Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಭಾರತೀಯ ರೈಲಿನಲ್ಲಿ ಶೌಚಾಲಯ ಬಂದಿದ್ದು ಒಬ್ಬ ವ್ಯಕ್ತಿಯಿಂದ: ಚಂದ್ರಸೇನ್ ಕಥೆ ನಿಮಗೆ ಗೊತ್ತಾ?
ದೂರದ ಊರುಗಳಿಗೆ ಪ್ರಯಾಣ ಮಾಡುವವರು ರೈಲನ್ನು ಹೆಚ್ಚಾಗಿ ಬಳಸುವುದು ನೋಡಬಹುದು. ಅದರಲ್ಲೂ ಭಾರತೀಯ ರೈಲ್ವೆಯು ದೇಶದ ಮೂಲೆ ಮೂಲೆಗೂ ತನ್ನ ಸೇವೆ ನೀಡುತ್ತಿದೆ. ಇನ್ನು ಪ್ರತಿಯೊಂದು ಪ್ರಯಾಣವು ಸುಖಕರವಾಗಿರಲಿ ಎಂದು ರೈಲ್ವೆ ನಿಲ್ದಾಣಗಳು, ರೈಲುಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಈಗ ಹೈಸ್ಪೀಡ್ ರೈಲುಗಳು ಕೂಡ ಓಡಾಡುತ್ತಿವೆ.
ಆದರೆ ಕೆಲವು ರೈಲಿನಲ್ಲಿ ಈಗಲೂ ಸ್ವಚ್ಛತೆ ಕುರಿತ ಪ್ರಶ್ನೆ ಇದ್ದೇ ಇರುತ್ತೆ. ರೈಲಿನ ಶೌಚಾಲಯ ಸ್ವಚ್ಛವಾಗಿಲ್ಲ ಎಂದು ದೂರುಗಳು ಕೇಳಿರಬರುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಇನ್ನು ಈ ರೈಲುಗಳಲ್ಲಿ ಶೌಚಾಲಯ ಬಂದಿದ್ದು ಹೇಗೆ?, ಮೊದಲು ಶೌಚಾಲಯ ಅಳವಡಿಸಲು ಕಾರಣವಾದ ಘಟನೆ ಬಗ್ಗೆ ನಿಮಗೆ ಗೊತ್ತಾ?

ಹೌದು ಬ್ರಿಟೀಷರ ಕಾಲದಲ್ಲಿ ರೈಲುಗಳಲ್ಲಿ ಶೌಚಾಲಯ ಅಳವಡಿಕೆ ಮಾಡಲಾಗಿತ್ತು. ಆದ್ರೆ ಆ ಶೌಚಾಲಯ ಅಳವಡಿಕೆಯ ಹಿಂದೆ ಒಬ್ಬ ವ್ಯಕ್ತಿಯ ಕಥೆ ಇದೆ. ಆತನ ಕಾರಣದಿಂದಾಗಿ ಇಂದು ನಾವು ಎಲ್ಲಾ ರೈಲಿನಲ್ಲೂ ಶೌಚಾಲಯ ನೋಡುವಂತಾಗಿದೆ ಎಂದರೂ ತಪ್ಪಾಗುವುದಿಲ್ಲ. ಹಾಗಾದ್ರೆ ಏನಿದು ಕಥೆ? ರೈಲಿನಲ್ಲಿ ಶೌಚಾಲಯ ಅಳವಡಿಸಲು ಕಾರಣರಾಗಿದ್ದು ಯಾರು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
1853ರಲ್ಲಿ ಮೊದಲ ಬಾರಿ ರೈಲುಗಳ ಓಡಾಟ ಆರಂಭಗೊಂಡಿತ್ತು. ಆದ್ರೆ ಈ ಸಮಯದಲ್ಲಿ ಯಾವುದೇ ರೈಲಿನಲ್ಲಿ ಶೌಚಾಲಯಗಳು ಇರಲಿಲ್ಲ. ಹಾಗೆ ಈ ರೈಲು ಮಾರ್ಗ ಬಹಳ ದೂರದ ಮಾರ್ಗವಾಗಿರುತ್ತಿರಲಿಲ್ಲ. ಹೀಗಾಗಿಯೇ ರೈಲುಗಳಲ್ಲಿ ಶೌಚಾಲಯ ಅಳವಡಿಕೆಗೆ ಯಾವುದೇ ಯೋಜನೆಗಳಿರಲಿಲ್ಲ. ಆದ್ರೆ ಬರು ಬರುತ್ತಾ ಮಾರ್ಗಗಳು ದೊಡ್ಡವಾದವು ಗಂಟೆಗಳ ಕಾಲ ಪ್ರಯಾಣ ಮಾಡಬೇಕಿತ್ತು. ಹೀಗಾಗಿ 1909ರಲ್ಲಿ ಮೊಟ್ಟ ಮೊದಲ ಬರಿಗೆ ರೈಲಿನಲ್ಲಿ ಶೌಚಾಲಯ ಆರಂಭಗೊಂಡಿತ್ತು. ಆದ್ರೆ ಎಲ್ಲಾ ಭೋಗಿಗಳಲ್ಲೂ ಈ ವ್ಯವಸ್ಥೆ ಇರಲಿಲ್ಲ. ಶ್ರೀಮಂತ ಪ್ರಯಾಣಕ್ಕೆ ಮೀಸಲಿಟ್ಟ ಭೋಗಿಗಳಲ್ಲಿ ಮಾತ್ರವೇ ಶೌಚಾಲಯ ಇರುತ್ತಿತ್ತು.
