Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ಬೆಂಗಳೂರಿನಲ್ಲಿ ನ್ಯೂ ಇಯರ್ ಪಾರ್ಟಿಗೆ ಹೋಗ್ತಾ ಇದ್ದೀರಾ? ಹಾಗಾದರೆ ಈ ವಿಚಾರ ತಿಳಿದಿರಲೇಬೇಕು
ಹೊಸ ವರ್ಷಕ್ಕೆ ಇನ್ನೇನು ಕೆಲ ದಿನಗಳಷ್ಟೇ ಬಾಕಿಯುಳಿದಿದೆ, ಹೊಸ ವರ್ಷದ ಪಾರ್ಟಿಗಳಿಗೆ ಈಗಾಗಲೇ ಸಿದ್ಧತೆ ಶುರುವಾಗಿದೆ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಪಬ್‌ಗಳು, ಪಾರ್ಟಿ ಅಡ್ಡಗಳು ನ್ಯೂ ಇಯರ್ ಪಾರ್ಟಿಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತದೆ. ಪ್ರತಿ ವರ್ಷವು ಹೊಸ ವರ್ಷವನ್ನು ಪಾರ್ಟಿ ಜೋಶ್ ಮೂಲಕ ವೆಲ್‌ಕಂ ಮಾಡಲು ಬಹುತೇಕರು ಬಯಸುತ್ತಾರೆ. ಬೆಂಗಳೂರಿನ ಕೆಲವು ಕಡೆಯಂತೂ ನ್ಯೂ ಇಯರ್ ಅಂದು ಇಡೀ ರಸ್ತೆ ಜನರಿಂದ ತುಂಬಿರುತ್ತದೆ, ಜನರು ಪಾರ್ಟಿ ಮೂಡ್‌ನಲ್ಲಿರುತ್ತಾರೆ.

ಹೊಸ ವರ್ಷದ ಪಾರ್ಟಿಯಲ್ಲಿ ಹುಡುಗರು-ಹುಡುಗಿಯರು ಭಾಗವಹಿಸುತ್ತಾರೆ, ಈ ಸಮಯದಲ್ಲಿ ನಶೆಯಲ್ಲಿಯರುವ ಕೆಲ ಕಿಡಿಗೇಡಿಗಳು ಹೆಣ್ಮಕ್ಕಳಿಗೆ ತೊಂದರೆ ಕೊಡುವುದು, ಗಲಾಟೆ ಇವುಗಳನ್ನು ತಡೆಗಟ್ಟಲು ಪೊಲೀಸರು ಈಗಾಗಲೇ ಮುನ್ನೆಚ್ಚರಿಕೆವಹಿಸಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಹೊಸ ವರ್ಷದ ಆಚರಣೆಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ತಂದಿದೆ, ಹಾಗಾಗಿ ನ್ಯೂ ಇಯರ್ ಸೆಲೆಬ್ರೇಷನ್‌ಗೆ ಹೋಗುವವರು ಆ ನಿಯಮಗಳೇನು ಎಂದು ತಿಳಿಯುವುದು ಒಳ್ಳೆಯದು, ಇಲ್ಲದಿದ್ದರೆ ಹೊಸ ವರ್ಷದಂದೇ ಕಾನೂನು ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗಿದೆ.
ನ್ಯೂ ಇಯರ್ ಸೆಲೆಬ್ರೇಷನ್‌ಗೆ ಇರುವ ನಿಯಮಗಳೇನು?
- ಎಲ್ಲಾ ಪಾರ್ಟಿಗಳು, ಆಚರಣೆಗಳು ರಾತ್ರಿ ಒಂದು ಗಂಟೆಯ ಒಳಗೆ ಮುಗಿಯಬೇಕು
- ಪ್ರಮುಖ ಫ್ರೈ ಓವರ್‌ಗಳನ್ನು ರಾತ್ರಿ 10 ಗಂಟೆಗೆ ಮುಚ್ಚಲಾಗುವುದು
- ಎಂಜಿ ರೋಡ್ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಟ್ರಾಫಿಕ್ ರೆಸ್ಟ್ರಿಕ್ಷನ್ ಅನ್ನು ರಾತ್ರಿ 8 ಗಂಟೆಯ ಬಳಿಕ ಮಾಡಲಾಗುವುದು
- ಎಂಜಿ ರೋಡ್ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ನಗರದ ಪ್ರಮುಖ ಕಡೆಗಳಲ್ಲಿ ಸುಮಾರು 800 CCTV ಕ್ಯಾಮರಾ ಅಳವಡಿಸಲಾಗಿದೆ
- ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಅಂಗರಕ್ಷಕರನ್ನು ನೇಮಕ ಮಾಡಲಾಗಿದೆ
