Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಒಂದೇ ಚಿತ್ರಕ್ಕೆ 7 ಆಸ್ಕರ್ ಪ್ರಶಸ್ತಿ, ಈ ಪ್ರತಿಷ್ಠಿತದ ಸಮಾರಂಭಕ್ಕೆ ನಗ್ನವಾಗಿ ವೇದಿಕೆಗೆ ಬಂದ ಹಾಲಿವುಡ್ ನಟ
ಮನರಂಜನಾ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್. ಆಸ್ಕರ್ ಗೆಲ್ಲಬೇಕೆಂಬುವುದು ಪ್ರತಿಯೊಬ್ಬ ನಟ ನಟಿಯ ದೊಡ್ಡ ಆಸೆಯಾಗಿರುತ್ತದೆ, 2024ರಲ್ಲಿ 96ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲಾಯ್ತು.
ಈ ವರ್ಷ ಆಸ್ಕರ್ ಪ್ರಶಸ್ತಿ ಪಡೆದ ನಟ- ನಟಿಯರು

ಅತ್ಯುತ್ತಮ ನಟ- ಕಿಲಿಯನ್ ಮರ್ಫಿ(ಓಪನ್‌ಹೈಮರ್)
ಅತ್ಯುತ್ತಮ ನಟಿ- ಎಮ್ಮಾ ಸ್ಟೋನ್(ಪೂರ್ ಥಿಂಗ್ಸ್)
ಅತ್ಯುತ್ತಮ ಚಿತ್ರ- ಓಪನ್‌ಹೈಮರ್
ಅತ್ಯುತ್ತಮ ನಿರ್ದೇಶಕ-ಕ್ರಿಸ್ಟೋಫರ್ ನೋಲನ್(ಓಪನ್‌ಹೈಮರ್)
ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್- ಗಾಡ್ಜಿಲ್ಲಾ ಮೈನಸ್ ಒನ್
ಅತ್ಯುತ್ತಮ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್- ದಿ ವಂಡರ್‌ಫುಲ್ ಸ್ಟೋರಿ ಆಫ್ ಹೆನ್ರಿ ಸುಗರ್
ಅತ್ಯುತ್ತಮ ಸಂಕಲನ- ಓಪನ್‌ಹೈಮರ್
ಸೌಂಡ್- ದಿ ಜೋನ್ ಆಫ್ ಇಂಟ್ರೆಸ್ಟ್
ಅತ್ಯುತ್ತಮ ಛಾಯಾಗ್ರಹಣ- ಹೊಯ್ಟೆ ವ್ಯಾನ್ ಹೊಯ್ಟೆಮಾ (ಓಪನ್‌ಹೈಮರ್)
ಒರಿಜಿನಲ್ ಸ್ಕೋರ್- (ಓಪನ್‌ಹೈಮರ್) ಲುಡ್ವಿಗ್ ಗೊರಾನ್ಸನ್
ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್- ದಿ ಲಾಸ್ಟ್ ರಿಪೇರ್ ಶಾಪ್
ಒರಿಜಿನಲ್ ಸಾಂಗ್- ವಾಟ್ ವಾಸ್ ಐ ಮೇಡ್ ಫಾರ್(ಬಾರ್ಬಿ)
ಡಾಕ್ಯುಮೆಂಟರಿ ಫೀಚರ್ ಫಿಲ್ಮ್- 20 ಡೇಸ್ ಇನ್ ಮರಿಯುಪೋಲ್
ಆಸ್ಕರ್ ವೇದಿಕೆಗೆ ನಗ್ನವಾಗಿ ಬಂದ ಜಾನ್ ಸೆನಾ
ಈ ವರ್ಷ ಆಸ್ಕರ್ ವೇದಿಕೆಯಲ್ಲಿ ಗಮನ ಸೆಳೆದ ವಿಷಯವೆಂದರೆ ಹಾಲಿವುಡ್ ನಟ ಜಾನ್ ಸೆನಾ ಬೆತ್ತಲೆಯಾಗಿ ಬಂದಿದ್ದು. ಬೆಸ್ಟ್ ಕಾಸ್ಟ್ಯೂಮ್ ಡಿಸೈನ್ ಅವಾರ್ಡ್ ಕೊಡಲು ವೇದಿಕೆಗೆ ವಿಭಿನ್ನ ರೀತಿ ಬಂದ ಜಾನ್ ಸೆನಾ ನಗ್ನವಾಗಿ ಮೈಕ್ ಮುಂದೆ ನಿಂತು ಮಾತನಾಡಿ ನೋಡಿಗರು ತಬ್ಬಿಬ್ಬುವಾಗುವಂತೆ ಮಾಡಿದ್ದಾರೆ. ಜಾನ್ ಸೆನಾ ಈ ರೀತಿ ಬಂದಿದ್ದು ನೋಡಿ ಅನೇಕರಿಗೆ ಅಚ್ಚರಿ ಉಂಟಾಗಿದ್ದರೂ ಈ ನಟ ಮಾತ್ರ ಯಾವುದೇ ಮುಜುಗರವಿಲ್ಲದೆ ವೇದಿಕೆ ಮೇಲೆ ಬಂದು ಹೋಗಿದ್ದಾರೆ.
