Latest Updates
-
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ!
ಸುಂದರವಾಗಿ ಕಾಣಲು ಮುಖಕ್ಕೆ ಮಲ ಪ್ರಯೋಗ..! ಇಂತಹ ಅಹಸ್ಯ ನೀವೆಂದು ನೋಡಿರಲ್ಲ..!!
ನಾವು ಸುಂದರವಾಗಿ ಕಾಣಬೇಕು ಎಂಬ ಕಾರಣಕ್ಕೆ ಏನೆಲ್ಲಾ ವಸ್ತುಗಳ ಬಳಸಿ ಮಾಡಿರುವ ಕ್ರೀಮ್‌ಗಳಿ, ಫೇಸ್ ಮಾಸ್ಕ್‌ಗಳು, ಪೌಡರ್ ಹೀಗೆ ಹತ್ತಾರು ವಸ್ತು ಹಚ್ಚಿಕೊಳ್ಳುತ್ತೇವೆ. ಮುಖದಲ್ಲಿ ಕಲೆಗಳು ಇಲ್ಲದಂತೆ, ಸುಕ್ಕುಗಳು ಕಾಣದಂತೆ ಆಗಬೇಕು ಎಂಬುದೇ ಎಲ್ಲರ ಆಸೆಯೂ ಆಗಿರುತ್ತೆ. ಇದಕ್ಕಾಗಿಯೇ ದೊಡ್ಡ ಉದ್ಯಮವೂ ಹುಟ್ಟಿಕೊಂಡಿದೆ. ಈ ಕ್ರೀಮ್‌ಗಳು, ಔಷಧಿಗಳ ಹೊರತರಲು ದೊಡ್ಡ ದೊಡ್ಡ ಕಂಪನಿಗಳು ಇವೆ.
ಆದ್ರೆ ಕೆಲವೊಮ್ಮೆ ಸುಂದರವಾಗಿ ಕಾಣುವ ಹಂಬಲದಲ್ಲಿ ಮಾನವ ಎಷ್ಟೆಲ್ಲಾ ಸಾಹಸ ಮಾಡುತ್ತಾನೆ ಅಂದ್ರೆ ಯಾವು ಸಹ ಊಹಿಸಿಯೂ ಇರುವುದಿಲ್ಲ. ಕೆಲವರು ಬೇಗ ವಯಸ್ಸಾದಂತೆ ಕಾಣಬಾರದು ಎಂಬ ಕಾರಣಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗುವುದು, ಪ್ಲಾಸ್ಟಿಕ್ ಸರ್ಜರಿಯಂತಹ ಒಂದು ಅಪಾಯಕಾರಿ ಕಾರ್ಯಕ್ಕೂ ಕೈ ಹಾಕುತ್ತಾರೆ.

ಆದ್ರೆ ಇಲ್ಲೊಂದು ವಿಡಿಯೋ ಈಗ ನೋಡುಗರ ನಿದ್ದೆಗೆಡಿಸಿದೆ. ಯುವತಿಯೊಬ್ಬಳು ಮಲವನ್ನು ತನ್ನ ಫೇಸ್ ಪ್ಯಾಕ್ ಆಗಿ ಬಳಸುತ್ತಿರುವುದು ಅಚ್ಚರಿ ಜೊತೆಗೆ ನೋಡುಗರಲ್ಲಿ ಅಹಸ್ಯ ತರಿಸಿದೆ. ಬ್ರೆಜಿಲಿಯನ್ ಡೆಬೊರಾ ಪೀಕ್ಸೊಟೋ ಎಂಬಾಕೆ ತನ್ನ ಮುಖ ಸುಕ್ಕುಗಟ್ಟದಂತೆ, ಬೇಗ ವಯಸ್ಸಾದಂತೆ ಕಾಣಬಾರದು ಎಂಬ ಕಾರಣ ಈ ಕೆಲಸಕ್ಕೆ ಕೈ ಹಾಕಿದ್ದಾಳೆ.
31 ವರ್ಷದ ಎಂಎಸ್ ಪೀಕ್ಸೊಟೊ ಅಸಾಂಪ್ರದಾಯಿಕ ಸೌಂದರ್ಯ ವರ್ಧಕದ ವಿಡಿಯೋವನ್ನ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಕೆ ಮಲವನ್ನ ತನ್ನ ಮುಖಕ್ಕೆ ಹಚ್ಚಿಕೊಳ್ಳುತ್ತಿರುವುದು ವಿಡಿಯೋದಲ್ಲಿದ್ದು ಅಸಹ್ಯ ಹುಟ್ಟಿಸುತ್ತೆ.
'ಇದು ನಾನು ಮಾಡಿದ ಹುಚ್ಚುತನದ ಕೆಲಸ' ಎಂದು ಪೀಕ್ಸೊಟೊ ಹೇಳಿಕೊಂಡಿದ್ದಾರೆ. ಇಂತಹ ವಿಚಿತ್ರ ಪ್ರಯೋಗಗಳ ಮೂಲಕವೇ ಅವರು ಆನ್‌ಲೈನ್‌ನಲ್ಲಿ ಯಾವಾಗಲು ಸುದ್ದಿಯಾಗುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಈ ವಿಡಿಯೋ ವೈರಲ್ ಆಗಿದೆ. ಆದಕೆ 658,000 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ.
