Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
ಹೋಳಿ ದಿನ ಒಂದು ವೀಡಿಯೋ ವೈರಲ್ ಆಗಿರುವುದನ್ನು ನೀವು ಗಮನಿಸಿರಬಹುದು. ಹುಡುಗಿ ಒಂದು ಹುಡುಗನ ಹಿಂದೆ ಟೈಟಾನಿಕ್ ಪೋಸ್ ನೀಡಿ ಹೋಗುವಾಗ ದೊಪ್ಪೆಂದು ಕೆಳಗೆ ಬೀಳುತ್ತಾಳೆ, ಆ ವೀಡಿಯೋ ತುಂಬಾನೇ ವೈರಲ್ ಆಗಿತ್ತು.
ಅವಳ ಹುಚ್ಚಾಟ ನೋಡಿದವರು ಇಂಥ ಕೆಲಸ ಮಾಡುವವರಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಕಮೆಂಟ್ ಮಾಡುತ್ತಿದ್ದರು. ದೆಹಲಿ ಪೊಲೀಸರು ಇವರಿಗೆ ಸರಿಯಾಗಿಯೇ ಬುದ್ಧಿ ಕಲಿಸಿದ್ದಾರೆ. ಇವರಿಗೆ ಬಿದ್ದಿರುವ ಫೈನ್ ಸರಿಯಾಗಿಯೇ ಇದೆ.

ಹೋಳಿ ಹಬ್ಬದ ಸಂಭ್ರಮದಂದು ಇವರು ಬುದ್ದಿಯಿಲ್ಲದಂತೆ ವರ್ತಿಸಿದ್ದರೆ, ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು, ಗಾಡಿಗಳ ಓಡಾಟ ಇರುವ ಕಡೆ ಈ ರೀತಿ ಹುಚ್ಚಾಟ ಮಾಡಿರುವ ವೀಡಿಯೋ ನೋಡಿದವರಲ್ಲ ತುಂಬಾನೇ ಬೈಯ್ಯುತ್ತಿದ್ದಾರೆ. ಆಕೆ ಸ್ಕೂಟಿ ಮೇಲೆ ನಿಂತು ಟೈಟಾನಿಕ್ ಪೋಸ್‌ನಲ್ಲಿ ಹೋಗುತ್ತಿರುತ್ತಾಳೆ. ಅವರಿಗೆ ರೀಲ್ಸ್ ಮಾಡುವ ಹುಚ್ಚು, ಇಂಥವರನ್ನು ನೋಡಿ ಬೇರೆಯವರು ಟ್ರೈ ಮಾಡುತ್ತಾರೆ, ರಾತ್ರೋರಾತ್ರಿ ಸ್ಟಾರ್ ಆಗುವ ಹುಚ್ಚಿನಲ್ಲಿ ಬೇಗನೆ ಸ್ಮಶಾನ ಸೇರಬೇಕಾಗುತ್ತದೆ. ಈ ಬಗ್ಗೆ ಜಾಗ್ರತೆವಹಿಸಬೇಕು.
ಗಾಡಿ ಓಡಿಸುತ್ತಿರುವ ಯುವ ಬ್ರೇಕ್ ಹಾಕುತ್ತಿದ್ದಂತೆ ಈಕೆ ಬ್ಯಾಲೆನ್ಸ್ ತಪ್ಪಿ ಬೀಳುತ್ತಾಳೆ, ಸಮಯದಲ್ಲಿ ಆ ದಾರಿಯಲ್ಲಿ ಗಾಡಿಗಳು ಓಡಾಡುತ್ತಿರುವುದನ್ನು ಕಾಣಬಹುದು, ಪುಣ್ಯಕ್ಕೆ ಯಾವ ಗಾಡಿಯೂ ವೇಗವಾಗಿ ಬಂದಿರಲಿಲ್ಲ, ಬಿದ್ದ ಮೇಲೂ ಕೂಡ ಅಲ್ಲಿಂದ ಏಳುವ ಬದಲಿಗೆ ಕೂತು ಪೋಸ್ ನೀಡುತ್ತಾಳೆ. ಇದನ್ನು ನೋಡಿದವರು ಈ ಗಾಡಿಯನ್ನು ಸೀಝ್ ಮಾಡಬೇಕು ಎಂದು ಕಮೆಂಟ್ ಮಾಡಿದ್ದಾರೆ, ಆದರೆ ಇವರಿಗೆ ಬಿದ್ದಿರುವ ಫೈನ್ ನೋಡಿದರೆ ಗಾಡಿಯನ್ನು ಮಾರಬೇಕೆನೋ...
