Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಪೊನಂ ಪಾಂಡೆ ಮೃತಪಟ್ಟಿಲ್ಲವೇ..? ಏನಿದು ಹೊಸ ಕಥೆ..? ಆಕೆಯ ಮೃತದೇಹ ಎಲ್ಲಿ..?
ಜನಪ್ರಿಯ ಮಾಡೆಲ್ ಮತ್ತು ನಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ ಎಂದು ನಟಿಯ ಮ್ಯಾನೇಜರ್ ಹೇಳಿಕೊಂಡಿದ್ದಾರೆ. ಅವರ ನಿಧನದ ಬಗ್ಗೆ ಅವರ ತಂಡವು ಅಧಿಕೃತ ಪ್ರಕಟಣೆಯನ್ನೂ ಸಹ ಬಿಡುಗಡೆ ಮಾಡಿದೆ. ಆಕೆಯ ಸಾವಿನ ಸುದ್ದಿಯಿಂದ ಇಡೀ ಹಿಂದಿ ಚಿತ್ರರಂಗ ಕಂಬನಿ ಮಿಡಿದಿದೆ. ಆದರೆ ಈಗ ಆಕೆಯ ಸಾವಿನ ಸುದ್ದಿಗೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಆದರೆ, ಇದರ ಸತ್ಯಾಸತ್ಯತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಇದು ಸತ್ಯ ಎಂದು ಹೇಳಿದರೆ, ಇನ್ನು ಕೆಲವರು ಪ್ರಚಾರದ ಸ್ಟಂಟ್ ಎಂದು ಹಣೆಪಟ್ಟಿ ಕಟ್ಟುತ್ತಿದ್ದಾರೆ. ಆದರೆ, ಪೂನಂ ಪಾಂಡೆ ಸಾವಿನ ಬಗ್ಗೆ ಅವರ ಕುಟುಂಬ ಮೌನ ವಹಿಸಿರುವುದು, ಆಕೆಯ ಮೃತದೇಹದ ಫೋಟೋ, ಆಸ್ಪತ್ರೆಯ ಹೇಳಿಕೆ ಯಾವುದು ಹೊರಬಿದ್ದಿಲ್ಲ. ಹಾಗಾದ್ರೆ ಇಲ್ಲಿ ಏನಾಗುತ್ತಿದೆ ಎಂಬುದು ಪ್ರಶ್ನೆಯಾಗಿದೆ.

ಆಕೆಯ ಪಿಆರ್ ಏಜೆನ್ಸಿ ಕೂಡ ಆಕೆಯ ಸಾವಿನ ಸುದ್ದಿಯನ್ನು ಹೇಳಿದೆ ಮತ್ತು "ಇಂದು ಬೆಳಿಗ್ಗೆ ಅವರ ಕುಟುಂಬದ ಸದಸ್ಯರಿಂದ (ಸಹೋದರಿ) ಅವರ ಹಠಾತ್ ನಿಧನದ ಬಗ್ಗೆ ಮತ್ತು ಸುದ್ದಿಯನ್ನು ದೃಢೀಕರಿಸಿ (ಅವಳ ಮೇಲೆ ಪೋಸ್ಟ್ ಮಾಡಿದಂತೆ) ನಮಗೆ ಕರೆ ಬಂದಿದೆ ಎಂದು ದಾಖಲಿಸಲಾಗಿದೆ. ಕುಟುಂಬದಿಂದ ಹೆಚ್ಚಿನ ಮಾಹಿತಿಗಾಗಿ ನಾವು ಕಾಯುತ್ತಿದ್ದೇವೆ, ನಾವು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡುತ್ತೇವೆ ಎಂದು ಟೀಂ ಸಹ ಹೇಳಿಕೊಂಡಿದೆ.
ಶುಕ್ರವಾರ, ಪೂನಂ ಪಾಂಡೆಯ ಸಾವಿನ ಸುದ್ದಿಯು ಇಂಟರ್ನೆಟ್ ಅಲ್ಲಿ ಬಿರುಗಾಳಿ ಎಬ್ಬಿಸಿದೆ. ಇದನ್ನು ಮೊದಲು ಅವರ ತಂಡವು ತನ್ನ ಸ್ವಂತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ಅವರು ಗರ್ಭಕಂಠದ ಕ್ಯಾನ್ಸರ್‌ನಿಂದ ನಿಧನರಾದರು. ಆದರೆ ಈ ಬಗ್ಗೆ ಪೂನಂ ಕುಟುಂಬದಿಂದ ಯಾವುದೇ ಹೇಳಿಕೆ ಬಂದಿಲ್ಲ. ಇದು ಪ್ರಚಾರದ ಸ್ಟಂಟ್ ಆಗಿರಬಹುದು ಎಂದು ಕೆಲವರು ಊಹಿಸಲು ಕಾರಣವಾಯಿತು. ಪೂನಂ ಈ ಅನಾರೋಗ್ಯದ ಬಗ್ಗೆ ಹಿಂದೆಂದೂ ಹೇಳಿರಲಿಲ್ಲವಾದ್ದರಿಂದ ಇತರರು ಆಘಾತಕ್ಕೊಳಗಾಗಿದ್ದಾರೆ.
