Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಸಾವಿಗೂ 10 ವರ್ಷ ಮೊದಲೇ ನಿಮ್ಮ ಆಯಸ್ಸು ಹೇಳುತ್ತೆ ಈ ಯಂತ್ರ..! AI ಹೇಳುತ್ತೆ ಭವಿಷ್ಯ!
ನಾವು ಭವಿಷ್ಯ ನುಡಿಯುವವರ ನಂಬಿ ಒಂದಿಷ್ಟು ಕೆಲಸ ಮಾಡುತ್ತೇವೆ. ನಮ್ಮ ದಿನ ಹೇಗಿರಲಿದೆ? ನಮ್ಮ ಆರ್ಥಿಕ ಲಾಭ ಹಾಗೂ ನಷ್ಟದ ದಿನಗಳನ್ನು ಗ್ರಹಗತಿಗಳ ಆಧಾರದ ಮೇಲೆ ನಿರ್ಧರಿಸಿ ಹೇಳುತ್ತಾರೆ. ಇದು ಬಹುತೇಕ ನಡೆಯುತ್ತದೆ ಕೂಡ. ಆದ್ರೆ ನೀವು ಯಾವಾಗ ಮೃತಪಡುತ್ತೀರಿ ಎಂಬುದು ನಿಮಗೆ ಗೊತ್ತಾ? ಯಾರಿಂದಲು ಸಾವು ಯಾವಾಗ ಬರುತ್ತೆ ಅನ್ನೋದನ್ನ ಭವಿಷ್ಯ ನೋಡಿಯೋದು ಸಾಧ್ಯವಿಲ್ಲ.
ಆದ್ರೆ ವಿಜ್ಞಾನ ಈ ಸಾವಲಿಗೆ ಈಗ ಉತ್ತರ ಹುಡುಕುವ ಕಾರ್ಯಕ್ಕೆ ಮುಂದಾಗಿದೆ. ಹೌದು ಇದೊಂದು ಅನಿರೀಕ್ಷಿತ ಆವಿಷ್ಕಾರವಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ನೀವು ಯಾವಾಗ ಮರಣ ಹೊಂದಬಹುದು ಎಂಬುದನ್ನು ಎಐ ತಂತ್ರಜ್ಞಾನ ಲೆಕ್ಕಾಚಾರ ಮಾಡಿ ವರದಿಯನ್ನು ನಿಮ್ಮ ಮುಂದೆ ಇಡುವ ಒಂದು ತಂತ್ರ ಇದಾಗಿದೆ.
AI ಈ ಅಸಾಧ್ಯ ಕೆಲಸವನ್ನು ಸಾಧ್ಯವಾಗಿಸುತ್ತಿದೆ.

ಲ್ಯಾನ್ಸೆಟ್ ಸಂಶೋಧಕರು ಸಾವನ್ನು ಮೊದಲೇ ಊಹಿಸುವ AI ಅನ್ನು ಅಭಿವೃದ್ಧಿಪಡಿಸಿದ್ದಾರೆ. ನೀವು ಸಾವಿಗೂ ಸುಮಾರು 10 ವರ್ಷಗಳ ಮೊದಲೇ ಅದನ್ನು ಈ ಎಐ ತಂತ್ರಜ್ಞಾನ ಊಹಿಸಲಿದೆಯಂತೆ. ಲ್ಯಾನ್ಸೆಟ್ ಸಂಶೋಧಕರು ಈ ಎಐ-ಇಸಿಜಿ ರಿಸ್ಕ್ ಎಸ್ಟಿಮೇಟರ್ ಅನ್ನು ಅಭಿವೃದ್ಧಿಪಡಿಸಿದ್ದು, ಆರೋಗ್ಯ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಮತ್ತು ನಾವು ಸಾವಿಗೆ ಎಷ್ಟು ಹತ್ತಿರವಾಗಿದ್ದೇವೆ ಎಂಬುದನ್ನು ಊಹಿಸಲು ಇದು ನೆರವಾಗುತ್ತಿದೆ.
