Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಆಕಾಶದ ಮೇಲೆ ಮೂಡಿತು ಬೆಳಕಿನ ಪಿಲ್ಲರ್..! ಸಮುದ್ರ ತೀರದಲ್ಲಿ ಕೌತುಕ..!
ಆಗಸದಲ್ಲಿ ಒಂದಲ್ಲಾ ಒಂದು ವಿಸ್ಮಯಗಳು ನಡೆಯುತ್ತಿರುವುದಕ್ಕೆ ನಾವೆಲ್ಲಾ ಸಾಕ್ಷಿಯಾಗುತ್ತಿದ್ದೇವೆ. ಆಕಾಶ ಅಂದರೇನೆ ಹಾಗೆ ಎಷ್ಟು ನಿಗೂಢತೆಗಳಿವೆ, ಎಷ್ಟೆಲ್ಲಾ ಅಚ್ಚರಿ ಅಡಗಿದೆ ಎಂಬುದನ್ನು ನಾವು ಊಹಿಸಲು ಸಹ ಸಾಧ್ಯವಿಲ್ಲ. ನಿತ್ಯ ಒಂದಲ್ಲಾ ಒಂದು ಅಚ್ಚರಿ ಕಣ್ಣ ಮುಂದೆ ಬರುತ್ತಲೇ ಇರುತ್ತದೆ.
ಕಳೆದ ಮೂರ್ನಾಲ್ಕು ದಿನದ ಹಿಂದಷ್ಟೇ ಪೋರ್ಚುಗಲ್ ಸಮೀಪ ಬೃಹತ್ ಬೆಂಕಿ ಉಗುಳುವ ಧೂಮಕೇತು ಒಂದು ಬಿದ್ದಿತ್ತು. ಈ ವಿಡಿಯೋ ಎಲ್ಲೆಡೆ ವೈರಲ್ ಸಹ ಆಗಿತ್ತು. ಆದ್ರೆ ಇದು ಇಂತಹ ವಿದ್ಯಮಾನದ ಕಥೆ ಅಲ್ಲ. ಬದಲಿಗೆ ಇಲ್ಲೊಂದು ಕಡೆ ನಿಗೂಢವಾದ ಬೆಳಕು ಆಕಾಶದಲ್ಲಿ ಕಾಣಿಸಿಕೊಂಡಿದೆ. ಅದು ಒಂದು ಬೆಳಕಲ್ಲ ಬೆಳಕಿನ ಸಾಲು ಸಾಲುಗಳು ಹೊಳೆಯ ತೊಡಗಿವೆ.

ಈ ಬೆಳಕು ಕಾಣಿಸಿಕೊಂಡಿದ್ದು ಜಪಾನ್‌ನಲ್ಲಿ. ನಕ್ಷತ್ರಗಳ ಪುಂಜದಂತೆ ಅಲ್ಲ ಬದಲಿಗೆ ಒಂದು ಸಾಲು ಪಿಲ್ಲರ್ ಹಾಕಿರುವಂತೆ ಮೋಡಗಳಿಂದ ಇಳಿಬಿಟ್ಟ ಬೆಳಕು ಕಾಣಿಸುತ್ತಿದೆ. ಈ ವಿಚಿತ್ರ ವಿದ್ಯಮಾನದ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದು, ನೋಡುಗರಿಗೆ ಅಚ್ಚರಿಯ ಜೊತೆಗೆ ಶಾಕ್ ಸಹ ಕಾದಿತ್ತು.
ಆಕಾಶದಲ್ಲಿ ಸುಮಾರು 9 ಸಾಲು ಬೆಳಕು ಕಾಣಿಸಿತ್ತಿರುವುದು ಫೋಟೋದಲ್ಲಿ ನೋಡಬಹುದು. ಇದನ್ನು ಕಂಡ ನೆಟ್ಟಿಗರು ನಿಜಕ್ಕೂ ಶಾಕ್ ಆಗಿದ್ದಾರೆ. ಇದು ಯಾವ ವಿದ್ಯಮಾನದ ಕಾರಣ ಸಂಭವಿಸಿದೆ ಎಂಬುದು ಉತ್ತರ ಸಿಗದ ಪ್ರಶ್ನೆಗೆ ತಲೆ ಕೆಡಿಸಿಕೊಂಡಿದ್ದಾರೆ.
ಜಪಾನ್‌ನ ಟೊಟೊರಿ ಪ್ರಿಫೆಕ್ಚರ್‌ನ ಕರಾವಳಿ ಪಟ್ಟಣದ ಡೈಸೆನ್‌ನ ಆಕಾಶದಲ್ಲಿ ಈ ರೀತಿಯ ಬೆಳಕು ಕಂಡುಬಂದಿದೆ ಎಂದು ಫೋಟೋ ಹರಿಬಿಡಲಾಗಿದೆ. ಪೋಸ್ಟ್ 12 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗುತ್ತಿದ್ದಂತೆ, ಇನ್ನೊಬ್ಬ ವ್ಯಕ್ತಿ ಇದೇ ರೀತಿಯ ಬೆಳಕಿನ ಕಂಬಗಳನ್ನು ತೋರಿಸುವ ಫೋಟೋವನ್ನು ಹಂಚಿಕೊಂಡಿದ್ದಾರೆ, ಈ ಬಾರಿ ಡೈಸೆನ್‌ನಿಂದ ಕೇವಲ 12.7 ಕಿಮೀ ಪೂರ್ವದಲ್ಲಿರುವ ಕೊಟೌರಾ ಟೌನ್‌ನಲ್ಲಿರುವ ನರಿಶಿ ಬೀಚ್‌ನಲ್ಲಿ ತೆಗೆಯಲಾಗಿದೆ ಎಂದು ಹೇಳಿಕೊಂಡಿದ್ದಾನೆ.
