Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭೂಮಿಗೆ ಅನ್ಯಗ್ರಹ ಜೀವಿ..ಚಂಡಮಾರುತದ ಹೊಡೆತ: ಭಯಾನಕ ಭವಿಷ್ಯ ನುಡಿದ ಟೈಮ್ ಟ್ರಾವಲರ್
ನೀವು ಟೈಮ್ ಟ್ರಾವಲ್ ಬಗ್ಗೆ ಕೇಳಿರುತ್ತೀರಿ ಇಲ್ಲವೆ ಯಾವುದಾದರು ಸಿನಿಮಾದಲ್ಲಿ ಈ ಕುರಿತು ನೋಡಿರುತ್ತೀರಿ, ಅಂದ್ರೆ ಭೂತಕಾಲಕ್ಕೆ ತೆರಳುವುದು ಇಲ್ಲದೆ ಮುಂದೆ ಏನಾಗುತ್ತದೆ ಎಂಬುದನ್ನು ಆ ಕಾಲಕ್ಕೆ ಹೋಗಿ ನೋಡುವುದೇ ಟೈಮ್ ಟ್ರಾವಲ್. ಈ ರೀತಿಯ ಸಿನಿಮಾಗಳಲ್ಲಿ ಮುಂದೆ ಆಗಬಹುದಾದ ಅನಾಹುತಗಳ ಮೊದಲೇ ನೋಡಿ ಅದಕ್ಕೆ ಪರಿಹಾರವನ್ನು ಮೊದಲೇ ಮಾಡಿಕೊಳ್ಳುವುದೇ ಟೈಮ್ ಟ್ರಾವಲ್ ಕಾನ್ಸೆಪ್ಟ್.
ಆದ್ರೆ ಇಲ್ಲೊಬ್ಬ ಸ್ವಯಂ ಘೋಷಿತ ಟ್ರೈಮ್ ಟ್ರಾವಲರ್ ಈಗ ಭಯಾನಕವಾದ ಭವಿಷ್ಯವೊಂದನ್ನು ನುಡಿದಿದ್ದಾನೆ. ಆತ ಹೇಳಿಕೊಂಡಿರುವಂತೆ, ಆತ ಮುಂದೆ ಸಂಭವಿಸಬಹುದಾದ ಎಲ್ಲಾ ಘಟನೆಗಳನ್ನು ಟೈಮ್ ಟ್ರಾವಲ್ ಮೂಲಕ ತಿಳದುಕೊಂಡಿದ್ದಾನಂತೆ. ಹಾಗಾದ್ರೆ ಆತನ ಹೇಳಿದ ಆ ಭಯಾನಕ ವಿಚಾರಗಳೇನು ಎಂಬುದನ್ನು ನಾವಿಂದು ತಿಳಿಯೋಣ.

ನಾನೊಬ್ಬ ಟೈಮ್ ಟ್ರಾವಲರ್ ಎಂದು ಹೇಳಿಕೊಂಡು ವಿಡಿಯೋಗಳ ಹಂಚಿಕೊಳ್ಳುತ್ತಿರುವ @radianttimetraveler ಎಂಬ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈಗ ಮತ್ತೊಂದು ವಿಡಿಯೋ ಹಂಚಿಕೊಳ್ಳಲಾಗಿದೆ. ಅದರಲ್ಲಿ ಮುಂದೆ ಸಂಭವಿಸಬಹುದಾದ ಘಟನಾವಳಿಗಳ ವಿವರಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬರೋಬ್ಬರಿ 2 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ.
ಆದರೆ ಈ ವಿಡಿಯೋ ಕೆಳಗೆ ಕಮೆಂಟ್ ಮಾಡದಂತೆ ಆತ ಕಮೆಂಟ್ ಸೆಕ್ಷನ್ ಆಫ್ ಮಾಡಿದ್ದಾನೆ. ಏಕೆಂದರೆ ಇದರಲ್ಲಿ ಎಲ್ಲವೂ ದುರಂತಗಳೇ ತುಂಬಿದ್ದು, ಮೊದಲ ಘಟನೆ ನಡೆಯುವುದು ಅಸಾಧ್ಯ ಎನ್ನಲಾಗಿದೆ. ಹಾಗಾದ್ರೆ ಆತ ಹೇಳಿರೋದು ಏನು ಗೊತ್ತಾ?
ಮೇ 27, 2024ರಂದು ಟೆಕ್ಸಾಸ್ ಬೇರ್ಪಡುತ್ತದೆ ಎಂದಿದ್ದಾನೆ. ಅಂದರೆ ತನ್ನ ಸುತ್ತಲಿನ ದೇಶಗಳ ನಡುವೆ ಇರುವ ಎಲ್ಲಾ ವಿವಾದಗಳಿಂದ ಟೆಕ್ಸಾಸ್ ಹೊರಬರಲಿದೆಯಂತೆ. ಅಮೆರಿಕದಲ್ಲಿ ಎರಡನೇ ಅಂತರ್ಯುದ್ಧ ಪ್ರಾರಂಭವಾಗುತ್ತದೆ. ಇತರ ರಾಜ್ಯಗಳು ಟೆಕ್ಸಾಸ್‌ನ ಹೆಜ್ಜೆಗಳನ್ನು ಅನುಸರಿಸುತ್ತವೆ ಮತ್ತು ಇತರ ದೇಶಗಳು ಸಹ ಸೇರಿಕೊಳ್ಳುತ್ತವೆ. ಯುದ್ಧವು ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ಸಹ ನೋಡಬಹುದು. ಅಂತರ್ಯುದ್ಧವಾಗಿ ಪ್ರಾರಂಭವಾದ ಈ ಯುದ್ಧವು ಮೂರನೇ ಮಹಾಯುದ್ಧವಾಗಿ ಬದಲಾಗಲಿದೆ ಎಂಬ ಆಘಾತಕಾರಿ ಭವಿಷ್ಯ ಹೇಳಿದ್ದಾನೆ.
