Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಒಲಿಂಪಿಕ್ಸ್ ಆಟಗಾರರಲ್ಲಿಯೂ ಇದೆ ಈ ಚಿತ್ರ ವಿಚಿತ್ರ ನಂಬಿಕೆಗಳು
ಇದನ್ನು ನಂಬಿಕೆಯಾದರೂ ಅನ್ನಿ ಮೂಢ ನಂಬಿಕೆಯಾದರೂ ಅನ್ನಿ ಕೆಲವೊಂದು ನಂಬಿಕೆಗಲು ಎಲ್ಲರಲ್ಲಿಯೂ ಇರುತ್ತದೆ. ಇದು ನನ್ನ ಲಕ್ಕಿ ಕಲರ್, ಈ ವಸ್ತು ನನ್ನ ಬಳಿಯಿದ್ದಾಗಲ್ಲಾ ನನಗೆ ಯಶಸ್ಸು ಸಿಕ್ಕಿದೆ, ಇದು ನನ್ನ ಅದೃಷ್ಟದ ಕಾರು, ಈ ಕಾರು ಬಂದ ಮೇಲೆ ನನಗೆ ಇತರ ಲಕ್ಷುರಿ ಕಾರುಗಳು ಬಂದಿರುವುದು ಹೀಗೆ ಎಲ್ಲರಿಗೂ ಒಂದೊಂದು ಲಕ್ಕಿ ವಸ್ತು, ಬಣ್ಣ, ನಂಬರ್ ಹೀಗೆ ಇದ್ದೇ ಇರುತ್ತದೆ, ಈ ನಂಬಿಕೆ ಒಲಿಂಪಿಕ್ ಆಟಗಾರರನ್ನೂ ಬಿಟ್ಟಿಲ್ಲ.
ತಮ್ಮ ಕಠಿಣ ಶ್ರಮ, ತಮ್ಮ ಸಾಮರ್ಥ್ಯ ಜೊತೆಗೆ ಈ ರೀತಿಯ ನಂಬಿಕೆ / ಮೂಢನಂಬಿಕೆಗಳನ್ನು ಹೊಂದಿರುವ ಅನೇಕ ಅಟಗಾರರಿದ್ದಾರೆ ಗೊತ್ತಾ?

ದೇಹಕ್ಕೆ ಬಣ್ಣ ಬಳಿದುಕೊಳ್ಳುವುದು
ಚೀನಾದ ಫ್ರೀ ಸ್ಟೈಲ್ ಸ್ಕೈಯರ್ ಇಲಿನ್ ಗು 2020ರ ಒಲಿಂಪಿಕ್‌ನಲ್ಲಿ ಮೈಗೆ ಬೆಕ್ಕಿನ ಪೇಯಿಂಟಿಂಗ್ ಮಾಡಿಸಿದ್ದರು, ಅವರು ಆಟದಲ್ಲಿ ಗೆಲುವು ಸಾಧಿಸಿದ್ದರು, ಈ ರೀತಿ ಬೆಕ್ಕಿನ ಪೇಯಿಂಟಿಂಗ್ ಮಾಡಿಸಿದಾಗ ಗೆಲುವು ಅವರ ಪಾಲಾಗುತ್ತಿದೆ, ತಮ್ಮ ಸಾಮರ್ಥ್ಯದ ಜೊತೆಗೆ ಈ ನಂಬಿಕೆ ಕೂಡ ಅವರಲ್ಲಿ ಬಲವಾಗಿದೆ ಎಂದು ಅವರೆ ಹೇಳುತ್ತಾರೆ.
