Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Plastic Bag Free Day: ನಿಮಗೆ ಗೊತ್ತಿಲ್ಲದೆ ಎಷ್ಟು ಪ್ಲಾಸ್ಟಿಕ್ ನಿಮ್ಮ ಉದರ ಸೇರುತ್ತಿದೆ ಗೊತ್ತಾ?
ಪ್ಲಾಸ್ಟಿಕ್ ಪರಿಸರಕ್ಕೆ ಎಷ್ಟೊಂದು ಹಾನಿ ಮಾಡುವಂತಹ ವಸ್ತು ಎಂಬುದನ್ನು ನೀವು ಕೂಡ ಅರಿತಿರಬಹುದು. ಭೂಮಿಯಲ್ಲಿ ಕೊಳೆಯದೆ ಹಾಗೆ ದಶಕಗಳ ಕಾಲ ಉಳಿಯಬಹುದಾದ ವಸ್ತು ಇದ್ದರೆ ಅದು ಪ್ಲಾಸ್ಟಿಕ್ ಆಗಿದೆ. ಹೀಗಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವಂತೆ ಸರ್ಕಾರವೇ ಸಿಂಗಲ್ ಬಳಕೆ ಪ್ಲಾಸ್ಟಿಕ್‌ಗಳ ಬ್ಯಾನ್ ಮಾಡಿದೆ. 40 ಮೈಕ್ರಾನ್‌ಗಿಂತ ಹೆಚ್ಚಿನ ಪ್ಲಾಸ್ಟಿಕ್ ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ.
ಇನ್ನು ಹಲವು ಕಡೆಗಳಲ್ಲಿ ಪ್ಲಾಸ್ಟಿಕ್ ಬದಲಿಗೆ ಬಟ್ಟೆ, ಪೇಪರ್‌ಗಳು ಬಳಕೆಗೆ ಬಂದಿವೆ. ಹಾಗೆ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಮಾತ್ರವಲ್ಲದೆ ಆರೋಗ್ಯಕ್ಕೂ ಹಾನಿ ಎಂಬುದು ಈಗಾಗಲೇ ದೃಢವಾಗಿದೆ. ಪ್ಲಾಸ್ಟಿಕ್‌ನಿಂದ ನಾವು ದೂರ ಇದ್ದಷ್ಟು ಉತ್ತಮ. ಹಾಗೆ ಇಡೀ ವಿಶ್ವವನ್ನು ಪ್ಲಾಸ್ಟಿಕ್ ಮುಕ್ತ ಮಾಡಲೆಂದು ಹಲವು ಸಂಘ ಸಂಸ್ಥೆಗಳು ಶ್ರಮಿಸುತ್ತಲೇ ಇವೆ.

ಈಗ ಜುಲೈ 3ರಂದು ಪ್ಲಾಸ್ಟಿಕ್ ಫ್ರೀ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಆಚರಣೆ ನಡೆಯಲಿದ್ದು, ಪ್ಲಾಸ್ಟಿಕ್‌ನಿಂದಾಗುವ ಹಾನಿಗಳ ಕುರಿತು ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶ ಆಗಿರಲಿದೆ. ಆದ್ರೆ ಪ್ರತಿ ವರ್ಷ ನಮ್ಮ ಭೂಮಿ ಮೇಲೆ ಬರೋಬ್ಬರಿ 430 ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದಿಸಲಾಗುತ್ತದೆ.
ಇಷ್ಟು ಪ್ರಮಾಣದ ಪ್ಲಾಸ್ಟಿಕ್‌ನಲ್ಲಿ ಮೂರನೇ ಎರಡು ಭಾಗ ಒಂದು ಬಾರಿ ಮಾತ್ರವೇ ಇಲ್ಲವೆ ಅಲ್ಪಾವಧಿಗೆ ಮಾತ್ರವೇ ಬಳಕೆಯಾಗುತ್ತದೆ. ಪ್ರತಿ ದಿನವು 2 ಸಾವಿರ ಟ್ರಕ್‌ಗಳಷ್ಟು ಪ್ಲಾಸ್ಟಿಕ್ ನಮ್ಮ ಸಾಗರದಾಳ ಅಥವಾ ನದಿಗಳಿಗೆ ಸೇರುತ್ತದೆ. ಇದೇ ಪ್ರಮಾಣದಲ್ಲಿ ಮಾಲಿನ್ಯವು ಮುಂದುವರೆದರೆ 2060ರ ವೇಳೆಗೆ ಪ್ಲಾಸ್ಟಿಕ್ ಮಾಲಿನ್ಯವು ಮೂರು ಪಟ್ಟು ಹೆಚ್ಚಾಗಲಿದೆ ಎಂದು ತಿಳಿದುಬಂದಿದೆ.
ಪ್ಲಾಸ್ಟಿಕ್ ಕುರಿತು ನೀವು ತಿಳಿಯಬೇಕಾದ ಕೆಲವು ಅಚ್ಚರಿ ವಿಚಾರಗಳು ಇಲ್ಲಿವೆ!
