Latest Updates
-
ಸ್ವಾತಂತ್ರ್ಯ ದಿನಾಚರಣೆ ನಂತರದ ಕ್ಲೀನಪ್: ಬಾಲ್ಕನಿ ಸ್ವಚ್ಛತೆ ಮತ್ತು ರಾಷ್ಟ್ರಧ್ವಜದ ಗೌರವಯುತ ನಿರ್ವಹಣೆ -
ಸ್ವಾತಂತ್ರ್ಯ ದಿನದ ಸಂಭ್ರಮ: ಟೆರೇಸ್ ಮೇಲೆ ಗಾಳಿಪಟ ಹಾರಿಸುವ ಮುನ್ನ ಈ ಸುರಕ್ಷತಾ ಕ್ರಮಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ: ಸಿಹಿ ತಿನಿಸುಗಳ ಸವಿಯ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಿ, ಇಲ್ಲಿದೆ ಸಿಂಪಲ್ ಟಿಪ್ಸ್! -
ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಆರೋಗ್ಯದ ಜಾಗೃತಿ: ಮಳೆಗಾಲದಲ್ಲಿ ಯಾವ ಆಹಾರ ಸೇವಿಸುವುದು ಸುರಕ್ಷಿತ? -
ಸ್ವಾತಂತ್ರ್ಯ ದಿನಾಚರಣೆ: ಮಳೆಯಲ್ಲೂ ಮಿಂಚಲು ಇಲ್ಲಿದೆ ಸಿಂಪಲ್ ಟ್ರೈಕಲರ್ ಫ್ಯಾಷನ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: 10 ನಿಮಿಷದಲ್ಲಿ ತ್ರಿರಂಗ ಲುಕ್ನಲ್ಲಿ ಮಿಂಚುವುದು ಹೇಗೆ? -
ಸ್ವಾತಂತ್ರ್ಯ ದಿನದ 'ತಿರಂಗಾ ರೈಡ್': ಮಳೆಗಾಲದಲ್ಲಿ ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿವೆ ಬೆಸ್ಟ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: ಪರೇಡ್ ವೀಕ್ಷಿಸುವ ಮುನ್ನ ಈ 10 ನಿಮಿಷದ ವ್ಯಾಯಾಮ ಮರೆಯದಿರಿ! -
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು! -
ಆನ್ಲೈನ್ ಸೆಕ್ಸ್ಟಾರ್ಷನ್ ವಂಚನೆ: ಅಪರಿಚಿತ ವಿಡಿಯೋ ಕಾಲ್ ರಿಸೀವ್ ಮಾಡಿದ್ರೆ ಹುಷಾರ್, ಇಲ್ಲಿದೆ ಎಚ್ಚರಿಕೆ!
ಸಂಜೆ ಒಲಿಂಪಿಕ್ ಸಮಾರೋಪ ಸಮಾರಂಭ..! ವಿನೇಶ್ ಫೋಗಟ್ ವಿಚಾರ ಏನಾಗಲಿದೆ?
2024 ರ ಒಲಿಂಪಿಕ್ಸ್ ಮುಕ್ತಾಯದ ಹಂತ ತಲುಪಿದೆ. ಭಾರತ 6 ಪದಕಗಳೊಂದಿಗೆ ಈ ಬಾರಿಯ ಒಲಿಂಪಿಕ್ ವಿದಾಯ ಹೇಳುತ್ತಿದೆ. ಇಂದು ಪ್ಯಾರಿಸ್‌ನಲ್ಲಿ ಸಮಾರೋಪ ಸಮಾರಂಭ ನಡೆಯುತ್ತಿದೆ. ಜುಲೈ 26 ರಂದು ಶುಕ್ರವಾರ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ಅಧಿಕೃತವಾಗಿ ಪ್ರಾರಂಭಗೊಂಡಿದ್ದ ಒಲಿಂಪಿಕ್ ಕೊನೆಯ ಹಂತ ತಲುಪಿದೆ.