ರೈಲಿನಲ್ಲಿ ಶೌಚಾಲಯ ಕಥೆ ಬದಲಾಗಿದ್ದು ಓಖಿಲ್ ಚಂದ್ರಸೇನ್ ಎಂಬಾತನಿಂದ
ಅದು 1909ರ ಸಮಯ ಬಂಗಾಳದ ಅಹ್ಮದ್ಪುರ ನಿಲ್ದಾಣದಲ್ಲಿ ಓಖಿಲ್ ಚಂದ್ರಸೇನ್ ಎಂಬ ವ್ಯಕ್ತಿ ಶೌಚಾಲಯ ಬಳಸಲೆಂದು ರೈಲಿನಿಂದ ಇಳಿದರು. ಏಕೆಂದರೆ ಅವರು ಪ್ರಯಾಣಿಸುತ್ತಿದ್ದ ಭೋಗಿಯಲ್ಲಿ ಈ ಸೌಲಭ್ಯ ಇರಲಿಲ್ಲ. ಹೀಗಾಗಿ ಆತ ತಂಬಿಕೆ ಹಿಡಿದು ಕೆಳಗೆ ಇಳಿದು ಹೋಗಿದ್ದರು, ಆದ್ರೆ ಈ ಸಮಯದಲ್ಲಿ ರೈಲು ಹೊರಟುಬಿಟ್ಟಿದೆ. ರೈಲು ಹೊರಟಿದ್ದನ್ನು ಕಂಡ ಚಂದ್ರಸೇನ್ ಒಂದು ಕೈಯಲ್ಲಿ ತಂಬಿಗೆ ಹಾಗೆ ಇನ್ನೊಂದು ಕೈಯಲ್ಲಿ ಚಡ್ಡಿಯ ದಾರ ಹಿಡಿದುಕೊಂಡು ಓಡಲು ಮುಂದಾದರು.
ರೈಲು ವೇಗ ಪಡೆದುಕೊಂಡಂತೆ ಅವರು ಕೂಗುತ್ತಾ ಓಡಿ ಬರುತ್ತಿದ್ದರು, ಇದು ಇಡೀ ರೈಲಿನಲ್ಲಿ ಕುಳಿತಿದ್ದವರ ನಗುವಿಗೆ ಕಾರಣವಾಗಿತ್ತು. ಹಾಗೆ ಚಂದ್ರಸೇನ್ ಅವರಿಗೆ ಇದು ಅವಮಾನ ಉಂಟು ಮಾಡಿತ್ತು. ಈ ಘಟನೆಯಿಂದ ನೊಂದ ಅವರು ಪಶ್ಚಿಮ ಮಧ್ಯ ರೈಲ್ವೆ ವಲಯದ ಭೂಪಾಲ್ ರೈಲ್ವೆ ವಿಭಾಗದ ಪ್ರಧಾನ ಕಚೇರಿಯಾದ ಹಬೀಬ್‌ಗಂಜ್‌ನಲ್ಲಿರುವ ರೈಲ್ವೆ ವಿಭಾಗ ಕಚೇರಿಗೆ ಪತ್ರ ಬರೆದರು. ರೈಲುಗಳಲ್ಲಿ ಶೌಚಾಲಯಗಳಿಗಾಗಿ ಮನವಿ ಮಾಡಿದರು.
ಈ ಪತ್ರ ಅಧಿಕಾರಿಗಳ ಗಮನ ಸೆಳೆಯಿತು. ಆರಂಭಿಕ ಹಂತವಾಗಿ 80 ಕಿ.ಮೀಗಿಂತ ದೂರ ಪ್ರಯಾಣಿಸುವ ರೈಲುಗಳಲ್ಲಿ ಶೌಚಾಲಯ ಸೌಲಭ್ಯ ತರಲು ಮುಂದಾದರು. ಇದಾದ ಬಳಿಕ ಎಲ್ಲಾ ರೈಲುಗಳಲ್ಲಿ ಹಾಗೆ ಎಲ್ಲಾ ಭೋಗಿಗಳಲ್ಲೂ ಶೌಚಾಲಯ ನಿರ್ಮಾಣಕ್ಕೆ ಆಧ್ಯತೆ ನೀಡಲಾಗಿತ್ತು. ಬಳಿಕ ಎಲ್ಲಾ ರೈಲುಗಳಲ್ಲೂ ಶೌಚಾಲಯ ಸೇವೆಯನ್ನು ವಿಸ್ತರಿಸಲಾಯಿತು. ಅಂದು ಚಂದ್ರಸೇನ್ ರೈಲಿನ ಹಿಂದೆ ಓಡದೆ ಇದ್ದಿದ್ದರೆ ಇಂದು ಕೂಡ ಸಾಮಾನ್ಯರ ಬಳಕೆಗೆ ಶೌಚಾಲಯ ಸಿಗುವುದು ಅನುಮಾನವಾಗಿತ್ತು.



Click it and Unblock the Notifications

