Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಪಾನಿಪುರಿ ವ್ಯಾಪಾರಿಗೆ ವರ್ಷಕ್ಕೆ 40 ಲಕ್ಷ ಆದಾಯ: ಕೊನೆಗೂ ಬಿತ್ತು ಸರ್ಕಾರದ ಕಣ್ಣು,ಜಿಎಸ್‌ಟಿ ನೋಟೀಸ್ ಆಯ್ತು ವೈರಲ್
ಅಬ್ಬಾಬ್ಬ ವರ್ಷದ ಆದಾಯ 40 ಲಕ್ಷಕ್ಕೂ ಹೆಚ್ಚು, ಇವರೇನು ಗೂಗಲ್‌ನಲ್ಲಿ ಅಥವಾ ಮಲ್ಟಿನ್ಯಾಷನಲ್ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿಲ್ಲ, ಇವರೊಬ್ಬ ಪಾನಿಪುರಿ ವ್ಯಾಪಾರಿ. ಆದರೆ ಇವರ ಆದಾಯ ಕೇಳಿ ನಮ್ಮ ಕೆಲಸಕ್ಕಿಂತ ಇವರ ಕೆಲಸ ಆಗಬಹುದು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಇವರು 40 ಲಕ್ಷಕ್ಕೆ ಜಿಎಸ್‌ಟಿ ಪಾವತಿಸಿಲ್ಲ, ಇದೀಗ ಇವರ ಆದಾಯದ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ತೆರಿಗೆ ಇಲಾಖೆ ಎಚ್ಚೆತ್ತುಕೊಂಡು ತೆರಿಗೆ ಪಾವತಿಸಲು ಆರ್ಡರ್ ಮಾಡಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಈ ನ್ಯೂಸ್
ಆ ವ್ಯಾಪಾರಿ ವರ್ಷಕ್ಕೆ ಗಳಿಸುತ್ತಿರುವ ಆದಾಯ 40 ಲಕ್ಷ, ಇದು ಆತನ ಫೋನ್‌ಪೇ, ಗೂಗಲ್ ಪೇ ಅಕೌಂಟ್‌ಗೆ ಬಂದ ಹಣ, ಎಷ್ಟೋ ಜನ ಕ್ಯಾಶ್ ಕೂಡ ಕೊಡುತ್ತಾರೆ, ಹಾಗೆ ಲೆಕ್ಕ ಹಾಕಿದರೆ ಈತ ವರ್ಷಕ್ಕೆ ಅರ್ಧ ಕೋಟಿ ಗಳಿಸುತ್ತಿರಬಹುದು. ಈತನ ಆದಾಯ ಕೇಳಿ ಕೆಲವರ ಮನಸ್ಸಿಗೆ ಅರೆ ಈ ಬ್ಯುಸ್‌ನೆಸ್ ಚೆನ್ನಾಗಿದೆಯಲ್ಲಾ ಎಂದನಿಸಬಹುದು, ಇನ್ನು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವ ತಮಾಷೆ ವೀಡಿಯೋ ಅದು ತಮಾಷೆಯಲ್ಲ ನಿಜ ಸಂಗತಿ ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪಾನಿಪುರಿ ವ್ಯಾಪಾರಿ ಗಳಿಕೆಯ ತಮಾಷೆಯ ವೀಡಿಯೋಗಳು ಬರುತ್ತವೆ
ಒಬ್ಬ ಐಟಿಯಲ್ಲಿ ಕೆಲಸ ಮಾಡ್ತಾ ಇರ್ತಾನೆ, ಮತ್ತೊಬ್ಬ ಪಾನಿಪುರಿ ವ್ಯಾಪಾರಿ. ಆತ ನಾನು ತಿಂಗಳಿಗೆ 50 ಸಾವಿರ ದುಡಿಯುತ್ತೇನೆ ಎಂದು ಗರ್ವದಿಂದಹೇಳಿದರೆ ಪಾನಿಪುರಿ ವ್ಯಾಪಾರಿ ನಾನು 5 ಸಾವಿರ ದುಡಿಯುತ್ತೇನೆ ಎಂದು ಹೇಳುತ್ತಾನೆ, ಈತ ತಿಂಗಳಿಗಾ ಎಂದರೆ ಇಲ್ಲಾ ದಿನಕ್ಕೆ ಅಂತಾನೆ. ಇಂಥ ವೀಡಿಯೋಗಳು ತಮಾಷೆಗೆ ಮಾಡಿದ್ದಲ್ಲ, ವಾಸ್ತವಕ್ಕೆ ತುಂಬಾನೇ ಹತ್ತಿರವಾದ ವೀಡಿಯೋಗಳಾಗಿವೆ. ಈತನ ಗಳಿಕೆ ನೋಡಿ ಒಬ್ಬ ಪಾನಿಪುರಿ ವ್ಯಾಪಾರಿ ಇಷ್ಟೊಂದು ಗಳಿಸುತ್ತಾರಾ ಎಂದು ಅಚ್ಚರಿಪಡುತ್ತಿದ್ದಾರೆ.
