Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
Optical Illusion: ಈ ಚಿತ್ರದಲ್ಲಿ ನೀವು ಮೊದಲು ಏನು ನೋಡಿದ್ದೀರಿ? ನಿಮ್ಮ ವ್ಯಕ್ತಿತ್ವ ಎಂತದ್ದು?
ನಮ್ಮ ವ್ಯಕ್ತಿತ್ವ ಅಳೆಯುವ ಹಲವು ರೀತಿಯ ಸಾಧನಗಳಲ್ಲಿ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಕೂಡ ಒಂದಾಗಿವೆ. ಆನ್‌ಲೈನ್‌ನಲ್ಲಿ ಹರಿದಾಡುವ ಹತ್ತಾರು ಚಿತ್ರಗಳು ನಮ್ಮ ವ್ಯಕ್ತಿತ್ವ ಬಹಿರಂಗಪಡಿಸುವಂತಹ ಚಿತ್ರಗಳಾಗಿರುತ್ತವೆ. ನಾವು ಆ ಚಿತ್ರವನ್ನು ಯಾವ ರೀತಿ ಗ್ರಹಿಸುತ್ತೇವೆ ಎಂಬುವುದರ ಮೇಲೆ ನಮ್ಮ ವ್ಯಕ್ತಿ ಚಿತ್ರಣ ನೋಡಬಹುದು. ಇಂತಹ ಹಲವು ಚಿತ್ರಗಳಲ್ಲಿ ಅಡಗಿರುವ ನಮ್ಮ ವ್ಯಕ್ತಿತ್ವ ಎಂತಹದ್ದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈಗ ಇಲ್ಲೊಂದು ಚಿತ್ರವೂ ಕೂಡ ನಿಮ್ಮ ವ್ಯಕ್ತತ್ವ ತೆರೆದಿಡುವ ಕೆಲಸ ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಚಿತ್ರವು ನಿಮ್ಮ ವ್ಯಕ್ತಿತ್ವ ಎಂತಹದ್ದು ಎಂಬುದನ್ನು ವಿವರಿಸುತ್ತದೆ. ಹಾಗಾದ್ರೆ ಈ ಕೆಳಗಿನ ಚಿತ್ರದಿಂದ ನಿಮ್ಮ ವ್ಯಕ್ತಿತ್ವ ಹೇಗೆ ವಿವರಿಸಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಈ ಮೇಲಿನ ಚಿತ್ರದಲ್ಲಿ ನೀವು ಮೊದಲು ಏನನ್ನು ನೋಡಿದ್ದೀರಿ ಎಂಬುದನ್ನು ಹೇಳಿ. ಈ ಚಿತ್ರದಲ್ಲಿ ನಿಮಗೆ ಒಂದೊಂದು ರೀತಿ ಪ್ರಾಣಿ ಅಥವಾ ಪಕ್ಷಿ ಕಾಣಿಸಿರಬಹುದು. ಆದ್ರೆ ಮೊದಲು ನೀವು ನೋಡಿದಾಗ ಏನು ಕಂಡಿದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಅದರಿಂದ ನಿಮ್ಮ ವ್ಯಕ್ತಿತ್ವ ಎಂತಹದ್ದು ಎಂಬುದನ್ನು ನಾವಿಂದು ಹೇಳಲಿದ್ದೇವೆ.
