Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
12 ಲಕ್ಷ ಖರ್ಚು ಮಾಡಿ ನಾಯಿಯಂತಾಗಿದ್ದ ವ್ಯಕ್ತಿ ಈಗ ಪಾಂಡ ಆಗಲು ರೆಡಿ..!
ನಾಯಿಗಳೆಂದರೆ ಎಲ್ಲಿಲ್ಲದ ಆಸೆ. ಹೀಗಾಗಿ ಆತ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ನಾಯಿಯಂತೆಯೇ ಕಾಣಿಸಿಕೊಳ್ಳಲು ಮುಂದಾಗಿದ್ದ. ನೀವು ಜಪಾನ್‌ನ ಟೊಕೊ ಎಂಬ ವ್ಯಕ್ತಿಯ ಕುರಿತು ಕೇಳಿರಬಹುದು. ಆತ ನಾಯಿಯಂತೆ ಬದಲಾಗಲು ಬರೋಬ್ಬರಿ 12 ಲಕ್ಷ ರೂಪಾಯಿ ಖರ್ಚು ಮಾಡಿ ಸುದ್ದಿಯಾಗಿದ್ದ.
ಆದ ಬಾರ್ಡರ್ ಕೂಲಿ ಜಾತಿಯ ನಾಯಿಯಂತೆ ತನ್ನನ್ನು ತಾನು ಬದಲಾಯಿಸಿಕೊಂಡು ಪ್ರಸಿದ್ಧಿಯನ್ನೂ ಪಡೆದಿದ್ದ. ಆದರೆ ಈಗ ನಾಯಿಯಿಂದ ಮತ್ತೊಂದು ರೂಪ ತಳೆಯಲು ಆತ ಮುಂದಾಗಿದ್ದಾನಂತೆ. ಈ ಬಾರಿ ಮುದ್ದಿನ ಪಾಂಡ ಅಥವಾ ನರಿಯಂತಾಗಲು ಮುಂದಾಗಿರುವುದಾಗಿ ಸಂದರ್ಶನವೊಂದರಲ್ಲಿ ಸುಳಿವು ನೀಡಿದ್ದಾನೆ.

ನಾಯಿಗಳು ಮತ್ತು ಮನುಷ್ಯರು ವಿಭಿನ್ನ ಮೂಳೆ ರಚನೆಗಳನ್ನು ಹೊಂದಿದ್ದಾರೆ ಮತ್ತು ಅವರು ತಮ್ಮ ಕಾಲುಗಳು ಮತ್ತು ತೋಳುಗಳನ್ನು ಬಗ್ಗಿಸುವ ರೀತಿಯನ್ನು ಹೊಂದಿದ್ದಾರೆ, ಆದ್ದರಿಂದ ನಾಯಿಗಳ ರೀತಿಯ ಚಲನೆಗಳನ್ನು ಮಾಡುವುದು ತುಂಬಾ ಕಷ್ಟ ಎಂದು ಆತ ಹೇಳಿಕೊಂಡಿದ್ದ.
ಜೊತೆಗೆ ಆತ ಕೈಗಳನ್ನು ಬಳಸಿ ಕೊಂಡು ನೆಡೆಯಬೇಕಾದಾಗ ಕೈಗಳಲ್ಲಿ ಹೆಚ್ಚು ಕೊಳೆಯಾಗುತ್ತದೆಯಂತೆ. ಹೀಗಾದಾಗ ಅದನ್ನು ಸ್ವಚ್ಛ ಮಾಡಲು ಸಾಕಷ್ಟು ಶ್ರಮ ಬೇಕಾಗುತ್ತದೆ ಎಂದು ಆತ ಹೇಳಿಕೊಂಡಿದ್ದಾನೆ. ಹೀಗಾಗಿ ಈಗ ಬೇರೆ ಪ್ರಾಣಿಯಾಗುವ ಇಚ್ಛೆ ಹೊಂದಿದ್ದೇನೆ. ಅದರಲ್ಲೂ ಸುಲಭವಾಗಿ ನಡೆಯಬಹುದಾದ ಮತ್ತು ಹೆಚ್ಚು ಶ್ರಮ ಅಲ್ಲದೆ ಪ್ರಾಣಿಯಾಗುವ ಕಡೆ ಗಮನ ಹರಿಸಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ.
ತನ್ನ ನಿಜವಾದ ಗುರುತನ್ನು ಮರೆಮಾಚಲು ಆಯ್ಕೆ ಮಾಡಿಕೊಂಡಿರುವ ಟೊಕೊ, ಬಾರ್ಡರ್ ಕೋಲಿ ತಳಿಯ ಬಗೆಗಿನ ತನ್ನ ಸಂಬಂಧವನ್ನು ಪುನರುಚ್ಚರಿಸಿದ್ದಾರೆ, ಅದನ್ನು ನಾಯಿಯ "ನೆಚ್ಚಿನ ತಳಿ" ಎಂದು ಹೇಳಿಕೊಂಡಿದ್ದಾನೆ. ತನ್ನ ಯೂಟ್ಯೂಬ್ ಚಾನೆಲ್ ಮೂಲಕ ತನ್ನ ಪ್ರೇಕ್ಷಕರಿಗೆ ಹೊಸ ಹೊಸ ವಿಡಿಯೋಗಳ ಆತ ಹಂಚಿಕೊಳ್ಳುತ್ತಿರುತ್ತಾನೆ.
