Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಚಿತ್ರದಲ್ಲಿ ನಿಮಗೆ ಕಂಡಿದ್ದೇನು? ನಿಮ್ಮ ಗುಣಗಳ ವಿವರಿಸುತ್ತೆ ಈ ಚಿತ್ರ..!
ಸಾಮಾಜಿಕ ಜಾಲತಾಣದಲ್ಲಿ ನಾವು ದಿನದ ಎಷ್ಟು ಹೊತ್ತು ಆಕ್ಟೀವ್ ಆಗಿರುತ್ತೇವೆಯೋ ಅಷ್ಟು ಹೊತ್ತು ಒಂದಲ್ಲಾ ಒಂದು ರೀತಿಯ ವಿಶೇಷತೆಗಳ ನೋಡುತ್ತಿರುತ್ತೇವೆ. ಅದ್ರಲ್ಲೂ ಕೆಲವೊಂದು ಫೋಟೋಗಳು, ಚಿತ್ರಗಳು ನಮ್ಮ ಬುದ್ದಿಶಕ್ತಿಗೆ ಕೆಲಸ ಕೊಡುತ್ತವೆ. ಆಪ್ಟಿಕಲ್ ಇಲ್ಯೂಷನ್‌ನ ಹತ್ತು ಹಲವು ಫೋಟೋಗಳನ್ನು ನಾವು ನೋಡಬಹುದು.
ಹಾಗೆ ಹಲವು ಇಂಟರೆಂಸ್ಟಿಂಗ್ ಎನಿಸುವಂತಹ ಫೋಟೋಗಳನ್ನು ಕೂಡ ನಾವು ನೋಡಬಹುದು. ಹಾಗೆ ಇಲ್ಲೊಂದು ಫೋಟೋ ಕೂಡ ಆಪ್ಟಿಕಲ್ ಇಲ್ಯೂಷನ್‌ನಿಂದ ಕೂಡಿದ್ದು, ನೋಡುಗರಲ್ಲಿ ಹಲವು ರೀತಿಯ ಮಜಲುಗಳಂತೆ ಕಾಣಿಸುತ್ತಿದೆ. ನೀವು ಈ ರೀತಿಯ ಫೋಟೋಗಳ ನೋಡಿದಾಗ ಒಂದೊಂದು ಬಾರಿಗೆ ಒಂದೊಂದು ರೀತಿಯ ರಚನೆಗಳು ಕಾಣಬಹುದು. ಇದು ನಿಮ್ಮ ವ್ಯಕ್ತಿತ್ವವನ್ನು ವಿವರಿಸುವ ಒಂದು ವಾಹಕಗಳಂತೆ ಕಾರ್ಯನಿರ್ವಹಿಸುತ್ತವೆ.

ನೀವು ನೋಡಿದ ಚಿತ್ರದಲ್ಲಿ ಮೊದಲು ನಿಮಗೆ ಯಾವ ಚಿತ್ರ ಕಾಣಿಸಿದೆ ಎಂಬುದರ ಮೇಲೆ ನಿಮ್ಮ ಗುಣಗಳನ್ನು ನಿರ್ಧರಿಸಬಹುದಂತೆ. ಆದರಲ್ಲಿ ನೀವು ಯಾವ ರೀತಿಯ ಗುಣಗಳನ್ನು ಹೊಂದಿದ್ದೀರಿ ಎಂಬುದನ್ನು ಕೂಡ ಲೆಕ್ಕ ಹಾಕಬಹುದು. ಈ ಮೇಲೆ ನೀಡಲಾಗಿರುವ ಫೋಟೋ ಸಹ ಇದನ್ನೇ ವಿವರಿಸುತ್ತದೆ. ನೀವು ಯಾವ ರೀತಯ ಗುಣಗಳನ್ನು ಹೊಂದಿದ್ದೀರಿ. ನೀವು ಈ ಫೋಟೋದಲ್ಲಿ ಮೊದಲು ಏನು ನೋಡಿದ್ದೀರಿ ಎಂಬುದನ್ನು ವಿವರಿಸಿಲಿದೆ.
ಈ ಚಿತ್ರವನ್ನು ಹತ್ತಿರದಿಂದ ನೋಡಿ ಮತ್ತು ನಿಮ್ಮ ಕಣ್ಣಿಗೆ ಬೀಳುವ ಮೊದಲ ವಿಷಯವು ನೀವು ಯಾವ ರೀತಿಯ ಗುಣ ಹೊಂದಿದ್ದೀರಿ ಎಂಬುದನ್ನು ಬಹಿರಂಗಪಡಿಸುತ್ತದೆ.
ಡ್ರ್ಯಾಗನ್
ನೀವು ಈ ಫೋಟೋದಲ್ಲಿ ಮೊದಲು ಡ್ರ್ಯಾಗನ್ ಫೋಟೋವನ್ನು ನೋಡಿದರೆ ನೀವು ತೀವ್ರವಾದ ನಿಷ್ಠಾವಂತರಂತೆ. ನಿಮ್ಮಲ್ಲಿ ರಕ್ಷಣಾತ್ಮಕ ಸ್ವಭಾವ ಹೊಂದಿದ್ದೀರಿ. ಅಂದ್ರೆ ನೀವು ನಿಮ್ಮ ಸುತ್ತಲಿನ ಜನರನ್ನು ಕಾಪಾಡುವಂತಹ ಮನೋಭಾವದರವರು ಅವರು ಯಾವುದೇ ಕಷ್ಟದಲ್ಲಿದ್ದರೆ ನೀವು ಸಹಾಯಕ್ಕೆ ಮೊದಲು ಧಾವಿಸುತ್ತೀರಿ. ಈ ವೇಳೆ ನಿಮಗೆ ಯಾವುದೇ ಸಮಸ್ಯೆ ಬಂದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ಮೊದಲು ಅವರ ಸಮಸ್ಯೆ, ನೋವು, ಕಷ್ಟ ಆಲಿಸಲು ಮುಂದಾಗುತ್ತೀರಿ ಎಂದರ್ಥವಂತೆ. ನಿಮ್ಮಲ್ಲಿ ಬಲವಾದ ಜ್ಞಾನ ಹಾಗೂ ವಿಷಯಗಳ ಕುರಿತ ಆಳವಾದ ಅಭ್ಯಾಸ ನಿಮ್ಮಲ್ಲಿ ದೃಢ ಸಂಕಲ್ಪ, ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿರುತ್ತದೆ.
