Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಸ್ವರ್ಗದಲ್ಲಿ ಜಾಗ ಖರೀದಿಗೆ ಮುಗಿಬಿದ್ದ ಜನ..! ಚದರ ಮೀಟರ್‌ಗೆ ಎಷ್ಟು ಗೊತ್ತಾ?
ಹಿಂದೂ ಧರ್ಮದ ಪ್ರಕಾರ ಸಾವಿನ ಬಳಿಕ ನಮ್ಮ ಪಾಪ ಕರ್ಮಗಳ ಆಧಾರದ ಮೇಲೆ ಸ್ವರ್ಗ ಮತ್ತು ನರಕದ ಪರಿಕಲ್ಪನೆಗಳಿವೆ. ಹೀಗೆ ಪ್ರತಿಯೊಂದು ಧರ್ಮದಲ್ಲೂ ಅದರದ್ದೇ ಆದ ಸ್ವರ್ಗ ನರಕ ಹಾಗೂ ಪುನರ್ ಜನ್ಮ ಕುರಿತಂತೆ ನಂಬಿಕೆಗಳಿವೆ. ಅದರಂತೆ ಸಾವಿನ ಬಳಿಕ ಮುಕ್ತಿ ಸಿಗುವುದು ಸಹ ಒಂದು ನಂಬಿಕೆಯೆ.
ಇದಲ್ಲದೆ ಸಾವಿನ ಬಳಿಕ ಸ್ವರ್ಗ ಪ್ರಾಪ್ತಿಗಾಗಿ ಮಾನವರು ಹಲವು ರೀತಿ ಪೂಜೆಗಳ ನೆರವೇರಿಸುತ್ತಾರೆ. ಸಾವಿಗಿಂತ ಮೊದಲು ಪುಣ್ಯ ಮಾಡಿದವರು ಸ್ವರ್ಗಸ್ಥರಾಗುತ್ತಾರೆ ಎಂದು ನಂಬಲಾಗಿದೆ. ಇದಕ್ಕಾಗಿ ಪಾಪ ಕಾರ್ಯಗಳ ಮಾಡಿಯೂ ಜನರು ಸ್ವರ್ಗ ಸೇರುವ ಬಯಕೆ ಹೊಂದಿರುತ್ತಾರೆ.

ಆದ್ರೆ ನೀವು ಸತ್ತ ಸ್ವರ್ಗಕ್ಕೆ ಹೋಗಬೇಕೆಂದಿದ್ದರೆ ಇಲ್ಲೊಬ್ಬ ಪಾದ್ರಿಯನ್ನು ಭೇಟಿಯಾಗಬಹುದು. ಹೌದು ಆತ ನಿಮ್ಮನ್ನು ಸ್ವರ್ಗಕ್ಕೆ ಕಳುಹಿಸುತ್ತಾನಂತೆ. ಅಲ್ಲದೆ ಸ್ವರ್ಗದಲ್ಲಿ ನಿಮಗಾಗಿ ಜಾಗ ಸಹ ನಿಗದಿ ಮಾಡಬಹುದಂತೆ, ಹೀಗೆಂದು ಹೇಳುತ್ತಿರುವ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಜನರು ಶಾಕ್‌ಗೆ ಒಳಗಾಗಿದ್ದಾರೆ.
ಮೆಕ್ಸಿಕೋದ ಪ್ರಸಿದ್ಧ ಇಗ್ಲೇಷಿಯಾ ಡೆಲ್ ಫೈನಲ್ ಡಿ ಲಾಸ್ ಟೈಂಪೋಸ್ ಚರ್ಚ್ "ಸ್ವರ್ಗದಲ್ಲಿ ಸ್ಥಾನ" ಎಂಬ ಭರವಸೆ ನೀಡುವ ಭೂ ವ್ಯವಹಾರಗಳ ಮೂಲಕ ಲಕ್ಷಾಂತರ ಡಾಲರ್‌ಗಳನ್ನು ಸಂಗ್ರಹಿಸಿದೆ ಎಂದು ಅನೇಕ ಮುಖ್ಯವಾಹಿನಿಯ ಮಾಧ್ಯಮಗಳು ಸುದ್ದಿ ಪ್ರಕಟಿಸಿದೆ. ಈ ಸುದ್ದಿ ಟಿಕ್‌ಟಾಕ್ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಸ್ವರ್ಗದಲ್ಲಿ ಪ್ರತಿ ಚದರ ಮೀಟರ್ ಜಾಗದ ಬೆಲೆ 100 ಡಾಲರ್ ಅಂತೆ. ಆಸಕ್ತರು ಅಮೆರಿಕನ್ ಎಕ್ಸ್‌ಪ್ರೆಸ್, ಆಪಲ್ ಪೇ, ಬಳಸಿ ಮುಂಗಡ ಪಾವತಿ ಮಾಡಬೇಕು ಎಂದು ತಿಳಿಸಲಾಗಿದೆ. ಚರ್ಚ್‌ನ ಪಾದ್ರಿ 2017 ರಲ್ಲಿ ದೇವರೊಂದಿಗೆ ಮಾತನಾಡಿದ್ದಾರೆ ಎಂದು ಉಲ್ಲೇಖಿಸಿ ಸ್ವರ್ಗದಲ್ಲಿ ಜಾಗ ಮಾರಾಟಕ್ಕೆ ಮುಂದಾಗಲಾಗಿದೆ ಎಂದು ತಿಳಿಸಲಾಗಿದೆ.
