Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಟ್ರಂಪ್ ಕಿವಿ ಪಕ್ಕ ಹಾದು ಹೋಗುತ್ತಿರುವ ಗುಂಡಿನ ಫೋಟೋ: ಕೂದಲೆಳೆಯ ಅಂತರದಲ್ಲಿಷ್ಟೇ ಪಾರಾಗಿದ್ದಾರೆ ಟ್ರಂಪ್
ಅಬ್ಬಾ ಆ ವೀಡಿಯೋ ನೋಡಿದಾಗ ನಮಗೇ ಒಂಥರಾ ಆಗುತ್ತೆ, ಟ್ರಂಪ್ ಸಾವಿನಿಂದ ಕ್ಷಣಮಾತ್ರದಲ್ಲಿ ಪಾರಾಗಿದ್ದಾರೆ, ಅವರ ಕಿವಿಯ ಸಮೀಪ ಸಾಗಿದ ಬುಲೆಟ್ ವೀಡಿಯೋ ತುಂಬಾನೇ ವೈರಲ್ ಆಗಿದೆ. ಅವರು ಒಂದಿಷ್ಟು ತಲೆ ತಿರುಗಿಸದೆ ಇದ್ದರೆ ಡೊನಾಲ್ಡ್ ಟ್ರಂಪ್ ಇಂದು ಜೀವಂತವಾಗಿ ಉಳಿಯಲು ಸಾಧ್ಯವೇ ಇರಲಿಲ್ಲ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ದಾಳಿಕೋರ ನಡೆಸಿದ ಭಯಾನಕ ಗುಂಡು ದಾಳಿಯ ವೀಡಿಯೋ ಇದೀಗ ವೈರಲ್ ಆಗಿದೆ. ಈ ದಾಳಿಯಲ್ಲಿ ಟ್ರಂಪ್ ಕಿವಿಗೆ ಸ್ವಲ್ಪ ಗಾಯವಾಗಿದೆ, ಗುಂಡು ಅವರ ಕಿವಿಗೆ ಸ್ವಲ್ಪ ತಾಗಿದಾಗ ತಕ್ಷಣ ಕಾರ್ಯಪ್ರವೃತವಾದ ಸೀಕ್ರೆಟ್ ಸರ್ವೀಸ್ ಏಜೆಂಟರು ಟ್ರಂಪ್ ಅವರನ್ನು ರಕ್ಷಿಸಿದ್ದಾರೆ.

1981ರ ಬಳಿಕ ಅಮೆರಿಕದ ರಾಜಕೀಯ ಕ್ಷೇತ್ರದಲ್ಲಿ ನಡೆದವರ ಮೇಲೆ ನಡೆದ ಮೊದಲ ಗುಂಡಿನ ದಾಳಿ
ಅಮೆರಿಕದ ಅಧ್ಯಕ್ಷರಾಗಲಿ, ಮಾಜಿ ಅಧ್ಯಕ್ಷರಾಗಲಿ, ಅಧ್ಯಕ್ಷೀಯ ಅಭ್ಯರ್ಥಿಗಾಗಲಿ ತುಂಬಾನೇ ಬಿಗಿ ಭದ್ರತೆ ಇರುತ್ತದೆ, ಆ ಭದ್ರತೆಯ ಕೋಟೆಯುನ್ನು ಬೇಧಿಸುವುದು ಅಸಾಧ್ಯ ಎಂದು ಹೇಳಲಾಗುತ್ತಿತ್ತು, ಆದರೆ ಡೊನಾಲ್ಡ್ ಟ್ರಂಪ್ ಮೇಲಾದ ದಾಳಿಯಿಂದಾಗಿ ಆ ನಂಬಿಕೆ ಹುಸಿಯಾಗಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯು ಕಾವೇರಿದೆ ಈ ಸಂದರ್ಭದಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
Photo by New York Times photographer Doug Mills shows bullet flying just behind Trump's head. pic.twitter.com/0ncIBC0i1v
— The Spectator Index (@spectatorindex) July 14, 2024
ಡೊನಾಲ್ಡ್ ಟ್ರಂಪ್‌ನ ಹತ್ಯೆಗೆ ಪ್ರಯತ್ನಿಸಿದ್ದ ದಾಳಿಕೋರನ ವಯಸ್ಸು 20
ಇಷ್ಟು ಚಿಕ್ಕ ಪ್ರಾಯದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷನ ಮೇಲೆ ಈ ಯುವಕನ ಅದ್ಯಾವ ದ್ವೇಷವೋ... ಈತನ ಕೃತ್ಯವನ್ನು ಅಮೆರಿಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು ಖಂಡಿಸಿದ್ದಾರೆ. ಈತನನ್ನು ಪೆನ್ಸಿಲ್ವೇನಿಯಾದ ಬೆತೆಲ್ ಪಾರ್ಕ್‌ನ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಲಾಗಿದೆ. ಈತ ಟ್ರಂಪ್ ಭಾಗವವಹಿಸಿದ್ದ ಸಭೆಯಿಂದ ಸ್ವಲ್ಪ ದೂರದಲ್ಲಿರುವ ಉತ್ಪಾದನೆಯ ಘಟಕದ ಔಆಚಣೆಯ ಮೇಲೆ ಹತ್ತಿ ಗುಂಡು ಹಾರಿಸಿದ್ದ. ಆದರೆ ಟ್ರಂಪ್ ಅದೃಷ್ಟ ಚೆನ್ನಾಗಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಕೆಲವೇ ಅಡಿ ಅಂತರದಿಂದ ದಾಳಿ ಮಾಡಿದ್ದಾನೆ.