ಆಕೆ ಮಲವನ್ನು ಫ್ರಿಡ್ಜ್‌ನಲ್ಲಿಟ್ಟು ಅಲ್ಲಿಂದ ತೆಗೆದು ಮುಖಕ್ಕೆ ಹಚ್ಚಿಕೊಳ್ಳುತ್ತಾಳೆ. ಬಳಿಕ ಮೂಗಿಗೆ ಒಂದು ಕ್ಲಿಪ್ ಹಾಕಿಕೊಳ್ಳುತ್ತಾಳೆ. ಬಳಿಕ ಒಂದಿಷ್ಟು ಕಾಲ ಬಿಟ್ಟು ಮುಖ ತೊಳೆದುಕೊಳ್ಳುತ್ತಾಳೆ. 'ಇದು ನನಗೆ ಕೆಲಸ ಮಾಡಿದೆ, ಮತ್ತು ನನ್ನ ಚರ್ಮವು ಫ್ಲೇಕಿಂಗ್ ಅನ್ನು ನಿಲ್ಲಿಸಿದೆ!' ಎಂದು ಆಕೆ ಹೇಳಿಕೊಂಡಿದ್ದಾಳೆ. ಆದರೆ ರೀತಿಯ ಕಾರ್ಯವನ್ನು ಹಲವರು ಟೀಕಿಸಿದ್ದಾರೆ. ಆರೋಗ್ಯದ ದೃಷ್ಟಿಯಿಂದಲೂ ಇದು ಉತ್ತಮವಲ್ಲ ಎಂದಿದ್ದಾರೆ.
ಮಲವನ್ನು ಫೇಸ್ ಮಾಸ್ಕ್ ಆಗಿ ಬಳಸುವುದು ನಿಮ್ಮ ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಲಂಡನ್‌ನ ಕ್ಯಾಡೋಗನ್ ಕ್ಲಿನಿಕ್‌ನ ಸಲಹೆಗಾರ ಚರ್ಮಶಾಸ್ತ್ರಜ್ಞ ಡಾ ಸೋಫಿ ಮೊಮೆನ್ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಜೊತೆಗೆ ನಾ ಕಂಡ ಅತ್ಯಂತ ವಿಲಕ್ಷಣ ವಿಧಾನದಲ್ಲಿ ಇದು ಒಂದು ಎಂದು ಆತ ಹೇಳಿಕೊಂಡಿದ್ದಾನೆ.
ಈ ವಿಧಾನವು ಬಳಕೆದಾರರಿಗೆ ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳು, ಆಹಾರ ವಿಷ ಮತ್ತು ಚರ್ಮದ ಕಿರಿಕಿರಿಯನ್ನು ಉಂಟುಮಾಡುತ್ತದೆ. ಈ ರೀತಿಯ ವಿಧಾನವನ್ನು ಯಾರು ಸಹ ಸಲಹೆ ನೀಡುವುದಿಲ್ಲ ಎಂದಿದ್ದಾರೆ.
ಇನ್ನು ಈ ವಿಡಿಯೋ ನೋಡಿದ ಮಂದಿ ಸಹ ಶಾಕ್‌ಗೆ ಒಳಗಾಗಿದ್ದಾರೆ. ಅಲ್ಲದೆ ಹೀಗೆ ಮಲವನ್ನು ಮುಖಕ್ಕೆ ಹಚ್ಚಿಕೊಳ್ಳುವುದು ಅತ್ಯಂತ ಅಸಹ್ಯಕಾರಿ, ಇದನ್ನು ಯಾರು ತಾನೆ ಮಾಡುತ್ತಾರೆ. ಬೇಕಾದರೆ ಹಣ ನೀಡಿ ಫೇಶಿಯಲ್ ಮಾಡಿಸುತ್ತಾರೆ ಆದ್ರೆ ಇಂತಹ ಕರ್ಮಗಳ ಮಾಡುವುದಿಲ್ಲ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಆನ್‌ಲೈನ್‌ನಲ್ಲಿ ನೂರಾರು ಮಂದಿಯನ್ನು ತಲುಪುವಾಗ ನಾವು ಜವಾಬ್ದಾರಿಯಿಂದ ವರ್ತಿಸಬೇಕು. ಏನು ಮಾಡಬೇಕು ಏನು ಮಾಡಬಾರದು, ಇದರಿಂದ ಜನರ ಮೇಲೆ ಯಾವ ರೀತಿ ಹಾನಿಯಾಗಲಿದೆ ಎಂಬುವುದನೆಲ್ಲಾ ನಾವು ಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಮತ್ತೊಬ್ಬರು ಆತಂಕ ಹೊರಹಾಕಿದ್ದಾರೆ.



Click it and Unblock the Notifications
