Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಒಂದೇ ಒಂದು ಬಾಳೆಹಣ್ಣಿನ ಬೆಲೆ ಬರೋಬ್ಬರಿ 10 ಕೋಟಿ ರೂಪಾಯಿ..! ಏಕೆ ಗೊತ್ತಾ?
ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಎಷ್ಟೊಂದು ವಿಚಿತ್ರ ಘಟನೆಗಳು ನಡೆಯುತ್ತವೆ ಅನ್ನೋದನ್ನ ನಾವು ಊಹಿಸಲು ಕೂಡ ಸಾಧ್ಯವಿಲ್ಲ. ಇನ್ನು ಅಚ್ಚರಿಯ ವಿಚಾರಗಳಲ್ಲಿ ಇತ್ತೀಚಿಗೆ ವೈರಲ್ ಆಗುತ್ತಿರುವುದು ಒಂದು ಬಾಳೆ ಹಣ್ಣು. ಹೌದು ಬಾಳೆ ಹಣ್ಣಿಗಡ ಅಬ್ಬಬ್ಬಾ ಅಂದ್ರೆ 10 ರೂಪಾಯಿ ಇರಬಹುದು. ದೊಡ್ಡ ಬಾಳೆ ಹಣ್ಣಿಗೆ 10 ಹೆಜ್ಜೆಂದರೆ 10 ರೂಪಾಯಿ ನೀಡಿರಬಹುದು, ಆದ್ರೆ ಎಂದಾದ್ರು ಕೋಟಿ ರೂಪಾಯಿ ಬೆಲೆಯ ಬಾಳೆಹಣ್ಣು ನೋಡಿದ್ದೀರಾ?
ನಿಮಗೆ ಅಚ್ಚರಿ ಎನಿಸಬಹುದು. ಕೇವಲ ಒಂದೇ ಒಂದು ಬಾಳೆ ಹಣ್ಣು ನೂರಲ್ಲ, ಸಾವಿರ-ಲಕ್ಷವೂ ಅಲ್ಲ ಬರೋಬ್ಬರಿ ಕೋಟಿ ರೂಪಾಯಿ ಬೆಲೆಯನ್ನು ಹೊಂದಿದೆ. ಮೌರಿಝಿಯೊ ಕ್ಯಾಟೆಲನ್ ಎಂಬ ಕಮಿಡಿಯನ್ ಒಬ್ಬರು ಈ ಬಾಳೆಹಣ್ಣನ್ನು ಹರಾಜಿಗೆ ಹಾಕಲು ಮುಂದಾಗಿದ್ದು ಅಂದಾಜು 10 ಕೋಟಿ ರೂಪಾಯಿಗೆ ಮಾರಾಟವಾಗಲಿದೆ ಎಂದು ಹೇಳಲಾಗಿದೆ.

ಈ ಮೇಲಿನ ಫೋಟೋದಲ್ಲಿರುವ ಈ ಬಾಳೆಹಣ್ಣಿಗೆ ಈಗ 10 ಕೋಟಿ ರೂಪಾಯಿಯಂತೆ. ಆದ್ರೆ ಈ ಬಾಳೆಹಣ್ಣಿನ ವಿಷೇಷವೇನು ಎಂದು ನೀವು ಕೇಳಬಹುದು. ಈ ಬಾಳೆಹಣ್ಣಿಗೆ ಯಾವುದೇ ವಿಶೇಷ ಗುಣವಿಲ್ಲ. ನಾವು ನೀವು 5 ರೂಪಾಯಿ ನೀಡಿ ಖರೀದಿಸಿ ತಿನ್ನುವ ಸಾಮಾನ್ಯ ಬಾಳೆ ಹಣ್ಣು ಇದಾಗಿದೆ. ಆದ್ರೆ ಇಷ್ಟೊಂದು ಬೆಲೆ ನೀಡಿ ಅದನ್ನು ಏಕೆ ಖರೀದಿಸುತ್ತಿದ್ದಾರೆ ಎಂಬ ತಿಳಿಯುವ ಕುತೂಹಲ ನಿಮಗಿದ್ದರೆ ಈ ಸ್ಟೋರಿ ಓದಿ ನೋಡಿ.