ಕೆಲವು ಕಡೆ 120 ಮೀ ಅಂದಿದೆ, ಇನ್ನು ಕೆಲವು ವರದಿಯಲ್ಲಿ 130 ಮೀ ದೂರ ಎಂದಿದೆ. ಅಮೆರಿಕದಲ್ಲಿ 2024ರಲ್ಲಿ ನಡೆಯುತ್ತಿರುವ ಅಧ್ಯಕ್ಷೀಯ ಪಟ್ಟಕ್ಕಾಗಿ ಡೊನಾಲ್ಡ್ ಟ್ರಂಪ್ ಕೂಡ ಸ್ಪರ್ಧಿಸುತ್ತಿದ್ದಾರೆ, ಈ ಸಂದರ್ಭದಲ್ಲಿ ದಾಳಿ ನಡೆದಿದೆ. ಆದರೆ ಟ್ರಂಪ್ ಭಯಪಡದೆ ತಮ್ಮ ಚುನಾವಣಾ ಪ್ರಚಾರವನ್ನು ಮುಂದುವರೆಸಿದ್ದಾರೆ.
ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದ ಫೋಟೋವನ್ನು ಫೋಟೋಗ್ರಾಫರ್‌ರೊಬ್ಬರು ಸೆರೆ ಹಿಡಿದಿದ್ದು ಆ ಫೋಟೋ ವೈರಲ್ ಆಗಿದೆ. Mr Mills ಈ ಫೋಟೋವನ್ನು ಸೆರೆ ಹಿಡಿದಿದ್ದಾರೆ. ಬುಲೆಟ್ ದಾಳಿ ಕ್ಷಣಮಾತ್ರದಲ್ಲಿ ನಡೆದಿದೆ. ಆದರೆ ಇವರು ಸ್ಪೋಮೋಷನ್‌ನಲ್ಲಿ ಸೆರೆ ಹಿಡಿದ ಫೋಟೋದಲ್ಲಿ ಆ ಬುಲೆಟ್ ಸೆರೆಯಾಗಿದೆ.
'ನಾನು ಫೋಟೋಗಳನ್ನು ತೆಗೆಯುತ್ತಿದ್ದೆ, ನನ್ನ ಬೆರಳುಗಳು ಶಟರ್ ಮೇಲೆ ಇತ್ತು, ಅಷ್ಟರಲ್ಲಿ ಗುಂಡಿನ ಶಬ್ದ ಕೇಳಿತು, ನಾನು ಯಾವೆಲ್ಲಾ ಫೋಟೋ ಕ್ಲಿಕ್ ಮಾಡಿದೆ ಎಂಬುವುದು ನನಗೆ ಗೊತ್ತಿರಲಿಲ್ಲ, ಆದರೆ ಲ್ಯಾಪ್‌ಟಾಪ್‌ನಲ್ಲಿ ಹಾಕಿದಾಗ ಒಂದು ಫೋಟೋದಲ್ಲಿ ಬುಲೆಟ್ ಟ್ರಂಪ್ ಕಿವಿ ಪಕ್ಕದಲ್ಲಿ ಹಾದು ಹೋಗುತ್ತಿರುವ ಫೋಟೋ ಕಣ್ಣಿಗೆ ಬಿತ್ತು. ನಾನು 1/1,800 of a second ಸ್ಪೀಡ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.
ಟ್ರಂಪ್ ಮೇಲೆ ದಾಳಿಯಾಗುತ್ತೆ, ಅದು ಈ ಈ ರೀತಿ ನನ್ನ ಕ್ಯಾಮರಾದಲ್ಲಿ ಸೆರೆಯಾಗುತ್ತೆ ಎಂಬುವುದು ಯೋಚಿಸಿಯೂ ಇರಲಿಲ್ಲ, ನಾನು ಅಧ್ಯಕ್ಷರನ್ನು 40 ವರ್ಷಗಳನ್ನು ಫೋಟೋಗ್ರಾಫ್ ಮಾಡುತ್ತಾ ಬಂದಿದ್ದೇನೆ.
ಎಲ್ಲವೂ ಇದ್ದಕ್ಕಿದ್ದಂತೆ ಸಂಭವಿಸಿತು, ಅವರು ಸ್ಟೇಜ್ ತುದಿಗೆ ಬಂದರು, ಗೆಲ್ಲುವಂತೆ ಮುಷ್ಠಿ ತೋರಿಸಿದರು, ನೋಡಿದರೆ ಅವರ ಮುಖದಲ್ಲಿ ರಕ್ತ ಇತ್ತು ಎಂದು ಹೇಳಿದ್ದಾರೆ.
ಈ ದಾಳಿಯ ಬಳಿಕ ಕೂಡ ಟ್ರಂಪ್ ತನ್ನ ಕಾರ್ಯಕ್ರಮಗಳನ್ನು ರದ್ದು ಮಾಡಿಲ್ಲ, ಮಾಜಿ ಅಧ್ಯಕ್ಷರಿಗೆ ಬಿಗಿ ಭದ್ರತೆ ಹೆಚ್ಚು ಮಾಡಲಾಗಿದೆ.



Click it and Unblock the Notifications