ಭೂಮಿ ಮೇಲಿರುವ ಇಡೀ ಸಮುದ್ರದಲ್ಲಿ ಶೇ.85ರಷ್ಟು ತ್ಯಾಜಚ್ಯವು ಪ್ಲಾಸ್ಟಿಕ್‌ನಿಂದಾಗಿದೆ. ಇದು ಜಲಚರಗಳ ಬದುಕಿಗೆ ಬಹುದೊಡ್ಡ ಅಪಾಯ ತಂದಿಟ್ಟಿದೆ. 1950ರಿಂದ ಈವರೆಗೆ ಬರೋಬ್ಬರಿ 9.2 ಶತಕೋಟಿ ಟನ್ ಪ್ಲಾಸ್ಟಿಕ್ ಉತ್ಪಾದಿಸಲಾಗಿದೆ. ಅಂದರೆ ಸುಮಾರು 1.2 ಶತಕೋಟಿ ಆನೆಗಳು ಅಥವಾ 88 ಮಿಲಿಯನ್ ನೀಲಿ ತಿಮಿಂಗಿಲಗಳ ತೂಕಕ್ಕೆ ಇದು ಸಮನಾಗಿದೆ.
ಇದುವರೆಗೆ ಉತ್ಪಾದಿಸಲಾದ ಎಲ್ಲಾ ಪ್ಲಾಸ್ಟಿಕ್‌ಗಳಲ್ಲಿ ಕೇವಲ ಶೇ.9ರಷ್ಟು ಮಾತ್ರ ಮರುಬಳಕೆ ಮಾಡಲ್ಪಟ್ಟಿದೆ. ಕೋಕಾ-ಕೋಲಾ ವಾರ್ಷಿಕವಾಗಿ 110 ಶತಕೋಟಿ ಬಾಟಲಿಗಳನ್ನು ಉತ್ಪಾದಿಸುತ್ತದೆ. 2021 ರಲ್ಲಿ ಕೋಕಾ-ಕೋಲಾ ಹಿಂದಿನ ವರ್ಷಕ್ಕಿಂತ 13 ಶತಕೋಟಿ ಹೆಚ್ಚು ಪ್ಲಾಸ್ಟಿಕ್ ಬಾಟಲಿಗಳನ್ನು ಉತ್ಪಾದಿಸಿದೆ.
99% ಪ್ಲಾಸ್ಟಿಕ್ ಅನ್ನು ಪಳೆಯುಳಿಕೆ ಇಂಧನಗಳಿಂದ ತಯಾರಿಸಲಾಗುತ್ತದೆ. ಪ್ಲಾಸ್ಟಿಕ್ ಹವಾಮಾನ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಪ್ಲಾಸ್ಟಿಕ್ ಉತ್ಪಾದನೆಗೆ ತೀವ್ರ ಉಷ್ಣದ ಅವಶ್ಯಕತೆ ಇರುತ್ತದೆ. ಹೀಗಾಗಿ ಪ್ಲಾಸ್ಟಿಕ್ ಉತ್ಪಾದನೆಯೇ ಒಂದು ದೊಡ್ಡ ಮಾಲೀನ್ಯಕ್ಕೆ ಕಾರಣವಾಗಲಿದೆ. ಪ್ಲಾಸ್ಟಿಕ್ ಬಾಟಲಿಗಳು, ಪಾತ್ರೆಗಳು ಮತ್ತು ಫೇಸ್ ಮಾಸ್ಕ್‌ಗಳು, ಮೀನುಗಾರಿಕಾ ಸಾಧನಗಳು, ಪ್ಲಾಸ್ಟಿಕ್ ಕ್ಯಾನ್‌ಗಳು ಸೇರಿ ಹಲವು ರೀತಿಯ ತ್ಯಾಜ್ಯದಿಂದಾಗಿ ಪ್ರತಿ ವರ್ಷ 1 ಲಕ್ಷಕ್ಕೂ ಅಧಿಕ ಜಲಚರಗಳು ಸಾಯುತ್ತವೆ.
ಅನೇಕ ಸಮುದ್ರ ಜೀವಿಗಳು ಆಕಸ್ಮಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯ ಅಥವಾ ಮೈಕ್ರೋಪ್ಲಾಸ್ಟಿಕ್‌ಗಳನ್ನು ಸೇವಿಸುತ್ತವೆ, ಇದರಲ್ಲಿ ದೊಡ್ಡ ಪ್ಲಾಸ್ಟಿಕ್ ಪಾರ್ಟಿಕಲ್ಸ್‌ಗಳು ಮಾನವರ ದೇಹವನ್ನೂ ಕೂಡ ಸೇರುತ್ತವೆ. ಮಾನವರು ಪ್ರತಿ ವಾರ ಸುಮಾರು 5 ಗ್ರಾಂ ಪ್ಲಾಸ್ಟಿಕ್ ಅನ್ನು ಸೇವಿಸುತ್ತಾರೆ. ಒಂದು ವರ್ಷವಿಡೀ ಒಟ್ಟುಗೂಡಿದರೆ, ನಾವು ಸೇವಿಸುವ ಪ್ಲಾಸ್ಟಿಕ್ ಪ್ರಮಾಣವು ಪೂರ್ಣ ಊಟದ ತಟ್ಟೆಗೆ ಸಮನಾಗಿರುತ್ತದೆ. 10 ವರ್ಷಗಳ ಅವಧಿಯಲ್ಲಿ ನಾವು ಐದು ಪೌಂಡ್ ಪ್ಲಾಸ್ಟಿಕ್ ಸೇವಿಸುತ್ತೇವೆ ಎಂದು ತಿಳಿದುಬಂದಿದೆ.



Click it and Unblock the Notifications
