Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಪ್ರಧಾನಿ ಮೋದಿ ಸ್ವಾಗತಿಸಲು ಬರುವ ಈ ದೊರೆ ಯಾರು ಗೊತ್ತಾ? 7 ಸಾವಿರ ಕಾರು ಹೊಂದಿರುವ ಸುಲ್ತಾನನೀತ..!!
ಪ್ರಧಾನಿ ನರೇಂದ್ರ ಮೋದಿ ಅವರು ಈಗ ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಬ್ರೂನೈ ಹಾಗೂ ಸಿಂಗಾಪುರ್ ಪ್ರವಾಸದಲ್ಲಿದ್ದಾರೆ. ದೆಹಲಿಯಿಂದ ಅವರು ಬ್ರೂನೈಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಈ ಪ್ರವಾಸಕ್ಕಿಂತಲೂ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಆಗಮಿಸುತ್ತಿರುವ ಬ್ರೂನೈನ ದೊರೆ ಸುಲ್ತಾನ್ ಬೊಲ್ಕಿಯಾ ಅವರ ಕುರಿತು ಭಾರೀ ಕುತೂಹಲ ಮೂಡಿದೆ.
ಇಂಗ್ಲೆಂಡ್‌ನ ರಾಣಿ ಎಲಿಜಬೆತ್ II ನಂತರದ ಅತೀ ಹೆಚ್ಚು ವರ್ಷಗಳ ಕಾಲ ಆಳ್ವಿಕೆ ನಡೆಸುತ್ತಿರುವ ದೊರೆ ಇವರಾಗಿದ್ದಾರೆ. ಹಸನಲ್ ಬೊಲ್ಕಿಯಾ ಅವರು ತಮ್ಮ ಪ್ರಭಾವಶಾಲಿ ಸಂಪತ್ತು ಮತ್ತು ಅತಿರಂಜಿತ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಅಂದಾಜು $5 ಬಿಲಿಯನ್ ಮೌಲ್ಯದ ವಿಶ್ವದ ಅತಿದೊಡ್ಡ ಖಾಸಗಿ ಕಾರು ಸಂಗ್ರಹವನ್ನು ಹೊಂದಿದ್ದಾರೆ.

ಯಾರು ಈ ಹಸನಲ್ ಬೊಲ್ಕಿಯಾ?
ಸರಿ ಸುಮಾರು 30 ಬಿಲಿಯನ್ ಡಾಲರ್ ನಿವ್ವಳ ಆಸ್ತಿ ಹೊಂದಿರುವ ಆತ ಅತೀ ದೊಡ್ಡ ಉದ್ಯಮಿಯಾಗಿದ್ದಾರೆ. ಅವರ ಹೆಸರಲ್ಲಿ ತೈಲ ನಿಕ್ಷೇಪಗಳಿದ್ದು, ಅದರ ಆದಾಯವೇ ಕೋಟಿ ಕೋಟಿ ರೂಪಾಯಿ ಆಗಿದೆ. ನಿಮಗೆ ಅಚ್ಚರಿ ಆಗುವ ವಿಚಾರ ಏನೆಂದರೆ ಅವರ ಬಳಿ ಬರೋಬ್ಬರಿ 7 ಸಾವಿರ ಐಷಾರಾಮಿ ವಾಹನಗಳ ದೊಡ್ಡ ಸಂಗ್ರಹವೇ ಇದೆ. ಇದರಲ್ಲಿ ಬರೋಬ್ಬರಿ 600 ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳ ಹೊಂದಿದ್ದಾರೆ. ಇದು ವಿಶ್ವ ಗಿನ್ನೀಸ್ ದಾಖಲೆಗೂ ಕಾರಣವಾಗಿದೆ.
ದಿ ಸನ್ ಪ್ರಕಾರ, ಅವರ ಕಾರು ಸಂಗ್ರಹದಲ್ಲಿ ಸುಮಾರು 450 ಫೆರಾರಿಗಳು ಮತ್ತು 380 ಬೆಂಟ್ಲಿಗಳನ್ನು ಒಳಗೊಂಡಿದೆ. ಕಾರ್ಬಜ್ ಮತ್ತು ದಿ ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಸೇರಿದಂತೆ ಆಟೋಮೋಟಿವ್ ಮೂಲಗಳ ಪ್ರಕಾರ ಅವರು ಪೋರ್ಷೆ, ಲಂಬೋರ್ಘಿನಿ, ಮೇಬ್ಯಾಕ್ಸ್, ಜಾಗ್ವಾರ್ಸ್, ಬಿಎಂಡಬ್ಲ್ಯುಗಳು ಮತ್ತು ಮೆಕ್ಲಾರೆನ್‌ಗಳ ದೊಡ್ಡ ದೊಡ್ಡ ಸಾಲು ಹೊಂದಿದ್ದಾರೆ.
