Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಜೂನ್‌ನಲ್ಲಿ ಈ ಪ್ರಮುಖ ಗ್ರಹಗಳ ರಾಶಿ ಬದಲಾವಣೆಯಿಂದ ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ
ನವಗ್ರಹಗಳಲ್ಲಿ ಪ್ರತಿಯೊಂದು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಕೆಲವೊಂದು ಗ್ರಹಗಳು ಪ್ರತಿ ತಿಂಗಳು ತಮ್ಮ ರಾಶಿ ಬದಲಾವಣೆ ಮಾಡಿದರೆ ಇನ್ನು ಕೆಲವು ಗ್ರಹಗಳು ಒಂದೇ ರಾಶಿಯಲ್ಲಿ ಕೆಲವೊಂದು ತಿಂಗಳು ಅಥವಾ ವರ್ಷ ಇದ್ದು ರಾಶಿ ಬದಲಾವಣೆ ಮಾಡುತ್ತದೆ, ಉದಾಹರಣೆಗೆ ಶನಿಗ್ರಹ. ಶನಿಗ್ರಹ ಒಂದು ರಾಶಿಯಲ್ಲಿ ಸುಮಾರು ಎರಡೂವರೆ ವರ್ಷ ಇರುತ್ತದೆ. ಈ ಗ್ರಹಗಳು ದ್ವಾದಶ ರಾಶಿಗಳಲ್ಲಿ ತಮ್ಮ ಸ್ಥಾನಕ್ಕೆ ತಕ್ಕಂತೆ ಶುಭ, ಅಶುಭ ಫಲವನ್ನು ನೀಡುತ್ತದೆ.

ಈ ತಿಂಗಳಿನಲ್ಲಿ ಕೆಲವೊಂದು ಪ್ರಮುಖ ಗ್ರಹಗಳ ರಾಶಿ ಬದಲಾವಣೆಯಾಗಲಿದೆ. ಜೂನ್ 7ಕ್ಕೆ ಬುಧ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶಿಸಲಿದೆ. ಜೂನ್ 15ಕ್ಕೆ ಸೂರ್ಯ ಮಿಥುನ ರಾಶಿಗೆ ಪ್ರವೇಶಿಸಲಿದೆ. ಜೂನ್ 17ಕ್ಕೆ ಶನಿ ವಕ್ರೀಯವಾಗಿ ಚಲಿಸಲಿದೆ. ಜೂನ್ 24ಕ್ಕೆ ಬುಧನು ಮಿಥುನ ರಾಶಿಗೆ ಪ್ರವೇಶಿಸಲಿದೆ.
ಈ ಎಲ್ಲಾ ಗ್ರಹಗಳ ಚಲನೆ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ
ಪ್ರತಿಯೊಂದು ಗ್ರಹ ರಾಶಿ ಬದಲಾವಣೆ ಮಾಡಿದಾಗ ಅದು 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಈ ತಿಂಗಳಿನಲ್ಲಿ ಬುಧ, ಸೂರ್ಯ ಎರಡು ಪ್ರಮುಖ ಗ್ರಹಗಳು ರಾಶಿ ಬದಲಾವಣೆ ಮಾಡಿದರೆ ಶನಿಯು ಕುಂಭ ರಾಶಿಯಲ್ಲಿ ವಕ್ರೀಯವಾಗಿ ಚಲಿಸಲಿದೆ. ಈ ತಿಂಗಳಿನಲ್ಲಿ ಬುಧ ಎರಡು ಬಾರಿ ರಾಶಿ ಬದಲಾವಣೆ ಮಾಡಲಿದೆ. ಈ ಎಲ್ಲಾ ಗ್ರಹಗಳು ರಾಶಿಗಳ ಮೇಲೆ ಬೀರಲಿರುವ ಪ್ರಭಾವವನ್ನು ಅವುಗಳ ಸ್ಥಾನದ ಆಧಾರ ಮೇಲೆ ನೋಡುವುದಾದರೆ ಈ ತಿಂಗಳು ಈ ಮೂರು ರಾಶಿಯವರಿಗೆ ತುಂಬಾ ಒಳ್ಳೆಯದಿದೆ:
ಈ 3 ರಾಶಿಯವರಿಗೆ ತುಂಬಾ ಒಳ್ಳೆಯದಿದೆ
* ವೃಷಭ ರಾಶಿ
* ಸಿಂಹ ರಾಶಿ
* ಧನು ರಾಶಿ
ಈ ಮೂರು ರಾಶಿಯವರಲ್ಲಿ ಈ ಎಲ್ಲಾ ಗ್ರಹಗಳ ಸ್ಥಾನವು ಅನುಕೂಲ ಸ್ಥಾನದಲ್ಲಿರುವುದರಿಂದ ಈ ತಿಂಗಳಿನಲ್ಲಿ ನೀವು ಬಯಸಿದ ಫಲವನ್ನು ಪಡೆಯುತ್ತೀರಿ. ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಉಂಟಾಗಲಿದೆ. ಆದಾಯ ಹೆಚ್ಚಾಗಲಿದೆ, ಕೆಲಸದಲ್ಲಿ ಬಡ್ತಿ ಸಿಗಲಿದೆ.