ನಿಮ್ಮ ಸಂಪೂರ್ಣ ಆರೋಗ್ಯ ಯಾವ ಮಟ್ಟದಲ್ಲಿದೆ, ನಿಮ್ಮಲ್ಲಿರುವ ಅನಾರೋಗ್ಯ ಸಮಸ್ಯೆ ಏನು? ನಿಮ್ಮ ಅಂಗಾಂಗಳು ಯಾವ ಮಟ್ಟಿಗೆ ಕೆಲಸ ಮಾಡುತ್ತಿವೆ. ಎಷ್ಟು ವರ್ಷ ಹಾಗೆಯೇ ಕೆಲಸ ಮಾಡಲಿವೆ ಎಂಬುದನ್ನು ಲೆಕ್ಕಾಚಾರ ಮಾಡಿ ನಿಮ್ಮ ಅಂದಾಜು ಬದುಕುವ ವರ್ಷವನ್ನು ಹೇಳಲಿದೆ.
ಈ AI-ECG ರಿಸ್ಕ್ ಅಂದಾಜಿಸುವಿಕೆಯು ಮಾನವ ಇಸಿಜಿಯನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದುಬಂದಿದೆ. ಈ ಉಪಕರಣಕ್ಕೆ ಮನುಷ್ಯನ ECG ವರದಿ ಸಲ್ಲಿಸಿದಾಗ, ಅದು ಪರಿಶೀಲನೆಗೆ ಒಳಪಡಿಸಲಿದೆ. ಹಾಗೆ ಮುಂದೆ ನಿಮಗೆ ಯಾವ ಕಾಯಿಲೆ ಬರಬಹುದು ಎಂಬುದನ್ನೂ ಕೂಡ ವಿಶ್ಲೇಷಣೆ ಮಾಡಲಿದೆ. ಕಾಯಿಲೆಯ ತೀವ್ರತೆ ಹೆಚ್ಚಿದ್ದರೂ, ಚಿಕಿತ್ಸೆಯಿಂದ ಗುಣವಾಗಲು ಅವಕಾಶವಿಲ್ಲದಿದ್ದರೂ ಸಾವಿನ ನಿಖರತೆ ಕುರಿತು ತಿಳಿಸಲಿದೆ. ಅಂದಾಜು ಈ ತಂತ್ರವು ಶೇ.78ರಷ್ಟು ನಿಖರತೆಯ ಉತ್ತರವನ್ನೇ ನೀಡಲಿದೆ ಎಂದು ವಾದ ಮಂಡಿಸಲಾಗಿದೆ.
ಲ್ಯಾನ್ಸೆಟ್ ಸಂಶೋಧಕರು 1.89 ಲಕ್ಷಕ್ಕೂ ಹೆಚ್ಚು ಜನರಿಂದ ಇಸಿಜಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ ಮತ್ತು ಆ ಮಾದರಿಗಳಲ್ಲಿರುವ 76% ಜನರು ಭವಿಷ್ಯದಲ್ಲಿ ಹೃದಯ ಸಂಬಂಧಿ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ ಎಂದು ಉಪಕರಣವು ಭವಿಷ್ಯ ನುಡಿದಿದೆ. ಈಗಾಗಲೆ ಇಂಗ್ಲೆಂಡ್‌ನ ಆಸ್ಪತ್ರೆಗಳಲ್ಲಿ ಈ ಎಐ ಆಧಾರಿತ ಡೆತ್ ಕ್ಯಾಲ್ಕುಲೇಟರ್ ಬಳಕೆಗೆ ಸಿದ್ಧವಾಗಿದೆ. ಮುಂದಿನ ವರ್ಷದಲ್ಲಿ ಸಂಪೂರ್ಣ ಪರಿಶೀಲನೆ ಹಾಗೂ ವರದಿ ನೀಡಲು ಈ ಯಂತ್ರ ಬಳಕೆಗೆ ಬರಲಿದೆಯಂತೆ. ಹಾಗೇನಾದರು ಈ ತಂತ್ರಜ್ಞಾನ ಯಶಸ್ವಿಯಾದರೆ ನೀವು ಸಹಜವಾಗಿ ಮರಣ ಹೊಂದುವ ದಿನವನ್ನು ಮೊದಲೇ ಪತ್ತೆ ಮಾಡಬಹುದು.



Click it and Unblock the Notifications