- ಬಾರ್ ಹಾಗೂ ಪಬ್‌ಗಳು ರಾತ್ರಿ ಒಂದು ಗಂಟೆಯವರೆಗೆ ತೆರೆದಿಡಲು ಅವಕಾಶ ನೀಡಲಾಗಿದೆ
- ನಗರದ ವಿವಿಧ ಕಡೆ ಪಾರ್ಟಿ ಆಯೋಜನೆ ಮಾಡುವವರು ಮೊದಲೇ ಅನುಮತಿ ಪಡೆದಿರಬೇಕು
- ಪಟಾಕಿ ಸಿಡಿಸುವಂತಿಲ್ಲ, ಧ್ವನಿವರ್ಧಕಗಳನ್ನು ಬಳಸುವಂತಿಲ್ಲ
ಅಹಿತಕರ ಘಟನೆ ನಡೆಯದಂತೆ ಸಾಕಷ್ಟು ಮುನ್ನೆಚ್ಚರಿಕೆವಹಿಸಲಾಗಿದೆ
ಪ್ರತಿ ವರ್ಷ ಹೊಸ ವರ್ಷವನ್ನು ಸಕತ್ ಜೋಶ್‌ನಿಂದ ಆಚರಿಸುತ್ತಾರೆ, ಅದರಲ್ಲಿಯೂ ಬ್ರಿಗೇಡ್ ರೋಡ್, ಎಂಜಿ ರೋಡ್ ಇಂಥ ಕಡೆಗಳಲ್ಲಿ ಕಾಲಿಡಲು ಸಾಧ್ಯವಾಗಲ್ಲ, ಅಷ್ಟೊಂದು ಜನಗಳಿಂದ ತುಂಬಿರುತ್ತದೆ. ಇಲ್ಲಿಯ ಲೈಟಿಂಗ್ಸ್ ನೋಡಲೆಂದೇ ಯುವಕರು ಇಲ್ಲಿಗೆ ಬರುತ್ತಾರೆ. ಇನ್ನು ಪಬ್‌ಗಳು ತುಂಬಿರುತ್ತದೆ, ರೆಸ್ಟೋರೆಂಟ್‌ಗಳಲ್ಲಿ ಮೊದಲೇ ಸೀಟ್ ರಿಸರ್ವ್ ಮಾಡಿದ್ದರೆ ಆಹಾರ ಸವಿಯಬಹುದು, ಇಲ್ಲದಿದ್ದರೆ ಗಂಟೆ ಗಟ್ಟಲೆ ಕಾದು ಆಹಾರ ತಿನ್ನಬೇಕಾಗುತ್ತದೆ. ಚಿಕ್ಕ ಹೋಟೆಲ್‌ನಿಂದ ಹಿಡಿದು ದೊಡ್ಡ-ದೊಡ್ಡ ರೆಸ್ಟೋರೆಂಟ್‌ಗಳವರೆಗೆ ಬ್ಯುಸಿಯೋ ಬ್ಯುಸಿ.
ನ್ಯೂ ಇಯರ್ ಪಾರ್ಟಿಗೆ ಬರುವವರು ಕುಡಿದು, ಕುಣಿದು ಹೊಸ ವರ್ಷವನ್ನು ಬರಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಬಂದಿರುತ್ತಾರೆ. ಹೊಸ ವರ್ಷವನ್ನು ಸಂತೋಷದಿಂದ ಆಚರಿಸುವಾಗ ನಮ್ಮ ಸುರಕ್ಷತೆ ಬಗ್ಗೆ ಕೂಡ ಗಮನಹರಿಸಬೇಕು, ಹೊರಗಡೆ ಹೋಗು ಒಂಟಿಯಾಗಿ ಹೋಗುವ ಬದಲಿಗೆ ಸುರಕ್ಷಿತ ಗ್ರೂಪ್‌ಗಳ ಜೊತೆಗೆ ಹೊರಗಡೆ ಹೋದರೆ ಒಳ್ಳೆಯದು. ಅಲ್ಲದೆ ಹೆಣ್ಮಕ್ಕಳು ತಮ್ಮ ಸುರಕ್ಷತೆಗಾಗಿ ಹೆಚ್ಚಿನ ಗಮನಹರಿಸಬೇಕು, ಸ್ವಲ್ಪ ವರ್ಷಗಳ ಹಿಂದೆ ಎಂಜಿ ರೋಡ್‌ನಲ್ಲಿ ನಡೆದ ಘಟನೆಯಂಥ ಘಟನೆಗಳು ಮರುಕಳಿಸದಂತೆ ಜಾಗ್ರತೆವಹಿಸಬೇಕು.
ಪಾರ್ಟಿ ಆಯೋಜಕರು ಕೂಡ ಎಲ್ಲಾ ಸುರಕ್ಷಿತ ಕ್ರಮಗಳ ಜೊತೆ ಪಾರ್ಟಿ ಆಯೋಜಿಸಬೇಕು. ಕುಡಿದು ಗಲಾಟೆ ಮಾಡುವವರನ್ನು ಅಲ್ಲಿಂದ ಕಳುಹಿಸುವ ಕಾರ್ಯ ಮಾಡಬೇಕು. ಒಂಟಿಯಾಗಿ ಓಡಾಡಬೇಡಿ, ಅಮೂಲ್ಯವಾದ ವಸ್ತುಗಳ ಬಗ್ಗೆ ಜಾಗ್ರತೆವಹಿಸಬೇಕು.
ಪೊಲೀಸ್ ಇಲಾಖೆ ಸೂಚಿಸುವ ನಿಯಮಗಳನ್ನು ಪಾಲಿಸಿದರೆ ಯಾವುದೇ ಸಮಸ್ಯೆಯಾಗದೆ ಹೊಸ ವರ್ಷವನ್ನು ಆಚರಿಸಬಹುದು. ಹೊಸ ವರ್ಷ ಹೊಸ ಜೋಶ್‌ನಿಂದ ವೆಲ್‌ಕಂ ಮಾಡುತ್ತೇವೆ, ಅದರಂತೆ ಹೊಸ ವರ್ಷವು ನಿಮಗೆಲ್ಲಾ ನೆಮ್ಮದಿ, ಐಶ್ವರ್ಯ ನೀಡಲಿ, ಹ್ಯಾಪಿ ನ್ಯೂ ಇಯರ್ ಇನ್ ಅಡ್ವಾನ್ಸ್...



Click it and Unblock the Notifications