ಜೂನ್ 11, 2024ರಲ್ಲಿ ಒಬ್ಬ ಪ್ರಸಿದ್ಧ ಸಂಗೀತಗಾರ ಮರಣ ಹೊಂದುತ್ತಾನೆ. ಆದರೆ ಆತ ಮತ್ತೆ ಬದುಕುಳಿಯುತ್ತಾನೆ, ತನ್ನ ಸಾವನ್ನು ತಾನೇ ನಕಲು ಮಾಡಿರುವುದಾಗಿ ಆತ ಹೇಳಿಕೊಳ್ಳುತ್ತಾನೆ ಎಂದಿದ್ದಾನೆ.
ಸೆಪ್ಟೆಂಬರ್ 1, 2024ರಲ್ಲಿ "ದಿ ಚಾಂಪಿಯನ್" ಎಂಬ ಅನ್ಯಗ್ರಹದ ವಾಸಿ ಭೂಮಿಯ ಮೇಲೆ ಇಳಿದು 12,000 ಜನರನ್ನು ಮತ್ತೊಂದು ಗ್ರಹಕ್ಕೆ ಕರೆದೊಯ್ಯುತ್ತಾನೆ. ಜನರನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಲಾಗುತ್ತದೆ. "ದಿ ಅಧರ್ಸ್" ಎಂಬ ಮತ್ತೊಂದು ಅನ್ಯಲೋಕದ ಜನಾಂಗದಿಂದ ಜನರನ್ನು ರಕ್ಷಿಸಲು "ಚಾಂಪಿಯನ್" ಜನರನ್ನು ಕರೆದೊಯ್ಯುತ್ತದೆ ಎಂದು ಹೇಳಿಕೊಂಡಿದ್ದಾನೆ. ಈ ಕಾಲಘಟ್ಟದಲ್ಲಿ ದೊಡ್ಡ ಯುಎಫ್‌ಓಗಳ ನೋಡಿರುವ ವರದಿಯಾಗುತ್ತದೆ ಎಂದಿದ್ದಾನೆ.
ಸೆಪ್ಟೆಂಬರ್ 19, 2024ರಲ್ಲಿ ಅಮೆರಿಕ ಚಂಡಮಾರುತದ ಹೊಡೆತಕ್ಕೆ ಸಿಲುಕಿ ನಲುಗುತ್ತದೆ ಎಂಬ ಆಘಾತಕಾರಿ ಭವಿಷ್ಯ ಹೇಳಿದ್ದಾನೆ.
ಡಿಸೆಂಬರ್ 3, 2024 ರಲ್ಲಿ ಭೂಮಿಯ ಮೇಲ್ಮೈಯಲ್ಲಿ ಹೊಸ ರೀತಿಯ ಚಂಡಮಾರುತವು ರೂಪುಗೊಳ್ಳುತ್ತದೆ, ಇದನ್ನು ಫೈರ್‌ಹೆಲಿಕ್ಸ್ ಎಂದು ಕರೆಯಲಾಗುತ್ತದೆ, ಇದರಲ್ಲಿ ಬೆಂಕಿ ಮತ್ತು ಸುಂಟರಗಾಳಿಗಳು ಸೇರಿ, ವೇಗವಾಗಿ ಹರಡುತ್ತದೆ ಮತ್ತು ಅದರ ಹಾದಿಯಲ್ಲಿರುವ ಎಲ್ಲಾ ವಸ್ತುಗಳನ್ನು ಅದು ನಾಶ ಮಾಡಲಿದೆ ಎಂದಿದ್ದಾನೆ.
ಆದರೆ ಕೆಲವು ತಜ್ಞರ ಪ್ರಕಾರ ಇದು ನೂರಕ್ಕೆ ನೂರು ಸುಳ್ಳು, ಆತ ಫೇಮಸ್ ಆಗುವ ದೃಷ್ಟಿಯಿಂದ ಇಂತಹ ಸುಳ್ಳು ಹೇಳುತ್ತಿದ್ದಾನೆ. ಇದರಲ್ಲಿ ಯಾವೊಂದು ಘಟನೆಯು ಸಂಭವಿಸುವುದಿಲ್ಲ ಎನ್ನುತ್ತಿದ್ದಾರೆ. ಆದರೆ ಈ ವಿಡಿಯೋ ನೋಡಿದ ಮಂದಿ ನಿಜಕ್ಕೂ ಇದೆಲ್ಲಾ ಸಂಭವಿಸಲಿದ್ಯಾ ಎಂಬ ಗೊಂದಲಕ್ಕೂ ಬಿದ್ದಿದ್ದಾರೆ.



Click it and Unblock the Notifications