ಈ ಪೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಳಿಕ ವೈರಲ್ ಆಗಿರುವ ಜೊತೆಗೆ ಜನರ ನಿದ್ದೆ ಗೆಡಿಸಿವೆ. ಕೆಲವರು ಇದು ಏಲಿಯನ್ ಜಗತ್ತಿನ ಬೆಳಕು ಅಂತಲೆ ಪ್ರತಿಪಾದಿಸುತ್ತಿದ್ದಾರೆ. ಅವು ಭೂಮಿಯ ಮೇಲೆ ಬರುವ ನಿರೀಕ್ಷೆಯಲ್ಲಿರಬಹುದು ಅಥವಾ ಅಧ್ಯಯನಕ್ಕೆ ಮುಂದಾಗಿರಬಹುದು ಎಂದು ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ.
ಇದಕ್ಕೂ ಮೊದಲು ಅಮೆರಿಕದ ಹಾಗೂ ಜಪಾನ್‌ನ ಕರಾವಳಿ ತೀರದಲ್ಲಿ ಈ ರೀತಿ ಬೆಳಕುಗಳು ಕಂಡುಬಂದಿದ್ದವಂತೆ. ಇದು ತಾಪಮಾನ ಇಳಿಕೆಯಾದಂತೆ, ಸಮುದ್ರದ ನೀರು ಆವಿಯಾಗಿ ಮೇಲೆ ಹೋದಾದ ಅದು ಘನವಾಗಿ ಪರಿವರ್ತನೆಯಾಗುತ್ತದೆ ಇದರಿಂದಾಗಿ ಮೋಡದಿಂದ ಬೆಳಕಿನ ರೀತಿ ಅದು ಕಾಣಿಸುತ್ತದೆ ಎಂಬ ಸಿದ್ಧಾಂತವೊಂದು ಹೊರಬಿದ್ದಿದೆ. ಆದರೆ ಇದು ಎಷ್ಟು ಸತ್ಯ ಎಂಬುದು ದೃಢವಾಗಿಲ್ಲ.
ಅದರಲ್ಲೂ ಸಮುದ್ರ ತೀರದಲ್ಲಿ ರಾತ್ರಿಯ ಉಷ್ಣತೆಯು ಕಡಿಮೆಯಾದಾಗ ಮತ್ತು ಗಾಳಿಯಲ್ಲಿನ ನೀರಿನ ಆವಿಯು ಐಸ್ ಸ್ಫಟಿಕಗಳ ಸಾಲುಗಳಾಗಿ ರೂಪುಗೊಂಡಾಗ ಈ ರೀತಿ ಬೆಳಕಿನ ರೀತಿಯಾಗಿ ಅವು ಕಾಣಿಸುತ್ತವೆ. ಅಪರೂಪದ ಸಂದರ್ಭಗಳಲ್ಲಿ, ಹವಾಮಾನ ಪರಿಸ್ಥಿತಿಗಳು ಹರಳುಗಳು ರೂಪುಗೊಳ್ಳುತ್ತವೆ ಆದರೆ ಯಾವುದೇ ಮಳೆ ಇರುವುದಿಲ್ಲ. ಪರಿಣಾಮವಾಗಿ, ಹರಳುಗಳು ಗಾಳಿಯಲ್ಲಿ ಸೇರಿಕೊಳ್ಳುತ್ತವೆ. ಇದು ಸಹ ಈ ರೀತಿ ವಿದ್ಯಮಾನಕ್ಕೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.
ರಾಷ್ಟ್ರೀಯ ಕೇಂದ್ರದ ವಿಜ್ಞಾನಿ ಮೈಕೆಲ್ ಕವುಲಿಚ್ ಫಾಕ್ಸ್ ವೆದರ್ ಈ ಕುರಿತು ಹೀಗೆ ಹೇಳಿದ್ದಾರೆ. ಅತ್ಯಂತ ಶಾಂತ ಪರಿಸ್ಥಿತಿಗಳಲ್ಲಿ, ಮೋಡಗಳಲ್ಲಿನ ಐಸ್ ಸ್ಫಟಿಕಗಳು ಕನ್ನಡಿಗಳಂತೆ ವರ್ತಿಸಿದಾಗ ಮತ್ತು ನೆಲದಿಂದ ಹೊಳೆಯುವ ದೀಪಗಳನ್ನು ಪ್ರತಿಫಲಿಸಿದಾಗ "ಬೆಳಕಿನ ಕಂಬಗಳು" ರೂಪುಗೊಳ್ಳುತ್ತವೆ ಎಂದಿದ್ದಾರೆ.



Click it and Unblock the Notifications
