Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
100 ವರ್ಷ ಹಳೆಯ ವೈನ್ ತೆಗೆಯುತ್ತಿರುವ ವೀಡಿಯೋ : ವೈನ್ ಪ್ರಿಯರ ಮೋಡಿ ಮಾಡಿದೆ ಈ ವೀಡಿಯೋ
ಅಂದ ಹಾಗೆ ನೀವು ಎಷ್ಟು ವರ್ಷ ಹಳೆಯ ವೈನ್ ಟೇಸ್ಟ್ ಮಾಡಿದ್ದೀರಿ? ಈ ಪ್ರಶ್ನೆ ವೈನ್ ಪ್ರಿಯರಿಗೆ ಮಾತ್ರ... ಹಳೆಯ ವೈನ್ ತುಂಬಾ ಗುಣಮಟ್ಟದದ್ದು ಎಂದು ಕೇಳಿರಬಹುದು, ಅಲ್ಲದೆ ಹಳೆಯ ವೈನ್‌ಗೆ ಬೆಲೆ ಕೂಡ ಅಧಿಕವೇ, 10 ವರ್ಷ 20 ವರ್ಷದ ಹಳೆಯ ವೈನ್‌ಗಳು ದೊರೆಯುತ್ತದೆ.
ಆದರೆ 100 ವರ್ಷ ಹಳೆಯ ವೈನ್ ಅನ್ನು ಓಪನ್ ಮಾಡುವ ದೃಶ್ಯ ವೈರಲ್ ಆಗುತ್ತಿದ್ದು ಅದನ್ನು ನೋಡಿದ ವೈನ್ ಪ್ರಿಯರೂ ನಮಗೂ ಒಂದು ತೊಟ್ಟು ಸಿಗುವಂತಿದ್ದರೆ ಎಂದು ಅಂದುಕೊಳ್ಳುತ್ತಿದ್ದಾರೆ, ಈ ಶತಕದ ವೈನ್ ವೀಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ಪಾಪ ಇದನ್ನು ಮಾಡಿದವರು ಇದನ್ನು ಟೇಸ್ಟ್ ನೋಡಲು ಖಂಡಿತ ಇರಲ್ಲ, ಆದರೂ ನೂರು ವರ್ಷದ ವೈನ್ ಅನ್ನು ಈಗಿನವರಿಗೆ ಸವಿಯುವ ಭಾಗ್ಯ ಕಲ್ಪಿಸಿದ್ದಾರೆ, ಈ ವೈನ್ ಅನ್ನು ಹಳೆಯ ವಿಧಾನದಲ್ಲಿಯೇ ತಯಾರಿಸಲಾಗಿದೆ, ಮಡಿಕೆಯಲ್ಲಿ ಈ ವೈನ್ ಅನ್ನು ತಯಾರಿಸಿದ್ದು ಗಾಳಿಯಾಡದಂತೆ ಎಲೆಗಳಿಂದ ಆ ಮಡಿಕೆಯ ಬಾಯಿ ಮುಚ್ಚಲಾಗಿದೆ, ವೈನ್ ಮಾಡಲು , ಅದರೊಳಗೆ ಒಂದಿಷ್ಟೂ ಗಾಳಿ ಹೋಗದಿರಲು ಆಗಿನವರು ಬಳಸಿದ ವಿಧಾನ ಮಾತ್ರ ಅದ್ಭುತವಾಗಿದೆ.
ವೈನ್‌ಗೆ ವರ್ಷ ಕಳೆದಷ್ಟೂ ಬೇಡಿಕೆ ಜಾಸ್ತಿ
ಹಳೆಯ ವೈನ್ ಹೊಸ ಬಾಟಲಿಯಲ್ಲಿ ಅಂತಾರೆ ಅಲ್ವಾ, ಹಳೆಯ ವೈನ್ ಎಷ್ಟೇ ವರ್ಷವಾಗಲಿ ಅದರ ಡಿಮ್ಯಾಂಡ್ ಹೆಚ್ಚುತ್ತೇ ಹೊರತು ಕಡಿಮೆಯಾಗುವುದು. ಇಂಥ ವೈನ್ ಸಿಗುವುದು ಅಪರೂಪ, ಸಿಕ್ಕರೆ ಅದರ ರೇಟ್ ಕೂಡ ಅಷ್ಟೇ ದುಬಾರಿಯಾಗಿರುತ್ತದೆ.
ಇನ್ನು ಪ್ರಪಂಚದಲ್ಲಿರುವ ಹಳೆಯ ವೈನ್‌ಗಳ ಬಗ್ಗೆ ಹೇಳುವುದಾದರೆ
ಸ್ಪೈಯರ್ ವೈನ್ ಬಾಟಲ್ ಇದು ಕ್ರಿ.ಶ 325-350 ಇಸವಿಯಲ್ಲಿ ತಯಾರಿಸಿದ್ದು ಎಂದು ಹೇಳಲಾಗುತ್ತಿದೆ. ಅಂದರೆ 1700ಕ್ಕೂ ಅಧಿಕ ವರ್ಷ ಹಳೆಯ ವೈನ್.
Domaine de la Romanée-Conti Grand Cru 1945 ವೈನ್ ಇದರ ಬೆಲೆ $558,000 ಅಂದರೆ 46 376 466.42 6 ರುಪಾಯಿ.
ಸ್ಕ್ರೀಮಿಂಗ್ ಈಗಲ್ ಕ್ಯಾಬರ್‌ನೆಟ್ ಸುವಿಗ್ನಾನ್ 1992 ಇದರ ಬೆಲೆ $500,000
ಚಾಟೌ ಮೌಟನ್-ರಾಥ್‌ಸ್‌ಚೈಲ್ಡ್‌ನ ಜೆರೋಬೋಮ್ 1945 - ಬೆಲೆ: $310,700
ಚೆವಲ್ ಬ್ಲಾಂಕ್ 1947 ಬೆಲೆ $304,375
ಹೀಗೆ ತುಂಬಾ ದುಬಾರಿಯಾದ ವೈನ್‌ಗಳು ಈ ಪ್ರಪಂಚದಲ್ಲಿದೆ.



Click it and Unblock the Notifications