Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಏಪ್ರಿಲ್‌ನಲ್ಲಿ ಪಿಂಕ್ ಮೂನ್..! ಯಾವಾಗ..? ಯಾವ ಸಮಯ ನೋಡಬಹುದು?
ಚಂದ್ರನ ಕುರಿತು ನಿತ್ಯವು ಒಂದಲ್ಲಾ ಒಂದು ವಿಚಾರಗಳು ಕೇಳಿಬರುತ್ತಲೇ ಇರುತ್ತೆ. ಚಂದ್ರ ಭೂಮಿಯ ಏಕೈಕ ಉಪಗ್ರಹ, ಹಾಗೆ ಚಂದ್ರನಿಗೂ ಭೂಮಿಯ ಚಲನೆಗೂ ಹಾಗೆ ಭೂಮಿ ಮೇಲೆ ನಡೆಯುವ ಹಲವು ವಿದ್ಯಮಾನಗಳಿಗೆ ನಿಕಟ ಸಂಬಂಧವಿದೆ. ಚಂದ್ರನ ಚಲನೆ ಹಾಗೆ ಚಂದ್ರನ ಚಲನೆಯ ಆಧಾರದ ಮೇಲೆ ಭೂಮಿಯಲ್ಲಿ ಹಲವು ಕ್ರಿಯೆಗಳು ನಿರ್ಧರಿತವಾಗುವುದು ನೋಡಬಹುದು.
ಹಾಗೆ ಚಂದ್ರ ಗ್ರಹಗಹಣ, ಬ್ಲೂ ಮೂನ್, ಪಿಂಕ್ ಮೂನ್, ರೆಡ್ ಮೂನ್‌ಗಳ ಕುರಿತಂತೆಯೂ ನೀವು ಕೇಳಿಬರಬಹುದು. ಈಗ ಏಪ್ರಿಲ್‌ನಲ್ಲಿ ಪಿಂಕ್ ಮೂನ್ ವಿದ್ಯಮಾನ ನಡೆಯುತ್ತಿದೆ. ಇದೇ ಏಪ್ರಿಲ್ 12ರ ರಾತ್ರಿ 8:22ರ ಸುಮಾರುಗೆ ಪಿಂಕ್ ಮೂನ್ ವಿದ್ಯಮಾನ ನಡೆಯಲಿದೆ. ಹುಣ್ಣಿಮೆಯ ದಿನ ನಡೆಯುವ ಈ ವಿದ್ಯಮಾನವನ್ನು ಎಲ್ಲರು ಕಣ್ತುಂಬಿಕೊಳ್ಳಬಹುದು.

ಆದ್ರೆ ಇದು ಸೂಪರ್ ಮೂನ್ ಆಗಿರುವುದಿಲ್ಲ ಬದಲಿಗೆ ಇದೊಂದು ಮೈಕ್ರೋ ಮೂನ್ ವಿದ್ಯಮಾನ ಎಂದು ತಿಳಿದುಬಂದಿದೆ. ಹಾಗಾದ್ರೆ ಈ ಸೂಪರ್ ಮೂನ್ ಹಾಗೂ ಮೈಕ್ರೋ ಮೂನ್ ಅಂದರೇನು? ಪಿಂಕ್ ಮೂನ್ ಉಂಟಾಗಲು ಕಾರಣವೇನು? ಇದರ ಹಿಂದಿರುವ ವೈಜ್ಞಾನಿಕ ಕಾರಣಗಳ ಕುರಿತು ಇಲ್ಲಿ ತಿಳಿದುಕೊಳ್ಳೋಣ.
ಈ ಹುಣ್ಣಿಮೆಯು ಚಂದ್ರನು ಭೂಮಿಯಿಂದ ಅತ್ಯಂತ ದೂರದಲ್ಲಿದ್ದಾಗ ಸಂಭವಿಸುತ್ತದೆ. ಆದ್ದರಿಂದ ಇದನ್ನು ಮೈಕ್ರೋಮೂನ್ ಎಂದು ಕರೆಯಲಾಗಿದೆ. ಹೀಗಾಗಿ ಮೈಕ್ರೋಮೂನ್ ಸೂಪರ್‌ಮೂನ್‌ಗಿಂತ ಚಿಕ್ಕದಾಗಿಯೂ ಹಾಗೆ ಕಡಿಮೆ ಬೆಳಕನ್ನು ಹೊಂದಿರುತ್ತದೆ. ಹೀಗಾಗಿ ಏಪ್ರಿಲ್ 12ರಂದು ಮೈಕ್ರೋ ಮೂನ್ ನೋಡಬಹುದು.
ಪಿಂಕ್ ಮೂನ್ ಆಗುವುದೇಕೆ?
