Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ವಿಮಾನದ ಈ ಸ್ಥಳಕ್ಕೆ ಪ್ರಯಾಣಿಕರ ನಿಷೇಧ..! ಏಕೆ? ಏನಿದು ಗೌಪ್ಯ ಸ್ಥಳ?
ವಿಮಾನದಲ್ಲಿ ಪ್ರಯಾಣ ಮಾಡಬೇಕು ಅನ್ನೋದು ಹಲವರು ಮಂದಿಯ ಆಸೆಯಾಗಿರುತ್ತೆ. ಮತ್ತೆ ಕೆಲವರು ವಿಮಾನಯಾನ ಸೇವೆಯಲ್ಲಿ ಕೆಲಸ ಗಿಟ್ಟಿಸಬೇಕು ಎಂದು ಕನಸು ಕಂಡಿರುತ್ತಾರೆ. ಆದರೆ ಕೆಲವರು ಮಾತ್ರ ಅದರಲ್ಲಿ ಯಶಸ್ವಿಯಾಗುತ್ತಾರೆ. ಹಾಗೆ ಕ್ಯಾಬಿನ್ ಸಿಬ್ಬಂದಿ ಆಗಬೇಕು ಎಂದು ಸಾವಿರಾರು ಮಂದಿ ವರ್ಷವೂ ವಿಶೇಷ ಕೋರ್ಸ್ ಮುಗಿಸುತ್ತಾರೆ.
ಆದ್ರೆ ನೀವು ಎಂದಾದ್ರು ಆಲೋಚಿಸಿದ್ದೀರಾ ವಿಮಾನದಲ್ಲಿ 24 ಗಂಟೆಗಳ ಕಾಲ ಕೆಲಸ ಮಾಡುವ ಸಿಬ್ಬಂದಿ ಯಾವಾಗ ವಿಶ್ರಾಂತಿ ಪಡೆಯುತ್ತಾರೆ? ಎಲ್ಲಿ ವಿಶ್ರಾಂತಿ ಪಡೆಯುತ್ತಾರೆ ಎದು. ಪ್ರಯಾಣಿಕರಿಗೆ ಊಟ, ತಿಂಡಿ ಸೇರಿ ಎಲ್ಲಾ ಸೇವೆ ನೀಡುವ ಅವರು ಯಾವಾಗಲು ನಗುಮುಖದಿಂದ ಪ್ರಯಾಣಿಕರ ಮುಂದೆ ಹಾಜರಿರುತ್ತಾರೆ. ಆದ್ರೆ ಅವರ ಕುರಿತು ನೀವು ತಿಳಿಯದಿರುವ ಹಲವು ವಿಚಾರಗಳಿವೆ.

ವಿಮಾನದಲ್ಲಿ ಅವರು ವಿಶ್ರಾಂತಿ ಪಡೆಯಲೆಂದೇ ಒಂದು ಗೌಪ್ಯ ಸ್ಥಳವಿರುತ್ತದೆ. ಹೌದು ವಿಮಾಣದಲ್ಲಿ ಪ್ರಯಾಣಿಕರಿಗೆ ನೀಡಲಾಗುವ ಜಾಗವನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಕ್ಯಾಬಿನ್‌ಗೆ ಪ್ರಯಾಣಿಕರ ಓಡಾಟ ನಿಷೇಧಿಸಲಾಗಿರುತ್ತದೆ. ಅದೇ ರೀತಿ ಈ ಸ್ಥಳವೂ ಪ್ರಯಾಣಿಕರಿಂದ ನಿಷೇಧಿಸಲ್ಪಟ್ಟಿದೆ.
ವಿಮಾನದ ಸಿಬ್ಬಂದಿಯ ವಿಶ್ರಾಂತಿಗೆಂದು ವಿಮಾನದಲ್ಲಿ ಒಂದು ಜಾಗವಿರುತ್ತದೆ. ಅಚ್ಚರಿ ಎಂದರೆ ಈ ಜಾಗಕ್ಕೆ ಯಾರಿಗೂ ಪ್ರವೇಶವಿರುವುದಿಲ್ಲ. ತುರ್ತು ಪರಿಸ್ಥಿತಿ ಹುರತುಪಡಿಸಿ ಪೈಲಟ್ ಸಹ ಈ ಜಾಗಕ್ಕೆ ಬರುವಂತಿರುವುದಿಲ್ಲ. ಇದು ಸಿಬ್ಬಂದಿಗಾಗಿ ಮಾತ್ರ ಇರುವ ಗೌಪ್ಯ ಸ್ಥಳವಾಗಿರುತ್ತದೆ.
