Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಅರ್ಧ ಪ್ಯಾಂಟ್ ಇನ್ನರ್ಧ ಚಡ್ಡಿ..! ಈ ಕೋಪರ್ನಿ ಡ್ರೆಸ್ ಬೆಲೆ ₹38 ಸಾವಿರ
ಫ್ಯಾಷನ್ ಲೋಕದಲ್ಲಿ ನಿತ್ಯ ಒಂದಲ್ಲಾ ಒಂದು ಸುದ್ದಿ ಹೊರಬೀಳುತ್ತವೆ. ಅದರಲ್ಲಿ ಬಹುಪಾಲು ವಿಚಿತ್ರ ಹಾಗೂ ವಿಭಿನ್ನ ಸುದ್ದಿಗಳು ಹರಿದಾಡುತ್ತಿರುವುದು ಕೂಡ ನಾವು ನೋಡಬಹುದು. ಅದರಲ್ಲೂ ಕೆಲವೊಂದು ಸುದ್ದಿಗಳು, ವಿಚಾರಗಳು ನಾವು ನೋಡಿದ್ದೇವೆ. ಅದರಲ್ಲೂ ಕೆಲವೊಂದು ಫ್ಯಾಷನ್‌ಗಳು ಅಚ್ಚರಿಯ ಜೊತೆಗೆ ಒಂದಿಷ್ಟು ಕುತೂಹಲ, ಗೊಂದಲವನ್ನು ಹುಟ್ಟಿಸುತ್ತವೆ.
ಈಗ ಹರಿದಾಡುತ್ತಿರುವ ಸುದ್ದಿಯೊಂದರಲ್ಲಿ ಎಲ್ಲರಿಗೂ ಅಚ್ಚರಿ ಹುಟ್ಟಿಸುವ ವಿಚಾರವಿದೆ. ಅದರಲ್ಲೂ ಈಗಿನ ಫ್ಯಾಷನ್‌ಗೆ ತಕ್ಕಂತಹ ಬಟ್ಟೆಯ ಕುರಿತು ಹರಿದಾಡುತ್ತಿರುವ ವಿಚಾರವಿದು. ಫ್ಯಾಷನ್ ಅಂದಕೂಡಲೇ ಈಗ ಚಿತ್ರ ವಿಚಿತ್ರ ಬಟ್ಟೆಗಳ ಧರಿಸುವುದು ನೋಡಬಹುದು, ಅದರಲ್ಲೂ ಬಾಲಿವುಡ್ ಮಂದಿ ಹಾಗೆ ಹಾಲಿವುಡ್ ಸೆಲೆಬ್ರಿಟಿಗಳು ಧರಿಸುವ ಬಟ್ಟೆಗಳು ಎಲ್ಲರ ಅಚ್ಚರಿಗೆ ಕಾರಣವಾಗುತ್ತದೆ.

ಅದರಲ್ಲೂ ಇತ್ತೀಚಿಗೆ ಚಿತ್ರ ವಿಚಿತ್ರ ಬಟ್ಟೆ ಧರಿಸುವುದೇ ಫ್ಯಾಷನ್ ಎಂದು ಬಿಂಬಿಸುವುದು ನೋಡಬಹುದು. ಯಾರು ಕೂಡ ಈವರೆಗೆ ಹಾಕಿರದ ರೀತಿಯ ಬಟ್ಟೆಗಳ ಧರಿಸುವುದು, ವಿಚಿತ್ರವಾಗಿ ಕಾಣಿಸಿಕೊಳ್ಳುವುದು ಕಾಮನ್ ಎನ್ನುವಂತಾಗಿದೆ. ಅದನ್ನೇ ದೊಡ್ಡ ದೊಡ್ಡ ಫ್ಯಾಷನ್ ಬ್ರಾಂಡ್‌ಗಳು ಕೂಡ ಫಾಲೋ ಮಾಡುತ್ತವೆ. ವಿಚಿತ್ರವಾಗಿ ಹರಿದಿರುವ ಬಟ್ಟೆಗಳ ಧರಿಸುವುದೇ ಫ್ಯಾಷನ್ ಆಗಿದೆ. ಅದರಲ್ಲೂ ಈ ಬಟ್ಟೆಗಳಿಗೆ ಸಾವಿರಾರು ರೂಪಾಯಿ ನೀಡಬೇಕಾಗುವುದು ಮತ್ತೂ ವಿಚಿತ್ರ.
ಈಗ ಅಂತಾರಾಷ್ಟ್ರೀಯ ಮಟ್ಟದ ಜನಪ್ರಿಯ ಬ್ರಾಂಡ್ ಆಗಿರುವ ಕೋಪರ್ನಿ ಹೆಸರು ನೀವು ಕೇಳಿರಬಹುದು. ಜೀನ್ಸ್ ಉದ್ಯಮದಲ್ಲಿ ಈ ಬ್ರಾಂಡ್ ಅತ್ಯಂತ ದೊಡ್ಡ ಹೆಸರು ಮಾಡಿದೆ. ಆದ್ರೆ ಈ ಬ್ರಾಂಡ್ ಈಗ ವಿಚಿತ್ರ ಡಿಸೈನ್‌ನಿಂದ ಸುದ್ದಿಯಾಗಿದೆ. ಅದರಲ್ಲೂ ಒಂದೇ ಒಂದು ಕಾಲು ಫುಲ್ ಇದ್ದು ಮತ್ತೊಂದು ಅರ್ಧಕ್ಕೆ ಕಟ್ ಆಗಿರುವ ಜೀನ್ಸ್ ಪ್ಯಾಂಟ್‌ನ ಫ್ಯಾಷನ್ ನೋಡಿ ದಂಗಾಗಿದ್ದಾರೆ.
