ ನಿಮ್ಮ ಮೈ ಮೇಲೆ ನವಿರುಗುಳ್ಳೆಗಳೇಳುತ್ತವೆ. ಉದಾಹರಣೆಗೆ ನಿಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎನ್ನಿಸಿದಾಗ ಭಯವಾಗುತ್ತಲ್ಲ ಆಗ ನವಿರುಗುಳ್ಳೆಗಳೆದ್ದಿರುವುದನ್ನು ಕಾಣಬಹುದು.



Click it and Unblock the Notifications
