Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
Optical Illusion: 5 ಸೆಕೆಂಡ್‌ನಲ್ಲಿ ನಿಮಗೆ ಬೆಕ್ಕು ಹುಡುಕಲು ಸಾಧ್ಯವೇ..?
ಆನ್‌ಲೈನ್‌ನಲ್ಲಿ ನಾವಿಂದು ಹಲವು ರೀತಿಯ ಆಪ್ಟಿಕಲ್ ಇಲ್ಯೂಷನ್ ಹಾಗೂ ಬ್ರೈನ್ ಟೀಸರ್‌ಗೆ ಸಂಬಂಧಿಸಿದ ಹತ್ತು ಹಲವು ಚಿತ್ರಗಳ ನೋಡುತ್ತಲೇ ಇರುತ್ತೇವೆ. ಹಾಗೆ ಕೆಲವೊಂದು ಚಿತ್ರಗಳು ನಮ್ಮ ಬುದ್ದಿಶಕ್ತಿಯನ್ನು ಹೆಚ್ಚಿಸುತ್ತವೆ. ಹಾಗೆ ಕೆಲವೊಂದು ನಮ್ಮ ಮೆದುಳಿಗೆ ಕೆಲಸ ನೀಡುತ್ತವೆ. ಅಂತಹ ಕೆಲವು ಚಿತ್ರಗಳು ನಾವು ಕೂಡ ಆನ್‌ಲೈನ್‌ನಲ್ಲಿ ನೋಡುತ್ತಲೇ ಇರುತ್ತೇವೆ.
ಇಂತಹ ಬ್ರೈನ್ ಟೀಸರ್ ಚಿತ್ರಗಳು ಹಾಗೂ ಕಣ್ಣಿಗೆ ಮೋಸ ಮಾಡುವಂತಹ ಹಲವು ಚಿತ್ರಗಳು ನಮ್ಮ ಮದುಳಿಗೆ ಕೆಲಸ ನೀಡುತ್ತವೆ. ನಮ್ಮನ್ನು ಯೋಚಿಸುವಂತೆ ಮಾಡುವ ಜೊತೆಗೆ ಬುದ್ದಿ ಚುರುಕಾಗುವಂತೆ ಮಾಡುತ್ತವೆ. ನಾವಿಂದು ಇಂತಹದ್ದೆ ಒಂದು ಅಪರೂಪದ ಹಾಗೂ ವಿಚಿತ್ರ ರೀತಿಯ ಸವಾಲೊಂದನ್ನು ನೀಡಲಿದ್ದೇವೆ.