ವಿಮಾನ ಪ್ರಯಾಣ, ವಿಶೇಷವಾಗಿ ದೀರ್ಘಾವಧಿಯ ವಿಮಾನಗಳು ಫ್ಲೈಟ್ ಅಟೆಂಡೆಂಟ್‌ಗಳು ಸೇರಿದಂತೆ ಅನೇಕ ಜನರಿಗೆ ಒತ್ತಡವನ್ನು ಉಂಟುಮಾಡಬಹುದು. ಆದ್ದರಿಂದ, ವಿಮಾನದಲ್ಲಿ ಸುರಕ್ಷತೆ ಮತ್ತು ಇತರ ಕಾರ್ಯವಿಧಾನಗಳನ್ನು ನಿರ್ವಹಿಸಲು ಸಿಬ್ಬಂದಿ ವಿಶ್ರಾಂತಿ ಪಡೆಯುವುದು ಮುಖ್ಯವಾಗಿದೆ. ಅವರಿಗಾಗಿ ಕ್ರೂ ರೆಸ್ಟ್ ಕಂಪಾರ್ಟ್‌ಮೆಂಟ್‌ಗಳಿರುತ್ತವೆ.
ವಿಮಾನದಲ್ಲಿ ಅವರ ಸ್ಥಳವು ಬದಲಾಗುತ್ತದೆ. ಉದಾಹರಣೆಗೆ, ಬೋಯಿಂಗ್ 787 ಅಥವಾ ಏರ್‌ಬಸ್ A350 ನಂತಹ ಹೊಸ ವಿಮಾನಗಳು ಮುಖ್ಯ ಕ್ಯಾಬಿನ್‌ನ ಮೇಲ್ಭಾಗದಲ್ಲಿ ಈ ಸ್ಥಳ ನಿಗದಿಯಾಗಿರುತ್ತದೆ. ಹಳೆಯ ವಿಮಾನಗಳಲ್ಲಿ ಈ ವಿಭಾಗಗಳು ಮುಖ್ಯ ಕ್ಯಾಬಿನ್‌ನಲ್ಲಿರುತ್ತಿತ್ತು. ಮತ್ತೆ ಕೆಲವು ವಿಮಾನದಲ್ಲಿ ಹಿಂಬದಿಯಲ್ಲಿರುತ್ತಿತ್ತು. ಈ ಕ್ಯಾಬಿನ್ ಒಳಗೆ ಮೆತ್ತನೆಯ ಹಾಸಿಗೆ, ಏರ್ ವೆಂಟ್ ಮತ್ತು ಲಿನೆನ್‌ಗಳನ್ನು ಒಳಗೊಂಡಿದೆ. ಆದರೆ ಈ ಕ್ಯಾಬಿನ್ ಕುರಿತು ಬಹುತೇಕ ಪ್ರಯಾಣಿಕರಿಗೆ ತಿಳಿಯುವುದೇ ಇಲ್ಲ.
ಈ ಸಿಬ್ಬಂದಿ ಕ್ಯಾಬಿನ್ ಮಾತ್ರವಲ್ಲದೆ ಓರ್ವ ಪೈಲಟ್‌ಗೆ ವಿಶ್ರಾಂತಿ ಪಡೆಯಲೆಂದು ಮತ್ತೊಂದು ಕ್ಯಾಬಿನ್ ಸಹ ಇರಲಿದೆ. ಆದರೆ ಇದು ಬಹುತೇಕ ಕಾಕ್‌ಪಿಟ್‌ನ ಮೇಲ್ಭಾಗದಲ್ಲಿಯೇ ಇರುವಂತೆ ವಿನ್ಯಾಸ ಮಾಡಲಾಗಿರುತ್ತದೆ. ಇದರ ಒಳಗೂ ಸಹ ಪೈಲಟ್‌ಗೆ ವಿಶ್ರಾಂತಿ ಪಡೆಯಲು ಅಗತ್ಯವಾದ ಹಾಸಿಗೆ ಮಾತ್ರ ಇರಲಿದೆ.
ಈ ಸಿಬ್ಬಂದಿ ವಿಶ್ರಾಂತಿ ಕೊಠಡಿ ಹಲವು ನಿಯಮದಿಂದ ಕೂಡಿರುತ್ತದೆ. ವಿಮಾನದಲ್ಲಿ ಕಡಿಮೆ ಶಬ್ದ ಬರುವ ಕಡೆ ಈ ಕ್ಯಾಬಿನ್ ಇರಬೇಕು, ಆದಷ್ಟು ಹೆಚ್ಚು ಮಂದಿ ವಿಶ್ರಾಂತಿ ಪಡೆಯುವಷ್ಟು ದೊಡ್ಡದಿರಬೇಕು. ಒಳಗಿನ ಬೆಳಕು ಕಡಿಮೆ ಹಾಗೂ ಹೆಚ್ಚು ಮಾಡಲಿಕೊಳ್ಳಲು ಅನುವು ಮಾಡಿಕೊಡಬೇಕು. ಅತೀ ಕಡಿಮೆ ಕಂಪನ, ವಸನೆ ಮುಕ್ತವಾಗಿರಬೇಕು ಎಂಬ ಕಠಿಣ ನಿಯಮವಿದೆ.



Click it and Unblock the Notifications