ಧ್ವಜಗಳು ಮತ್ತು ಕ್ರೀಡಾಪಟುಗಳ ಮೆರವಣಿಗೆಯನ್ನು ಒಳಗೊಂಡ ಸಮಾರಂಭವು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗುತ್ತದೆ. ಸಮಾರೋಪ ಸಮಾರಂಭಕ್ಕೆ ಮುಂಚಿತವಾಗಿ ಭಾನುವಾರ ಹಲವಾರು ಅಥ್ಲೆಟಿಕ್ ಸ್ಪರ್ಧೆಗಳನ್ನು ನಿಗದಿಪಡಿಸಲಾಗಿದೆ. 1896ರಲ್ಲಿ ಮೊಟ್ಟ ಮೊದಲ ಒಲಿಂಪಿಕ್‌ನ ಸಮಾರೋಪ ಸಮಾರಂಭ ಏರ್ಪಟ್ಟಿತ್ತು.

ಒಲಿಂಪಿಕ್ ಸಮಾರೋಪ ಸಮಾರಂಭದಲ್ಲಿ ಮೊದಲು ಆತಿಥೇಯ ರಾಷ್ಟ್ರದ ಮುಖ್ಯಸ್ಥರು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ನಂತರ ಆತಿಥೇಯ ರಾಷ್ಟ್ರದ ಧ್ವಜವನ್ನು ಹಾರಿಸಿ ಅಲ್ಲಿನ ರಾಷ್ಟ್ರಗೀತೆ ಹಾಡಲಾಗುತ್ತದೆ. ಇತರ ಸಾಂಪ್ರದಾಯಿಕ ಅಂಶಗಳಲ್ಲಿ ಧ್ವಜಗಳ ಮೆರವಣಿಗೆ, ಕ್ರೀಡಾಪಟುಗಳ ಮೆರವಣಿಗೆ ಮತ್ತು ನಾಲ್ಕು ವರ್ಷಗಳಲ್ಲಿ ಒಲಿಂಪಿಕ್ಸ್ ಅನ್ನು ಆಯೋಜಿಸುವ ನಗರದ ಪ್ರತಿನಿಧಿಗೆ ಒಲಿಂಪಿಕ್ ಧ್ವಜವನ್ನು ಹಸ್ತಾಂತರಿಸುವುದು ಸೇರಿ ಹಲವು ಕಾರ್ಯಕ್ರಮ ನೆರವೇರಲಿದೆ.
ಇನ್ನು ಆರಂಭದಲ್ಲಿ ಹೊತ್ತಿಸಲಾಗಿದ್ದ ಒಲಿಂಪಿಕ್ ಜ್ವಾಲೆಯನ್ನು ಸಮಾರೋಪ ಸಮಾರಂಭದಲ್ಲಿ ನಂದಿಸಲಾಗುತ್ತದೆ. ಅಲ್ಲದೆ ಕೊನೆಯ ದಿನದಲ್ಲಿ ಗೆದ್ದಿರುವ ಪದಕಗಳನ್ನು ಆಯಾ ಕ್ರೀಡಾಪಟುಗಳಿಗೆ ಈ ವೇಳೆ ನೀಡಲಾಗುತ್ತದೆ. 100 ಕ್ಕೂ ಹೆಚ್ಚು ಕಲಾವಿದರು, ಅಕ್ರೋಬ್ಯಾಟ್‌ಗಳು, ನೃತ್ಯಗಾರರು ಮತ್ತು ಸರ್ಕಸ್ ಕಲಾವಿದರು ಇರುತ್ತಾರೆ. ಅಮೇರಿಕನ್ ಮಹಿಳೆಗಿಂತ ಹೆಚ್ಚು ಒಲಂಪಿಕ್ ಪದಕಗಳನ್ನು ಗೆದ್ದಿರುವ ಕೇಟೀ ಲೆಡೆಕಿ ಮತ್ತು ಚಿನ್ನದ ಪದಕ ವಿಜೇತ ನಿಕ್ ಮೀಡ್, ರೋವರ್, 2024ರ ಸಮಾರೋಪ ಸಮಾರಂಭದಲ್ಲಿ ಧ್ವಜ ಹಿಡಿದು ಮೆರವಣಿಗೆ ಸಾಗಲಿದ್ದಾರೆ.
ಫೋಗಟ್ ವಿಚಾರ ಏನಾಗಲಿದೆ?
