Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಇಂದಿದೆ ತುಂಬಾ ಶುಭ ಹರ್ಷಣ ಯೋಗ: ಈ ಯೋಗದಲ್ಲಿ ಜನಿಸಿದವರ ಗುಣ ಹೇಗಿರಲಿದೆ?
ವೈದಿಕ ಶಾಸ್ತ್ರದಲ್ಲಿ ಹರ್ಷಣ ಯೋಗವನ್ನು ಅತ್ಯಂತ ಶುಭ ಯೋಗವೆಂದು ಕರೆಯಲಾಗುವುದು. ಒಟ್ಟು 27 ಯೋಗಗಳಲ್ಲಿ ಹರ್ಷಣ ಯೋಗ ಕೂಡ ಅತ್ಯಂತ ಶುಭ ಯೋಗವಾಗಿದೆ. ಸೂರ್ಯ ಮತ್ತು ಚಂದ್ರ ಅಶ್ವಿನಿ ನಕ್ಷತ್ರದಲ್ಲಿ 13 ಡಿಗ್ರಿ ರೇಖಾಂಶದಲ್ಲಿ ಬಂದಾಗ ಹರ್ಷಣ ಯೋಗ ಉಂಟಾಗುವುದು.

ಹರ್ಷಣ ಯೋಗದಲ್ಲಿ ಜನಿಸದವರು ಯೋಗ ಹೇಗಿರಲಿದೆ?
ಹರ್ಷಣ ಯೋಗದ ಅಧಿಪತಿ ಭಾಗ ಮತ್ತು ಸೂರ್ಯ. ಈ ಯೋಗದಲ್ಲಿ ಜನಿಸಿದ ವ್ಯಕ್ತಿ ಸಂತೋಷವಾಗಿರುತ್ತಾರೆ ಎಂದು ಹೇಳಲಾಗುವುದು. ಈ ಯೋಗದಲ್ಲಿ ಜನಿಸಿದವರು ತುಂಬಾ ಕ್ರಿಯೇಟಿವ್ ಆಗಿರುತ್ತಾರೆ, ಸಾಹಿತ್ಯ, ಕಲೆಗಳಲ್ಲಿ ಆಸಕ್ತಿ ಹೊಂದಿದವರಾಗಿರುತ್ತಾರೆ.
ನಾಯಕತ್ವದ ಗುಣವಿರುತ್ತದೆ?
ಇವರಲ್ಲಿ ನಾಯಕತ್ವದ ಗುಣವಿರುತ್ತದೆ, ಇವರು ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಇವರಿಗೆ ಅದೃಷ್ಟ ಚೆನ್ನಾಗಿರುವುದರಿಂದ ಬೆಳೆಯಲು ತುಂಬಾ ಅವಕಾಶಗಳು ಸಿಗಲಿದೆ. ಇವರು ಸದಾ ನ್ಯಾಯದ ಪರವಾಗಿ ನಿಂತಿರುತ್ತಾರೆ.
ತಮ್ಮ ಗುಣದಿಂದ ಆಕರ್ಷಿಸುತ್ತಾರೆ
ಇವರು ತುಂಬಾ ಪ್ರತಿಭಾವಂತರು, ಇವರು ತಮ್ಮ ಕೌಶಲ್ಯದ ಕಾರಣದಿಂದ ಗೌರವವನ್ನು ಗಳಿಸುತ್ತೀರಿ. ಅವರು ತಮ್ಮ ಸುತ್ತ ಇರುವವರನ್ನು ಸಂತೋಷವಾಗಿಡುತ್ತಾರೆ. ಬೇರೆಯವರನ್ನು ಖುಷಿಯಾಗಿಡುವುದು ಹೇಗೆ ಎಂಬುವುದು ಇವರಿಗೆ ಗೊತ್ತಿರುತ್ತದೆ. ಅಲ್ಲದೆ ಇವರು ತುಂಬಾ ಹಾಸ್ಯಾ ಪ್ರವೃತ್ತಿರವರಾಗಿರುತ್ತಾರೆ.
27 ಯೋಗಗಳು ಹಾಗೂ ಗುಣಗಳು
1. ವಿಷ್ಕಂಭ ಯೋಗ- ಈ ಯೋಗದಲ್ಲಿ ಜಯಸಿದವರು ಇತರರ ಮೇಲೆ ಜಯ ಸಾಧಿಸುತ್ತಾರೆ, ಶ್ರೀಮಂತರಾಗುತ್ತಾರೆ.
2. ಪ್ರೀತಿ ಯೋಗ- ಇವರು ಜೀವನದಲ್ಲಿ ಪ್ರೀತಿಯನ್ನು ಅನುಭವಿಸುತ್ತಾರೆ.
3. ಆಯುಷ್ಮಾನ್ ಯೋಗ - ಉತ್ತಮ ಆರೋಗ್ಯ,ದೀರ್ಘಾಯುಷ್ಯ ನೀಡುವ ಯೋಗ ಇದಾಗಿದೆ
4. ಸೌಭಾಗ್ಯ ಯೋಗ- ಈ ಯೋಗದಲ್ಲಿ ಜನಿಸಿದವರು ತುಂಬಾ ಆರಾಮವಾಗಿ ಇರುತ್ತಾರೆ.