ಈ ಚಿತ್ರದಲ್ಲಿ ನೀವು ಮೊದಲು ಪಕ್ಷಿಯನ್ನು ಗಮಿಸಿದ್ದರೆ ಇದು ಹದ್ದಿನಂತೆ ನಿಮಗೆ ಕಾಣಿಸಿರಬಹುದು. ಒಂದು ವೇಳೆ ನೀವು ಹದ್ದನ್ನು ನೋಡಿದ್ದರೆ ನಿಮ್ಮ ದುರ್ಬಲತೆಯನ್ನು ತೋರಿಸಲಿದೆಯಂತೆ. ನೀವು ಬೇರೆಯವರೊಂದಿಗೆ ಬೆರೆಯಲು ಹೆಚ್ಚು ಭಯ ಪಡುವವರು. ಹಾಗೆ ಹೊಸ ವ್ಯಕ್ತಿ, ಹೊಸ ಸ್ಥಳದಲ್ಲಿ ಮುಕ್ತವಾಗಿ ಮಾತನಾಡಲು ಹಿಂದೇಟು ಹಾಕುವವರು. ನೀವು ಬೇರೆಯವರ ನಂಬುವುದು ನಿಮಗೆ ಭಯ ಪಡಿಸಬಹುದು. ಹಾಗೆ ನೀವು ಸಂಬಂಧಗಳಿಗೆ ಹೆಚ್ಚು ಮನ್ನಣೆ ನೀಡುವವರು. ಯಾವಾಗಲು ಹೆಚ್ಚು ಸಮಯ ಮನೆಯಿಂದ ಹೊರಗೆ ಕಳೆಯುವವರು. ಪರಿಶ್ರಮ ಹಾಕಿ ಕೆಲಸ ಮಾಡುವವರು. ಬೇರೆಯವರ ಕುರಿತು ಹೆಚ್ಚು ಯೋಚಿಸದೆ ನಿಮ್ಮ ಪಾಡಿನ ಕೆಲಸ ಮಾಡುವವರು. ಭವಿಷ್ಯದ ಚಿಂತೆಯಲ್ಲಿ ಇಂದಿನ ಆನಂದ ಕಳೆದುಕೊಳ್ಳಲು ಕೂಡ ನೀವು ಹಿಂಜರಿಯುವುದಿಲ್ಲ ಎಂಬ ವ್ಯಕ್ತಿತ್ವವನ್ನು ಇದು ಮುಂದಿಡುತ್ತದೆ.
ಹಾಗೆ ನೀವು ಈ ಚಿತ್ರದಲ್ಲಿ ಮೊದಲು ಮೊಲವನ್ನು ಗುರುತಿಸಿದ್ದೀರಾ?
ನೀವೇನಾದರು ಈ ಚಿತ್ರದಲ್ಲಿ ಮೊದಲು ಬಿಳಿ ಬಣ್ಣದ ಮೊದವನ್ನು ನೋಡಿದರೆ ನೀವು ಯಾವಾಗಲು ರಕ್ಷಣೆಯ ಬಯಸಿ ಬಹಳ ಜಾಗರುಕತೆಯಿಂದ ಕೆಲಸ ಮಾಡುವವರು. ಸಂಬಂಧಗಳನ್ನು ಅಮೂಲ್ಯ ಎಂದು ತಿಳಿದವರು. ನೀವು ತೃಪ್ತಿಕರ ಜೀವನಕ್ಕಾಗಿ ಆಕಾಂಕ್ಷೆಗಳನ್ನು ಹೊಂದಿದ್ದೀರಿ. ಹೊನಕೆಲಸಗಳ ಮಾಡಲು ನೀವು ಯಾವಾಗಲು ಉತ್ಸುಕರಾಗಿರುತ್ತೀರಿ. ನೀವು ನಿಮ್ಮೊಳಗಿನ ಸಂಘರ್ಷದ ವಿರುದ್ಧ ಹೋರಾಡುತ್ತೀರಿ, ನಿಮ್ಮ ಸುತ್ತಲಿನ ಜನರು ಖುಷಿಯಿಂದ ಇರಬೇಕು ಎಂಬ ಮನೋಭಾವ ನಿಮ್ಮದಾಗಿರಲಿದೆ. ನಿಮ್ಮ ಆತ್ಮ ವಿಶ್ವಾಸವೇ ನಿಮ್ಮ ಗೆಲುವಿಗೆ ಕಾರಣವಾಗಿರುತ್ತದೆ. ದೊಡ್ಡ ದೊಡ್ಡ ಸವಾಲುಗಳನ್ನು ಕೂಡ ಏಕಾಂಗಿಯಾಗಿ ಬಗೆಹರಿಸುವ ಪ್ರಯತ್ನದಲ್ಲಿ ನೀವು ನೋವು ಅನುಭವಿಸುತ್ತೀರಿ, ಆದರೂ ಅದನ್ನು ನಿಮ್ಮೊಳಗೆ ಇಟ್ಟುಕೊಳ್ಳುವಂತಹ ಮನೋಭಾವದವರು.



Click it and Unblock the Notifications