Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಮಮಂದಿರ ಬಳಿಕ ಉದ್ಘಾಟನೆಗೆ ಸಿದ್ಧಗೊಂಡಿದೆ 'ಓಂ' ದೇವಾಲಯ: ಎಲ್ಲಿದೆ ಗೊತ್ತಾ..?
ಅಯೋಧ್ಯೆಯಲ್ಲಿ ತಲೆಎತ್ತಿದ ರಾಮಮಂದಿರವೀಗ ಲಕ್ಷ ಲಕ್ಷ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಅಚ್ಚರಿ ಎಂದರೆ ದೇಶದಲ್ಲೇ ಅತ್ಯಂತ ದೊಡ್ಡ ರಾಮ ಮಂದಿರ ಇದಾಗಿತ್ತು. ಆದರೆ ಇದೀಗ ಮತ್ತೊಂದು ದೇವಸ್ಥಾನ ಇಡೀ ದೇಶದ ಜನರ ಗಮನ ಸೆಳೆದಿದ್ದು, ಸದ್ಯದಲ್ಲೇ ಉದ್ಘಾಟನೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜಸ್ಥಾನದ ಪಾಲಿ ಜಿಲ್ಲೆಯ ಮಾರ್ವಾರ್ ಪ್ರದೇಶದಲ್ಲಿ ಈ ಓಂ ಆಕಾರದ ದೇವಾಲಯ ನಿರ್ಮಾಣಗೊಳ್ಳುತ್ತಿದೆ. ದೇವಾಲಯದ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯಗೊಂಡಿದೆ. ಇದು ದೇಶದ ಅತ್ಯಂತ ದೊಡ್ಡ ಶಿವನ ದೇವಾಲಯವಾಗಲಿದೆ ಎಂದು ಹೇಳಲಾಗಿದೆ.

ಓಂ ದೇವಾಲಯ 250 ಎಕರೆ ಪ್ರದೇಶದಲ್ಲಿದೆ
ಓಂ ದೇವಾಲಯದ ಕಾರ್ಯದರ್ಶಿ ಸ್ವಾಮಿ ಫುಲ್ಪುರಿ ಮಾತನಾಡಿ, ವಿಶ್ವದೀಪ ಗುರುಕುಲದಲ್ಲಿರುವ ಸ್ವಾಮಿ ಮಹೇಶ್ವರಾನಂದರ ಆಶ್ರಮದಲ್ಲಿ ಓಂ ಆಕಾರದ ಈ ಭವ್ಯವಾದ ಶಿವ ದೇವಾಲಯದ ನಿರ್ಮಾಣವು ಕಳೆದ 25 ವರ್ಷಗಳಿಂದ ನಡೆಯುತ್ತಿದೆ. ಸುಮಾರು 250 ಎಕರೆಗಳಷ್ಟು ವಿಸ್ತಾರವಾಗಿರುವ ಆಶ್ರಮದ ಮಧ್ಯದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದಿದ್ದು, ಇಷ್ಟರಲ್ಲೇ ಉದ್ಘಾಟನೆಗೂ ಸಿದ್ಧವಾಗಲಿದೆ ಎಂದಿದ್ದಾರೆ.
ಓಂ ಆಕಾರದ ಶಿವ ದೇವಾಲಯವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ
ಪಾಲಿಯ ಜದನ್ ಗ್ರಾಮದಲ್ಲಿ ಇರುವ ಈ ಓಂ ಆಕಾರದ ಶಿವ ದೇವಾಲಯವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ಸಂಪೂರ್ಣ ವಿಭಾಗವನ್ನು ನೆಲದಡಿಯಲ್ಲಿ ನಿರ್ಮಿಸಲಾಗಿದೆ ಆದರೆ ಮೂರು ವಿಭಾಗಗಳು ನೆಲದ ಮೇಲಿವೆ. ಮಧ್ಯದಲ್ಲಿ ಸ್ವಾಮಿ ಮಾಧವಾನಂದರ ಸಮಾಧಿ ಇದೆ. ನೆಲಮಾಳಿಗೆಯಲ್ಲಿ ಸಮಾಧಿಯ ಸುತ್ತಲೂ ಏಳು ಋಷಿಗಳ ಪ್ರತಿಮೆಗಳಿವೆ.
1995ರಲ್ಲಿ ಅಡಿಪಾಯ ಹಾಕಲಾಯಿತು
ಓಂ ಆಶ್ರಮ ಜದನ್ ಪಾಲಿಯನ್ನು ನಾಗರ ಶೈಲಿಯ ವಾಸ್ತುಶಿಲ್ಪ ಮತ್ತು ಉತ್ತರ ಭಾರತದ ವಾಸ್ತುಶಿಲ್ಪದ ಆಧಾರದ ಮೇಲೆ ನಿರ್ಮಿಸಲಾಗುತ್ತಿದೆ. ಸುಮಾರು ಅರ್ಧ ಕಿಲೋಮೀಟರ್ ವಿಸ್ತೀರ್ಣದಲ್ಲಿ ಹರಡಿರುವ ಓಂ ಆಕಾರದಲ್ಲಿರುವ ಈ ಶಿವ ದೇವಾಲಯದ ನಿರ್ಮಾಣ ಕಾರ್ಯವು 1995 ರಲ್ಲಿ ಪ್ರಾರಂಭವಾಯಿತು. ಅಂದು ದೇಶದ ಸಂತರು, ಋಷಿಮುನಿಗಳು ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
1008 ವಿಭಿನ್ನ ಶಿವನ ಮೂರ್ತಿಗಳಿವೆ
ರಾಜಸ್ಥಾನದ ಈ ಓಂ ಆಶ್ರಮದಲ್ಲಿ 1008 ವಿಭಿನ್ನ ಶಿವನ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ದೇವಾಲಯದ ಸಂಕೀರ್ಣದಲ್ಲಿ ಒಟ್ಟು 108 ಕೊಠಡಿಗಳಿವೆ. ಇದರ ಶಿಖರವು 135 ಅಡಿ ಎತ್ತರವಿದೆ. ಮಧ್ಯದಲ್ಲಿ ಗುರು ಮಹಾರಾಜ್ ಸ್ವಾಮಿ ಮಾಧವಾನಂದರ ಸಮಾಧಿ ಇದೆ. ಮೇಲಿನ ಭಾಗದಲ್ಲಿ ಮಹಾದೇವನ ಶಿವಲಿಂಗವನ್ನು ಸ್ಥಾಪಿಸಲಾಗಿದೆ. ಶಿವಲಿಂಗದ ಮೇಲೆ ಬ್ರಹ್ಮಾಂಡದ ಆಕಾರವನ್ನು ಮಾಡಲಾಗಿದೆ.
