Latest Updates
-
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ?
ನಿಮ್ಮ ಜೀವನ ಬದಲಿಸುವ ಪವರ್‌ಫುಲ್ ಶಿವನ ಮಂತ್ರಗಳು: ಅದರ ಅರ್ಥಗಳೇನು? ಇಲ್ಲಿದೆ ಮಾಹಿತಿ!
ಮಹಾ ಶಿವರಾತ್ರಿಯಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಅದ್ರಲ್ಲೂ ಶಿವನು ಅಧರ್ಮ ವಿನಾಶಕ ಎಂದು ಕರೆಯಲಾಗಿದೆ. 'ಶಿವ' ಎಂಬುದು ಎರಡು ಮೂಲಭೂತ ಮಗ್ಗಲುಗಳನ್ನು ನಿರ್ದೇಶಿಸುತ್ತದೆ. 'ಶಿವ' ಎನ್ನುವ ಪದದ ಅಕ್ಷರಶಃ ಅರ್ಥವೆಂದರೆ 'ಯಾವುದು ಇಲ್ಲವೋ ಅದು' ಎಂದು. ಇಂದು ಆಧುನಿಕ ವಿಜ್ಞಾನವೂ ಕೂಡ ಎಲ್ಲವೂ ಶೂನ್ಯದಿಂದಲೇ ಸೃಷ್ಟಿಯಾಗುತ್ತವೆ ಮತ್ತು ಶೂನ್ಯದಲ್ಲಿಯೇ ಲೀನವಾಗುತ್ತದೆ ಎಂಬ ಅಂಶವನ್ನು ಸಾದರಪಡಿಸಿದೆ.
ಅಸ್ತಿತ್ವದ ತಳಹದಿ ಮತ್ತು ಬ್ರಹ್ಮಾಂಡದ ಮೂಲಭೂತ ಗುಣವು ಅಗಾಧ ಶೂನ್ಯವೇ. ಆಕಾಶಗಂಗೆಗಳು ಒಂದು ಅತಿ ಚಿಕ್ಕ ಸಂಭವವಷ್ಟೇ, ಕೇವಲ ಚಿಟಿಕೆಯಷ್ಟು. ಉಳಿದದ್ದೆಲ್ಲಾ ವಿಶಾಲವಾದ ಶೂನ್ಯ ಆಕಾಶ - ಇದನ್ನು ಶಿವ ಎಂದು ನಿರ್ದೇಶಿಸಲಾಗುತ್ತದೆ. ಇದೇ ಬ್ರಹ್ಮಾಂಡದ ಉಗಮಸ್ಥಾನ ಮತ್ತು ಇದೇ ಎಲ್ಲವನ್ನೂ ಸೆಳೆದು ನುಂಗುವ ಅಂತಿಮ ಸತ್ಯವೂ ಕೂಡ. ಎಲ್ಲವೂ 'ಶಿವ'ನಿಂದ ಬರುತ್ತದೆ, ಮತ್ತು 'ಶಿವ'ನಲ್ಲಿ ವಿಲೀನಗೊಳ್ಳುತ್ತದೆ ಎಂದು ಸದ್ಗುರು ಹೇಳುತ್ತಾರೆ.

ಹಾಗೆ ಶಿವನ ಮಂತ್ರವು ಅತ್ಯಂತ ಪ್ರಭಾವಶಾಲಿಯಾಗಿದೆ. ಆತನ ಕುರಿತಾಗಿರುವ ಹಲವು ಮಂತ್ರಗಳು ನಿಮ್ಮ ಜೀವನವನ್ನೇ ಬದಲಾಯಿಸಬಹುದು. ಮಂತ್ರವು ಶಾಂತಿ ಮತ್ತು ಸ್ಪಷ್ಟತೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಇದು ಅಡೆತಡೆಗಳನ್ನು ನಿವಾರಿಸಲು ಮತ್ತು ಸಕಾರಾತ್ಮಕ ಶಕ್ತಿಯನ್ನು ಹರಡಲು ಸಹಾಯ ಮಾಡುತ್ತದೆ ಎಂದು ಅನೇಕರು ನಂಬುತ್ತಾರೆ.
ಓಂ ನಮಃ ಶಿವಾಯ ಎಂದರೆ ನಾನು ಭಗವಾನ್ ಶಿವನಿಗೆ ನಮಿಸುತ್ತೇನೆ ಎಂದರ್ಥ.
ಮಹಾ ಮೃತ್ಯುಂಜಯ ಮಂತ್ರ
ಮಹಾಮೃತ್ಯುಂಜಯ ಮಂತ್ರವು ಹಿಂದೂ ಸಂಪ್ರದಾಯಗಳಿಂದ ಬಂದ ಶಕ್ತಿಶಾಲಿ ಮತ್ತು ಪ್ರಾಚೀನ ಮಂತ್ರವಾಗಿದೆ. ಈ ಮಂತ್ರಕ್ಕೆ ಸಾವನ್ನೂ ಜಯಿಸಬಲ್ಲ ಶಕ್ತಿ ಇದೆ ಎಂದು ನಂಬಲಾಗಿದೆ. ಅಕಾಲಿಕ ಮರಣದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಈ ಮಂತ್ರ ಬಹಳ ಶಕ್ತಿಶಾಲಿಯಂತೆ.