ಅಂದಾಜು 80 ಮಿಲಿಯನ್ ಡಾಲರ್ ಮೌಲ್ಯದ ಬೆಂಟ್ಲಿ ಡಾಮಿನೇಟರ್ SUV, ಹೊರೈಸನ್ ಬ್ಲೂ ಪೇಂಟ್‌ನೊಂದಿಗೆ ಪೋರ್ಷೆ 911 ಮತ್ತು X88 ಪವರ್ ಪ್ಯಾಕೇಜ್ ಮತ್ತು 24-ಕ್ಯಾರೆಟ್ ಚಿನ್ನ ಲೇಪಿತ ರೋಲ್ಸ್ ರಾಯ್ಸ್ ಸಿಲ್ವರ್ ಸ್ಪರ್ II ಹೊಂದಿದ್ದಾರೆ. ಈ ಚಿನ್ನ ಲೇಪಿತ ರೋಲ್ಸ್ ರಾಯ್ಸ್ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಮಗಳ ಮದುವೆಗಾಗಿ ಈ ಕಾರನ್ನು ವಿನ್ಯಾಸಗೊಳಿಸಲಾಗಿತ್ತು. ಇದಿಷ್ಟೇ ಅಲ್ಲ ಅವರು ತಮ್ಮ ಸ್ವಂತ ಬೋಯಿಂಗ್ 747 ವಿಮಾನವನ್ನು ಸಹ ಹೊಂದಿದ್ದಾರೆ.
ಆದ್ರೆ ಈ ಕಾರುಗಳ ಸಂಗ್ರಹ ಅವರ ಆಸ್ತಿಯ ಸಣ್ಣ ಆವೃತ್ತಿಯಾಗಿದೆ. ಅವರ ಬಳಿ ಇರುವ ದೊಡ್ಡ ಅರಮನೆ ಎಲ್ಲರ ಗಮನ ಸೆಳೆಯುವಂತಿದೆ. ಈ ಅರಮನೆ ಸಹ ವಿಶ್ವದ ಅತೀ ದೊಡ್ಡ ಜನ ವಾಸವಿರುವ ಅರಮನೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಈ ಅರಮನೆಯು ಎರಡು ಮಿಲಿಯನ್ ಚದರ ಅಡಿಗಳಷ್ಟು ದೊಡ್ಡದಾಗಿದೆ ಮತ್ತು 22-ಕ್ಯಾರೆಟ್ ಚಿನ್ನದಿಂದ ಅಲಂಕರಿಸಲ್ಪಟ್ಟಿದೆ. ಅರಮನೆಯು ಐದು ಈಜುಕೊಳಗಳು, 1,700 ಮಲಗುವ ಕೋಣೆಗಳು, 257 ಸ್ನಾನಗೃಹಗಳು ಮತ್ತು 110 ಗ್ಯಾರೇಜ್‌ಗಳನ್ನು ಹೊಂದಿದೆ. ಸುಲ್ತಾನ್ ತಮಗಾಗಿ ಖಾಸಗಿ ಮೃಗಾಲಯವನ್ನು ಸಹ ಹೊಂದಿದ್ದು, 30 ಬಂಗಾಳ ಹುಲಿಗಳು ಮತ್ತು ವಿವಿಧ ಪಕ್ಷಿ ಪ್ರಭೇದಗಳನ್ನು ಹೊಂದಿದೆ.
ಬ್ರೂನೈ ಹಾಗೂ ಭಾರತ 40ನೇ ವರ್ಷದ ರಾಜತಾಂತ್ರಿಕ ಸಂಬಂಧವನ್ನು ಆಚರಿಸುತ್ತಿದೆ. ಬ್ರೂನೈ ಜೊತೆಗಿನ ಐತಿಹಾಸಿಕ ಬಾಂಧವ್ಯವನ್ನು ಹೊಸತನದೊಂದಿಗೆ ಮುಂದುವರೆಸುವ ಹಾಗೂ ಸಿಂಗಾಪುರ್‌ದೊಂದಿಗೆ ತನ್ನ ಕಾರ್ಯತಂತ್ರ ಪಾಲುದಾರಿಕೆಯನ್ನು ಬಲಪಡಿಸುವ ಕಾರಣಕ್ಕೆ ಪ್ರಧಾನಿ ಮೋದಿ ಅವರು ಈ ಪ್ರವಾಸ ಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಬ್ರೂನೈ ದೇಶಕ್ಕೆ ಪ್ರವಾಸ ಮಾಡುತ್ತಿರುವ ಮೊದಲ ಪ್ರಧಾನಿ ಅವರಾಗಿದ್ದಾರೆ.



Click it and Unblock the Notifications