ವೃಷಭ ರಾಶಿ: ಶನಿಯು ನಿಮ್ಮ ರಾಶಿಯಲ್ಲಿ ದಶಮ ಸ್ಥಾನದಲ್ಲಿ ವಕ್ರೀಯವಾಗಿ ಚಲಿಸಲಿದೆ, ಇದರಿಂದ ನಿಮಗೆ ಧನಲಾಭವಾಗಲಿದೆ. ಅಲ್ಲದೆ ಈ ಸಮಯದಲ್ಲಿ ಆಕಸ್ಮಿಕವಾಗಿ ಕೂಡ ಧನಲಾಭ ಪಡೆಯಬಹುದು. ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡಿದ್ದರೆ ಒಳ್ಳೆಯ ಲಾಭ ಪಡೆಯುವಿರಿ. ಇನ್ನು ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಒಳ್ಳೆಯ ಉದ್ಯೋಗ ಅವಕಾಶ ದೊರೆಯಲಿದೆ. ನಿಮ್ಮ ಕೆಲಸ-ಕಾರ್ಯಗಳು ನೀವು ಊಹಿಸಿದಂತೆಯೇ ನಡೆಯಲಿದೆ.
ಸಿಂಹ ರಾಶಿ
ಇನ್ನು ಜೂನ್ ತಿಂಗಳು ಸಿಂಹ ರಾಶಿಯವರಿಗೆ ಲಾಭದಾಯಕವಾಗಿದೆ. ಏಕೆಂದರೆ ಶನಿಯು ನಿಮ್ಮ ರಾಶಿಯಲ್ಲಿ 7ನೇ ಸ್ಥಾನದಲ್ಲಿ ಹಿಮ್ಮುಖವಾಗಿ ಚಲಿಸುವುದರಿಂದ ಈ ಅವಧಿ ನಿಮಗೆ ತುಂಬಾನೇ ಒಳ್ಳೆಯದಿದೆ. ವ್ಯವಹಾರ ಬೆಳೆಯಲಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವಿರಿ. ಕುಟುಂಬದಲ್ಲಿ ಸಂತೋಷ ಇರಲಿದೆ. ನಿಮ್ಮ ಎಲ್ಲಾ ಕಾರ್ಯಗಳು ಅದೃಷ್ಟದ ಬಲದಿಂದಾಗಿ ಸುಲಭವಾಗಿ ನಡೆಯಲಿದೆ.
ಧನು ರಾಶಿ
ಧನು ರಾಶಿಯವವರಿಗೆ ಈ ತಿಂಗಳು ತುಂಬಾ ಉತ್ತಮವಾಗಿದೆ. ಏಕೆಂದರೆ ಶನಿಯು ನಿಮ್ಮ ರಾಶಿಯಲ್ಲಿ 3ನೇ ಸ್ಥಾನದಲ್ಲಿ ಹಿಮ್ಮುಖ ಚಲನೆ ಮಾಡುತ್ತಿದೆ. ಇದರಿಂದಾಗಿ ಈ ಅವಧಿ ನಿಮಗೆ ತುಂಬಾನೇ ಲಾಭದಾಯಕವಾಗಿದೆ. ನಿಮ್ಮ ಎಲ್ಲಾ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ನೆರವೇರಲಿದೆ.



Click it and Unblock the Notifications
