Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಆಗಸ್ಟ್‌ನಲ್ಲಿ 4 ಪ್ರಮುಖ ಗ್ರಹಗಳ ಸಂಚಾರ!
ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರಕ್ಕೆ ತುಂಬಾನೇ ಮಹತ್ವವಿದೆ. ಏಕೆಂದರೆ ಪ್ರತಿಯೊಂದು ಗ್ರಹ ಸಂಚಾರವು ಅದರ ಸ್ಥಾನದ ಅನುಸಾರ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಕೆಲವೊಂದು ಗ್ರಹಗಳು ತಿಂಗಳಿಗೊಮ್ಮೆ ಸ್ಥಾನ ಬದಲಾಯಿಸಿದರೆ ಇನ್ನು ಕೆಲವು ಗ್ರಹಗಳು ಕೆಲವು ತಿಂಗಳಿಗೊಮ್ಮೆ, ಶನಿ ಗ್ರಹ ಎರಡೂವರೆ ವರ್ಷಕ್ಕೊಮ್ಮೆ ರಾಶಿ ಬದಲಾಯಿಸುತ್ತದೆ.
ಗ್ರಹಗಳು ರಾಶಿ ಬದಲಾವಣೆ ಆಗುತ್ತಿದ್ದಂತೆ ಅದು ರಾಶಿಯಿಂದ ರಾಶಿಗೆ ಭಿನ್ನ ಪ್ರಭಾವ ಬೀರುವುದು. ಆಗಸ್ಟ್ ತಿಂಗಳಿನಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿದೆ, ಈ ತಿಂಗಳಿನ ಗ್ರಹ ಸಂಚಾರದಿಂದ ಯಾವೆಲ್ಲಾ ರಾಶಿಯವರಿಗೆ ಒಳ್ಳೆಯದಿದೆ ಎಂದು ನೋಡೋಣ ಬನ್ನಿ:

ಶುಕ್ರ ಸಂಚಾರ
ಆಗಸ್ಟ್ 07, 2023ರಂದು, ಸಂತೋಷ ಮತ್ತು ಸಮೃದ್ಧಿಯ ಅಂಶವಾದ ಶುಕ್ರ ಗ್ರಹವು ಕರ್ಕ ರಾಶಿಯಲ್ಲಿ ಹಿಮ್ಮುಖವಾಗಿ ಸಂಚರಿಸಲಿದೆ. ಶುಕ್ರ ಸಂಕ್ರಮಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶುಕ್ರನನ್ನು ವೃಷಭ ಮತ್ತು ತುಲಾವನ್ನು ಆಳುವ ಗ್ರಹವೆಂದು ಪರಿಗಣಿಸಲಾಗಿದೆ. ಶುಕ್ರನ ಸಂಕ್ರಮಣ ಅವಧಿಯು ಸುಮಾರು 23 ದಿನಗಳವರೆಗೆ ಇರಲಿದೆ. ಕರ್ಕದಲ್ಲಿ ಶುಕ್ರ ಸಂಚಾರ ಮಾಡುವುದರಿಂದ ಮಿಥುನ ಮತ್ತು ವೃಶ್ಚಿಕ ರಾಶಿಯವರಿಗೆ ವಿಶೇಷ ಲಾಭ ದೊರೆಯುವ ಸಾಧ್ಯತೆ ಇದೆ. ಈ ಎರಡೂ ರಾಶಿಯವರಿಗೆ ಆಗಸ್ಟ್‌ನಲ್ಲಿ ಅದೃಷ್ಟದ ಬೆಂಬಲವಿದೆ.
ಶುಕ್ರ ಅಸ್ತ
ಆಗಸ್ಟ್ 07 ರಂದು, ಶುಕ್ರನು ಕರ್ಕ ರಾಶಿಯನ್ನು ಪ್ರವೇಶಿಸಿ, ಮರುದಿನವೇ ಅಂದರೆ ಆಗಸ್ಟ್ 08 ರಂದು, ಅದು ಅದೇ ರಾಶಿಯಲ್ಲಿ ಅಸ್ತಮಿಸಲಿದೆ. ನಂತರ ಶುಕ್ರವು ಅಕ್ಟೋಬರ್ 02 ರವರೆಗೆ ಈ ರಾಶಿಯಲ್ಲಿ ಅಸ್ತಮಿಸಲಿದ್ದು ನಂತರ ಅದು ಸೆಪ್ಟೆಂಬರ್ 4ರವರೆಗೆ ಹಿಮ್ಮುಖ ಚಲನೆಯಲ್ಲಿ ಇರಲಿದೆ. ಆಗಸ್ಟ್‌ನಲ್ಲಿ ಶುಕ್ರನ ಅಸ್ಥಿತ್ವದಿಂದಾಗಿ, ಕೆಲವು ರಾಶಿಯವರು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ.
ಸೂರ್ಯನ ಸಾಗಣೆ
ಆಗಸ್ಟ್ 17ಕ್ಕೆ ಸೂರ್ಯ ಸಿಂಹ ರಾಶಿಗೆ ಸಂಚರಿಸಲಿದೆ. ಸೂರ್ಯನ ಈ ಸಾಗಣೆಯು ಸಿಂಹ ರಾಶಿ ಸೇರಿದಂತೆ ಧನು ರಾಶಿ ಮತ್ತು ಮಕರ ರಾಶಿಯ ಜನರ ಜೀವನದಲ್ಲಿ ಹೊಸತನ ತರಲಿದೆ.
ಮಂಗಳ ಸಾಗಣೆ 2023
ಸೂರ್ಯನ ಸಂಕ್ರಮಣದ ಮರುದಿನವೇ ಧೈರ್ಯ, ಶೌರ್ಯ ಮತ್ತು ಶಕ್ತಿಯ ಅಂಶವಾದ ಮಂಗಳವು ಆಗಸ್ಟ್ 18 ರಂದು ಮಧ್ಯಾಹ್ನ ಸುಮಾರು 03 ಗಂಟೆಗೆ ಕನ್ಯಾರಾಶಿಗೆ ಪ್ರವೇಶಿಸುತ್ತದೆ. ಮೇಷ, ಮಿಥುನ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ ಮಂಗಳ ಗ್ರಹದ ಸಂಚಾರದಿಂದ ಆಗಸ್ಟ್ ತಿಂಗಳು ಶುಭಕರವಾಗಿರುತ್ತದೆ.
ಬುಧವು ಹಿಮ್ಮುಖವಾಗಿರುತ್ತದೆ
ಬುದ್ಧಿವಂತಿಕೆ, ಮಾತು ಮತ್ತು ವ್ಯವಹಾರದ ಅಂಶವಾಗಿರುವ ಬುಧ ಸಿಂಹ ರಾಶಿಯಲ್ಲಿ ಆಗಸ್ಟ್ 24ಕ್ಕೆ ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸುತ್ತವೆ. ಬುಧದ ಹಿಮ್ಮುಖ ಚಲನೆಯಿಂದಾಗಿ ಕೆಲವರು ನಷ್ಟವನ್ನು ಅನುಭವಿಸಬೇಕಾಗಬಹುದು.



Click it and Unblock the Notifications