ಓಂ ದೇವಾಲಯವು 2024ರಲ್ಲೇ ಉದ್ಘಾಟನೆ
ಓಂ ದೇವಾಲಯದ ಕಾರ್ಯದರ್ಶಿ ಸ್ವಾಮಿ ಫುಲ್ಪುರಿ ಪ್ರಕಾರ, ವಿಶ್ವದ ಏಕೈಕ ಓಂ ಆಕೃತಿಯೊಂದಿಗೆ ಈ ಶಿವ ದೇವಾಲಯದ ನಿರ್ಮಾಣ ಕಾರ್ಯವು 95 ಪ್ರತಿಶತದಷ್ಟು ಪೂರ್ಣಗೊಂಡಿದೆ. ಸದ್ಯ ದೀಪ ಅಳವಡಿಕೆ, ಕುಡಿಯುವ ನೀರಿನ ಮಾರ್ಗ ಇತ್ಯಾದಿ ಕಾಮಗಾರಿ ಅಂತಿಮ ಹಂತದಲ್ಲಿದೆ. ಸುಮಾರು ನಾನೂರು ಜನ ಈ ಕೆಲಸದಲ್ಲಿ ತೊಡಗಿದ್ದಾರೆ. ಓಂ ಆಶ್ರಮವು ಇದೇ ವರ್ಷ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ.
ಓಂ ದೇವಾಲಯದಲ್ಲಿ ಯೋಗ ವಿಶ್ವವಿದ್ಯಾಲಯವೂ ಇದೆ
ಶಿವಯಾಲ್‌ನ ಹೊರತಾಗಿ, ಶ್ರೀ ಮಾಧವಾನಂದ ಯೋಗ ವಿಶ್ವವಿದ್ಯಾಲಯವನ್ನು ಜದನ್ ಆಶ್ರಮದಲ್ಲಿ ಸ್ಥಾಪಿಸಲಾಗಿದೆ, ಇದು ದೇಶದಲ್ಲೇ ಅತ್ಯಂತ ವಿಶಿಷ್ಟವಾದ ಓಂ ಆಕಾರವನ್ನು ಹೊಂದಿದೆ. ಈ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಶಾಲಾ-ಕಾಲೇಜುಗಳೂ ಇರುತ್ತವೆ. ಇದನ್ನು ವಿಶ್ವದೀಪ್ ಗುರುಕುಲ ಟ್ರಸ್ಟ್ ನಿರ್ಮಿಸುತ್ತಿದೆ. ವಿಶೇಷವೆಂದರೆ ಆಶ್ರಮದ ನಿರ್ಮಾಣಕ್ಕೆ ಧೋಲ್ಪುರದ ಬನ್ಶಿ ಪರ್ವತದ ಕಲ್ಲನ್ನು ಬಳಸಲಾಗಿದೆ.
ಈ ದೇವಾಲಯ ತಲುಪುವುದು ಹೇಗೆ?
ಜದನ್ ಆಶ್ರಮವು ಪಾಲಿ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 62 ರಲ್ಲಿ ರಸ್ತೆಬದಿಯಲ್ಲಿದೆ. ಇದರ ಹತ್ತಿರದ ವಿಮಾನ ನಿಲ್ದಾಣವೆಂದರೆ ಜೋಧ್‌ಪುರ, ಇದು ಸುಮಾರು 71 ಕಿಲೋಮೀಟರ್ ದೂರದಲ್ಲಿದೆ. ಜದನ್ ಆಶ್ರಮವನ್ನು ರೈಲಿನ ಮೂಲಕವೂ ತಲುಪಬಹುದು. ದೆಹಲಿ ಮತ್ತು ಅಹಮದಾಬಾದ್ ನಡುವೆ ಚಲಿಸುವ ರೈಲಿನಲ್ಲಿ ನೀವು ಮಾರ್ವಾರ್ ಜಂಕ್ಷನ್ ವರೆಗೆ ಪ್ರಯಾಣಿಸಬೇಕಾಗುತ್ತದೆ. ಮಾರ್ವಾರ್ ಜಂಕ್ಷನ್‌ನಿಂದ 23 ಕಿಲೋಮೀಟರ್ ದೂರದಲ್ಲಿದೆ. ಪಾಲಿ-ಸೋಜತ್ ಮಾರ್ಗದಲ್ಲಿ ಚಲಿಸುವ ಬಸ್‌ಗಳ ಮೂಲಕವೂ ಜದನ್ ಆಶ್ರಮವನ್ನು ತಲುಪಬಹುದು.



Click it and Unblock the Notifications

