Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪಿಜ್ಜಾ ಹಟ್‌ನಲ್ಲಿ ದೊರೆಯಲಿದೆ ಸ್ನೇಕ್ ಪಿಜ್ಜಾ: ಹಾವಿನ ಮಾಂಸ ಗ್ರಿಲ್ಡ್ ಚಿಕನ್ ರುಚಿಯಂತೆ!
ಪಿಜ್ಜಾ ಹಟ್ ಪ್ರಪಂಚದ ಪ್ರಸಿದ್ಧ ಪಿಜ್ಜಾ ಬ್ರ್ಯಾಂಡ್... ಇದೀಗ ಪಿಜ್ಜಾ ಬ್ರ್ಯಾಂಡ್ ಸ್ನೇಕ್ ಪಿಜ್ಜಾ ಅಂದರೆ ಹಾವಿನ ಮಾಂಸದ ಪಿಜ್ಜಾ ಡೆಲಿವರಿಗೆ ಮುಂದಾಗಿದೆ. ಇದನ್ನು ಕೇಳಿ ನೀವು ಆತಂಕ ಪಡಬೇಕಾಗಿಲ್ಲ, ಭಾರತದಲ್ಲಿರುವ ಪಿಜ್ಜಾ ಹಟ್‌ಗಳಿಗೆ ಧೈರ್ಯವಾಗಿ ಪಿಜ್ಜಾ ಸವಿಯಬಹುದು. ಸ್ನೇಕ್ ಪಿಜ್ಜಾ ಹಾಂಗ್‌ಕಾಂಗ್‌ನಲ್ಲಿ ಮಾತ್ರ ದೊರೆಯಲಿದೆ. ಒಂದು ವೇಳೆ ಅಲ್ಲಿಗೆ ಹೋದಾಗ ಸವಿಯಲು ಇಚ್ಚಿಸಿದರೆ ಸವಿಯಬಹುದು ಅಥವಾ ಪಿಜ್ಜಾ ಸವಿಯುವಾಗ ಸ್ನೇಕ್ ಪಿಜ್ಜಾ ಸವಿಯಬಹುದು ಜಾಗ್ರತೆ!

ಇದೇ ಮೊದಲ ಬಾರಿ ಪಿಜ್ಜಾ ಹಟ್ ಇಂಥದ್ದೊಂದು ವಿಭಿನ್ನ ಐಡಿಯಾದೊಂದಿಗೆ ಬಂದಿದೆ. ಹಾಂಗ್‌ಕಾಂಗ್‌ನ ಪಿಜ್ಜಾ ಹಟ್‌ಗಳಲ್ಲಿ ಹಾವಿನ ಮಾಂಸದ ಪಿಜ್ಜಾ ದೊರೆಯಲಿದೆ. ಹಾಂಗ್‌ಕಾಂಗ್‌ನಲ್ಲಿ ಸ್ನೇಕ್ ಸ್ಟಿವ್ ಅಂತ ತಯಾರಿಸುತ್ತಾರೆ. ಅದು ಅಲ್ಲಿಯ ಸಾಂಪ್ರದಾಯಕ ಆಹಾರವಾಗಿದೆ. ಅದೇ ಐಡಿಯಾವನ್ನು ಪಿಜ್ಜಾ ತಯಾರಿಯಲ್ಲಿ ಬಳಸಲಾಗಿದೆ. ಇದಕ್ಕೆ ಅಣಬೆ, ಚೈನೀಸ್ ಸುವರ್ಣಗಡ್ಡೆ ಇವೆಲ್ಲಾ ಬಳಸಿ ತಯಾರಿಸಬಹುದು.
ಈ ಪಿಜ್ಜಾ ಎಲ್ಲಾ ಸಮಯದಲ್ಲಿ ಸಿಗುವುದಿಲ್ಲ
ಹೌದು ಸ್ನೇಕ್ ಪಿಜ್ಜಾ ನವೆಂಬರ್ 22ರವರೆಗೆ ಮಾತ್ರ ದೊರೆಯಲಿದೆ.
ಈ ಹಾವಿನ ಮಾಂಸದ ಪಿಜ್ಜಾ ಡ್ರೈ ಚಿಕನ್‌ನಂತಿರುತ್ತದೆ ಎಂದು ಟೇಸ್ಟ್ ನೋಡಿದವರು ಹೇಳುತ್ತಿದ್ದಾರೆ.
ಹಾವಿನ ಮಾಂಸ ಆರೋಗ್ಯಕ್ಕೆ ಒಳ್ಳೆಯದೇ?
ಪಿಜ್ಜಾ ಹಟ್ ಹಾವಿನ ಮಾಂಸ ಸೇವಿಸಿದರೆ ರಕ್ತ ಸಂಚಾರ ಉತ್ತಮವಾಗಿರುತ್ತದೆ ಎಂದು ಹೇಳಿದೆ.
ರುಚಿಯ ಬದಲಾವಣೆ ಮಾತ್ರವಲ್ಲ ಈ ಸ್ನೇಕ್ ಪಿಜ್ಜಾ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಿದೆ.
ಯಾವೆಲ್ಲಾ ದೇಶಗಳಲ್ಲಿ ಹಾವನ್ನು ತಿನ್ನುತ್ತಾರೆ?
* ಚೀನಾ
* ವಿಯಾಟ್ನಾಂ
* ಥೈಲ್ಯಾಂಡ್
* ಇಂಡೋನೇಷಿಯಾ
* ನೈಜೀರಿಯಾ
* ಕಾಂಬೋಡಿಯಾ
* ಮಯನ್ಮಾರ್
* ಯುಎಸ್‌ನ ಟೆಕ್ಸಾಸ್, ನ್ಯೂ ಮೆಕ್ಸಿಕೋ ಹೀಗೆ ಕೆಲವೊಂದು ಕಡೆ ಹಾವು ಸೇವಿಸುತ್ತಾರೆ.
* ಭಾರತದಲ್ಲಿಯೂ ಕೆಲವರು ಹಾವನ್ನು ಸೇವಿಸುತ್ತಾರೆ.



Click it and Unblock the Notifications