ಈ ಮೇಲಿನ ಚಿತ್ರದಲ್ಲಿ ಗೂಬೆಗಳ ಹಿಂಡನ್ನು ನೀವು ನೋಡಬಹುದು. ಹಾಗೆ ಅವುಗಳು ಒಂದಕ್ಕೆ ಒಂದು ಅಂಟಿಕೊಂಡಂತೆ ಇವೆ. ಕೇವಲ ಗೂಬೆಗಳ ತಲೆ ಮಾತ್ರ ಕಾಣಿಸುತ್ತಿದೆ. ಅಲ್ಲಿ ಗೂಬೆಗಳ ಕಣ್ಣು ಹಾಗೂ ಬಾಯಿ ಕಾಣಿಸುತ್ತಿದೆ. ಕೆಲವು ಗೂಬೆಗಳು ಬಾಯಿ ತೆರೆದಿದ್ದರೆ ಮತ್ತೆ ಕೆಲವು ಮುಚ್ಚಿವೆ ಆದ್ರೆ ಈ ಚಿತ್ರದಲ್ಲಿ ನಮಗೆ ಬೆಕ್ಕೊಂದನ್ನು ಹುಡುಕುವ ಸವಾಲು ಹಾಕಲಾಗಿದೆ.
ಹೌದು ನೀವೇನಾದರು ಬೆಕ್ಕಿನ ಪ್ರಿಯರಾಗಿದ್ದರೆ ಕೇವಲ 5 ಸೆಕೆಂಡ್ ಒಳಗೆ ಈ ಚಿತ್ರದಲ್ಲಿರುವ ಬೆಕ್ಕನ್ನು ಪತ್ತೆ ಮಾಡುವಂತೆ ಸವಾಲು ಹಾಕಲಾಗಿದೆ. ಈ ಸವಾಲು ಸ್ವೀಕರಿಸಿದ ಹಲವರು 5 ಸೆಕೆಂಡ್ ಅಲ್ಲ ಬದಲಿಗೆ 5 ನಿಮಿಷ ಆದರೂ ಬೆಕ್ಕನ್ನು ಹುಡುಕುವಲ್ಲಿ ಸೋಲುತ್ತಿದ್ದಾರೆ. ನೀವು ಕೂಡ ಪ್ರಯತ್ನಿಸಿ ನೋಡಿ. ನಿಮ್ಮ ಕಣ್ಣಿಗೆ ಇದರಲ್ಲಿ ಬೆಕ್ಕು ಎಲ್ಲಿದೆ ಎಂಬುದು ಕಾಣಿಸಬಹುದು.
ಈ ಸಾಲು ಸಾಲು ಗೂಬೆಗಳ ನಡುವೆ ಒಂದು ಬೆಕ್ಕು ಎಲ್ಲರ ಕಣ್ಣಿಗೂ ಮೋಸ ಮಾಡುವಂತೆ ಅಡಗಿ ಕುಳಿತಿದೆ. ನೀವು ಎಷ್ಟೇ ಗಮನಿಸಿದರು ಕೂಡ ಬೆಕ್ಕು ಕಾಣಿಸುವುದಿಲ್ಲ. ನಿಮ್ಮ ದೃಷ್ಟಿ ಅತ್ಯಂತ ಪ್ರಬಲವಾಗಿದ್ದರೆ ಬೆಕ್ಕನ್ನು ಥಟ್ ಎಂದು ಹುಡುಕಬಹುದು. ಇಲ್ಲದಿದ್ದರೆ ಬೆಕ್ಕನ್ನು ಹುಡುಕಲು ಸಾಧ್ಯವೇ ಇಲ್ಲ. ಇದೇ ಕಾರಣಕ್ಕೆ ಈ ಫೋಟೋ ನೋಡಿದ ಮಂದಿ ತಲೆಕೆಡಿಸಿಕೊಂಡಿದ್ದಾರೆ.

ಕೆಲವರಂತು ಈ ಚಿತ್ರದಲ್ಲಿ ಬೆಕ್ಕು ಇಲ್ಲವೇ ಇಲ್ಲ ಎನ್ನುತ್ತಿದ್ದಾರೆ. ಆದ್ರೆ ಚಿತ್ರದಲ್ಲಿರುವ ಬೆಕ್ಕು ಎಲ್ಲರ ಕಣ್ಣಿಗೂ ಮೋಸ ಮಾಡಿದೆ. ನೀವು ಕೂಡ ಈ ಚಿತ್ರದಲ್ಲಿ ಬೆಕ್ಕು ಹುಡುಕುವಲ್ಲಿ ಸೋತಿದ್ದರೆ ಸರಿಯಾದ ಉತ್ತರ ನಾವು ಹೇಳುತ್ತಿದ್ದೇವೆ ನೋಡಿ. ಈ ಕೆಳಗಿನ ಚಿತ್ರದಲ್ಲಿ ಬೆಕ್ಕು ಇರುವ ಕಡೆಗೆ ಮಾರ್ಕ್ ಮಾಡಲಾಗಿದೆ. ಬೆಕ್ಕು ಕೂಡ ಗೂಬೆಗಳಂತೆ ಬಣ್ಣ ಹೊಂದಿದ್ದು, ಅವುಗಳಂತೆ ಬಾಯಿ ತೆರೆದಿದೆ.
ಬೆಕ್ಕು ಕೂಡ ಈ ಗೂಬೆಗಳ ನಡುವೆ ಕಳೆದು ಹೋಗಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಬೆಕ್ಕಿನ ಎರಡು ಕಿವಿಗಳನ್ನು ನಾವು ನೋಡಬಹುದು, ಹಾಗೆ ಗೂಬೆಗಳಂತೆ ಕೊಕ್ಕು ಕೂಡ ಇಲ್ಲದಿರುವುದನ್ನು ನೋಡಬಹುದು. ಆದ್ರೆ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಬೆಕ್ಕು ಇರುವುದು ನೋಡಬಹುದು. ಯಾರಾದರು 5 ಸೆಕೆಂಡ್ ಒಳಗೆ ಬೆಕ್ಕು ಇರುವುದನ್ನು ಗುರುತಿಸಿದರೆ ಅವರು ನಿಜವಾಗಲು ಬೆಕ್ಕು ಪ್ರಿಯರು ಇರಬಹುದು.



Click it and Unblock the Notifications
