Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಪಿಹೆಚ್‌ಡಿ ಓದಿ ರಸ್ತೆ ಬದಿಯಲ್ಲಿ ಚಿಕನ್ 65 ಮಾರುತ್ತಿರುವ ಹುಡುಗ: ಈತನಂಥವರು ಜೀವನದಲ್ಲಿ ಸೋಲುವುದೇ ಇಲ್ಲ
ನಂಗೆ ಅದಿಲ್ಲ- ಇದಿಲ್ಲ ಇಲ್ಲದಿದ್ದರೆ ನಾನು ಅ ಕೆಲಸದಲ್ಲಿ ಇರುತ್ತಿದೆ , ಈ ಕೆಲಸದಲ್ಲಿ ಇರುತ್ತಿದ್ದೆ ಎನ್ನುವವರ ಮಧ್ಯ ತಮ್ಮ ಜೀವನದ ಗುರಿ ತಲುಪಲು ಮಾರ್ಗಗಳನ್ನು ಕಂಡುಕೊಳ್ಳುವವರನ್ನು ನೋಡುವಾಗ ಹೆಮ್ಮೆ ಅನಿಸುತ್ತಿದೆ, ಅಲ್ಲದೆ ಯುವ ಪೀಳಿಗೆಗೆ ಅಂಥವರ ಬಗ್ಗೆ ಹೇಳಬೇಕು, ಅವರ ವಿಡಿಯೋಗಳನ್ನು ತೋರಿಸಬೇಕು, ಅವಾಗ ನನಗೆ ಉದ್ಯೋಗ ಇಲ್ಲ, ನನ್ನ ಓದಿಗೆ ತಕ್ಕ ಕೆಲಸ ಸಿಗಲ್ಲ ಎಂದು ಯಾರೂ ಹೇಳಲ್ಲ, ಮನಸ್ಸಿದ್ದರೆ ಮಾರ್ಗ ಎಂಬುವುದಕ್ಕೆ ಹಲವಾರು ವ್ಯಕ್ತಿ ನಮ್ಮ ಮುಂದೆ ಇದ್ದಾರೆ, ಈಗ ಅಂಥದ್ದೇ ಒಂದು ವೀಡಿಯೋ ವೈರಲ್ ಅಗುತ್ತಿದೆ.

ಪಿಹೆಚ್‌ಡಿ ಮಾಡುತ್ತಿದ್ದರೂ ರಸ್ತೆ ಬದಿಯಲ್ಲಿ ಚಿಕನ್ 65 ಮಾರುತ್ತಿರುವ ಯುವಕ
ವಿದೇಶಿ ವ್ಯಕ್ತಿಯೊಬ್ಬರು ಗೂಗಲ್‌ನಲ್ಲಿ ನಿಮ್ಮ ಶಾಪ್ ನೋಡಿ ಬಂದೆ, ಚಿಕನ್ 65ಗೆ ಎಷ್ಟು ಎಂದು ಕೇಳಿದಾಗ ಬೀದಿ ಬದಿಯ ಆ ವ್ಯಾಪಾರಿ ಚಿಕನ್ 65 ಬೆಲೆ ಹೇಳುತ್ತಾರೆ, ಅವಾಗ ವ್ಯಕ್ತಿ ಮಾತನಾಡಿಸುತ್ತಾ ಆ ವ್ಯಾಪಾರಿ ಬಗ್ಗೆ ಕೇಳಿದಾಗ ನಾನು ಪಿಹೆಚ್‌ಡಿ ಮಾಡ್ತಾ ಇದ್ದೀನಿ, ನನ್ನ ರಿಸರ್ಚ್ ಪೇಪರ್ ಗೂಗಲ್ ಸರ್ಚ್ ಮಾಡಿದರೆ ಸಿಗುತ್ತದೆ ಎಂದು ಹೇಳುತ್ತಾನೆ. ಇದು ನಿಜಕ್ಕೂ ಮೆಚ್ಚಿಕೊಳ್ಳಬೇಕಾದ ವಿಷಯ. ಯಾರಲ್ಲಿ ಈ ಬಗ್ಗೆ ಚಿಂತೆನೆ ಇರುತ್ತದೋ ಅವರು ಜೀವನದಲ್ಲಿ ಸೋಲುವುದೇ ಇಲ್ಲ.
ನಾವು ದೊಡ್ಡ ಓದು ಓದಿದ್ದೇವೆ, ನಮಗೆ ನಮ್ಮ ಓದಿಗೆ ತಕ್ಕ ಕೆಲಸನೇ ಸಿಗಬೇಕು ಇಲ್ಲ ಎಂದರೆ ಕೆಲಸ ಮಾಡಲ್ಲ, ನನ್ನ ಓದಿಗೆ ಇಷ್ಟೇ ಸಂಬಳದ ಕೆಲಸ ಸಿಗಬೇಕು ಎಂದು ಹಠಿ ಹಡಿಇದು ಕೂತರೆ ಜೀವನದಲ್ಲಿ ಸೆಟ್ಲ್ ಆಗಲ್ಲ, ಬದಲಿಗೆ ತನ್ನ ಗುರಿ ಮುಟ್ಟಲು ಬಯಸಿದ ಕೆಲಸ ಸಿಗದಿದ್ದರು ಶ್ರಮವಹಿಸಿ ತಮ್ಮಿಂದಾಗುವ ಕೆಲಸ ಮಾಡಿದರೆ ನಿರುದ್ಯೋಗ ಕಾಡಲ್ಲ, ನಮ್ಮ ಗುರಿ ಮುಟ್ಟುವುದು ಸುಲಭವಾಗುವುದು. ಈತ ನಾನು ಪಿಹೆಚ್‌ಡಿ ಮಾಡ್ತಾ ಇದ್ದೀನಿ ಎಂದು ಕೂತಿಲ್ಲ, ಬೀದಿ ಬದಿಯಲ್ಲಿ ಚಿಕನ್ 65 ಮಾರುತ್ತಾ ತಗನ್ನ ಬದುಕು ಗಟ್ಟಿಯಾಗಿಸಲು ಪಿಹೆಚ್‌ಡಿ ಕಡೆ ಗಮನಹರಿಸುತ್ತಿದ್ದಾನೆ.
