Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಅನಂತ್ ಅಂಬಾನಿ ಮದುವೆಯ ಆಮಂತ್ರಣ ಪತ್ರಿಕೆ ಬೆಲೆ ಎಷ್ಟು ಲಕ್ಷ ಗೊತ್ತಾ? ಇನ್ನಿಬ್ಬರಿಗೆ ಇಷ್ಟು ಖರ್ಚು ಮಾಡಿರಲಿಲ್ಲ, ಇದರಲ್ಲಿ ಏ
ಏಷ್ಯಾದ ನಂಬರ್ 1 ಶ್ರೀಮಂತ ಮುಖೇಶ್ ಅಂಬಾನಿ ಮದುವೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ, ಮದುವೆಗೆ ಕೆಲವೇ ದಿನಗಳಿರುವಾಗ ಅಂಬಾನಿ ಕುಟುಂಬ ಪೂಜಾ ಕಾರ್ಯದಲ್ಲಿ ನಿರತವಾಗಿದೆ. ನೀತಾ ಅಂಬಾನಿ-ಮುಖೇಶ್ ಅಂಬಾನಿಯ ಕೊನೆಯ ಮಗ, ಮುದ್ದಿನ ಮಗ ಅನಂತ್ ಅಂಬಾನಿ.
ಮನೆಯ ಚಿಕ್ಕ ಮಕ್ಕಳ ಮೇಲೆ ತುಸು ಮುದ್ದು ಹೆಚ್ಚಾಗಿಯೇ ಇರುವುದು ಎಲ್ಲಾ ಮನೆಯಲ್ಲಿ ನಡೆಯುವ ಸಂಗತಿ ತಾನೇ? ಇಲ್ಲಿಯೂ ಅಷ್ಟೇ ಮುದ್ದಿನ ಮಗನ ಮದುವೆಗೆ ಅಂಬಾನಿ ಕುಟುಂಬ ಹಣದ ಹೊಳೆಯನ್ನೇ ಹರಿಸುತ್ತಿದೆ.

ಸಾವಿರ ಕೋಟಿ ಖರ್ಚು ಮಾಡಿ ಪ್ರೀವೆಡ್ಡಿಂಗ್ , ಅದಕ್ಕೂ ಹೆಚ್ಚು ಖರ್ಚು ಮಾಡಿ ನಡೆಸುತ್ತಿರುವ ಮದುವೆ ಎಲ್ಲವೂ ಮುಖೇಶ್ ಅಂಬಾನಿಯ ನೆಟ್‌ವರ್ತ್‌ನ ಶೇ. 1ರಷ್ಟು ಮಾತ್ರ ಎಂದು ಮರೆಯಬೇಡಿ, ಅಂಬಾನಿ ಗ್ರ್ಯಾಂಡ್ ಮದುವೆ ಮಾಡಿದರು, ಅಂಬಾನಿ ಲೆವಲ್‌ಗೆ ಅಲ್ಲದಿದ್ದರೂ ನಮ್ಮ ಲೆವಲ್‌ಗೆ ಮದುವೆ ಗ್ರ್ಯಾಂಡ್ ಮಾಡಬೇಕೆಂದು ಸಾಲ ಮಾಡುವ ಮುನ್ನ ಈ ವಿಷಯ ನೆನಪಿರಲಿ ಅಷ್ಟೇ...
ಅನಂತ್ ಅಂಬಾನಿಯ ಮದುವೆಯ ಪ್ರತಿಯೊಂದು ವಿಷಯಗಳೂ ಸದ್ದು ಮಾಡುತ್ತಿದೆ, ಇದೀಗ ಆಹ್ವಾನ ಪತ್ರಿಕೆ ಕೂಡ ಗಮನ ಸೆಳೆದಿದೆ.
