Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬುದ್ಧಿವಂತರಿಗೆ ಮಾತ್ರ: ಈ ಚಿತ್ರದಲ್ಲಿರುವ ತಪ್ಪನ್ನು ಗುರುತಿಸಬಲ್ಲಿರಾ?
ಆನ್‌ಲೈನ್‌ನಲ್ಲಿ ಸಾಕಷ್ಟು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ನಮ್ಮ ಮೆದುಳಿಗೆ ಕೆಲಸ ಕೊಡುತ್ತವೆ. ಕೆಲವಂತು ನಮ್ಮ ಬುದ್ಧಿವಂತಿಗೆ ಸವಾಲು ಹಾಕುತ್ತವೆ. ಆಪ್ಟಿಕಲ್ ಇಲ್ಯೂಷನ್ ಒಂದು ಉತ್ತಮ ಮಿದುಳಿನ ವ್ಯಾಯಾಮವಾಗಿದ್ದು ಅದು ನಿಮ್ಮ ಮೆದುಳನ್ನು ಆರೋಗ್ಯಕರವಾಗಿಡಲು ಬಹಳ ಸಹಾಯಕವಾಗಿದೆ.
ಆಪ್ಟಿಕಲ್ ಇಲ್ಯೂಷನ್ ಒಂದು ಉತ್ತಮ ಮಿದುಳಿನ ವ್ಯಾಯಾಮ, ಹೀಗೆ ನಿಮ್ಮ ಬುದ್ಧಿ ಚುರುಕಾಗಬೇಕು, ದೃಷ್ಟಿ ಸಹ ಉತ್ತಮ ಆಗಬೇಕು ಅಂದ್ರೆ ಪತ್ರಿಕೆಗಳಲ್ಲಿನ ಪದಬಂಧ, ಸುಡುಕು, ಆಪ್ಟಿಕಲ್ ಇಲ್ಯೂಷನ್ ಚಿತ್ರಗಳ ಸಮಸ್ಯೆ ಬಗೆಹರಿಸಲು ಮುಂದಾಗಬೇಕಂತೆ. ನಮಗೆ ದೈಹಿಕ ವ್ಯಾಯಾಮಗಳು ಆರೋಗ್ಯಕ್ಕೆ ಎಷ್ಟು ಮುಖ್ಯವೋ ಮೆದುಳಿಗೂ ಸಹ ವ್ಯಾಯಾಮ ಅಷ್ಟೇ ಮುಖ್ಯವಾಗಿರುತ್ತದೆ.

ಹಾಗಾದ್ರೆ ಇಲ್ಲೊಂದು ಚಿತ್ರವು ನಿಮ್ಮ ಮೆದುಳಿಗೆ ಕೆಲಸ ಕೊಡಲಿದೆ. ನೀವು ಬುದ್ದಿವಂತರಾಗಿದ್ದರೆ 3 ಸೆಕೆಂಡ್‌ನಲ್ಲಿ ಈ ಚಿತ್ರದಲ್ಲಿರುವ ತಪ್ಪನ್ನು ಹುಡುಕಿ ಎಂದು ಒಂದು ಸಲಾಲು ಹಾಕುವ ಚಿತ್ರ ಹರಿದಾಡುತ್ತಿದೆ. ಈ ಮೇಲಿನ ಚಿತ್ರದಲ್ಲಿ ಒಂದು ತಪ್ಪು ಅಡಗಿದೆ ಅದು ಬುದ್ದಿವಂತರಿಗೆ ಮಾತ್ರ 3 ಸೆಕೆಂಡ್‌ನಲ್ಲಿ ಹುಡುಕಲು ಸಾಧ್ಯ ಎಂಬ ಬರಹದಡಿ ಹರಿಬಿಡಲಾಗಿದೆ.
ಈ ಪೋಟೋ ನೋಡಿದವರು ತಮ್ಮ ಮೆದುಳಿಗೆ ಕೆಲಸ ಕೊಟ್ಟಿದ್ದಾರೆ. ಅದರಲ್ಲಿರುವ ಒಂದು ತಪ್ಪನ್ನು ಹುಡುಕಲು ಯತ್ನಿಸಿದ್ದಾರೆ. ನೀವು ಈ ಚಿತ್ರದಲ್ಲಿ ಏನು ತಪ್ಪಾಗಿದೆ ಅನ್ನೋದನ್ನು ಮೊಲದೇ ಕಂಡುಕೊಂಡಿದ್ದರೆ ನಾವು ಆ ತಪ್ಪನ್ನು ನಿಮ್ಮ ಮುಂದಿಡುವ ಅಗತ್ಯವೇ ಇಲ್ಲ. ಆದರೆ ಕೆಲವರಿಗೆ ಇದರಲ್ಲಿ ಅಡಗಿರುವ ತಪ್ಪನ್ನು ಹುಡುಕಲು ಸಾಧ್ಯವಾಗದೇ ಇರಬಹುದು.