ಅಚ್ಚರಿ ಏನೆಂದರೆ ಚಂದ್ರನು ಈ ದಿನ ಸಂಪೂರ್ಣ ನಿಮಗೆ ಗುಲಾಬಿ ಬಣ್ಣದಲ್ಲಿ ಕಾಣಿಸುವುದಿಲ್ಲ. ನಿಗದಿತ ಗಾತ್ರಕ್ಕಿಂತ ಕಡಿಮೆ ಹಾಗೂ ದೂರದಲ್ಲಿ ಚಂದ್ರನ ಸ್ಥಾನ ಇರುವ ಕಾರಣ ಮಂದವಾಗಿ ಕಾಣಿಸಲಿದೆ. ಇದು ಗುಲಾಬಿ ಬಣ್ಣ ಹೊಂದಿರುವಂತೆ ಭಾಸವಾಗಲಿದೆ. ಓಲ್ಡ್ ಫಾರ್ಮರ್ಸ್ ಅಲ್ಮಾನಾಕ್ ಪ್ರಕಾರ ಪೂರ್ವ ಉತ್ತರ ಅಮೆರಿಕಾದಲ್ಲಿ ಬೇಸಿಗೆ ಆರಂಭದ ಸಮಯದಲ್ಲಿ ಅರಳುವ ಗುಲಾಬಿ ಹೂವುಗಳ ಕಾಲದಲ್ಲಿ ಈ ಮೈಕ್ರೋಮೂನ್ ಉಂಟಾಗುವುದರಿಂದ ಪಿಂಕ್ ಮೂನ್ ಎಂಬ ಹೆಸರು ಇಡಲಾಗಿದೆ. ಈ ಕಾರಣ ಹೊರತುಪಡಿಸಿ ಪಿಂಕ್ ಮೂನ್ ಎಂಬ ಹೆಸರಿಗೆ ಬೇರೆ ಯಾವುದೇ ಕಾರಣಗಳಿಲ್ಲ. ಅಂದು ಚಂದ್ರ ಪಿಂಕ್ ಬಣ್ಣದಲ್ಲಿ ಕಾಣಿಸುವುದಿಲ್ಲ.
ಹಾಗೆ ಈ ಏಪ್ರಿಲ್‌ನ ಹುಣ್ಣಿಮೆಯ ಚಂದ್ರನನ್ನು ಪಾಸ್ಚಲ್ ಚಂದ್ರ ಎಂದೂ ಕೂಡ ಕರೆಯುತ್ತಾರೆ. ಇದು ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದೆ, ಅಲ್ಲಿ ಚಂದ್ರನನ್ನು ಈ ಹೆಸರಿನಿಂದ ಕರೆಯಲಾಗಿದೆ. ಅಲ್ಲಿ ಇದು ಚಳಿಗಾಲದ ಕೊನೆಯ ಹುಣ್ಣಿಮೆ ಎಂದು ಹಾಗೆ ವಸಂತ ಋತುವಿನ ಮೊದಲ ಹುಣ್ಣಿಮೆ ಎಂಬುದಾಗಿಯೂ ವರ್ಗೀಕರಿಸಲಾಗಿದೆ.
ಪಿಂಕ್ ಮೂನ್ ಸಮಯ ಮತ್ತು ನೋಡುವ ಸ್ಥಳ
ಗುಲಾಬಿ ಚಂದ್ರನನ್ನು ಏಪ್ರಿಲ್ 12ರ ರಾತ್ರಿ ಹಾಗೂ 13ರ ರಾತ್ರಿಯಲ್ಲಿ ನೋಡಬಹುದು. ಆದ್ರೆ ಏಪ್ರಿಲ್ 12ರ ರಾತ್ರಿ 8:22ಕ್ಕೆ ತನ್ನ ಪರಿಪೂರ್ಣ ಮಟ್ಟ ತಲುಪಲಿದೆ. ಈ ಸಮಯದಲ್ಲಿ ಚಂದ್ರನು ಭೂಮಿಯಿಂದ ಬಹಳ ದೂರದಲ್ಲಿರಲಿದ್ದಾನೆ. ಆದ್ರೆ ಈ ಏಪ್ರಿಲ್ ಪಿಂಕ್ ಮೂನ್‌ಗೆ ಹಲವು ಹೆಸರುಗಳಿರುವುದು ನೋಡಬಹುದು. ಈ ಹುಣ್ಣಿಮೆಯನ್ನು ಬ್ರೇಕಿಂಗ್ ಐಸ್ ಮೂನ್, ಹೆಬ್ಬಾತುಗಳು ಮೊಟ್ಟೆ ಇಡುವ ಚಂದ್ರ, ಬಾತುಕೋಳಿಗಳು ಹಿಂತಿರುಗುವ ಚಂದ್ರ ಮತ್ತು ಕಪ್ಪೆ ಚಂದ್ರ ಎಂಬ ವಿಚಿತ್ರ ಹೆಸರುಗಳಿಂದಲೂ ಕರೆಯುತ್ತಾರೆ.
ಈ ಪಿಂಕ್ ಮೂನ್‌ಗೂ ಹಾಗೆ ಕ್ರಿಶ್ಚಿಯನ್ನರ ಗುಡ್ ಫ್ರೈಡೆಗೂ ಸಂಬಂಧವಿದೆ. ಹುಣ್ಣಿಮೆ ಮುಗಿದು 6ನೇ ದಿನಕ್ಕೆ ಗುಡ್ ಫ್ರೈಡೆ ಬರಲಿದೆ. ಹೀಗಾಗಿ ಪಾಸ್ಚಲ್ ಚಂದ್ರ ಅಂತಲೂ ಕರೆಯಲಾಗಿದೆ.



Click it and Unblock the Notifications