Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒಲಿಂಪಿಕ್‌ನಲ್ಲಿ ಮತ್ತೊಂದು ವಿವಾದ: ಲಿಂಗ ಅರ್ಹತಾ ಪರೀಕ್ಷೆ ವಿಫಲರಾಗಿದ್ದ ಬಾಕ್ಸರ್‌ಗೆ ಮಹಿಳೆ ವಿರುದ್ಧ ಜಯ...!!
ಪ್ಯಾರಿಸ್ ಒಲಿಂಪಿಕ್ ತನ್ನ ವಿಶೇಷತೆಗಳಿಂದ ಸುದ್ದಿಯಾಗುವ ಬದಲಾಗಿ ವಿಚಿತ್ರ ಘಟನೆಗಳಿಂದ ಸುದ್ದಿಯಾಗುತ್ತಿದೆ. ಬಾಕ್ಸಿಂಗ್ ಪಂದ್ಯದಲ್ಲಿ ಮಹಿಳೆ ವಿರುದ್ಧ ಪುರುಷ ಸ್ಪರ್ಧಿಯನ್ನು ಇಳಿಸಿದ್ದ ಕಾರಣಕ್ಕೆ ಸುದ್ದಿಯಾಗಿದ್ದು, ಈಗ ಮತ್ತೊಂದು ಪ್ರಕರಣ ಸಹ ಸುದ್ದಿಯಾಗುತ್ತಿದೆ. ಮತ್ತೊಂದು ಬಾಕ್ಸಿಂಗ್ ಪಂದ್ಯವೂ ಈಗ ವಿವಾದದ ಕೇಂದ್ರಬಿಂದು ಆಗಿದೆ.
ಪ್ಯಾರಿಸ್ 2024 ರಲ್ಲಿ ಇದುವರೆಗಿನ ಸಹ ಬಾಕ್ಸರ್ ಇಮಾನೆ ಖೇಲಿಫ್ ಈ ಮೊದಲು ಇಟಾಲಿಯನ್ ಬಾಕ್ಸರ್ ವಿರುದ್ಧ ಕಣಕ್ಕಿಳಿದು ವಿವಾದ ಸೃಷ್ಟಿಸಿದ್ದಾರೆ. ಅವರ ಅರ್ಹತೆ ಕುರಿತು ಚರ್ಚೆ ಆರಂಭವಾಗಿದೆ. ಖೇಲಿಫ್ ಲಿಂಗತ್ವ ಪರೀಕ್ಷೆ ಅಥವಾ ಲಿಂಗ ಅರ್ಹತೆಯಲ್ಲಿ ಹೆಣ್ಣು ಎಂದು ಸಾಬೀತು ಪಡಿಸುವಲ್ಲಿ ವಿಫಲರಾಗಿದ್ದರೂ ಅವರಿಗೆ ಅರ್ಹತೆ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಈಗ ತೈವಾನ್ ಬಾಕ್ಸರ್ ಲಿನ್ ವೈ ಯು-ಟಿಂಗ್ ಈಗ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಇಂದು ನಡೆದ ಬಾಕ್ಸಿಂಗ್ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಸಿಟೋರಾ ತುರ್ಡಿಬೆಕೋವಾ ವಿರುದ್ಧ ಗೆದ್ದು ಬೀಗಿದ್ದಾರೆ. ಆದರೆ ಇವರು ಸಹ ಈ ಹಿಂದೆ ಲಿಂಗತ್ವ ಪರೀಕ್ಷೆ ಸಾಬೀತುಪಡಿಸುವಲ್ಲಿ ವಿಫಲರಾರಾಗಿದ್ದರು. ಆದರೆ ಈಗ ಬಾಕ್ಸಿಂಗ್ ಪಂದ್ಯದಲ್ಲಿ ಮಹಿಳೆ ವಿರುದ್ಧ ಗೆಲುವು ಸಾಧಿಸಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಲಿನ್ ತೈವಾನೀಸ್ ಬಾಕ್ಸರ್ ಮತ್ತು ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್‌ನ (IBA) ಲಿಂಗ ಅರ್ಹತಾ ಮಾನದಂಡಗಳನ್ನು ಪೂರೈಸಲು ವಿಫಲವಾದ ನಂತರ ಕಳೆದ ವರ್ಷ ನವದೆಹಲಿಯಲ್ಲಿ ನಡೆದ ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನಿಂದಲೂ ಅವರು ಹೊರಗುಳಿದಿದ್ರು, ಆದರೆ ಈಗ ನಡೆಯುತ್ತಿರುವ ಒಲಿಂಪಿಕ್‌ನಲ್ಲಿ ಭಾಗಿಯಾಗಲು ಅವರು ಅರ್ಹತೆ ಪಡೆದಿದ್ದಾರೆ.