ಕರ್ನಾಟಕದ ಕುರಿ ಮೇಯಿಸುವ ಹುಡುಗನ ವೀಡಿಯೋ ವೈರಲ್ ಆಗಿತ್ತು
ಆ ವೀಡಿಯೋ ಮಾಡಿದವರು ಆ ಹುಡುಗನ ಬಳಿ ಕೇಳ್ತಾರೆ ನೀವೇನು ಓದಿದ್ದೀರಿ, ಅದಕ್ಕೆ ನಾನು ಡಿಪ್ಲೋಮಾ ಮಾಡಿದ್ದೀನಿ ಎಂದು ಉತ್ತರಿಸುತ್ತಾನೆ, ಈಗ ಕುರಿ ಸಾಕುತ್ತಿದ್ದೇನೆ, ನನ್ನ ಬಳಿ ಎಷ್ಟು ಕುರಿಗಳಿವೆ ಎಂದು ಲೆಕ್ಕ ನೀಡುತ್ತಾನೆ, ಆತ ಇವತ್ತು ಕುರಿ ಮಾರುತ್ತೇನೆ ಎಂದರೂ ಕೋಟಿ ಹಣ ಗಳಿಸುವಷ್ಟು ಕುರಿಗಳು ಆತನ ಬಳಿ ಒತ್ತು, ಅಲ್ಲದೆ ಕುರಿಗಳು ಒಂದು ರೀತಿಯ ಎಟಿಎಂ ರೀತಿ ಹಣ ಬೇಕೆಂದರೆ ಕೊಟ್ಟರೆ ಆಯ್ತು ಎಂದು ಹೇಳಿದ್ದ, ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರೆ ಕೋಟಿ ಹಣ ಗಳಿಸಲು ಜೀವನ ಪರ್ಯಾಂಯತ ದುಡಿದರೂ ಸಾಧ್ಯವಾಗುತ್ತಿತ್ತು ಎಂದು ಹೇಳುವುದು ಕಷ್ಟ, ಅದರೆ ಆತನನ್ನು ನೋಡಿದರೆ 30ರೊಳಗಿನ ವಯಸ್ಸು, ಅಷ್ಟರಲ್ಲಿಯೇ ಕೋಟಿ ಹಣ ಗಳಿಸಿದ್ದ.
This man deserves to be made famous. Twitter do your thing 🫡 pic.twitter.com/j06FwffgMz
— AIN (Parody) (@aiamit1) August 27, 2024
ಯಾವ ಕೆಲಸವೂ ಕೀಳಲ್ಲ
ನಿಯತ್ತಿನಿಂದ , ಯಾರಿಗೂ ಅನ್ಯಾಯ ಮಾಡದೆ ಮಾಡುವ ಯಾವ ಕೆಲಸವೂ ಕೀಳಲ್ಲ, ದೊಡ್ಡ-ದೊಡ್ಡ ಐಟಿ ಕೆಲಸ ಬಿಟ್ಟು ಪಶು ಸಂಗೋಪನೆ ಮಾಡುತ್ತಿರುವವರು ಇದ್ದಾರೆ, ಚಿಕ್ಕ ಅಂಗಡಿ ಇಟ್ಟು ಕೋಟ್ಯಾಂತರ ಬೆಲೆ ಬಾಳುವ ಹೋಟೆಲ್ ಮಾಲೀಕರಾದವರೂ ಇದ್ದಾರೆ, ಯಾವ ಕೆಲಸದಲ್ಲಿಯೂ ಹಿಂಜರಿಕೆ ತೋರದೆ ದುಡಿಯುವ ಮನಸ್ಸಿದ್ದರೆ ಸಾಕು.
ಕೆಲಸ ಕಳೆದುಕೊಂಡ್ವಿ ಎಂದು ಖಿನ್ನತೆಗೆ ಜಾರುವ ಎಷ್ಟೋ ಜನರಿದ್ದಾರೆ, ಅದೇ ಆ ಕೆಲಸ ಹೋದರೆ ಏನಂತೆ ನನಗೆ ಬರುವ ಕೆಲಸ ಮಾಡಿ ಬದುಕುತ್ತೇನೆ ಎಂದು ಹಠಕ್ಕೆ ಬಿದ್ದು ಕಷ್ಟಪಟ್ಟು ದುಡಿದು ಬದುಕನ್ನು ಭದ್ರವಾಗಿಸಿದವರೂ ನಮ್ಮ ನಡುವೆ ಇದ್ದಾರೆ, ನಮ್ಮ ಆಯ್ಕೆ ಎರಡನೆಯದು ಆದರೆ ಆ ವ್ಯಕ್ತಿ ಜೀವನದಲ್ಲಿ ಸೋಲಲು ಸಾಧ್ಯವೇ ಇಲ್ಲ, ಏನಂತೀರಿ?



Click it and Unblock the Notifications