ಚಿತ್ರವು ವಿಲಕ್ಷಣವಾದ ಹಳ್ಳಿಯ ದೃಶ್ಯದಂತೆ ಕಾಣಿಸುತ್ತಿದೆ. ಒಬ್ಬ ವ್ಯಕ್ತಿ ಸೂಟು ಬೂಟು ಹಾಕಿಕೊಂಡು ಸಣ್ಣದೊಂದು ಸೇತುವೆ ದಾಟುತ್ತಿರುವುದು ನೀವು ನೋಡಬಹುದು. ಆತನ ಬಳಿಕ ಒಂದು ಸ್ಟಿಕ್, ಕ್ಯಾಪ್ ಇದೆ. ಜೊತೆಗೆ ಬಾಯಲ್ಲಿ ಸಿಗಾರ್ ಇಟ್ಟುಕೊಂಡಿದ್ದಾನೆ. ನಾವು ಚಿತ್ರ ನೋಡುವಾಗ ಸಾಮಾನ್ಯವಾಗಿ ಆತನ ಮೇಲೆ ದೃಷ್ಟಿ ಹರಿಯುತ್ತದೆ. ಆದರೆ ಆತನಲ್ಲಿ ತಪ್ಪು ಹುಡುಕೋದು ಸಮಯ ವ್ಯರ್ಥ ಮಾಡಿದಂತೆ.
ಹಾಗಾದ್ರೆ ಈ ಚಿತ್ರದಲ್ಲಿರುವ ತಪ್ಪೇನು?
ಬಹಳಷ್ಟು ಮಂದಿ ಈ ಚಿತ್ರವನ್ನು ಐದಾರು ಬಾರಿ ನೋಡಿದರೆ ಅವರಿಗೆ ತಪ್ಪು ಏನಿಗೆ ಎಂಬುದನ್ನು ಕಂಡು ಹಿಡಿಯಲು ಕಷ್ಟವಾಗಿರಬಹುದು. ಏಕೆಂದರೆ ಇದು ಬುದ್ದಿವಂತಿಕೆಗೆ ಸಂಬಂಧಿಸಿದ ಪ್ರಶ್ನೆಯಾಗಿದೆ. ಆದ್ರೆ ನೀವು ಗಮನವಿಟ್ಟು ಈ ಫೋಟೋವನ್ನು ನೋಡಿದರೆ ನಿಮಗೆ ಅದರಲ್ಲಿರುವ ತಪ್ಪು ಕಾಣಿಸಲಿದೆ. ಅದೇನೆಂದರೆ ಈ ಸೇತುವೆಯ ಒಂದು ಕಡೆಯಿಂದ ನೀರು ಹರಿಯುತ್ತಿದೆ. ಆದರೆ ಸೇತುವೆಯ ಇನ್ನೊಂದು ಬದಿಯಲ್ಲಿ ನಿಮಗೆ ನೀತು ಕಾಣಿಸುವುದೇ ಇಲ್ಲ. ಇದೇ ಈ ಚಿತ್ರದಲ್ಲಿರುವ ತಪ್ಪು. ಒಂದು ಕಡೆ ನೀರು ಹರಿಯುತ್ತಿದ್ದರೆ ಮತ್ತೊಂದು ಕಡೆಯು ನೀರು ಹರಿಯುವುದು ಕಾಣಬೇಕು. ಆದರೆ ಮತ್ತೊಂದು ಕಡೆ ಭೂಮಿ ಇದೆ. ಅಲ್ಲಿ ಯಾವುದೇ ನೀರು ಹರಿದು ಬರುವುದ ಕಾಣಿಸುವುದಿಲ್ಲ.
ಹೀಗಾಗಿ ಈ ಚಿತ್ರದಲ್ಲಿ ನೀರು ಹರಿಯುತ್ತಿರುವುದೇ ಏಕೈಕ ತಪ್ಪಿನ ಅಂಶವಾಗಿದೆ. ಕೆಲವರು ಈ ತಪ್ಪು ಹುಡುಕಿದ್ದರೆ ಬಹುತೇಕರಿಗೆ ಇದು ಸಾಧ್ಯವಾಗಿರುವುದಿಲ್ಲ. ಏಕೆಂದೆ ಅವರು ಚಿತ್ರದಲ್ಲಿರುವ ಪರಿಸರದ ಬದಲಾಗಿ ಅಲ್ಲಿರುವ ವ್ಯಕ್ತಿಯಲ್ಲಿ ಯಾವುದೋ ತಪ್ಪು ಅಡಗಿದೆ ಎಂದು ಹುಡುಕಲು ಯತ್ನಿಸಿರುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಬುದ್ಧಿವಂತರಿಗೆ ಮಾತ್ರ ಎಂಬಂತೆ ಹರಿದಾಡುತ್ತಿದ್ದು, ಹಲವರು ಇದರಲ್ಲಿ ಅಡಗಿರುವ ತಪ್ಪು ಹುಡುಗಿ ಅಚ್ಚರಿಯೂ ಪಟ್ಟಿದ್ದಾರೆ. ಏಕೆಂದರೆ ಇಷ್ಟೊಂದು ಸುಲಭದ ತಪ್ಪನ್ನು ಹುಡುಕಲು ನಾವು ಹೇಗೆ ವಿಫಲರಾಗುತ್ತೇವೆ ಎಂದು ತಮಗೆ ತಾವೇ ಪ್ರಶ್ನೆ ಮಾಡಿಕೊಂಡಿದ್ದಾರೆ.



Click it and Unblock the Notifications