ಜೀನ್ಸ್ ಪ್ಯಾಂಟ್‌ಗಳಲ್ಲಿ ಹತ್ತಾರು ಸ್ಟೈಲ್‌ಗಳು ಬಂದಿವೆ. ಅದರಲ್ಲಿ ಕೆಲವೊಂದು ಬಹಳಷ್ಟು ಫೇಮಸ್ ಕೂಡ ಆಗಿವೆ. ಆದ್ರೆ ಈ ರೀತಿ ಒಂದು ಕಾಲು ಉದ್ದವಾಗಿ ಮತ್ತೊಂದು ಚಡ್ಡಿಯಷ್ಟು ಉದ್ದವಾಗಿ ಕತ್ತರಿಸಲಾದ ಈ ಹೊಸ ಫ್ಯಾಷನ್ ನೋಡಿ ಜನರು ಶಾಕ್‌ಗೆ ಒಳಗಾಗಿದ್ದಾರೆ. ಈ ರೀತಿ ಬಟ್ಟೆ ಧರಿಸುವ ಉದ್ದೇಶವಾದ್ರು ಏನು ಎಂಬುದನ್ನು ತಿಳಿಯದೆ ತಲೆ ಕೆರೆದುಕೊಂಡಿದ್ದಾರೆ.
ಒಂದು ಉದ್ದವಾದ ಪ್ಯಾಂಟ್ ಧರಿಸುವುದು ಇಲ್ಲವೆ ಚಡ್ಡಿ ಧರಿಸುವುದು ಸೂಕ್ತ, ಅದನ್ನು ಬಿಟ್ಟು ಎರಡೂ ಇರುವ ಈ ರೀತಿ ಪ್ಯಾಂಟ್ ಧರಿಸುವುದು ಯಾವ ರೀತಿಯ ಫ್ಯಾಷನ್ ಎಂದು ದಂಗಾಗಿದ್ದಾರೆ. ಇದು ಬರೀ ಫ್ಯಾಷನ್ ಅಷ್ಟೇ ಆಗಿದ್ದರೂ ನಡೆಯುತ್ತಿತ್ತು, ಆದ್ರೆ ಈ ಪ್ಯಾಂಟ್‌ನ ದರ ಕೇಳಿ ಮತ್ತೊಮ್ಮೆ ಶಾಕ್‌ಗೆ ಒಳಗಾಗಿದ್ದಾರೆ.
ಹೌದು ಈ ಅರ್ಧ ಪ್ಯಾಂಟ್ ಅರ್ಧ ಚಡ್ಡಿಯ ಡಿಸೈನ್‌ನಲ್ಲಿರುವ ಬಟ್ಟೆಗೆ 440 ಡಾಲರ್ ನೀಡಬೇಕು. ಅಂದರೆ ಭಾರತೀಯ ರೂಪಾಯಿಗೆ ಹೋಲಿಸಿದರೆ ಇದು ಬರೋಬ್ಬರಿ 38,345 ರೂಪಾಯಿ ಆಗುತ್ತದೆ. ಇಷ್ಟು ಮೊತ್ತ ನೀಡಿದರು ನಿಮಗೆ ಸಿಗೋದು ಅರ್ಧ ಪ್ಯಾಂಟ್ ಅಂದ್ರೆ ಎಂತವರಿಗೂ ಶಾಕ್ ಆಗುತ್ತೆ. ಈ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಫ್ಯಾಷನ್ ನೋಡಿದ ಮಂದಿ ಶಾಕ್ ಆಗಿದ್ದಾರೆ.
ಈ ರೀತಿ ಫ್ಯಾಷನ್ ಲೋಕದಲ್ಲಿ ಅಚ್ಚರಿಗೆ ಕಾರಣವಾಗುವಂತಹ ಬಟ್ಟೆಗಳು ಕಾಣಿಸಿಕೊಂಡಿದ್ದು ಇದು ಮೊದಲೇನಲ್ಲ. ಇದಕ್ಕೂ ಮೊದಲು ಗೋಣಿ ಚೀಲದ ಪ್ಯಾಂಟ್ ಸಹ ಕಾಣಿಸಿಕೊಂಡಿತ್ತು. ಹಾಗೆ ಅದರ ಬೆಲೆ ಕೂಡ ಎಲ್ಲರಿಗೂ ಶಾಕ್ ನೀಡಿತ್ತು. ಗೋಣಿ ಚೀಲದ ಪ್ಯಾಂಟ್ ಹಾಗೂ ಕುರ್ತ ಆನ್‌ಲೈನ್‌ನಲ್ಲಿ ವೈರಲ್ ಆಗಿತ್ತು ಹಾಗೆ ಅದರ ಬೆಲೆ 60 ಸಾವಿರ ರೂಪಾಯಿ ಎಂದು ತಿಳಿದು ನೆಟ್ಟಿಗರು ಶಾಕ್ ಆಗಿದ್ದರು. ಈಗ ಈ ರೀತಿ ಅರ್ಧ ಪ್ಯಾಂಟ್ ಫ್ಯಾಷನ್ ಕೂಡ ಜನರಿಗೆ ಅಚ್ಚರಿ ತಂದಿದೆ.



Click it and Unblock the Notifications
