Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
Oscar 2025: ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಸಿನಿಮಾ ಯಾವುದು? ಕಾರ್ಯಕ್ರಮ ಎಲ್ಲಿ ವೀಕ್ಷಿಸಬಹುದು?
ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿ ಎಂದು ಕರೆಯಲಾಗುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 97ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್ ಏಂಜಲಿಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. 2025ನೇ ಸಾಲಿನ ಈ ಅಕಾಡೆಮಿ ಅವಾರ್ಡ್ ಹಲವು ವಿಚಾರಗಳಿಂದ ಸುದ್ದಿಯಾಗಿದೆ. ಅದರಲ್ಲೂ ಕಾಡ್ಗಿಚ್ಚಿನಿಂದ ಕಂಗೆಟ್ಟಿದ್ದ ಲಾಸ್ ಏಂಜಲಿಸ್‌ನಲ್ಲಿ ಈ ಸಮಾರಂಭ ನಡೆಯುತ್ತಿರುವುದು ಮತ್ತೊಂದು ಅಚ್ಚರಿಯಾಗಿದೆ.
ಕಳೆದ ಎರಡು ವರ್ಷದ ಹಿಂದೆ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಡ್ಯಾನ್ಸ್‌ಗೆ ಆಸ್ಕರ್ ಪ್ರಶಸ್ತಿ ಒಲಿದಿತ್ತು. ಇದಾದ ಬಳಿಕ ಭಾರತೀಯ ಸಿನಿಮಾಗಳು ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನ ಆಗಲು ಸಾಹಸ ಪಡುತ್ತಿವೆ. ಆಸ್ಕರ್ ಅವಾರ್ಡ್ ಸಿಗುವುದು ಬಹುದೊಡ್ಡ ಸಾಧನೆ ಎಂದು ಪರಿಗಣಿಸಿದ್ದರೂ ಈ ಪ್ರಶಸ್ತಿಗೆ ನಾಮ ನಿರ್ದೇಶನ ಆಗುವುದು ಕೂಡ ದೊಡ್ಡ ಸಾಹಸವಾಗಿದೆ.

ಅಕಾಡೆಮಿ ಪ್ರಶಸ್ತಿ ಸಮಾರಂಭವು ಮಾರ್ಚ್ 3 ರ ಬೆಳಗ್ಗೆ 5:30ರಿಂದಲೇ ಆರಂಭವಾಗುತ್ತದೆ. ಹಾಗೆ ಜಿಯೋ ಹಾಟ್‌ಸ್ಟಾರ್ ಮೂಲಕ ನೇರಪ್ರಸಾರ ಕೂಡ ನೋಡಬಹುದು. ಹಾಗೆ ಸ್ಟಾರ್ ಮೂವಿಸ್ ಮತ್ತು ಸ್ಟಾರ್ ಮೂವಿಸ್ ಸೆಲೆಕ್ಟ್‌ನಲ್ಲಿ ವೀಕ್ಷಿಸಬಹುದು. ಈ ವರ್ಷದ ಆಸ್ಕರ್ ಪ್ರಶಸ್ತಿಯ ನಿರೂಪಕರಾಗಿ ಕಾನನ್ ಒ'ಬ್ರೇನ್ ಅವರು ಆಯೋಜಿಸಲಿದ್ದಾರೆ.
ಈ ಸಮಾರಂಭದಲ್ಲಿ ಹಾಲಿವುಡ್ ಹಾಗೂ ಬಾಲಿವುಡ್ ನಟ ನಟಿಯರು, ತಂತ್ರಜ್ಞರು ಭಾಗಿಯಾಗುತ್ತಿದ್ದಾರೆ. ಹಲವು ವಿಭಾಗದಲ್ಲಿ ಹಲವು ಸಿನಿಮಾಗಳು ಆಸ್ಕರ್ ಅವಾರ್ಡ್ ಪಡೆದುಕೊಳ್ಳಲಿವೆ.
ಭಾರತದ ಯಾವ ಸಿನಿಮಾ ರೇಸ್‌ನಲ್ಲಿದೆ?
ಈ ಬಾರಿಯ ಆಸ್ಕರ್ ಅವಾರ್ಡ್‌ಗೆ ಬಾಲಿವುಡ್ ಸೇರಿ ಭಾರತದ ಯಾವುದೇ ಸಿನಿಮಾಗಳು ಈ ರೇಸ್‌ನಲ್ಲಿ ಇಲ್ಲ. ಆದ್ರೆ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಗುನೀತ್ ಮೋಂಗಾ ನಿರ್ಮಾಣದ 'ಅನುಜಾ' ಕಿರುಚಿತ್ರ ಬೆಸ್ಟ್ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಅವಾರ್ಡ್ ರೇಸ್‌ನಲ್ಲಿದೆ. ಆದ್ರೆ ಈ ಸಿನಿಮಾಗೆ ಆಸ್ಕರ್ ಪ್ರಶಸ್ತಿ ಒಲಿದು ಬರಲಿದ್ಯಾ ಎಂಬ ಕುತೂಹಲ ಮೂಡಿದೆ.