ಬರೋಬರಿ 33000 ಫೈನ್
ಇವರ ಹುಚ್ಚಾಟಕ್ಕೆ ನೋಯ್ಡಾ ಪೊಲೀಸ್ ಸರಿಯಾಗಿಯೇ ಬುದ್ಧಿ ಕಲಿಸಿದ್ದಾರೆ, ಬರೋಬರಿ 33000 ಫೈನ್ ಹಾಕಿದ್ದಾರೆ. ಒಂದೆರಡು ಸಾವಿರ ಫೈನ್ ಆದರೆ ಸೀರಿಯಸ್‌ನೆಸ್ ಬರಲ್ಲ, ಈ ರೀತಿ ದುಬಾರಿ ದಂಡ ಹಾಕಬೇಕು, ಆಗಲೇ ಬುದ್ಧಿ ಕಲಿಯುವುದು. ಅಲ್ಲ ಈ ರೀತಿಯ ಸ್ಟಂಟ್ ಮಾಡುವಾಗ ಪ್ರಾಣದ ಚಿಂತೆಯೂ ಇರಲ್ಲ, ಕೊನೆಗೆ ಕೈ-ಕಾಲು ಮುರಿದು ಕಷ್ಟ ಅನುಭವಿಸುತ್ತಾರೆ, ಕೆಲವೊಮ್ಮೆ ಸಾವನ್ನಪ್ಪಿ ಮನೆಯವರಿಗೆ ದುಃಖ ನೀಡುತ್ತಾರೆ, ಆದರೂ ಈ ರೀತಿಯ ಪ್ರಕರಣ ಆಗಾಗ ಕಂಡು ಬರುವುದು. ಆದರೂ ಬುದ್ಧಿ ಬರಲ್ಲ, ಮತ್ತೆ- ಮತ್ತೆ ಇಂಥ ಪ್ರಕರಣ ಸಂಭವಿಸುತ್ತಲೇ ಇದೆ.
ಇನ್ನು ದೆಹಲಿಯಲ್ಲಿ ಇದೇ ರೀತಿಯ ಮತ್ತೊಂದು ಪ್ರಕರಣ ಕೂಡ ಗಮನ ಸೆಳೆದಿದೆ. ಇಬ್ಬರು ಹುಡುಗಿಯರು ಸ್ಕೂಟಿನಲ್ಲಿ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್ ಹುಚ್ಚು ಇತ್ತೀಚೆಗೆ ಎಷ್ಟು ಹೆಚ್ಚಾಗಿದೆ ಎಂದರೆ ಯಾವುದೇ ಫಂಕ್ಷನ್ ಆಗಿರಲಿ ರೀಲ್ಸ್... ರೀಲ್ಸ್, ಆದರೆ ಈ ರೀತಿ ಬೈಕ್‌ನಲ್ಲಿ ರೀಲ್ಸ್, ಜಲಪಾತದ ಬಳಿ ಹೋಗಿ ರೀಲ್ಸ್ ಅಂತ ಮಾಡಿ ಪ್ರಾಣ ಕಳೆದುಕೊಳ್ಳುವವರಿಗೇನು ಕಡಿಮೆಯಿಲ್ಲ.
ಈ ದಿನ ಯಾರಾದರೂ ವಿಚಿತ್ರವಾಗಿ ಆಡಿದರೆ ನೋಡಿದವರೂ ಸುಮ್ಮನಾಗಬಾರದು, ಪೊಲೀಸರಿಗೆ ಇವರ ಬಗ್ಗೆ ದೂರು ನೀಡಬೇಕು, ಇವರು ತಮ್ಮ ಬದುಕನ್ನು ಅಪಾಯಕ್ಕೆ ದುಡುವುದು ಮಾತ್ರವಲ್ಲ ಇತರರ ಬದುಕಿಗೆ ಅಪಾಯ ಉಂಟು ಮಾಡುವ ಸಾಧ್ಯತೆ ಇದೆ.
ಬೈಕ್ ಅಥವಾ ಸ್ಕೂಟಿಯಲ್ಲಿ ರೀಲ್ಸ್‌ಗಾಗಿ ವೀಡಿಯೋ ಮಾಡುವಾಗ ತಮ್ಮ ಪ್ರಾಣಕ್ಕೆ ಅಪಾಯ ಉಂಟು ಮಾಡುವ ಕಾರ್ಯಗಳನ್ನು ಮಾಡಬಾರದು. ಇನ್ನು ಕೆಲವರು ಬೈಕ್ ಓಡಿಸುವ ರೀಲ್ಸ್, ಸ್ಟಂಟ್ ಮಾಡುವ ರೀಲ್ಸ್ ಎಲ್ಲಾ ಮಾಡುತ್ತಾರೆ. ಈ ರೀತಿಯೆಲ್ಲಾ ಮಾಡಲು ಹೋಗಲೇಬೇಡಿ, ಇಂಥ ರೀಲ್ಸ್ ಮಾಡುವವರಿಗೆ ಈ ರೀತಿ ದಂಡ ಬೀಳಬೇಕು.



Click it and Unblock the Notifications