ಬಾಕ್ಸರ್‌ಗಳು ತಮ್ಮ ಲಿಂಗ ಅರ್ಹತಾ ಪರೀಕ್ಷೆಯಲ್ಲಿ ಏಕೆ ವಿಫಲರಾಗಿದ್ದಾರೆ ಎಂಬುದನ್ನು IBA ನಿರ್ದಿಷ್ಟಪಡಿಸದಿದ್ದರೂ, ಟೆಸ್ಟೋಸ್ಟೆರಾನ್ ಪರೀಕ್ಷೆಗಳಿಗೆ ಒಳಗಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಲಿನ್ ಆಗಲಿ ಅಥವಾ ಖೇಲಿಫ್ ಆಗಲಿ ಟ್ರಾನ್ಸ್ಜೆಂಡರ್ ಅಥವಾ ಇಂಟರ್ ಸೆಕ್ಸ್ ಎಂದು ಅವರು ಗುರುತಿಸಿಲ್ಲ ಎಂದು ವರದಿಯಾಗಿದೆ. ಲಿನ್ ಈ ಮೊದಲು 2018ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಬಾಟಮ್ ವೇಟ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಇದಾಗಿ ಇಸ್ತಾಂಬುಲ್‌ನಲ್ಲಿ ನಡೆದಿದ್ದ ಫೆದರ್‌ವೇಟ್‌ನಲ್ಲಿ ಮತ್ತೊಂದು ಚಿನ್ನದ ಪದಕ ಗೆದ್ದಿದ್ದರು.
(ಬಾಕ್ಸರ್ ಇಮಾನೆ ಖೇಲಿಫ್ )
IOC ಮತ್ತು IBA ಹೇಳೋದೇನು?
ಅರ್ಹತೆಯ ನಿಯಮಗಳು 2021 ರಲ್ಲಿ ಟೋಕಿಯೊ ಗೇಮ್ಸ್‌ನ ನಿಯಮಗಳ ಮೇಲೆ ಆಧಾರಿತವಾಗಿವೆ ಮತ್ತು ಸ್ಪರ್ಧೆಯ ಸಮಯದಲ್ಲಿ ಅದನ್ನು ಬದಲಾಯಿಸಲಾಗುವುದಿಲ್ಲ ಎಂದು IOC ಹೇಳಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿ ತಕ್ಷಣಕ್ಕೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದಿಲ್ಲ. ಸದ್ಯ ಈ ಲಿನ್ ಈಗ ಮೊದಲ ಸುತ್ತಿನಲ್ಲಿ ಗೆಲುವು ಪಡೆದಿರುವುದು ಭಾರಿ ಚರ್ಚೆ ಹುಟ್ಟುಹಾಕಿದೆ.
ಟೆಸ್ಟೋಸ್ಟೆರಾನ್ ಹಾರ್ಮೋನ್ ಹೆಚ್ಚಾದರೆ ಪುರುಷರಾಗುವುದಿಲ್ಲ..!
ಈ ರೀತಿ ಪರಿಸ್ಥಿತಿಯಲ್ಲಿರುವವರು ಮಹಿಳೆಯರೇ ಆಗಿದ್ದರೂ ಅವರ ದೇಹದಲ್ಲಿ ಪುರುಷರ ಲಕ್ಷಣ ಕಾಣಬಹುದು. ಈ ಟೆಸ್ಟೋಸ್ಟೆರಾನ್ ಹಾರ್ಮೋನ್ ಹೆಚ್ಚಾಗಿದ್ದರೆ ಈ ಲಕ್ಷಣಗಳು ಕಂಡುವರುತ್ತದೆ. ಇದರಿಂದ ಅವರ ಮಾಂಸ ಖಂಡಗಳು, ಮುಖದಲ್ಲಿ ಕೂದಲು ಬೆಳೆಯುವುದು, ಪುರುಷರಂತೆ ಧ್ವನಿಯಾಗುವ ಸ್ಥಿತಿ ಇದು, ಆದರೆ ಅವರನ್ನು ಪುರುಷರೆಂದು ಪರಿಗಣಿಸಲು ಆಗುವುದಿಲ್ಲ. ಈ ಸ್ಥಿತಿಯಲ್ಲಿರುವ ಕ್ರೀಡಾಪಟುಗಳು ಈ ಬಾರಿ ಬಾಕ್ಸಿಂಗ್ ವಿಭಾಗದಲ್ಲಿ ವಿವಾದ ಉಂಟು ಮಾಡುತ್ತಿದ್ದಾರೆ.
ಈ ವಿವಾದ ಮುಂದಿನ ದಿನಗಳಲ್ಲಿ ಒಲಿಂಪಿಕ್ ಕಮಿಟಿ ಸಭೆ ಸೇರುವುದು ಖಚಿತವಾಗಿದೆ. ಜೊತೆಗೆ ಒಂದಿಷ್ಟು ನಿಯಮಗಳು ಸಹ ಬದಲಾಗಬಹುದು ಎಂಬ ನಿರೀಕ್ಷೆಯೂ ಇದೆ. ಆದರೆ ಈ ಕ್ರೀಡಾಪಟುಗಳ ಎದುರಾಳಿಯಾಗಿ ಕಣಕ್ಕಿಳಿಯುತ್ತಿರುವವರಿಗೆ ಒಂದು ಕಡೆ ನಿರಾಸೆಯೂ ಉಂಟಾಗುತ್ತಿದೆ.



Click it and Unblock the Notifications