ಸೈನಿಕ
ನೀವೇನಾದರು ಈ ಚಿತ್ರದಲ್ಲಿ ಮೊದಲು ಸೈನಿಕನೊಬ್ಬನನ್ನು ಕಂಡರೆ ನಿಮ್ಮ ಗುಣಗಳು ನಿಮ್ಮ ವ್ಯಕ್ತಿತ್ವ ಬದಲಿಸುವಂತಹದ್ದಾಗಿರುತ್ತದೆ. ನೀವು ಎಂತಹ ಕಷ್ಟಗಳನ್ನಾದರು ಸಹಿಸಬಲ್ಲ. ಹಾಗೆ ಎಂತಹ ಪರಿಸ್ಥಿತಿಯನ್ನ ಸುಲಭವಾಗಿ ಪಾರು ಮಾಡಬಲ್ಲಂತಹ ಗುಣಗಳನ್ನು ಹೊಂದಿದ್ದೀರಿ ಎಂದರ್ಥ. ನೀವು ನಿಮ್ಮ ಅಭಿಪ್ರಾಯಗಳ ಹೇಳುವಾಗ ಹಿಂಜರಿಯುವುದಿಲ್ಲ. ಹಾಗೆ ಕುಟುಂಬ, ಸ್ನೇಹಿತರು ಎಂಬ ವಿಚಾರದಲ್ಲಿ ನೀವು ಯಾವಾಗಲು ಅವರ ಹಿತ ಕಾಪಾಡುತ್ತೀರಿ. ಯಾವಾಗಲು ಬೇರೆಯವರ ಸಂತೋಷ ಬಯಸುವ ಹಾಗೂ ಅವರಲ್ಲಿ ನೀವು ಖುಷಿಯನ್ನು ನೋಡುವಂತಹ ಗುಣ ಹೊಂದಿರುತ್ತೀರಿ.
ಟೋಪಿ ಹಾಕಿರುವ ಮಾನವ
ಈ ಚಿತ್ರದಲ್ಲಿ ನಿಮಗೆ ಟೋಪಿಯನ್ನು ಹಾಕಿರುವ ಮನುಷ್ಯನಂತಹ ಆಕೃತಿ ಮೊದಲು ಕಣ್ಣಿಗೆ ಬಿದ್ದರೆ ನೀವು ಹೆಚ್ಚು ಫ್ಯಾಂಟಸಿ ವರ್ಡ್ ಅನ್ನು ಇಷ್ಟಪಡುವರಾಗಿರುತ್ತೀರಿ. ಅಂದ್ರೆ ನೀವು ವಾಸ್ತವಕ್ಕಿಂತ ಬೇರೊಂದು ಪ್ರಪಂಚವನ್ನು ನೋಡಲು ಇಷ್ಟಪಡುತ್ತೀರಿ. ನೀವು ತುಂಬಾನೆ ಹಾಸ್ಯ ಪ್ರಿಯರು. ಹಾಗೆ ಎಲ್ಲವನ್ನು ನಿಮ್ಮ ಜಬಾವ್ದಾರಿಯಲ್ಲಿ ತೆಗೆದುಕೊಳ್ಳಲು ಇಷ್ಟಪಡುವವರು. ನಿಮ್ಮ ಉದ್ದೇಶ ಯಾರನ್ನು ನೋವಿಸುವುದು, ಕಷ್ಟ ತರುವುದು ಆಗಿರುವುದೇ ಇಲ್ಲ. ನೀವು ಹೆಚ್ಚು ಯಾರೊಂದಿಗೂ ಬೆರೆಯದೆ ಒಬ್ಬರೆ ಇರಲು ಇಷ್ಟಪಡುವ ಮಂದಿ. ಯಾರು ಕೂಡ ನಿಮ್ಮನ್ನು ಸುಲಭವಾಗಿ ಮಾನಸಿಕವಾಗಿ ಕುಗ್ಗಿಸಲು ಸಾಧ್ಯವಾಗುವುದಿಲ್ಲ. ಹಾಗೆ ನಿಮ್ಮಲ್ಲಿ ಹೆಚ್ಚು ಇಚ್ಛಾಶಕ್ತಿ ಇರುವ ಕಾರಣ ಯಾವುದೇ ಕೆಲಸವಾದರು ಅದನ್ನೂ ಮಾಡಿಯೇ ಮಾಡುತ್ತೇನೆ ಎಂಬ ನಿರ್ಧಾರ ನಿಮ್ಮಲ್ಲಿರುತ್ತದೆ. ಕಷ್ಟವಿದ್ದರೂ ಎಲ್ಲಿಯೂ ತೋರಿಸಿಕೊಳ್ಳದೆ ನಿಮ್ಮ ದಾರಿಯಲ್ಲಿ ನೀವು ನಡೆಯುವವರು.



Click it and Unblock the Notifications


