Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಜುಲೈ ತಿಂಗಳಿನಲ್ಲಿದೆ 4 ಪ್ರಮುಖ ಗ್ರಹಗಳ ಸಂಚಾರ: ಈ 3 ರಾಶಿಯವರಿಗೆ ತುಂಬಾನೇ ಒಳ್ಳೆಯದಿದೆ?
ಜ್ಯೋತಿಷ್ಯದಲ್ಲಿ ಗ್ರಹಗತಿಗಳ ಸ್ಥಾನದ ಆಧಾರದ ಮೇಲೆ ಭವಿಷ್ಯವನ್ನು ಹೇಳಲಾಗುವುದು. ಪ್ರತಿತಿಂಗಳು ಗ್ರಹಗಳ ರಾಶಿ ಬದಲಾವಣೆ ಇರುತ್ತದೆ. ಹೀಗೆ ಗ್ರಹಗಳು ರಾಶಿ ಬದಲಾವಣೆ ಮಾಡಿದಾಗ ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಬೀರುವುದು. ಈ ತಿಂಗಳಿನಲ್ಲಿ 4 ಪ್ರಮುಖ ಗ್ರಹಗಳ ಸಂಚಾರವಿದೆ. ಬುಧ, ಸೂರ್ಯ, ಮಂಗಳ, ಶುಕ್ರ ಗ್ರಹದ ಸಂಚಾರವಾಗಲಿದೆ. ಶುಕ್ರ ಈ ತಿಂಗಳಿನಲ್ಲಿ ಹಿಮ್ಮುಖ ಚಲನೆ ಮಾಡಲಿದೆ.
ಯಾವ ಗ್ರಹ ಯಾವಾಗ ಸಂಚರಿಸಲಿದೆ?
ಜುಲೈ 1ಕ್ಕೆ ಸಿಂಹ ರಾಶಿಗೆ ಮಂಗಳ ಗ್ರಹದ ಸಂಚಾರವಾಗಲಿದೆ.
ಜುಲೈ 7ಕ್ಕೆ ಸಿಂಹ ರಾಶಿಗೆ ಶುಕ್ರ ಗ್ರಹದ ಸಂಚಾರವಾಗಲಿದೆ.
ಜುಲೈ 17ಕ್ಕೆ ಸೂರ್ಯ ಕರ್ಕ ರಾಶಿಗೆ ಸಂಚರಿಸಲಿದೆ.
ಜುಲೈ 25ಕ್ಕೆ ಸಿಂಹ ರಾಶಿಗೆ ಬುಧನ ಸಂಚಾರವಾಗಲಿದೆ.
ಜುಲೈ 23ಕ್ಕೆ ಶುಕ್ರ ಹಿಮ್ಮುಖ ಚಲನೆಯಾಗಲಿದೆ.

ಈ ಪ್ರಮುಖ ಗ್ರಹಗಳ ಚಲನೆ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಈ ಎಲ್ಲಾ ಗ್ರಹ ಸಂಚಾರಗಳು ಕೆಲವೊಂದು ರಾಶಿಗಳಿಗೆ ತುಂಬಾನೇ ಅನುಕೂಲಕರವಾಗಿದೆ. ಅದರಲ್ಲೂ 4 ಗ್ರಹಗಳ ಸಂಚಾರ ಈ 3 ರಾಶಿಯವರಿಗೆ ತುಂಬಾನೇ ಒಳ್ಳೆಯದಿದೆ.
ಮೇಷ ರಾಶಿ
ಜುಲೈ ತಿಂಗಳು ಮೇಷ ರಾಶಿಯವರಿಗೆ ಶುಭ ಪರಿಣಾಮ ಬೀರಲಿದೆ. ಉದ್ಯೋಗದಲ್ಲಿರುವವರು ಜನರು ಜುಲೈ ತಿಂಗಳಲ್ಲಿ ಅನೇಕ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಈ ತಿಂಗಳಿನಲ್ಲಿ ಆತ್ಮವಿಶ್ವಾಸವು ಬಹಳಷ್ಟು ಹೆಚ್ಚಾಗಲಿದೆ. ಕೆಲಸದಲ್ಲಿ ಏನಾದರೂ ಸಮಸ್ಯೆಯಿದ್ದರೆ ಅದು ಬಗೆ ಹರಿಯಲಿದೆ. ಈ ತಿಂಗಳಿನಲ್ಲಿ ಹೊಸ ಪರಿಚಯ ಹೆಚ್ಚಾಗಲಿದೆ. ಈ ತಿಂಗಳು ಅದೃಷ್ಟ ನಿಮ್ಮೊಂದಿಗೆ ಇರಲಿದೆ, ಈ ತಿಂಗಳು ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.
ಸಿಂಹ ರಾಶಿ
ಜುಲೈ ತಿಂಗಳು ಸಿಂಹ ರಾಶಿಯವರಿಗೆ ಬಹಳ ಶುಭವಾಗಿರಲಿದೆ. ಜುಲೈ ಮೊದಲ ವಾರದಲ್ಲಿಯೇ 3 ಪ್ರಮುಖ ಗ್ರಹಗಳ ಚಲನೆಯಲ್ಲಿ ಬದಲಾವಣೆಯು ನಿಮಗೆ ಅದೃಷ್ಟದ ಸಮಯವಾಗಲಿದೆ. ಇದ್ದಕ್ಕಿದ್ದಂತೆ ಧನಲಾಭಕ್ಕೆ ಅವಕಾಶಗಳಿವೆ. ಈ ಅವಧಿಯಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಈ ತಿಂಗಳು ಕೆಲಸಕ್ಕಾಗಿ ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿರುವವರಿಗೆ ಕನಸು ನನಸಾಗಲಿದೆ.
ತುಲಾ ರಾಶಿ
ಜುಲೈ ತಿಂಗಳು ತುಲಾ ರಾಶಿಯವರಿಗೆ ತುಂಬಾ ಲಾಭದಾಯಕವಾಗಿದೆ. ವೃತ್ತಿ ಜೀವನದ ದೃಷ್ಟಿಯಿಂದ ನೋಡುವುದಾದರೆ ನೀವು ಹೊಸ ಅವಕಾಶವನ್ನು ಪಡೆಯಬಹುದು. ಉದ್ಯೋಗಿಗಳಿಗೆ ಕೆಲಸದ ದೃಷ್ಟಿಯಿಂದ ಈ ತಿಂಗಳು ತುಂಬಾನೇ ಉತ್ತಮವಾಗಿದೆ. ವ್ಯಾಪಾರಸ್ಥರು ಈ ತಿಂಗಳಿನಲ್ಲಿ ಲಾಭಗಳಿಸಬಹುದು. ಈ ತಿಂಗಳು ನಿಮ್ಮ ಎಲ್ಲಾ ಆಸೆಗಳು ಖಂಡಿತವಾಗಿಯೂ ಈಡೇರುತ್ತವೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ, ಆರೋಗ್ಯವೂ ಉತ್ತಮವಾಗಿರುತ್ತದೆ.



Click it and Unblock the Notifications