Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಏಪ್ರಿಲ್‌ನಲ್ಲಿದೆ 6 ಗ್ರಹಗಳ ಸಂಚಾರ: ಈ 4 ರಾಶಿಯವರು ಈ ತಿಂಗಳಿನಲ್ಲಿ ತುಂಬಾನೇ ಜಾಗ್ರತೆವಹಿಸಿ
ಪ್ರತಿ ತಿಂಗಳು ಗ್ರಹಗಳ ರಾಶಿ ಬದಲಾವಣೆ ಇದ್ದೇ ಇರುತ್ತದೆ. ಈ ಗ್ರಹಗಳ ರಾಶಿ ಬದಲಾವಣೆ ನಮ್ಮ ರಾಶಿಯ ಮೇಲೆ ಪ್ರಭಾವ ಬೀರುವುದು. ಏಪ್ರಿಲ್‌ನಲ್ಲಿ ಗುರು ಮತ್ತು ಶುಕ್ರ ಸೇರಿದಂತೆ ಅನೇಕ ಗ್ರಹಗಳು ತಮ್ಮ ಪಥವನ್ನು ಬದಲಾಯಿಸಲಿದೆ. ಏಪ್ರಿಲ್ 14 ರಂದು ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಮತ್ತೊಂದೆಡೆ, ಬುಧವು ಏಪ್ರಿಲ್ 21 ರಂದು ಮೇಷ ರಾಶಿಯನ್ನು ಪ್ರವೇಶಿಸಲಿದೆ ಮತ್ತು ಗುರುವು ಏಪ್ರಿಲ್ 22 ರಂದು ಮೇಷ ರಾಶಿಯನ್ನು ಪ್ರವೇಶಿಸಲಿದೆ.
ಏಪ್ರಿಲ್ 14ಕ್ಕೆ ಸೂರ್ಯನು ಮೇಷ ರಾಶಿಗೆ ಸಂಚರಿಸಿಲಿದ್ದಾನೆ. ಸೂರ್ಯನು ಮೇಷ ರಾಶಿಗೆ ಬರುವಾಗ ರಾಹು ಕೂಡ ಅದೇ ರಾಶಿಯಲ್ಲಿ ಇರುವುದರಿಂದ ರಾಹು ಮತ್ತು ಸೂರ್ಯನ ಸಂಯೋಗದಿಂದ ಗ್ರಹಣ ಯೋಗ ಉಂಟಾಗಲಿದೆ. ಏಪ್ರಿಲ್‌ನಲ್ಲಿ ಈ ಯೋಗಗಳ ರಚನೆಯಿಂದಾಗಿ, ಕೆಲವು ರಾಶಿಯವರಿಗೆ ಈ ಏಪ್ರಿಲ್ ತಿಂಗಳು ಅಷ್ಟು ಅನುಕೂಲಕರವಲ್ಲ.

ಏಪ್ರಿಲ್ ತಿಂಗಳಿನಲ್ಲಿ ಈ ಗ್ರಹಗಳ ಸಂಚಾರದಿಂದಾಗಿ ಈ ಮೂರು ರಾಶಿಯವರು ತುಂಬಾನೇ ಎಚ್ಚರಿಕೆವಹಿಸಬೇಕಾಗಿದೆ.
