Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಪತ್ನಿಯ ನಕಲಿ ವಿಡಿಯೋ ಹರಿಬಿಟ್ಟವನ ಮಾಹಿತಿ ಕೊಟ್ಟರೆ ₹10 ಲಕ್ಷ..! ಪಾಕ್ ಯೂಟ್ಯೂಬರ್ ಬಹುಮಾನ ಘೋಷಣೆ..!
ಆನ್‌ಲೈನ್ ಜಗತ್ತು ಎಷ್ಟು ಕಠೋರ ಹಾಗೂ ಅಪಾಯಕಾರಿ ಮಟ್ಟಕ್ಕೆ ಬೆಳೆಯುತ್ತಿದೆ ಅಂದರೆ ಭಾರತದ ಬಹುಪಾಲು ಮಂದಿ ಒಂದಲ್ಲಾ ಒಂದು ರೀತಿಯ ಆನ್‌ಲೈನ್ ವಂಚನೆ ಹಾಗೂ ಡೀಪ್‌ಫೇಕ್ ವಿಡಿಯೋಗಳ ಮೂಲಕ ವಂಚನೆಗೆ ಒಳಗಾಗುತ್ತಿದ್ದಾರೆ. ಇನ್ನು ಈ ಸಮಸ್ಯೆ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವದ ಜನತೆಯ ತಲೆನೋವಾಗುತ್ತಿದೆ.
ಇದೀಗ ಪಾಕಿಸ್ತಾನಿ ಮಹಿಳೆಯ ಡೀಪ್‌ಫೇಕ್ ವಿಡಿಯೋ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ಪ್ರಕರಣ ನೀವು ನೆನಪು ಮಾಡಿಕೊಳ್ಳಬಹುದು. ಅಲ್ಲಿ ಯುವತಿಯೊಬ್ಬಳ ಬದಲು ರಶ್ಮಿಕಾಳ ಮುಖ ಇಟ್ಟು ವಿಡಿಯೋ ವೈರಲ್ ಮಾಡಲಾಗಿತ್ತು. ಈ ವಿಡಿಯೋ ಎಷ್ಟು ನೈಜವಾಗಿ ಕಾಣುತ್ತಿತ್ತು ಅಂದ್ರೆ ನೋಡಿದವರು ಇದು ನಕಲಿ ಎಂದು ತಿಳಿಯದೆ ಶಾಕ್ ಆಗಿದ್ದರು.

ಇದೀಗ ಪಾಕಿಸ್ತಾನಿ ಯೂಟ್ಯೂಬರ್ ಪತ್ನಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕೆಯ ಪತಿ ಈ ವಿಡಿಯೋ ಮಾಡಿದವನ ಪತ್ತೆಗೆ ಸಹಾಯ ಮಾಡಿದವರಿಗೆ 10 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದಾನೆ. ಪಾಕಿಸ್ತಾನಿ ಯೂಟ್ಯೂಬರ್ ಸಾದ್ ರೆಹಮಾನ್ ಅಕಾ ಡಕ್ಕಿ ಭಾಯ್ ಎಂದು ಫೇಮಸ್ ಆಗಿರುವ ಯೂಟ್ಯೂಬರ್ ಪತ್ನಿಯ ವಿಡಿಯೋ ವೈರಲ್ ಆಗಿದೆ.
ಏನಿದು ಘಟನೆ.?
ಡೀಪ್ ಫೇಕ್ ವಿಡಿಯೋ ಅಂದ್ರೆ ಏನೆಂದು ನಿಮಗೆ ತಿಳಿದಿರಬಹುದು. ಯಾರದ್ದೋ ಮುಖಕ್ಕೆ ಮತ್ತೊಂದು ಮುಖ ಸೇರಿಸಿ ಅಸಲಿ ವಿಡಿಯೋದಂತೆ ಈ ವಿಡಿಯೋ ಮಾಡಲಾಗುತ್ತದೆ. ಇದಕ್ಕೆ ಆರ್ಟಿಫಿಶಿಯಲ್ ಇಂಟೆಲಿಜೆಂನ್ಸ್ (AI) ಸಹಾಯ ಪಡೆಯಲಾಗುತ್ತದೆ. ಹಾಗಾಗಿ ತುಂಬಾನೆ ನಿಖರವಾಗಿ ಕಾಣುತ್ತದೆ.
ಇಲ್ಲಿ ಪಾಕ್ ಯುಟ್ಯೂಬರ್‌ನ ಪತ್ನಿಯ ಮುಖವನ್ನು ಬಳಸಿಕೊಂಡು ಅಶ್ಲೀಲ ವಿಡಿಯೋ ಮಾಡಲಾಗಿದೆ. ಆಕೆ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಫೋಟೋವನ್ನು ತೆಗೆದುಕೊಂಂಡು ವಿಡಿಯೋ ಮಾಡಲು ಬಳಸಿಕೊಳ್ಳಲಾಗಿದೆ. ಆದರೆ ಯಾರು ಮಾಡಿದ್ದಾರೆ? ಎಂಬುದು ಪತ್ತೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದಾಗಿದೆ.
