Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಈ 5 ರಾಶಿಯವರಿಗೆ ಹೊಟ್ಟೆಕಿಚ್ಚು, ಅಸೂಯೆ ಹೆಚ್ಚಾಗಿರುತ್ತದೆ!
ಪ್ರತಿಯೊಬ್ಬರಿಗೂ ಜೀವನದಲ್ಲಿ ಎತ್ತರಕ್ಕೆ ಬೆಳಯಬೇಕು, ಹೆಸರು ಮಾಡಬೇಕು, ಸಾಕಷ್ಟು ದುಡ್ಡು ಸಂಪಾದನೆ ಮಾಡಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಇದಕ್ಕಾಗಿ ಪ್ರತ್ನವನ್ನೂ ಮಾಡಬೇಕು. ಆದರೆ ತಮ್ಮ ಸ್ನೇಹಿತರು, ಅಕ್ಕಪಕ್ಕದ ಮನೆಯವರು ಅಥವಾ ಸಹೋದ್ಯೋಗಿಗಳು ಜೀವನದಲ್ಲಿ ಏನಾದರೂ ಸಾಧಿಸುತ್ತಾರೆ ಎನ್ನುವಾಗ ಅವರಿಂದ ಸಹಿಸೋದಕ್ಕೆ ಸಾಧ್ಯವಾಗೋದಿಲ್ಲ.

ಅವರ ಮೇಲೆ ಹೊಟ್ಟೆ ಕಿಚ್ಚು ಪಟ್ಟುಕೊಳ್ಳುತ್ತೇವೆ. ಆ ಸೌಭಾಗ್ಯ ನಮಗೆ ದಕ್ಕಲಿಲ್ಲ ಯಾಕೆ ಎಂದು ಮನಸಲ್ಲೇ ನೊಂದುಕೊಳ್ಳುತ್ತೇವೆ. ಹೊಟ್ಟೆಕಿಚ್ಚು ಅನ್ನೋದು ಎಲ್ಲರಿಗೂ ಇರುತ್ತದೆ. ಆದರೆ ಕೆಲವೇ ಕೆಲವು ಜನರಿಗೆ ಮಾತ್ರ ಈ ಹೊಟ್ಟೆ ಕಿಚ್ಚು ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಅಷ್ಟಕ್ಕೂ ಯಾವ ರಾಶಿಯವರು ಬೇರೆಯವರ ಯಶಸ್ಸನ್ನು ಸಹಿಸದೇ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಾರೆ ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರು ಸ್ಪರ್ಧಾತ್ಮಕ ಮತ್ತು ಮಹತ್ವಾಕಾಂಕ್ಷೆಯ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಹಾಗೂ ಯಾವಾಗಲೂ ತಾವೇ ಮುಂಚೂಣಿಯಲ್ಲಿ ಇರಬೇಕೆಂದು ಬಯಸುತ್ತಾರೆ. ಆದರೆ ತಮ್ಮವರೇ ದೊಡ್ಡದಾಗಿ ಸಾಧನೆ ಮಾಡಿದಾಗ ಇವರಿಗೆ ಅದನ್ನು ತಡೆದುಕೊಳ್ಳುವ ಶಕ್ತಿ ಇರೋದಿಲ್ಲ. ಇವರಲ್ಲಿರುವ ಹಠಾತ್ ಪ್ರವೃತ್ತಿ ಮತ್ತು ಕಾರ್ಯ ಆಧಾರಿತ ಮನೋಭಾವವು ಅವರನ್ನು ಪ್ರಗತಿಗಾಗಿ ಹಾತೊರೆಯುವಂತೆ ಮಾಡುತ್ತದೆ.