ಮಹಾ ಮೃತ್ಯುಂಜಯ ಮಂತ್ರ ಶ್ಲೋಕಗಳು
ಓಂ ತ್ರ್ಯಂಬಕಂ ಯಜಾಮಹೇ
ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವ ಬಂಧನಾನ್
ಮೃತ್ಯೋರ್ ಮುಕ್ಷೀಯ ಮಾಮೃತಾತ್
ಈ ಮಂತ್ರದ ಅರ್ಥವೇನು?
ಓ ಭಗವಾನ್ ಶಿವನೇ ನೀವು ಮೂರು ಕಣ್ಣುಗಳನ್ನು ಹೊಂದಿದ್ದೀರಿ ನಿರಂತರವಾಗಿ ಪೂಜಿಸಲ್ಪಡುತ್ತೀರಿ ನೀವು ಪರಿಮಳವನ್ನು ಆಸ್ವಾದಿಸುವವರು, ಭಕ್ತಿಯನ್ನು ಹೆಚ್ಚಿಸುವವರು, ಮುಕ್ತಿದಾತ. ಸಾವಿನ ಬಂಧಗಳಿಂದ ತಪ್ಪಿಸಿಕೊಳ್ಳಲು ನಮಗೆ ಸಹಾಯ ಮಾಡಿ ಮತ್ತು ಅಮರತ್ವವು ಸಾಧ್ಯವಾಗದಿದ್ದರೂ, ದಯವಿಟ್ಟು ಮೋಕ್ಷವನ್ನು ಸಾಧಿಸಲು ನನಗೆ ಶಕ್ತಿ ಕೊಡಿ ಎಂಬ ಅರ್ಥವನ್ನು ನೀಡುತ್ತದೆ. ಹಾಗೆ ಈ ಮಂತ್ರಗಳನ್ನು ಪಠಿಸುವುದರಿಂದ ಮನಸ್ಸಿನ ಶಾಂತಿ, ಗಮನ ಸುಧಾರಣೆ ಮತ್ತು ಅಡೆತಡೆಗಳನ್ನು ನಿವಾರಿಸಬಹುದು. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು, ದೀರ್ಘಾಯುಷ್ಯವನ್ನು ಉತ್ತೇಜಿಸಲು ಮತ್ತು ವ್ಯಕ್ತಿಯ ಜೀವನಕ್ಕೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ಸಹಾಯ ಮಾಡುತ್ತದೆ.
ರುದ್ರ ಮಂತ್ರ
"ಓಂ ನಮೋ ಭಗವತೇ ರುದ್ರಾಯ".
"ನಮಸ್ತೇ ರುದ್ರ ಮನ್ಯವ ಉತೋತ ಇಷವೇ ನಮಃ ।
ನಮಸ್ತೇ ಅಸ್ತು ಧನ್ವನೇ ಬಾಹುಭ್ಯಾಮುತ ತೇ ನಮಃ ॥".
"ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ |
ತನ್ನೋ ರುದ್ರಃ ಪ್ರಚೋದಯಾತ್ ||".
ಈ ರುದ್ರ ಮಂತ್ರವು ಶಿವನ ಉಗ್ರ ಮತ್ತು ರಕ್ಷಣಾತ್ಮಕ ರೂಪವನ್ನು (ರುದ್ರ) ಆವಾಹಿಸುವ ಅತ್ಯಂತ ಶಕ್ತಿಶಾಲಿ ಮಂತ್ರವಾಗಿದೆ. ಇದು ನಿಮ್ಮಲ್ಲಿನ ನಕಾರಾತ್ಮಕ ಶಕ್ತಿಯನ್ನು ತೊಲಗಿಸಲಿದೆ. ನಿಮ್ಮಲ್ಲಿ ಆಧ್ಯಾತ್ಮಿಕೆ ಹೆಚ್ಚಾಗುವಂತೆ ಇದು ಮಾಡಲಿದೆ.
ಶಿವ ಪಂಚಾಕ್ಷರಿ ಮಂತ್ರ
ಶಿವ ಪಂಚಾಕ್ಷರಿ ಮಂತ್ರವು 5 ಅಕ್ಷರಗಳ ಅತ್ಯಂತ ಪ್ರಭಾವಶಾಲಿ ಮಂತ್ರ ಎಂದು ಪರಿಗಣಿಸಲಾಗಿದೆ. ಈ ಮಂತ್ರವು "ನ-ಮಃ-ಶಿ-ವಾ-ಯ" ಎಂಬ ಐದು ಅಕ್ಷರಗಳನ್ನು ಒಳಗೊಂಡಿದ್ದು (ಓಂ ಸೇರಿ ಆರು), ಪಂಚಭೂತಗಳನ್ನು (ಭೂಮಿ, ನೀರು, ಅಗ್ನಿ, ವಾಯು, ಆಕಾಶ) ಪ್ರತಿನಿಧಿಸುತ್ತದೆ.
ಶಿವ ಪಂಚಾಕ್ಷರಿ ಮಂತ್ರದ ಶ್ಲೋಕಗಳು
ನಾಗೇಂದ್ರಹಾರಾಯ ತ್ರಿಲೋಚನಾಯ ಭಸ್ಮಾಂಗರಾಗಾಯ ಮಹೇಶ್ವರಾಯ |
ನಿತ್ಯಾಯ ಶುದ್ಧಾಯ ದಿಗಂಬರಾಯ ತಸ್ಮೈ ನ ಕಾರಾಯ ನಮಃ ಶಿವಾಯ ||



Click it and Unblock the Notifications