ಏತನ್ಮಧ್ಯೆ, ಇಂಡಿಯಾಟುಡೇ ವರದಿಯ ಪ್ರಕಾರ, ಪೂನಂ ಪಾಂಡೆ ಸಾವಿನ ಸುದ್ದಿ ಹೊರಬಂದಾಗಿನಿಂದ ಅವರ ಕುಟುಂಬ ನಾಪತ್ತೆಯಾಗಿದೆ. ಸುದ್ದಿ ಪೋರ್ಟಲ್‌ನೊಂದಿಗಿನ ಸಂಭಾಷಣೆಯಲ್ಲಿ, ನಟಿಯ ನಿಕಟ ಮೂಲವು ಶುಕ್ರವಾರ ಬೆಳಿಗ್ಗೆ, ಅವರು ಪೂನಂ ಅವರ ಸಹೋದರಿಯಿಂದ ಕರೆ ಸ್ವೀಕರಿಸಿದರು, ಅವರು ತಮ್ಮ ಸಾವಿನ ಸುದ್ದಿಯನ್ನು ಹಂಚಿಕೊಂಡರು ಮತ್ತು ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಪ್ರಸ್ತಾಪಿಸಿದರು.
ಪೂನಂ ನಾಲ್ಕು ದಿನಗಳ ಹಿಂದೆಯೇ ನಿಧನವಾಗಿದ್ದಾರೆ ಎಂದು ಪಿಆರ್ ತಂಡ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿತ್ತು. ಆದರೆ, ಹಾಗೆ ನಿಧನರಾಗಿದ್ದಾರೆ ಎಂಬುದಕ್ಕೆ ಒಂದೇ ಒಂದು ಪುರಾವೆ ಇಲ್ಲ. ಆಸ್ಪತ್ರೆಯ ದಾಖಲೆ ಇಲ್ಲ, ಮೃತ ದೇಹದ ಒಂದೇ ಒಂದು ಫೋಟೋ ಸಹ ಹೊರಬಿದ್ದಿಲ್ಲ. ಅಷ್ಟೇ ಅಲ್ಲ, ಮೂರು ದಿನಗಳ ಹಿಂದೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆಕೆಯ ವಿಡಿಯೋಗಳು ಈಗ ಹರಿದಾಡುತ್ತಿವೆ.
ಪೂನಂ ಪಾಂಡೆ ಮೂಲತಃ ಉತ್ತರ ಪ್ರದೇಶದವರಾಗಿದ್ದು, ಈ ಸುದ್ದು ಹಬ್ಬಿದ ಬಳಿಕ ಪೂನಂ ಪಾಂಡೆ ಅವರ ಹುಟ್ಟೂರಿನಲ್ಲಿರುವ ಮನೆಗೆ ಬೀಗ ಹಾಕಲಾಗಿದೆಯಂತೆ. ಪೂನಂ ಅವರ ಭದ್ರತಾ ಸಿಬ್ಬಂದಿಗೆ ಈ ಕುರಿತು ಕೇಳಿದಾಗ ಅವರಿಗೂ ಈ ವಿಚಾರ ಗೊತ್ತಿಲ್ಲ ಎಂಬ ಉತ್ರತ ಬರುತ್ತಿದೆ ಎಂದು ವರದಿಯಾಗುತ್ತಿದೆ. ಅಚ್ಚರಿ ಎಂದರೆ ಬಾಡಿಗಾರ್ಡ್‌ಗೆ ಆಕೆಗೆ ಕ್ಯಾನ್ಸರ್ ಇರುವ ಬಗ್ಗೆಯೇ ತಿಳಿದಿರಲಿಲ್ಲವಂತೆ. ಇನ್ನೊಂದು ಮೂಲದ ಪ್ರಕಾರ ಆಕೆ ಪ್ರವಾಸದಲ್ಲಿದ್ದು, ಆಕೆಯ ಸಾವಾಗಿಲ್ಲ ಆಕೆಯ ಇನ್ಸ್‌ಸ್ಟಾಗ್ರಾಮ್ ಖಾತೆಯನ್ನು ಯಾರೋ ಹ್ಯಾಕ್ ಮಾಡಿ ಈ ರೀತಿ ಸಂದೇಶ ಹರಿಬಿಟ್ಟಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಆದರೆ ಆಕೆಯ ಸಾವಿನ ಸುತ್ತ ಹತ್ತಾರು ಕಥೆ ಹುಟ್ಟಿಕೊಳ್ಳುತ್ತಿವೆ.
ದೇಹಕ್ಕಾಗಿ ಹುಡುಕಾಟ
ಪೂನಂ ಸಾವಿನ ಸುದ್ದಿಯ ಬೆನ್ನಲ್ಲೇ ಆಕೆಯ ಮೃತದೇಹ ಎಲ್ಲಿದೆ ಎಂದು ತಿಳಿಯಲು ಎಲ್ಲರೂ ಕಾತರರಾಗಿದ್ದಾರೆ. ಅವಳು ಎಲ್ಲಿದ್ದಾಳೆಂದು ಜನರು ತಿಳಿದುಕೊಳ್ಳಲು ಬಯಸುತ್ತಾರೆ. ಹಲವಾರು ಮಾಧ್ಯಮಗಳ ವರದಿಗಳ ಪ್ರಕಾರ, ಪೂನಂ ವಾಸವಾಗಿದ್ದಾರೆ ಎಂದು ಹೇಳಲಾದ ಕಟ್ಟಡವು ಈ ವಿಷಯದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.



Click it and Unblock the Notifications