ನಾನು ಮೂಢನಂಬಿಕೆ ನಂಬುತ್ತೇನೆ, ಆದರೆ ಒಬ್ಬ ಸ್ಪರ್ಧಿಯಾಗಿ ಅ ರೀತಿಯ ನಂಬಿಕೆ ಒಳ್ಳೆಯದಲ್ಲ ಎಂಬುವುದು ಗೊತ್ತಿದೆ, ಆದರೆ ನಾನು ನಂಬಿದ್ದೇನೆ, ಹಾಗಾಗಿ ಪೋಡಿಯಂಗೆ ಹೋಗುವಾಗ ಆ ಲಕ್ಕಿ ಕ್ಯಾಟ್ ಪೇಯಿಂಟ್ ಹಾಕಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಇವಾ ಸಮ್ಕೋವಾ
ತನ್ನ ಪ್ರತಿಸ್ಪರ್ಧಿ ಕಠಿಣ ಸ್ಪರ್ಧೆ ನೀಡುತ್ತಾಳೆ ಎಂದರಿತಾಗ ಅವರು ತುಟಿ ಮೇಲೆ ಮೀಸೆ ಬಿಡಿಸಿಕೊಳ್ಳುತ್ತಾರೆ, ಅವರು 2011 ವರ್ಲ್ಡ್ ಚಾಂಪಿಯನ್‌ಶಿಪ್ ಸ್ಪರ್ಧೆಯಿಂದಲೂ ಈ ನಂಬಿಕೆ ಹೊಂದಿದ್ದಾರೆ.
ಮಿಕ್ಸ್ ಅಂಡ್ ಮ್ಯಾಚ್
ಕೊರಿಯಾ ಒಲಿಂಪಿಕ್ ಆಟಗಾರ Kwak Yoongy ಯಾವ ಬಣ್ಣ ನನಗೆ ಅದೃಷ್ಟವನ್ನು ತಂದು ಕೊಡುತ್ತಾಳೆ ಎಂಬುವುದನ್ನು ಬಲವಾಗಿ ನಂಬುತ್ತಾರೆ. ಅವರು ತಾವು ಸ್ಪರ್ಧೆಗೆ ಇಳಿಯುವ ಲಕ್ಕಿ ಕಲರ್ ಅಂಡರ್‌ವೇರ್ ಧರಿಸುತ್ತಾರಂತೆ, ಅದೃಷ್ಟದ ಬಣ್ಣದ ಬೇರೆ-ಬೇರೆ ಅಂಡರ್‌ವೇರ್ ಅರೇಂಜ್ ಮಾಡ್ತೀನಿ ಎಂದು ಅವರೇ ಹೇಳಿಕೊಂಡಿದ್ದಾರೆ. 'I choose my underwear according to the colours that have brought me luck in other races' ಎಂದಿದ್ದಾರೆ. ಅವರು 1000, 1500 ಅಥವಾ 3000 ಮೀಟರ್‌ಗೆ ಮಿಸ್ ಮ್ಯಾಚ್ ಸಾಕ್ಸ್ ಕೂಡ ಧರಿಸುತ್ತಾರಂತೆ.
ಹೀಗೆ ಎಲ್ಲರಿಗೂ ಅವರ ಅವರದ್ದೇ ಆದ ನಂಬಿಕೆ ಇರುತ್ತದೆ. ಹಾಗಾಗಿ ಮೂಢ ನಂಬಿಕೆ ಎಂಬುವುದು ನೀವು ಭಾರತದಲ್ಲಿ ಮಾತ್ರ ಇರುವುದು ಎಂದು ಭಾವಿಸಬೇಡಿ. ವಿಶ್ವದ ಎಲ್ಲಾ ಮೂಲೆಯಲ್ಲಿಯೂ ಇದೆ. ಅಲ್ಲದೆ ನಾನು ತುಂಬಾ ವೈಜ್ಞಾನಿಕವಾಗಿ ಯೋಚಿಸುವ ವ್ಯಕ್ತಿ ಎಂದು ಹೇಳುವವರಲ್ಲಿಯು ಒಂದು ನಂಬಿಕೆ ಇರುತ್ತದೆ ಎಂಬುವುದೇ ಕಟುವಾಸ್ತವ...



Click it and Unblock the Notifications