Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ವಿದೇಶಿ ಅಂಗಡಿಯಲ್ಲಿ ಭಾರತದ ತಿಂಡಿ, ತರಕಾರಿ ದರ ಕೇಳಿದ್ರೆ ಶಾಕ್ ಆಗುತ್ತೆ..!
ಭಾರತದ ಮಾರುಕಟ್ಟೆ ಯಾವಾಗಲು ಬೆಲೆ ಏರಿಕೆ ಮೂಲಕವೇ ಸುದ್ದಿಯಾಗುತ್ತದೆ. ಎಂದಿಗೂ ಬೆಲೆ ಇಳಿಕೆಯಿಂದ ಸುದ್ದಿಯಾಗಿದ್ದೇ ಇಲ್ಲ. ದಿನ ಬಳಕೆ ವಸ್ತುಗಳು ಸೇರಿ ಎಲ್ಲಾ ವಸ್ತುಗಳ ಬೆಲೆ ಇಂದು ದಿನದಿಂದ ದಿನಕ್ಕೆ ಏರಿಕೆಯಾಗುತ್ತದೆ ಇದೆ. ಆದ್ರೆ ದೂರದ ವಿದೇಶದಲ್ಲಿ ಭಾರತದ ವಸ್ತುಗಳ ಬೆಲೆ ಗಗನಕ್ಕೇರಿತ್ತಿದೆ.
ದೆಹಲಿ ಮೂಲದ ಮತ್ತು ಈಗ ಲಂಡನ್‌ನಲ್ಲಿ ನೆಲೆಸಿರುವ ಮಹಿಳೆಯೊಬ್ಬರು ಲಂಡನ್‌ನಲ್ಲಿರುವ ಭಾರತೀಯ ವಸ್ತುಗಳ ಬೆಲೆ ಏರಿಕೆ ಕುರಿತು ಬೆಳಕು ಚೆಲ್ಲಿದ್ದಾರೆ, ಅಲ್ಲಿಯೂ ಭಾರತದಲ್ಲಿ ಬಳಸುವ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎಂದಿದ್ದಾರೆ.

ಲಂಡನ್‌ನಲ್ಲಿ ಭಾರತೀಯ ದಿನಸಿ ವಸ್ತುಗಳ ದುಬಾರಿ ಬೆಲೆಯನ್ನು ಎತ್ತಿ ತೋರಿಸುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ಭಾರತೀಯ ಗ್ರಾಹಕರ ಗಮನವನ್ನು ಸೆಳೆಯುತ್ತಿದೆ. ಈ ಕ್ಲಿಪ್‌ನಲ್ಲಿ, ಮೂಲತಃ ದೆಹಲಿಯಿಂದ ಮತ್ತು ಈಗ ಲಂಡನ್‌ನಲ್ಲಿ ನೆಲೆಸಿರುವ ಚಾವಿ ಅಗರ್ವಾಲ್ ಅವರು ಬ್ರಿಟಿಷ್ ರಾಜಧಾನಿಯಲ್ಲಿರುವ ಭಾರತೀಯ ಕಿರಾಣಿ ಅಂಗಡಿಯ ವಿವರವಾದ ಪ್ರವಾಸವನ್ನು ನೀಡಿದ್ದಾರೆ.
ಲಂಡನ್‌ನಲ್ಲಿ ಮಾರಾಟವಾಗುವ ಜನಪ್ರಿಯ ಭಾರತೀಯ ತಿಂಡಿಗಳು ಮತ್ತು ಮನೆಗೆ ಮರಳಿದ ಬೆಲೆಗಳ ನಡುವಿನ ಬೆಲೆ ವ್ಯತ್ಯಾಸಗಳ ತಿಳಿಸಿದ್ದಾರೆ. ಚಿಪ್ಸ್, ಮ್ಯಾಗಿ, ಬಿಸ್ಕೇಟ್ ಸೇರಿದಂತರ ತರಕಾರಿಗಳ ಬೆಲೆ ಏರಿಕೆ ನೋಡಬಹುದು. ಭಾರತದಲ್ಲಿ ಲೇಸ್ ಚಿಪ್ಸ್ ಪ್ಯಾಕೆಟ್‌ನ ಬೆಲೆ ಸುಮಾರು 20 ರೂ ಆಗಿದ್ದರೆ, ಅದೇ ಪ್ಯಾಕೆಟ್‌ನ ಬೆಲೆ ಲಂಡನ್‌ನಲ್ಲಿ 95 ರೂ. ಆಗಿದೆ. ಅದೇ ರೀತಿ ಲಂಡನ್ ಕಿರಾಣಿ ಅಂಗಡಿಗಳಲ್ಲಿ ಫ್ಯಾಮಿಲಿ ಪ್ಯಾಕ್ ಮ್ಯಾಗಿ ನೂಡಲ್ಸ್ 300 ರೂ.ಗೆ ಮಾರಾಟವಾಗುತ್ತಿದೆ.