ಸಿಂಹ ರಾಶಿ
ಸಿಂಹ ರಾಶಿಯವರು ಸಿಕ್ಕಾಪಟ್ಟೆ ಪ್ರತಿಭಾವಂತರಾಗಿ ಇರುತ್ತಾರೆ. ಇವರು ದೊಡ್ಡದಾಗಿ ಸಾಧನೆ ಮಾಡಿ ಜನರಿಂದ ಭೇಷ್ ಅನ್ನಿಸಿಕೊಳ್ಳಬೇಕು ಎಂದುಕೊಳ್ಳುತ್ತಾರೆ. ಆದರೆ ಬೇರೆಯವರು ದೊಡ್ಡದಾಗಿ ಸಾಧನೆ ಮಾಡಿದಾಗ ಅದನ್ನು ತೆಗೆದುಕೊಳ್ಳೋದು ಇವರಿಗೆ ಕಷ್ಟ ಆಗುತ್ತದೆ. ಮನಸ್ಸಿಗೆ ನೋವಾಗುತ್ತದೆ, ಬೇರೆಯವರ ಸಾಧನೆಯನ್ನು ಅರಗಿಸಿಕೊಳ್ಳೋದು ಇವರಿಗೆ ಕಷ್ಟ ಆಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಜೀವನದಲ್ಲಿ ಏನಾದರೂ ದೊಡ್ಡದಾಗಿ ಸಾಧನೆ ಮಾಡಬೇಕು ಎನ್ನುವ ಬಯಕೆಯನ್ನು ಹೊಂದಿರುತ್ತಾರೆ. ಅದೇ ಬೇರೆಯವರು ಏನನ್ನಾದರೂ ಸಾಧಿಸಿದಾಗ ಅದರಲ್ಲಿ ತಪ್ಪು ಹುಡುಕೋದಕ್ಕೆ ಶುರು ಮಾಡ್ತಾರೆ. ಯಾಕಂದ್ರೆ ತಮಗಿಂತ ದೊಡ್ಡದಾಗಿ ಬೆಳೆಯೋದನ್ನು ಇವರು ಯಾವಾಗಲೂ ಸಹಿಸೋದಿಲ್ಲ. ಬೇರೆಯವರಿಗೆ ಹೋಲಿಸಿದ್ರೆ ಇವರಿಗೆ ಅಸೂಯೆ ಹೆಚ್ಚಾಗಿರುತ್ತದೆ. ವೈಯಕ್ತಿಕ ಬೆಳವಣಿಗೆಗೆ ಮಾತ್ರ ಇವರು ಪ್ರಾಮುಖ್ಯತೆ ನೀಡುತ್ತಾರೆ.
ಮಕರ ರಾಶಿ
ಮಕರ ರಾಶಿಯವರು ಶ್ರದ್ಧೆ ಮತ್ತು ಬಲವಾದ ಕೆಲಸದ ನೀತಿಗೆ ಸಮಾನಾರ್ಥಕವಾಗಿದೆ. ಇವರು ನಿರಂತರ ಪ್ರಯತ್ನಗಳ ಮೂಲಕ ಯಶಸ್ಸಿನ ಏಣಿಯನ್ನು ಏರಲು ಸಿದ್ಧರಾಗಿರುತ್ತಾರೆ. ಬೇರೆಯವರು ಯಶಸ್ಸನ್ನು ಸಾಧಿಸಿದರೆ ಇವರ ತಮ್ಮ ಮೇಲೆ ಸ್ವಯಂ ಒತ್ತಡವನ್ನು ಅನುಭವಿಸುತ್ತಾರೆ. ಬೇರೆಯವರು ಈ ಸಾಧನೆಯನ್ನು ಮಾಡೋದಕ್ಕೆ ಹೇಗೆ ಸಾಧ್ಯವಾಯ್ತು ಅಂತ ವಿಪರೀತವಾಗಿ ಚಿಂತಿಸುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರು ತಮ್ಮ ನವೀನ ಚಿಂತನೆಗೆ ಹೆಸರುವಾಸಿಯಾಗಿರ್ತಾರೆ. ತಮ್ಮ ಜೊತೆಗೆ ಬೇರೆಯವರೂ ಯಶಸ್ಸಿನ ಏಣಿ ಹತ್ತಲಿ ಎಂದು ಇವರು ಯಾವತ್ತಿಗೂ ಬಯಸುವವರಲ್ಲ. ಇವರಲ್ಲಿರುವ ಸ್ವಾರ್ಥ ಮನೋಭಾವವೇ ಬೇರೆಯವರು ಸಾಧನೆ ಮಾಡಿದಾಗ ಅದನ್ನು ತಡೆದುಕೊಳ್ಳುವ ಶಕ್ತಿ ಇವರಿಗೆ ಇರೋದಿಲ್ಲ. ಅಸೂಯೆ ಪಟ್ಟುಕೊಳ್ಳೋದು ಹೆಚ್ಚು.



Click it and Unblock the Notifications