ಮತ್ತಿಬ್ಬರು ಮಕ್ಕಳಿಗೆ ಮಾಡಿಸಿದ್ದ ಮದುವೆಯ ಆಮಂತ್ರಂ ಪತ್ರಿಕೆಕ್ಕಿಂತಲೂ ದುಬಾರಿ ಈ ಮಗನ ಮದುವೆ ಆಮಂತ್ರಣ ಪತ್ರಿಕೆ
ವರದಿ ಪ್ರಕಾರ ಅನಂತ್ ಅಂಬಾನಿಯ ಮದುವೆಗೆ ಮಾಡಿಸಿರುವ ಆಮಂತ್ರಣ ಪತ್ರಿಕೆ ಬೆಲೆ ಆಕಾಶ್ ಅಂಬಾನಿ ಮದುವೆಗೆ ಮಾಡಿಸಿರುವುದಕ್ಕಿಂತಲೂ ಶೇ. 366ರಷ್ಟು ದುಬಾರಿ, ಇಶಾ ಅಂಬಾನಿ ಮದುವೆಗೆ ಮಾಡಿಸಿರುವುದಕ್ಕಿಂತಲೂ 2. 3 ಹೆಚ್ಚು ದುಬಾರಿ. ಆ ಆಮಂತ್ರಣ ಪತ್ರಿಕೆ ಜೊತೆ ಇಟ್ಟಿರುವ ಶಾಲೂ ಬೆಲೆಯೇ 10ರಿಂದ 12 ಸಾವಿರ ಇದೆಯಂತೆ! ವರದಿಗಳ ಪ್ರಕಾರ ಒಂದು ಮದುವೆ ಆಮಂತ್ರಣ ಪತ್ರಿಕೆ ಬೆಲೆ 6-7 ಲಕ್ಷ, ಆಕಾಶ್ ಅಂಬಾನಿ ಮದುವೆಯ ಆಮಂತ್ರಣ ಪತ್ರಿಕೆ ಬೆಲೆ 1.5 ಲಕ್ಷ, ಇಶಾ ಅಂಬಾನಿ ಮದುವೆಗೆ ಮಾಡಿಸಿದ್ದ ಆಮಂತ್ರಣ ಪತ್ರಿಕೆ ಬೆಲೆ 3 ಲಕ್ಷ. ಮತ್ತೆ ಕನ್‌ಪ್ಯೂಸ್ ಆಗಬೇಡಿ, ಒಂದೇ ಒಂದು ಮದುವೆ ಆಮಂತ್ರಣ ಪತ್ರಿಕೆ ಬೆಲೆ 6-7 ಲಕ್ಷ.
#WATCH | Video of wedding invitation card of Anant Ambani and Radhika Merchant as shared by one of the card recepients pic.twitter.com/zTas6pjsUM
— ANI (@ANI) June 27, 2024
ಆ ದುಬಾರಿ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಏನೇನು ಇದೆ?
ಅದರಲ್ಲಿ ಹಲವಾರು ಕಾರ್ಡ್‌ಗಳಿದೆ, ಅದರಲ್ಲಿ ಒಂದು ಕಾರ್ಡ್ ದೇವಾಲಯ ದ್ವಾರದಂತಿದೆ, ಅದರೊಳಗಡೆ ದೇವರ ವಿಗ್ರಹಗಳ ಜೊತೆಗೆ ಆಮಂತ್ರಣದ ಕರೆಯೋಲೆ ಇದೆ. ಮತ್ತೊಂದು ಕಾರ್ಡ್‌ನಲ್ಲಿ ವಿಷ್ಣು ಮೂರ್ತಿಯ ಕೆತ್ತನೆ ಇದೆ. ಮತ್ತೊಂದು ಮಂತ್ರದಲ್ಲಿ ಮಂತ್ರಗಳಿವೆ.... ಹೀಗೆ ಮಗನ ಮದುವೆಯಲ್ಲಿ ದೇವರ ಆಶೀರ್ವಾದವನ್ನು ಸಾರಿ ಸಾರಿ ಕೇಳಿದೆ ಅಂಬಾನಿ ಕುಟುಂಬ.
ದೇವರ ಮೇಲೆ ಅಪಾರ ಭಕ್ತಿ ಈ ಕುಟುಂಬಕ್ಕೆ
ದೇವರ ಮೇಲೆ ತುಂಬಾನೇ ನಂಬಿಕೆ ಇಟ್ಟಿರುವ ಈ ಕುಟುಂಬ ಮಗನ ವಿಷಯದಲ್ಲಿ ತುಸು ಹೆಚ್ಚೇ ದೇವರ ಮೊರೆ ಹೋದಂತೆ ಕಾಣುತ್ತಿದೆ.
ಜುಲೈ 12ಕ್ಕೆ ಮದುವೆ , ಈ ಜೋಡಿ ಚೆನ್ನಾಗಿರಲಿ....



Click it and Unblock the Notifications