ಅಗರ್ವಾಲ್ ಭಾರತೀಯ ಅಗತ್ಯ ವಸ್ತುಗಳ ಇತರ ವಿಭಾಗಗಳ ಬೆಲೆಯನ್ನು ಬಹಿರಂಗಪಡಿಸಿದರು. ಅನೇಕ ಭಾರತೀಯ ಖಾದ್ಯಗಳಲ್ಲಿ ಅತ್ಯಗತ್ಯ ಪದಾರ್ಥವಾಗಿರುವ ಪನೀರ್ 700 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಹಣ್ಣುಗಳು ಮತ್ತು ತರಕಾರಿಗಳು ಸಹ ಗಮನಾರ್ಹ ಏರಿಕೆ ನೋಡಬಹುದು. ಅಲ್ಫೊನ್ಸೊ ಮಾವಿನ ಹಣ್ಣನ್ನು ಕೇವಲ ಆರು ಪೀಸ್‌ಗೆ 2,400 ರೂ.ಗಳಷ್ಟಿದ್ದರೆ, ಭಿಂಡಿ (ಒಕ್ರಾ) ಪ್ರತಿ ಕಿಲೋಗ್ರಾಂಗೆ 650 ರೂ. ಹಾಗಲಕಾಯಿ ಕೆ.ಜಿಗೆ 1,000 ರೂ ಬೆಲೆ ನಿಗದಿಯಾಗಿದೆ.
ಇದಿಷ್ಟು ತರಕಾರಿ, ಹಣ್ಣಿನ ಬೆಲೆಯಾದರೆ ಅಗತ್ಯ ವಸ್ತು ಅಕ್ಕಿಯ ಬೆಲೆ ಕೇಳಿ ಜನರು ಶಾಕ್ ಆಗಿದ್ದಾರೆ. 10 ಕೆಜಿ ಬಾಸ್ಮತಿ ಅಕ್ಕಿ ಚೀಲಕ್ಕೆ 2,500 ರೂ. ಎಲ್ಲಾ ಬೆಲೆಯು ಭಾರತಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಅಗರ್ವಾಲ್ ಏನನ್ನೂ ಖರೀದಿಸದೆ ಅಂಗಡಿಯಿಂದ ಹೊರ ಹೋಗಿದ್ದಾರೆ.
ಈ ವಿಡಿಯೋ ಪೋಸ್ಟ್ ಮಾಡಿದ ಬಳಿಕ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬೆಲೆ ಏರಿಕೆ ಭಾರತದಿಂದ ಹೊರಹೋಗಿರುವುದು ಕೆಲವರಿಗೆ ಅಚ್ಚರಿ ಮೂಡಿಸಿದರೆ ಮತ್ತೆ ಕೆಲವರಿಗೆ ಇದು ಸಾಮಾನ್ಯ ಎಂದಿದ್ದಾರೆ. ಈ ದರವನ್ನು ಭಾರತೀಯ ರೂಪಾಯಿಗೆ ಹೋಲಿಸಿದಾಗ ಹೆಚ್ಚಾಗಿ ಕಾಣಲಿದೆ, ಆದರೆ ಲಂಡನ್‌ನಲ್ಲಿ ವ್ಯವಹರಿಸುವಾಗ ಇದು ಸಾಮಾನ್ಯ ದರವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಡಾಲರ್ ದರಕ್ಕೆ ನಾವು ಹೋಲಿಸಿದರೆ ಇದು ಹೆಚ್ಚು ಎನಿಸದೆ ಇರಬಹುದು. ಆದರೆ ಭಾರತೀಯ ರೂಪಾಯಿಯಲ್ಲಿ ನೋಡಿದರೆ ಇದು ಅತ್ಯಂತ ದುಬಾರಿಯಾಗುತ್ತದೆ. ಜೊತೆಗೆ ಈ ದರ ಮೊದಲು ಎಷ್ಟಿತ್ತು ಈಗ ಎಷ್ಟಾಗಿದೆ ಎಂಬುದನ್ನು ಸಹ ವಿವರಿಸಿದ್ದರೆ ದರ ಏರಿಕೆ ಪ್ರಮಾಣ ಸಹ ನೋಡುಗರಿಗೆ ತಿಳಿಯುತ್ತಿತ್ತು.
ಈ ವಿಡಿಯೋ ನೋಡಿದ ಮಂದಿ ಒಂದೊಂದು ರೀತಿ ಕಮೆಂಟ್‌ಗಳ ಮಾಡುತ್ತಿದ್ದಾರೆ. ಕೆಲವರು ಅಲ್ಲಿ ದರ ಹೆಚ್ಚಾದರೆ ಭಾರತಕ್ಕೆ ವಾಪಾಸು ಬನ್ನಿ ಇಲ್ಲಿಯೂ ದರ ಗಗನಕ್ಕೇರಿದೆ. ಆದ್ರೆ ನೀವು ಅಲ್ಲಿ ಡಾಲರ್ ಪಡೆಯುತ್ತೀರಿ. ನಾವು ರೂಪಾಯಿ ಪಡೆದು ಇದೇ ದುಬಾರಿ ಬೆಲೆಗೆ ವಸ್ತುಗಳ ಖರೀದಿಸುತ್ತೇವೆ ಎಂದಿದ್ದಾರೆ.



Click it and Unblock the Notifications