ಜಿಮ್ಮಿ ಕಿಮ್ಮಲ್ ಅಲ್ಲಿ ನೆರೆದಿದ್ದ ಸಭಿಕರ ಬಳಿ ಈ ಸ್ಟೇಜ್‌ನಲ್ಲಿ ವ್ಯಕ್ತಿಯೊಬ್ಬರು ನಗ್ನವಾಗಿ ಓಡಾಡಿದರೆ ಹೇಗಿರುತ್ತದೆ, ಸಕತ್ ಕ್ರೇಝಿ ಆಗಿರುತ್ತದೆ ಅಲ್ವಾ? ಎಂದು ಕೇಳಿದಾಗ ಎಲ್ಲರು ಓಹೋ ಅಂತಾರೆ, ಆವಾಗ ಜಾಕ್ ತಮ್ಮ ಇಣುಕಿ ನೋಡುತ್ತಾರೆ, ನೀವು ನನಗೆ ಟೇಸ್ಟ್‌ಲೆಸ್ ಜೋಕ್ ಸಜೆಸ್ಟ್ ಮಾಡಿದ್ದಕ್ಕೆ ಶೇಮ್ ಆಗುವುದು ನೋಡಿ ಎಂದು ಹೇಳಿ , ಪುರುಷ ಶರೀರ ಎಂಬುವುದು ಜೋಕ್ ಅಲ್ಲ ಎಂದಾಗ ಜಾನ್ ಬೆತ್ತಲೆಯಾಗಿ ಮುಂದುಗಡೆ ಒಂದು ಬೋರ್ಡ್ ಹಿಡಿದು ಬರುತ್ತಾರೆ. ಅಲ್ಲಿದ್ದವರು ಇವರನ್ನು ನೋಡಿ ನಗುವ ವೀಡಿಯೋ ಕೂಡ ವೈರಲ್ ಆಗುತ್ತಿದೆ.
John Cena presenting the award for Best Costume Design at the #Oscars. pic.twitter.com/4LCifHXp0y
— Pop Base (@PopBase) March 11, 2024
ಓಪನ್ ಹೈಮರ್‌ಗೆ ಅತಿ ಹೆಚ್ಚಿ ಪ್ರಶಸ್ತಿ
ಈ ಬಾರಿ ಒಂದು ಸಿನಿಮಾ 7 ಪ್ರಶಸ್ತಿ ಬಾಚಿಕೊಂಡು, ಅಚ್ಚರಿಯನ್ನು ಉಂಟು ಮಾಡಿದೆ. ಪ್ರಸಿದ್ಧ ನಿರ್ದೇಶಕ ಕ್ರಿಸ್ಟಫರ್ ನೋಲನ್ ಅವರ ನಿರ್ದೇಶಿಸಿದ ಓಪನ್‌ಹೈಮರ್ ಚಿತ್ರವು ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ ಸೇರಿದಂತೆ ಒಟ್ಟು 7 ಪ್ರಶಸ್ತಿ ಪಡೆದಿದೆ.



Click it and Unblock the Notifications