ಪಾನಿಪುರಿ, ಗೋಲ್‌ಗಪ್ಪಾ ಮಾರುವ ವ್ಯಾಪಾರಿಗಳ ಗಳಿಕೆ ಚೆನ್ನಾಗಿಯೇ ಇರುತ್ತದೆ
ಬೈಯ್ಯಾ ಒಂದು ಪ್ಲೇಟ್ ಪಾನಿಪುರಿ ಎಂದು ನಾವು ಸ್ಟೈಲ್ ಆಗಿ 40 ರುಪಾಯಿ, 50 ರುಪಾಯಿ ಕೊಟ್ಟು ಹೋಗ್ತೀವಿ, ಆದರೆ ನಾವು ಪಾನಿಪುರಿ ಸವಿಯುವಾಗ ಅಲ್ಲಿ ಒಂದಿಷ್ಟು ಜನ ಕೂಡ ಇರುತ್ತಾರೆ, ಅವರು ಕೂಡ ನಮ್ಮಂತೆ ಗೋಲ್ ಗಪ್ಪಾ, ಪಾನಿಪುರಿ ಅಂತ ತಿನ್ನುತ್ತಿರುತ್ತಾರೆ, ಆ ಪಾನಿಪುರಿಯವ ಖಾಲಿ ಕೂರುವುದಿಲ್ಲ, ಗ್ರಾಹಕರು ಬರ್ತಾ ಇರುತ್ತಾರೆ, ಇನ್ನು ಸ್ವಲ್ಪ ಫೇಮಸ್ ಚಾಟ್ ಸೆಂಟರ್ ಆಗಿ ಬಿಟ್ಟರೆ ಅಂತೂ ಮುಗೀತು ಜನದ ಗುಂಪು ಯಾವಾಗಲೂ ಇರುತ್ತೆ, ಅವರು ತಿಂಗಳಿಗೆ ಕಡಿಮೆಯೆಂದರೂ 30 ಸಾವಿರಕ್ಕೂ ಅಧಿಕ ಗಳಿಸುತ್ತಾರೆ.
ಡಿಜಿಟಲ್ ಪೇಮೆಂಟ್ ಬಳಸುತ್ತಿರುವುದರಿಂದ ಇವರ ಗಳಿಕೆ ಬಗ್ಗೆ ಸರ್ಕಾರಕ್ಕೆ ತಿಳಿಯುತ್ತಿದೆ
ಈಗ ಚಿಕ್ಕ ವ್ಯಾಪಾರಿಗಳು ಫೋನ್‌ಪೇ, ರೇಝರ್‌ಪೇ, ಯುಪಿಐ ಹೀಗೆ ಚಿಕ್ಕ ವ್ಯಾಪಾರಿಗಳು ಡಿಜಿಟಲ್ ಪೇಮೆಂಟ್ ಬಳಸುತ್ತಿದ್ದಾರೆ. ಏಕೆಂದರೆ ಈಗ ಬಹುತೇಕರು ಕ್ಯಾಶ್ ವ್ಯವಹಾರ ಮಾಡುವುದೇ ಇಲ್ಲ, ಹೀಗಾಗಿ ಚಿಕ್ಕ ವ್ಯಾಪಾರಿಗಳು ಡಿಜಿಟಲ್ ಪೇಮೆಂಟ್‌ಗೆ QR ಕೋಡ್ ಇಡದಿದ್ದರೆ ವ್ಯಾಪಾರ ಆಗುವುದು ಕಷ್ಟ. ಹೀಗಾಗಿ ಡಿಜಿಟಲ್ ಪೇಮೆಂಟ್ ಸರ್ವೇ ಸಾಮಾನ್ಯವಾಗಿದೆ. ಈ ಡಿಜಿಟಲ್ ಮೇಮೆಂಟ್‌ನಿಂದಾಗಿ ಈಗ ಅವರ ಗಳಿಕೆ ಎಷ್ಟಿದೆ ಎಂಬುವುದು ಕೂಡ ತೆರಿಗೆ ಇಲಾಖೆಗೆ ತಿಳಿದಿದೆ.
ಪಾನಿಪುರಿಗೆ ಜೆಸ್‌ಟಿ ನೋಟೀಸ್ ನೀಡಿರುವುದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ, ಈತನಿಗೆ ಜಿಎಸ್‌ಟಿ ನೋಟಿಸ್ ಬಂದಿರುವುದಕ್ಕೆ ಹೆಚ್ಚು ಆದಾಯ ಗಳಿಸುವ ಇತರ ಪಾನಿಪುರಿ ವ್ಯಾಪಾರಿಗಳು ಕ್ಯಾಶ್ ಓನ್ಲಿ ಅಂತ ಬೋರ್ಡ್ ಹಾಕಬಹುದು. ಏನೇ ಆಗಲಿ ಪಾನಿಪುರಿ ಮಾರಿ 40 ಲಕ್ಷ ಆದಾಯ ಗಳಿಸಬಹುದು ಎಂಬ ಧೈರ್ಯವನ್ನೂ ಈ ಸ್ಟೋರಿ ತುಂಬುತ್ತೆ...



Click it and Unblock the Notifications