Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ನವೆಂಬರ್‌ನಲ್ಲಿದೆ ಈ 5 ಪ್ರಮುಖ ಗ್ರಹಗಳ ಸಂಚಾರ!
ಪ್ರತಿ ತಿಂಗಳಿನಂತೆ ನವೆಂಬರ್‌ನಲ್ಲಿಯೂ ಕೆಲ ಗ್ರಹಗಳ ರಾಶಿ ಬದಲಾವಣೆಯಿದೆ, ಅದರಲ್ಲೂ ಈ ತಿಂಗಳಿನಲ್ಲಿ ಹಿಮ್ಮುಖ ಚಲನೆಯಲ್ಲಿರುವ ಶನಿ ಮಾರ್ಗಿಯಾಗಿ ಚಲಿಸಲಿದೆ. ನವೆಂಬರ್ ತಿಂಗಳಲ್ಲಿ ಒಟ್ಟು 5 ಪ್ರಮುಖ ಗ್ರಹಗಳ ಸಂಚಾರವಿದೆ. ನವೆಂಬರ್ ತಿಂಗಳಲ್ಲಿ ಶನಿ, ಸೂರ್ಯ, ಶುಕ್ರ, ಬುಧ ಮತ್ತು ಮಂಗಳ ಗ್ರಹದ ಸಂಚಾರವಿದೆ.
ನವೆಂಬರ್ ಆರಂಭದಲ್ಲಿ ಅಂದರೆ ನವೆಂಬರ್ 3 ರಂದು, ಸಂತೋಷ ಮತ್ತು ಸಮೃದ್ಧಿಯನ್ನು ನೀಡುವಶುಕ್ರನು ಕನ್ಯಾರಾಶಿಗೆ ಸಾಗುತ್ತಾನೆ. ನಂತರ ಕೇವಲ ಒಂದು ದಿನದ ನಂತರ, ನವೆಂಬರ್ 4 ರಂದು, ಶನಿಯು ತನ್ನದೇ ಆದ ಕುಂಭದಲ್ಲಿ ನೇರವಾಗಿ ಚಲಿಸುತ್ತದೆ. ನಂತರ ನವೆಂಬರ್ 6 ರಂದು ಬುಧ ಗ್ರಹವು ವೃಶ್ಚಿಕ ರಾಶಿಗೆ ಸಾಗಲಿದೆ. ನವೆಂಬರ್ 16 ರಂದು ಮಂಗಳ ಕೂಡ ರಾಶಿ ಬದಲಾವಣೆ ಮಾಡಲಿದೆ. ಇದರ ನಂತರ, ನವೆಂಬರ್ 17 ಸೂರ್ಯ ಸಂಕ್ರಮಣ. ನವೆಂಬರ್ 27 ರಂದು, ಬುಧವು ಧನು ರಾಶಿಗೆ ಮತ್ತು ನವೆಂಬರ್ 29 ರಂದು ಶುಕ್ರವು ತುಲಾ ರಾಶಿಗೆ ಸಂಚರಿಸಲಿದೆ.

ಈ ತಿಂಗಳಿನಲ್ಲಿ ಈ ಗ್ರಹಗಳ ಸಂಚಾರ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂದು ನೋಡೋಣ:
ಕನ್ಯಾರಾಶಿಯಲ್ಲಿ ಶುಕ್ರ ಸಂಚಾರ
ವೈದಿಕ ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಸಂಪತ್ತು ಮತ್ತು ಭೌತಿಕ ಸೌಕರ್ಯಗಳನ್ನು ನೀಡುವ ಶುಕ್ರನು ನವೆಂಬರ್ 3 ರಂದು ಮುಂಜಾನೆ 4.58 ಕ್ಕೆ ಕನ್ಯಾರಾಶಿಗೆ ಪ್ರವೇಶಿಸುತ್ತಾನೆ.
ಈ ಸಂಚಾರ ಯಾರಿಗೆ ಶುಭ?