10 ಲಕ್ಷ ರೂಪಾಯಿ ನೀಡೋದಾಗಿ ವಿಡಿಯೋ
ಈ ವಿಡಿಯೋ ವೈರಲ್ ಆದ ಬಳಿಕ ಯೂಟ್ಯೂಬರ್‌ಗೆ ಎಲ್ಲರ ಕಡೆಯಿಂದ ಮೆಸೇಜ್ ಬರಲು ಆರಂಭವಾಗಿತ್ತು, ಹೀಗಾಗಿ ನಕಲಿ ವಿಡಿಯೋ ಮಾಡಿದ್ದವನ ಪತ್ತೆ ಮಾಡಲು ಯುಟ್ಯೂಬರ್ ಹೊಸ ವಿಡಿಯೋ ಹಂಚಿಕೊಂಡಿದ್ದಾನೆ. ಈ ವಿಡಿಯೋ ನಕಲಿಯಾಗಿದೆ, ನನ್ನ ಪತ್ನಿಯ ನಕಲಿ ವಿಡಿಯೋವೊಂದು ಹರಿದಾಡುತ್ತಿದೆ. ಇದು ಯಾರು ಮಾಡಿದ್ದಾರೋ ಗೊತ್ತಿಲ್ಲಾ ದಯವಿಟ್ಟು ಆತನ ಹುಡುಕಲು ನನಗೆ ಸಹಾಯ ಮಾಡಿ. ಆತ ಯಾರು ಅಂತ ಗೊತ್ತಿದ್ದರೆ ಅವರ ಮಾಹಿತಿ ಇ ಮೇಲ್ ಮಾಡಿ, ಯಾರು ಆತನ ಹುಡುಕಲು ಸಹಾಯ ಮಾಡುತ್ತಾರೋ ಅವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುತ್ತೇವೆ ಎಂದು ಘೋಷಿಸಿದ್ದಾನೆ.
ಈ ವಿಡಿಯೋಗಳ ಮೂಲ ಹುಡುಕುವುದು ಸುಲಭವೇ?
ಇಂತಹ ಎಐ ಟೆಕ್ನಾಲಜಿ ಬಳಸಿ ಮಾಡಲಾದ ವಿಡಿಯೋಗಳ ಮೂಲ ಹುಡುಕುವುದು ಅಕ್ಷರಶಃ ಕಷ್ಟದ ಕೆಲಸ. ಈ ವಿಡಿಯೋಗಳು ಯಾರು? ಯಾವ ಕಾರಣಕ್ಕೆ ಮಾಡುತ್ತಾರೆ ಎಂಬುದೇ ನಿಜಕ್ಕೂ ನಿಗೂಢ ಎಂಬಂತಾಗಿದೆ. ರಶ್ಮಿಕಾ ಮಂದಣ್ಣಾಳ ನಕಲಿ ವಿಡಿಯೋ ಮಾಡಿದ್ದ ಯುವಕನನ್ನು ಸೈನರ್ ಪೊಲೀಸರ ಸಹಾಯದಿಂದ ಪತ್ತೆ ಮಾಡಲಾಗಿತ್ತು. ಆದರೆ ಆ ವಿಡಿಯೋ ಮಾಡಿದ್ದ ಮೂಲವನ್ನು ಐಪಿ ಅಡ್ರೆಸ್ ಸಹಾಯದಿಂದ ಮಾತ್ರ ಪತ್ತೆ ಮಾಡಬಹುದು. ಎಲ್ಲಿಂದ ಹಂಚಿಕೊಳ್ಳಲಾಗಿದೆ ಎಂಬ ಇತಿಹಾಸ ಮತ್ತೆ ಮಾಡಿದರೆ ಮಾತ್ರ ವಿಡಿಯೋ ಸೃಷ್ಟಿಕರ್ತನ ಮೂಲ ಪತ್ತೆ ಮಾಡಬಹುದು.
ಆದರೆ ಎಲ್ಲಾ ಪ್ರಕರಣಗಳಲ್ಲೂ ಇದು ಸಾಧ್ಯವಿರುವುದಿಲ್ಲ. ಕೆಲವೊಮ್ಮೆ ಐಪಿ ಅಡ್ರೆಸ್ ಯಾವುದೆಂದು ಪತ್ತೆ ಮಾಡುವುದೇ ಸವಾಲಿನ ಕೆಲಸವಾಗುತ್ತದೆ. ಐಪಿ ಅಡ್ರೆಸ್ ಟ್ರೇಸ್ ಮಾಡದಂತೆ ಇಂಟರ್‌ನೆಟ್ ಬಳಸುವ ಕಲೆ ಈಗಿನ ಹ್ಯಾಕರ್‌ಗಳು, ಇಂತಹ ಕೃತ್ಯ ಎಸಗುವವರ ನಡೆಯಾಗಿರುತ್ತದೆ.



Click it and Unblock the Notifications