ಹಿಂದೊಮ್ಮೆ ಇದೇ ಕಲಾಕೃತಿಯನ್ನು ಆತ ಬರೋಬ್ಬರಿ 85 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ. ಆದ್ರೆ ಈ ಬಾರಿ ಇದೇ ಕಲಾಕೃತಿ 10 ಕೋಟಿ ರೂಪಾಯಿಗೆ ಹರಾಜಾಗಲಿದೆ ಎಂದು ಅಂದಾಜಿಸಲಾಗಿದೆ. ಇದೇ ನವೆಂಬರ್ 20 ರಂದು ನ್ಯೂಯಾರ್ಕ್‌ನಲ್ಲಿನ ಸೋಥೆಬಿಸ್ ನೌ ನ ಈವ್ನಿಂಗ್ ಹರಾಜಿನಲ್ಲಿ ಮಾರಾಟವಾಗಲಿದೆ. ಮೊಟ್ಟ ಮೊದಲ ಬಾರಿಗೆ ಆತ 2019ರಲ್ಲಿ ಆರ್ಟ್ ಬಾಸೆಲ್ ಮಿಯಾಮಿಯಲ್ಲಿ ಹರಾಜು ಹಾಕಿದ್ದರು. ಈ ವೇಳೆ ಹಲವರು ಇದೊಂದು ಗಿಮಿಕ್ ಎಂದಿದ್ದರು. ಆದ್ರೆ ಅಲ್ಲಿ ದಾಖಲೆ ಬೆಲೆಗೆ ಮಾರಾಟವಾಗಿತ್ತು. ಹಾಗೆ ಇದು ವಿಶ್ವದ ಅತ್ಯಂತ ನಟೋರಿಯಸ್ ಬಾಳೆಹಣ್ಣು ಎಂಬ ಕೀರ್ತಿ ಪಡೆದಿತ್ತು.
ಅವರು ಬಾಳೆಹಣ್ಣಿಗೆ ಒಂದು ಸಣ್ಣ ಟೇಪ್ ಹಚ್ಚಿ ಅದನ್ನು ವೀಕ್ಷಣೆಗೆ ಇಡುತ್ತಾರೆ, ಆಗೆ 'ಹಸಿದ ಕಲಾವಿದ' ಎಂಬ ಕ್ಯಾಪ್ಷನ್ ಸಹ ನೀಡುತ್ತಾರೆ. ಇದು ಅವರು ಬರೆದಿರುವ ಒಂದು ಪುಸ್ತಕದಿಂದ ಪ್ರೇರಣೆ ಪಡೆದಿದೆಯಂತೆ. ಇನ್ನೂ ಅಚ್ಚರಿ ಎಂದರೆ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತ ಕೂಗಿದವರಿಗೆ ಈ ಬಾಳೆಹಣ್ಣು ಸಿಗುತ್ತದೆ, ಆದ್ರೆ ಅಲ್ಲಿರುವ ಬಾಳೆ ಹಣ್ಣು ನೀಡಲಾಗುವುದಿಲ್ಲ, ಬದಲಿಗೆ ಅದೇ ರೀತಿಯಲ್ಲಿ ಮತ್ತೊಂದು ಬಾಳೆಹಣ್ಣನ್ನು ಫ್ರೇಮ್‌ನಲ್ಲಿ ಹಾಕಿ ನೀಡಲಾಗುತ್ತದೆ. ಪ್ರಸ್ತುತ ನವೆಂಬರ್ 20ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಈ ಬಾರಿ ಯಾರು ಎಷ್ಟು ಹಣ ನೀಡಿ ಈ ಬಾಳೆಹಣ್ಣನ್ನು ಖರೀದಿಸಲಿದ್ದಾರೆ? ಎಂಬುದಕ್ಕೆ ತೆರೆ ಬೀಳಲಿದೆ.



Click it and Unblock the Notifications