ಈ ಶುಕ್ರ ಸಂಕ್ರಮಣವು ಕರ್ಕ, ಕನ್ಯಾ ಮತ್ತು ವೃಶ್ಚಿಕ ರಾಶಿಯವರಿಗೆ ಉತ್ತಮವಾಗಿರುತ್ತದೆ.
ಕುಂಭ ರಾಶಿಯಲ್ಲಿ ಶನಿ ಮಾರ್ಗಿ
ನವೆಂಬರ್ ತಿಂಗಳಲ್ಲಿ, ಶನಿಯು ನೇರ ಚಲನೆ ಮಾಡಲಿದೆ. ನವೆಂಬರ್ 4 ರಂದು ರಾತ್ರಿ 8:26 ಕ್ಕೆ ಶನಿಯು ಮತ್ತೆ ಕುಂಭ ರಾಶಿಯಲ್ಲಿ ನೇರವಾಗಿ ಚಲಿಸಲು ಪ್ರಾರಂಭಿಸುತ್ತಾನೆ.
ಈ ರಾಶಿಯವರಿಗೆ ವಿಶೇಷ ಪರಿಹಾರ ಸಿಗಲಿದೆ
ಶನಿಯು ಹಿಮ್ಮುಖ ಚಲನೆಯಲ್ಲಿರುವಾಗ ಕೆಲವು ರಾಶಿಯವರು ತೊಂದರೆ ಅನುಭವಿಸಿದ್ದರು. ಶನಿಯು ಮಾರ್ಗಿಯಾದಾಗ ಮೇಷ, ವೃಷಭ, ತುಲಾ, ಧನು ರಾಶಿಯವರಿಗೆ ವಿಶೇಷ ಪರಿಹಾರ ಸಿಗಲಿದೆ.
ವೃಶ್ಚಿಕ ರಾಶಿಯಲ್ಲಿ ಬುಧ ಸಂಕ್ರಮಣ
ಬುಧ ಗ್ರಹವು ನವೆಂಬರ್ 6 ರಂದು ಸಂಜೆ 4:11 ಕ್ಕೆ ವೃಶ್ಚಿಕ ರಾಶಿಯಲ್ಲಿ ಸಾಗಲಿದೆ. ಬುಧ ಹಾಗೂ ಮಂಗಳ ಪರಸ್ಪರ ಶತ್ರು ಗ್ರಹಗಳು.
ಬುಧನ ಅನುಗ್ರಹ ಈ ರಾಶಿಯವರ ಮೇಲಿರಲಿದೆ
ಈ ಬುಧ ಸಂಕ್ರಂಣ ವೃಷಭ, ಕರ್ಕಾಟಕ, ಸಿಂಹ ಮತ್ತು ಧನು ರಾಶಿಯವರಿಗೆ ಲಾಭದಾಯಕವಾಗಿದೆ. ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯಬಹುದು.
ಸೂರ್ಯನ ಸಾಗಣೆ
ಸೂರ್ಯನು ಪ್ರತಿ ತಿಂಗಳು ತನ್ನ ರಾಶಿ ಬದಲಾವಣೆ ಮಾಡುತ್ತಾನೆ, ಸೂರ್ಯ ತುಲಾ ರಾಶಿಯನ್ನು ಬಿಟ್ಟು ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದೆ. ನವೆಂಬರ್ 17 ರಂದು, ಸೂರ್ಯನು ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಾನೆ.
ಧನು ರಾಶಿಯಲ್ಲಿ ಬುಧ ಸಂಕ್ರಮಣ
ವೈದಿಕ ಜ್ಯೋತಿಷ್ಯದ ಪ್ರಕಾರ ನವೆಂಬರ್ ತಿಂಗಳಿನಲ್ಲಿ ಬುಧ ಗ್ರಹವು ತಿಂಗಳಿಗೆ ಎರಡು ಬಾರಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ನವೆಂಬರ್ 27 ರಂದು ಬೆಳಗ್ಗೆ ಬುಧ ಧನು ರಾಶಿಗೆ ಸಾಗಲಿದೆ.



Click it and Unblock the Notifications