5. ಶೋಭಾನ ಯೋಗ: ನೋಡಲು ಆಕರ್ಷಿತರಾಗಿರುತ್ತಾರೆ.
6. ಅಟಿಗಂಡಾ ಯೋಗ- ತುಂಬಾ ಕಷ್ಟದ ಜೀವನ ಸಾಗಿಸುತ್ತಾರೆ
7. ಸುಕರ್ಮ ಯೋಗ - ಉದಾತ್ತ ಗುಣವನ್ನು ಹೊಂದಿರುತ್ತಾರೆ.
8. ಧೃತಿ ಯೋಗ- ಇತರರ ಸಂಪತ್ತು, ಸರಕು ಮತ್ತು ಸಂಗಾತಿಗಳನ್ನು ಆನಂದಿಸುತ್ತಾರೆ,
9. ಶೂಲ ಯೋಗ- ಬೇಗನೆ ಕೋಪಗೊಳ್ಳುತ್ತಾರೆ, ಜಗಳಗಂಟಿ ಸ್ವಭಾವ
10. ಗಂಡಾ ಯೋಗ- ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ
11. ವೃದ್ಧ ಯೋಗ - ಬುದ್ಧಿವಂತ, ಅವಕಾಶವಾದಿ ಮತ್ತು ವಿವೇಚನಾಶೀಲ, ಇವರು ಬೆಳೆಯುತ್ತಿದ್ದಂತೆ ಜೀವನ ಸುಧಾರಣೆಯಾಗುವುದು
12. ಧ್ರುವ ಯೋಗ - ಏಕಾಗ್ರತೆ, ಸ್ಥರತೆ ಇವರಲ್ಲಿರುತ್ತದೆ
13. ವ್ಯಾಗತ ಯೋಗ- ಕ್ರೂರ ಹಾಗೂ ಇತರರಿಗೆ ಹಾನಿ ಮಾಡುವ ಸ್ವಭಾವ
14.ಹರ್ಷಣ ಯೋಗ- ಬುದ್ಧಿವಂತರಾಗಿರುತ್ತಾರೆ, ಖುಷಿಯಾಗಿರುವ ಸ್ವಭಾವ
15. ವಜ್ರ ಯೋಗ- ತುಂಬಾ ಬಲಶಾಲಿಗಳಾಗಿರುತ್ತಾರೆ
16. ಸಿದ್ಧಿ ಯೋಗ- ಯಶಸ್ಸು ಇವರು ಪಾಲಿಗೆ ಒಲಿಯುತ್ತದೆ.
17. ವ್ಯಾಟಪಟ ಯೋಗ- ಹಠಾತ್ ಅಪಘಾತಗಳು ಮತ್ತು ಹಿಮ್ಮುಖಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು.
18. ವರಿಯಾನ್ ಯೋಗ- ಐಷಾರಾಮಿ, ಸೋಮಾರಿ, ಹಾಗೂ ವಿರುದ್ಧ ಲಿಂಗದ ಕಡೆಗೆ ಆಕರ್ಷಣೆ ಅಧಿಕ.
19. ಪರಿಘಾ ಯೋಗ- ಜೀವನದಲ್ಲಿ ಪ್ರಗತಿಗೆ ಅನೇಕ ಅಡೆತಡೆಗಳನ್ನು ಎದುರಿಸುತ್ತಾರೆ.
20. ಶಿವಾ ಯೋಗ - ಸಮಾಜದಲ್ಲಿ ದೊಡ್ಡ ಹುದ್ದೆಯಲ್ಲಿರುತ್ತಾರೆ
21. ಸಿದ್ಧ ಯೋಗ- ಎಲ್ಲರೊಂದಿಗೆ ಹೊಂದಿಕೊಳ್ಳುವ ವ್ಯಕ್ತಿತ್ವ, ಆಹ್ಲಾದಕರ ಸ್ವಭಾವದವರು
22. ಸಾಧ್ಯ ಯೋಗ- ಉತ್ತಮ ನಡತೆ, ಮತ್ತು ಶಿಷ್ಟಾಚಾರದ ವ್ಯಕ್ತಿ.
23. ಶುಭ ಯೋಗ- ಆಕರ್ಷಕ ಮೈಕಟ್ಟು ಆದರೆ ಆರೋಗ್ಯದ ಸಮಸ್ಯೆಗಳಿರುತ್ತದೆ.
24. ಸುಕ್ಲಾ ಯೋಗ - ಅಸ್ಥಿರ ಮನಸ್ಥಿತಿಯ ಸ್ವಭಾದವರು.
25. ಬ್ರಹ್ಮ ಯೋಗ- ನಂಬಲರ್ಹ ವ್ಯಕ್ತಿಗಳು, ಮಹತ್ವಾಕಾಂಕ್ಷೆಯ ಗುಣದವರು
26. ಇಂದ್ರ ಯೋಗ- ಶಿಕ್ಷಣ ಮತ್ತು ಜ್ಞಾನದಲ್ಲಿ ಆಸಕ್ತಿ ಹೊಂದಿರುತ್ತಾರೆ, ಉತ್ತಮ ಗುಣದವರು.
27. ವೈಧೃತಿ ಯೋಗ- ನಿರ್ಣಾಯಕ, ಕುತಂತ್ರ ಸ್ವಭಾವ ಇವರಲ್ಲಿರುತ್ತದೆ



Click it and Unblock the Notifications