ಏಪ್ರಿಲ್‌ನಲ್ಲಿದೆ ಈ ಗ್ರಹಗಳ ಸಂಚಾರ
ಏಪ್ರಿಲ್ 6,2023 ವೃಷಭದಲ್ಲಿ ಶುಕ್ರ ಸಂಚಾರ
ಏಪ್ರಿಲ್ 14, 2023 ಸೂರ್ಯ ಸಂಚಾರ
ಏಪ್ರಿಲ್ 21, 2023 ಮೇಷದಲ್ಲಿ ಬುಧದ ವಕ್ರೀಯ ಚಲನೆ
ಏಪ್ರಿಲ್ 22, 2023 ಗುರು ಸಂಚಾರ
ಏಪ್ರಿಲ್ 23, 2023 ಮೇಷದಲ್ಲಿ ಬುಧ ಅಸ್ತಂಗತ
ಏಪ್ರಿಲ್ 27, 2023: ಮೇಷದಲ್ಲಿ ಗುರು ಉದಯ
ಸಿಂಹ ರಾಶಿ
ಸಿಂಹ ರಾಶಿಯವರು ಏಪ್ರಿಲ್‌ನಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಕೆಲ ಸಮಸ್ಯೆಗಳು ಎಉದುರಾಗಬಹುದು. ಈ ಸಮಯದಲ್ಲಿ ಪ್ರತಿಸ್ಪರ್ಧಿ ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ಆರ್ಥಿಕ ಸ್ಥಿತಿ ದುರ್ಬಲವಾಗಲಿದೆ. ಈ ಸಮಯದಲ್ಲಿ ಅಧಿಕ ಖರ್ಚು ನಿಯಂತ್ರಿಸುವ ಅಗ್ಯತವಿದೆ. ವ್ಯಾಪಾರದಲ್ಲಿ ಸ್ವಲ್ಪ ತೊಂದರೆ ಉಂಟಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡಲು ಹೋಗಬೇಡಿ.
ವೃಶ್ಚಿಕ ರಾಶಿ
ಈ ರಾಶಿಯವರಿಗೆ ಏಪ್ರಿಲ್ ನಲ್ಲಿ ಮಿಶ್ರ ಪರಿಣಾಮಗಳು ಕಂಡುಬರುತ್ತವೆ. ವೃತ್ತಿಪರ ಜೀವನದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ, ಯಾವುದೇ ವಿವಾದಕ್ಕೆ ಸಿಲುಕದಂತೆ ಎಚ್ಚರಿಕೆವಹಿಸುವುದು ಒಳ್ಳೆಯದು. ಹಣದ ವ್ಯವಹಾರಗಳನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ನಷ್ಟವನ್ನು ಭರಿಸಬೇಕಾಗಬಹುದು. ವೈವಾಹಿಕ ಜೀವನದಲ್ಲೂ ಕೆಲವು ಸಮಸ್ಯೆಗಳಿರಬಹುದು.
ತುಲಾ ರಾಶಿ
ಸೂರ್ಯ ಮತ್ತು ರಾಹುವಿನ ಸಂಯೋಜನೆಯು ತುಲಾ ರಾಶಿಯವರಿಗೆ ತೊಮದರೆಗಳು ಉಂಟಾಗುವುದು. ತುಲಾ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಕುಟುಂಬ ಸದಸ್ಯರೊಂದಿಗೆ ಸ್ವಲ್ಪ ಮನಸ್ತಾಪ ಉಂಟಾಗಬಹುದು. ಅದೇ ಸಮಯದಲ್ಲಿ, ವೈವಾಹಿಕ ಜೀವನದಲ್ಲಿಯೂ ಜಗಳಗಳು ಸಂಭವಿಸುವ ಸಾಧ್ಯತೆಯಿದೆ.
ಧನು ರಾಶಿ
ದೀರ್ಘಕಾಲದವರೆಗೆ ಕೆಲಸ ಹುಡುಕುತ್ತಿರುವವರು ಈ ಏಪ್ರಿಲ್‌ನಲ್ಲೂ ಶುಭ ಫಲ ಕಾಣುವುದಿಲ್ಲ, ಇನ್ನೂ ಸ್ವಲ್ಪ ಕಾಯಬೇಕಾಗುತ್ತದೆ. ಈ ಯೋಗವು ಈ ರಾಶಿಗಳ ಜನರ ಕಷ್ಟಗಳನ್ನು ಹೆಚ್ಚಿಸುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ತುಂಬಾ ಶ್ರಮಪಡಬೇಕಾಗಬಹುದು. ಅದೇ ಸಮಯದಲ್ಲಿ, ವ್ಯಕ್ತಿಯು ಕುಟುಂಬದೊಂದಿಗೆ ಕೆಲವು ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗಬಹುದು. ಆದಾಯದಲ್ಲಿ ಸಮಸ್ಯೆಗಳಿರುತ್ತವೆ, ಜಾಗರೂಕರಾಗಿರಿ.



Click it and Unblock the Notifications