ಆಸ್ಕರ್ ಅವಾರ್ಡ್ ರೇಸ್‌ನಲ್ಲಿರುವ ಸಿನಿಮಾಗಳಿವು..!
- ಅನೋರಾ
- ದಿ ಬ್ರೂಟಲಿಸ್ಟ್
- ಎ ಕಂಪ್ಲೀಟ್ ಅನೌನ್
- ಕಾನ್ಕ್ಲೇವ್
- ಡ್ಯೂನ್: ಪಾರ್ಟ್ 2
- ಎಮಿಲಿಯಾ ಪೆರೆಜ್
- ಐಎಮ್ ಸ್ಟಿಲ್ ಹಿಯರ್
- ನಿಕಲ್ ಬಾಯ್ಸ್
- ದಿ ಸಬ್‌ಸ್ಟೆನ್ಸ್
- ವಿಕೆಡ್
ಅತ್ಯುತ್ತಮ ಸಿನಿಮಾ ರೇಸ್ ಗೆಲ್ಲಲಿದ್ಯಾ ಅನೋರಾ?
ಈ ಬಾರಿ ಅತ್ಯುತ್ತಮ ಸಿನಿಮಾ ಲೀಸ್ಟ್‌ನಲ್ಲಿ ಆಸ್ಕರ್ ಗೆಲ್ಲುವ ಮೆಚ್ಚಿನ ಸಿನಿಮಾ ಎಂಬ ಖ್ಯಾತಿಗೆ ಅನೋರಾ ಕಾರಣವಾಗಿದೆ. ಸೀನ್ ಬೇಕರ್ ನಿರ್ದೇಶನ ಮಾಡಿರುವ ಈ ಸಿನಿಮಾ ಈ ಬಾರಿ ಆಸ್ಕರ್ ಪಡೆಯಲಿದೆ ಎಂದು ಊಹಿಸಲಾಗಿದೆ. ಹಾಗೆ ಜಾಕ್ವೆಸ್ ಆಡಿಯಾರ್ಡ್ ನಿರ್ದೇಶಿಸಿರುವ ಎಮಿಲಿಯಾ ಪೆರೆಜ್ ಸಿನಿಮಾ ಕೂಡ ಹಲವು ಆಸ್ಕರ್ ಪಡೆಯುವ ನಿರೀಕ್ಷೆ ಹುಟ್ಟಿಸಿದೆ. ಬರೋಬ್ಬರಿ 13 ವಿಭಾಗದಲ್ಲಿ ಈ ಎಮಿಲಿಯಾ ಪೆರೆಜ್ ಸಿನಿಮಾ ನಾಮ ನಿರ್ದೇಶನಗೊಂಡಿದೆ. ಈ ಮೂಲಕ ಒಂದೆರಡು ವಿಭಾಗದಲ್ಲಿ ಪ್ರಶಸ್ತಿ ಪಡೆಯುವ ರೇಸ್‌ನಲ್ಲಿದೆ.
ಆಸ್ಕರ್ ಪ್ರಶಸ್ತಿ ನೀಡುತ್ತಿರುವುದು ಯಾರು?
ಈ ಬಾರಿಯ ಆಸ್ಕರ್ ಅವಾರ್ಡ್ ಅನ್ನು ಡೇವ್ ಬೌಟಿಸ್ಟಾ, ಹ್ಯಾರಿಸನ್ ಫೋರ್ಡ್, ಗಾಲ್ ಗಡೋಟ್, ಆಂಡ್ರ್ಯೂ ಗಾರ್ಫೀಲ್ಡ್, ಸ್ಯಾಮ್ಯುಯೆಲ್ ಎಲ್. ಜಾಕ್ಸನ್, ಮಾರ್ಗರೇಟ್ ಕ್ವಾಲಿ, ಆಲ್ಬಾ ರೋಹ್‌ವಾಚರ್, ಜೊಯಿ ಸಲ್ಡಾನಾ ಮತ್ತು ರಾಚೆಲ್ ಜೆಗ್ಲರ್ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಇವರ ಜೊತೆಗೆ ಬಾಲಿವುಡ್ ನಟ-ನಟಿಯರು ಕೂಡ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.



Click it and Unblock the Notifications