100 ಗ್ರಾಂ ತೂಕ ಹೆಚ್ಚಾಗಿದ್ದಕ್ಕೆ ಒಲಿಂಪಿಕ್‌ನಿಂದಲೇ ಅನರ್ಹಗೊಂಡಿರುವ ಕುಸ್ತಿ ಪಟು ವಿನೇಶ್ ಫೋಗಟ್ ಅವರ ಪದಕದ ಆಸೆ ಇನ್ನೂ ಜೀವಂತವಾಗಿದೆ. ಆದರೆ ಯಾವಾಗ ಆಕೆಗೆ ಯಾವ ಪದಕ ನೀಡಲಾಗುತ್ತದೆ ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಇಂದು ಈ ಕುರಿತ ವಿಚಾರಣೆಯು ನಡೆಯಲಿದೆ. ಆದರೆ ಒಲಿಂಪಿಕ್ ಸಮಾರೋಪ ಸಮಾರಂಭಕ್ಕೂ ಮುನ್ನ ಈ ಕುರಿತ ನಿರ್ಧಾರ ಪ್ರಕಟವಾಗುವ ನಿರೀಕ್ಷೆ ಇದ್ದರೂ, ಸಮಾರೋಪ ಸಮಾರಂಭದ ನಂತರವೂ ಪದಕ ಕುರಿತ ನಿರ್ಧಾರ ಪ್ರಕಟವಾಗಬಹುದು ಎನ್ನಲಾಗಿದೆ.
ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಅವರನ್ನು ವಿಚಾರಣೆಯ ಸಂದರ್ಭದಲ್ಲಿ ಸಿಎಎಸ್ ಆಡ್ ಹಾಕ್ ವಿಭಾಗದ ಮುಂದೆ ವಿನೇಶ್ ಅವರ ಪರವಾಗಿ ವಾದ ಮಾಡಲು ನಿಯೋಜನೆ ಮಾಡಲಾಗಿದೆ. ಆದರೆ ಈ ಕುರಿತ ನಿರ್ಧಾರ ಯಾವಾಗ ಪ್ರಕಟವಾಗಲಿದೆ ಎಂಬುದು ಅಧಿಕೃತವಾಗಿ ತಿಳಿದುಬಂದಿಲ್ಲ. ಇಂದು ಸಂಜೆ 6 ಗಂಟೆ ಒಳಗೆ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ.
ವಿನೇಶ್ ಫೋಗಟ್ ಅನರ್ಹಗೊಂಡಾಗ, ಅವರು ಚಿನ್ನದ ಪದಕದ ಪಂದ್ಯದಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ವಿನಂತಿಸಿದರು, ಆದರೆ ದುರದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸಿ ಫೈನಲ್‌ಗೆ ಅರ್ಹತೆ ಪಡೆದಿರುವ ಕಾರಣ ಬೆಳ್ಳಿ ಪದಕ ನೀಡಬೇಕೆಂದು ಮನವಿ ಮಾಡಿದ್ದಾರೆ. ಸಿಎಎಸ್ ಎಂದರೆ 1984 ರಲ್ಲಿ ಸ್ಥಾಪಿಸಲಾದ ಸ್ವತಂತ್ರ ಸಂಸ್ಥೆಯಾಗಿದ್ದು, ಕ್ರೀಡಾ ವಿವಾದಗಳನ್ನು ಪರಿಹರಿಸಲು ಮಧ್ಯಸ್ಥಗಾರರು ಅಥವಾ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತದೆ.
ಇನ್ನು ಒಲಿಂಪಿಕ್ ಕ್ರೀಡಾ ಕೂಟ ಆರಂಭವಾದಾಗಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ವಿಚಾದ ಸೃಷ್ಟಿಯಾಗುತ್ತಲೇ ಇತ್ತು, ಕ್ರೀಡಾಗ್ರಾಮದ ಸೌಲಭ್ಯಗಳ ಕೊರತೆ ಸೇರಿದಂತೆ ಹತ್ತಾರು ವಿಚಾರವಾಗಿ ವಿವಾದ ಹುಟ್ಟಿಕೊಂಡಿತ್ತು. ಮೂಲ ಸೌಕರ್ಯದ ಕೊರತೆ ಸಂಬಂಧ ಹಲವು ವರದಿಗಳು ಹರಿದಾಡಿದಲ್ಲದೆ, ಆಯೋಜಕರು ನಿರ್ಲಕ್ಷ್ಯ ಮಾಡಿದ್ದ ಆರೋಪವೂ ಕೇಳಿಬಂದಿತ್ತು.



Click it and Unblock the Notifications