ಆದರೆ ಸ್ವರ್ಗದಲ್ಲಿ ಯಾವ ಸ್ಥಳದಲ್ಲಿ ನಿಮಗೆ ಜಾಗ ನೀಡಲಾಗುತ್ತದೆ ಎಂಬುದನ್ನು ತಿಳಿಸುತ್ತಿಲ್ಲ. ಬದಲಿಗೆ ಯಾವ ಯಾವ ವಿಸ್ತೀರ್ಣದಲ್ಲಿ ಜಾಗ ಬೇಕು ಎಂಬುದನ್ನು ಮಾತ್ರ ತಿಳಿಸಲಾಗುತ್ತದೆ. ಹೀಗಾಗಿ ಈ ಜಾಹಿರಾತು ನೀಡಿದ್ದ ಚರ್ಚ್ ಈಗ ಕೋಟಿ ಕೋಟಿ ರೂಪಾಯಿ ಹಣ ಮಾಡಿಕೊಂಡಿದೆಯಂತೆ. ಜೊತೆಗೆ ಸ್ವರ್ಗದಲ್ಲಿ ಜಾಗ ಖರೀದಿಗೆ ಜನರು ಸಹ ಮುಗಿಬಿದ್ದಿದ್ದಾರೆ.
ಈ ಪೋಸ್ಟ್ ಕಂಡ ನೆಟ್ಟಿಗರು ಹಲವು ರೀತಿಯ ಕಮೆಂಟ್‌ಗಳ ಮಾಡಿದ್ದಾರೆ. ಒಬ್ಬರು, ಪಾದ್ರಿ ಮೊದಲು ಸ್ವರ್ಗಕ್ಕೆ ತೆರಳಲ್ಲಿ ಅಲ್ಲಿಂದ ನಮಗೆ ವಿಡಿಯೋ ಕಾಲ್ ಮೂಲಕ ಯಾವ ಜಾಗ ಎಂಬುದನ್ನು ಖಚಿತಪಡಿಸಲಿ ಆಗ ಮಾತ್ರ ನಾನು ಜಾಗ ಖರೀದಿಸುವುದಾಗಿ ಒಬ್ಬರು ಬರೆದುಕೊಂಡಿದ್ದಾರೆ.
ಮತ್ತೊಂದು ಹೊಸದಾದ ಉದ್ಯಮಕ್ಕೆ ಸ್ವಾಗತ, ಈಗ ಸ್ವರ್ಗದಲ್ಲೂ ಜಾಗ ಖರೀದಿ ಮಾಡಬಹುದು. ಆದ್ರೆ ನಾವು ನರಕಕ್ಕೆ ಹೋಗುವುದು ಖಚಿತವಾದಾಗ ನಾವ್ಯಾಕೆ ಸ್ವರ್ಗದಲ್ಲಿ ಜಾಗ ಖರೀದಿಸಬೇಕು ಎಂದು ತಮಾಷೆಯ ಕಮೆಂಟ್ ಮಾಡಿದ್ದಾರೆ.
ಈ ರೀತಿ ಚರ್ಚ್ ಪಾದ್ರಿಯೊಬ್ಬರು ಜನರನ್ನು ನಂಬಿಸಿ ಮೋಸ ಮಾಡಿದರೆ ಏಸು ಅವರನ್ನು ಕ್ಷಮಿಸುವುದಿಲ್ಲ. ಆತ ಬೇರೆಯವರಿಗೆ ಸ್ವರ್ಗದಲ್ಲಿ ಜಾಗ ಮಾಡಿಕೊಟ್ಟು ಸ್ವತಃ ತಾನು ನರಕಕ್ಕೆ ಹೋಗುತ್ತಾನೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.



Click it and Unblock the Notifications