ಸದ್ಯ ಆತ ಪಾಂಡದ ರೀತಿ ಕಾಣಿಸಬೇಕಾದರೆ ಮತ್ತೆ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಬೇಕಿದೆ. ಜೊತೆಗೆ ಆ ರೀತಿ ವ್ಯಕ್ತಿಯನ್ನು ತಯಾರು ಮಾಡಲು ಸಾಕಷ್ಟು ಸಮಯವೂ ಹಿಡಿಯಲಿದೆ. ಹೀಗಾಗಿ ಆತ ಈಗ ಮತ್ತೆ ಸುದ್ದಿಯಲ್ಲಿದ್ದಾನೆ. ಸದ್ಯದಲ್ಲೇ ಆತ ಹೊಸ ಪ್ರಾಣಿಯ ಅವತಾರದಲ್ಲಿ ಹೊರ ಜಗತ್ತಿಗೆ ಕಾಣಿಸಿಕೊಳ್ಳಲಿದ್ದಾನಂತೆ.
ಇದು ಜಪಾನ್ ವ್ಯಕ್ತಿಯೊಬ್ಬನ ಕಥೆಯಾದರೆ ಇಲ್ಲೊಬ್ಬ ಟೆಕ್ಕಿ ತೋಳವಾಗಿ ತನ್ನ ಆಸೆ ಈಡೇರಿಸಿಕೊಂಡಿದ್ದಾನೆ. ಹೌದು ಜಪಾನ್‌ನಲ್ಲಿಯೇ ಈ ವ್ಯಕ್ತಿ ತನ್ನ ಬಾಲ್ಯದ ಕನಸಾಗಿದ್ದ ತೋಳದಂತೆ ಕಾಣಿಸಿಕೊಳ್ಳುವ ಆಸೆಯನ್ನು ಕೊನೆಗೂ ಇಡೆರಿಸಿಕೊಂಡಿದ್ದಾನೆ.
ಟೊರು ಉಯೆಡಾ ಎಂಬಾತ ಚಿಕ್ಕವನಾಗಿದ್ದಾಗಿನಿಂದ ತೋಳದಂತೆ ಕಾಣಿಸಿಕೊಳ್ಳಬೇಕು ಎಂಬ ಕನಸು ಹೊಂದಿದ್ದನಂತೆ. ಇದೇ ವೇಳೆ ಟೊಕೊ ನಾಯಿಯಾಗಿ ಬದಲಾಗಿದ್ದ ವಿಷಯವೂ ತಿಳಿದಿದ್ದನಂತೆ, ಹೀಗಾಗಿ ಬರೋಬ್ಬರಿ 20 ಲಕ್ಷ ರೂಪಾಯಿ ಖರ್ಚು ಮಾಡಿ ತೋಳದಂತೆ ಕಾಣಿಸಿಕೊಂಡಿದ್ದಾನೆ. ಇದಕ್ಕಾಗಿ ಹಲವಾರು ಮಂದಿ ಸುಮಾರು 7 ವಾರಗಳ ಸಮಯ ತೆಗೆದುಕೊಂಡು ಈ ಬಟ್ಟೆ ಆತನಿಗೆ ರೆಡಿ ಮಾಡಿದ್ದರಂತೆ.
ಆತ ತೋಳದಂತೆ ಬಟ್ಟೆ ಧರಿಸಿ ಓಡಾಡಲು ಆರಂಭಿಸಿದ್ದನಂತೆ. ಜೊತೆಗೆ ತೋಳದಂತೆ ಬಟ್ಟೆ ಧರಿಸಿದಾಗ ಆತನಲ್ಲಿ ಹೊಸ ರೀತಿಯ ಶಕ್ತಿ ಬರುತ್ತಿತ್ತಂತೆ. ಟೊಕೊಗೆ ನಾಯಿಯಂತೆ ಬಟ್ಟೆ ರೆಡಿ ಮಾಡಿದ್ದ ಅದೇ ಕಂಪನಿಯೇ ಈಗ ತೋಳದ ಬಟ್ಟೆಯನ್ನು ರೆಡಿ ಮಾಡಿತ್ತು. ನಾಯಿಯಂತೆ ಕಾಣಲು 20 ಲಕ್ಷ ಖರ್ಚು ಮಾಡಿದ್ದರೆ, ಈತ 20 ಲಕ್ಷ ಖರ್ಚು ಮಾಡಿ ತೋಳದಂತೆ ಆಗಿದ್ದ.
ಈತ ಸಾಮಾಜಿಕ ಜಾಲತಾಣದಲ್ಲಿ ವೈರಸ್ ಸಹ ಆಗಿದ್ದ. ತೋಳದಂತೆ ಕಾಣುತ್ತಿದ್ದ ಆತನ ಕಂಡು ಜನರು ಅಚ್ಚರಿಗೆ ಒಳಗಾಗಿದ್ದರು. ಅಸಲಿಗೆ ಯಾರು ಸಹ ಇಷ್ಟೊಂದು ಖರ್ಚು ಮಾಡಿ ಈ ರೀತಿ ಪ್ರಾಣಿಗಳಂತೆ ಬಟ್ಟೆ ಧರಿಸುತ್ತಾರೆ ಎಂಬ ಪ್ರಶ್ನೆ ನೆಟ್ಟಿಗರಲ್ಲಿ ಮೂಡಿತ್ತು. ಆದರೆ ಈ ಬಟ್ಟೆ ಮಾಡಿಸಿಕೊಂಡಿದ್ದ ಇಬ್ಬರು ಆತ್ರ ಆಗಾಗ ಪ್ರಾಣಿಗಳಂತೆ ಕಂಡುಬರುತ್ತಿದ್ದರು.



Click it and Unblock the Notifications
