Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ನವರಾತ್ರಿ ಹಬ್ಬದ ರುಂಗು ಹೆಚ್ಚಿಸಿದ ಪ್ರಧಾನಿ ಮೋದಿ ಬರೆದ ಹಾಡು..! ಇಲ್ಲಿದೆ ವಿಡಿಯೋ
ನಾಡಿನ ಎಲ್ಲೆಡೆ ನವರಾತ್ರಿಯ ಸಂಭ್ರಮ ಮನೆ ಮಾಡಿದೆ. ಹಲವು ಕಡೆಗಳಲ್ಲಿ ನವರಾತ್ರಿ ರಂಗು ಪಡೆದಿದೆ. ಶಕ್ತಿ ದೇವತೆಯ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು, ಕಾರ್ಯಕ್ರಮಗಳು ನಡೆಯುತ್ತಿವೆ. ನವರಾತ್ರಿಯ 5ನೇ ದಿನವಾದ ಇಂದು ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ. ಸ್ಕಂದಮಾತೆ ದೇವ ಕಾರ್ತಿಕೇಯನ ತಾಯಿಯಾಗಿದ್ದಾಳೆ. ಈಕೆ ಯುದ್ಧ ಮತ್ತು ವಿಜಯದ ದೇವತೆಯಾಗಿ ಪೂಜಿಸಲ್ಪಡುತ್ತಾಳೆ ಎಂಬುದು ನಮಗೆಲ್ಲಾ ತಿಳಿದಿದೆ. 9 ದಿನಗಳ ಈ ದುರ್ಗೆಯ ಆರಾಧನೆಯಲ್ಲಿ ಸ್ಕಂದಮಾತೆಯ ಪೂಜೆಯೂ ಒಂದಾಗಿದೆ.
ಸ್ಕಂದಮಾತೆಯನ್ನು ಪೂಜಿಸುವುದರಿಂದ ಭಕ್ತರು ಸುಖ, ಸಮೃದ್ಧಿ ಮತ್ತು ಶಾಂತಿಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಹಾಗೆ ಈ ದಿನ ಬಿಳಿ ಬಣ್ಣ ಶ್ರೇಷ್ಟ ಎಂದು ನಂಬಲಾಗಿದೆ. ಹೀಗಾಗಿ ಪೂಜಿಸುವ ಬಿಳಿ ಬಟ್ಟೆ, ಬಿಳಿ ಪುಷ್ಟ ಅರ್ಪಿಸುತ್ತಾರೆ. ಹಾಗೆ ಈ ಭಕ್ತಿ ಪೂರ್ವಕ ಹಬ್ಬದ ಸಡಗರದಲ್ಲಿದ್ದ ನಾಡಿನ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಸಹ ಶುಭ ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯ ರೀತಿಯಲ್ಲಿ ಶುಭ ಕೋರಿಲ್ಲ ಬದಲಿಗೆ ತಾಯಿ ದುರ್ಗೆಯ ಕುರಿತು ಅವರೇ ಹಾಡೊಂದನ್ನು ಬರೆದು ಅದರ ಮೂಲಕ ನಾಡಿನ ಜನತೆಗೆ ಶುಭ ಕೋರಿದ್ದಾರೆ. ದೇವಿಯ ಬಳಿ ಒಳಿತು ಮಾಡುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದು ನವರಾತ್ರಿಯ ಮಂಗಳಕರ ಸಮಯ ಮತ್ತು ಜನರು ದುರ್ಗೆಯ ಮೇಲಿನ ಭಕ್ತಿಯಿಂದ ಒಂದಾಗಿ ವಿವಿಧ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಈ ಪೂಜ್ಯ ಮತ್ತು ಸಂತೋಷದ ಉತ್ಸಾಹದಲ್ಲಿ, ಆವತಿ ಕಲೆ, ಅವಳ ಶಕ್ತಿ ಮತ್ತು ಅನುಗ್ರಹಕ್ಕೆ ಗೌರವವಾಗಿ ನಾನು ಬರೆದ ಗರ್ಬಾ ಹಾಡು ಇಲ್ಲಿದೆ. ದೇವಿಯ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ ಎಂದು ಅವರು ಎಕ್ಸ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಹಾಗೆ ಈ ಗರ್ಬಾ ಹಾಡನ್ನು ಮಧುರವಾಗಿ ಹಾಡಿರುವ ಪೂರ್ವ ಮಂತ್ರಿ ಅವರಿಗೂ ಧನ್ಯವಾದ ಹೇಳಿದ್ದಾರೆ. ಗರ್ಬಾ ಗುಜರಾತ್‌ನ ಒಂದು ಸಾಂಪ್ರದಾಯಿಕ ನೃತ್ಯವಾಗಿದ್ದು ನವರಾತ್ರಿ ಸೇರಿ ಹಲವು ಹಬ್ಬಗಳಲ್ಲಿ ಈ ನೃತ್ಯ ಮಾಡಲಾಗುತ್ತದೆ. ಸದ್ಯ ಪ್ರಧಾನಿ ಮೋದಿ ಅವರೇ ಬರೆದಿರುವ ಈ ಹಾಡು ಅತ್ಯಂತ ಮಧುರವಾಗಿ ಮೂಡಿ ಬಂದಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.
ನವರಾತ್ರಿ ಉತ್ಸವದಲ್ಲಿ ಗುಜರಾತಿನ ಸಾಂಪ್ರದಾಯಿಕ ನೃತ್ಯವಾದ ಗಾರ್ಬಾವು ವಿಶೇಷ ಸ್ಥಾನವನ್ನು ಹೊಂದಿದೆ, ಇದನ್ನು ದುರ್ಗಾ ದೇವಿಯ ಪೂಜ ಕಾರ್ಯವಾಗಿ ಈ ನೃತ್ಯವನ್ನು ಮಾಡಲಾಗುತ್ತದೆ. ಸದ್ಯ ಈಗ ಈ ಹೊಸ ಹಾಡಿನ ವಿಡಿಯೋ ಎಲ್ಲರ ಮೆಚ್ಚುಗೆ ಗಳಿಸಿದೆ. ಖುದ್ದು ಪ್ರಧಾನಿ ಮೋದಿ ಅವರ ಸಾಹಿತ್ಯಕ್ಕೆ ಜನ ಫಿದಾ ಆಗಿದ್ದಾರೆ.
ಇತ್ತ ನವರಾತ್ರಿಯ ಈ 5ನೇ ದಿನದಂದು ಸ್ಕಂದಮಾತೆಯನ್ನು ಆರಾಧಿಸುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಸ್ಕಂದಮಾತೆಯ ಆರಾಧನೆಯಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಕೆಲಸದಲ್ಲಿ ಅಡೆತಡೆಗಳು ಮತ್ತು ಹೊಸ ಯೋಜನೆಗಳು ಯಶಸ್ವಿಯಾಗುತ್ತವೆ. ಕುಟುಂಬದಲ್ಲಿ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ. ಆರೋಗ್ಯದಲ್ಲಿ ನಿಮಗೆ ಸುಧಾರಣೆ ಸಿಗಲಿದೆ. ಆಯಸ್ಸು ವೃದ್ಧಿ ಸೇರಿ ಸಂಪತ್ತಿನ ಹರಿವು ಹೆಚ್ಚಲಿದೆ ಎಂದು ನಂಬಲಾಗಿದೆ.



Click it and Unblock the Notifications
