Latest Updates
-
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು?
ಯುವಕರು ನಾಚುವಂತೆ ಡ್ಯಾನ್ಸ್ ಮಾಡಿದ ಅಜ್ಜಿ.! ಪ್ರತಿಭೆ ಯಾರ ಸ್ವತ್ತು ಅಲ್ಲ ಬಿಡಿ..!
60 ವರ್ಷ ದಾಟಿತು ಅಂದ್ರೆ ಜೀವನದಲ್ಲಿ ಉತ್ಸಾಹ ಕಳೆದುಕೊಂಡ ಮಂದಿ ದೇವಾಲಯ, ಭಜನೆ, ಕೀರ್ತನೆ ವಿಶ್ರಾಂತಿ ಪಡೆಯುವ ಮೂಲಕವ ದಿನ ಕಳೆಯುತ್ತಾರೆ. ಅವರಿಗೆ ಜೀನವಲ್ಲಿ ಎಲ್ಲವನ್ನೂ ನೋಡಿ ಮನೆ ಸಂಸಾರದ ಜಂಜಾಟದಿಂದ ಹೊರಬಂದಿರುತ್ತಾರೆ.
ಇಂತಹ ಇಳಿ ವಯಸ್ಸಿನಲ್ಲಿ ಅವರಿಗೆ ಯಾವುದರಲ್ಲೂ ವಿಶೇಷ ಕಾಳಜಿ ಆಸಕ್ತಿ ಇರುವುದಿಲ್ಲ. ಆದರೆ ಇಲ್ಲೊಬ್ಬ ಅಜ್ಜಿ ಮಾತ್ರ ಯುವಕರೂ ನಾಚುವಂತೆ ಡ್ಯಾನ್ಸ್ ಮಾಡುತ್ತಿರುವುದು ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ಜೊತೆಗೆ ಸಾವಿರಾರು ಮಂದಿ ಅಜ್ಜಿ ಉತ್ಸಾಹಕ್ಕೆ ಬೆರಗಾಗಿದ್ದಾರೆ.

ಈ ಸೋಷಿಯಲ್ ಮೀಡಿಯಾದಲ್ಲಿ ಯಾರು ಯಾವಾಗ ಫೇಮಸ್ ಆಗುತ್ತಾರೆ ಅನ್ನೋದನ್ನ ಊಹಿಸಲು ಸಹ ನಮಗೆ ಸಾಧ್ಯವಾಗುವುದಿಲ್ಲ. ಹೀಗೆ ಇಲ್ಲೊಬ್ಬ ಅಜ್ಜಿ ಸಹ 90ರ ದಶಕದ ಹಾಡಿಗೆ ಕುಣಿದು ಎಲ್ಲರು ಹುಬ್ಬೇರುವಂತೆ ಮಾಡಿದ್ದಾರೆ. ಜೊತೆಗೆ ಆನ್‌ಲೈನ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.
ಈ ವಿಡಿಯೋವನ್ನು 90s_songs. ಎಂಬ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ನಾವು ಇಳಿ ವಯಸ್ಸಿನ ಅಜ್ಜಿಯೊಬ್ಬರು ಹಾಡಿಗೆ ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಬಹುದು. ಮನೆಯಲ್ಲಿ ಯಾವುದೋ ಸಂಭ್ರಮದ ನಡುವೆ ಅಜ್ಜಿ ಅವರ ಕಾಲದ ಫೇಮಸ್ ಹಾಡಿಗೆ ಇಲ್ಲಿ ಹೆಜ್ಜೆ ಹಾಕಿದ್ದಾರೆ.
ಅವರು ಡ್ಯಾನ್ಸ್ ಮಾಡಿದ್ದ ರೀತಿ, ಬೀಟ್‌ಗೆ ಅವರು ಹಾಕಿದ್ದ ಸ್ಟೆಪ್ಸ್ ಎಷ್ಟೊಂದು ಚೆಂದ, ಇಷ್ಟು ವರ್ಷ ಡ್ಯಾನ್ಸ್ ಫೀಲ್ಡ್‌ನಲ್ಲಿ ಇದ್ದವರಂತೆ ಡ್ಯಾನ್ಸ್ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಇವರು ಒಳ್ಳೆಯ ಡ್ಯಾನ್ಸರ್ ಆಗಿರಬಹುದು ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
ಕೆಲದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆ ಗಳಿಸಿದೆ. ಜೊತೆಗೆ ಸಾವಿರಾರು ಮಂದಿ ಅಜ್ಜಿಯ ಈ ಉತ್ಸಾಹ ಕಂಡು ಬೆರಗಾಗಿದ್ದಾರೆ. ಇಳಿ ವಯಸ್ಸಿನಲ್ಲಿ ಈ ರೀತಿ ಡ್ಯಾನ್ಸ್ ಮಾಡುವ ಇವರು ಹಲವರಿಗೆ ಮಾದರಿಯಾಗಬಹುದು ಎಂದಿದ್ದಾರೆ.
ಅಲ್ಲದೆ ಅವರ ಉತ್ಸಾಹ, ಹುಮ್ಮಸ್ಸಿಗೆ ಈಗಲೂ ಯಾರು ಸರಿಸಾಟಿಯೇ ಇಲ್ಲ. ಅವರಿಗೆ ಅವರೇ ಸಾಟಿ ಎಂದು ಅವರ ಡ್ಯಾನ್ಸ್‌ಗೆ ಜನ ಫಿದಾ ಆಗಿದ್ದಾರೆ. ನಾವು ನೀವೆಲ್ಲಾ ಈ ವಯಸ್ಸಿನಲ್ಲಿ ಡ್ಯಾನ್ಸ್ ಮಾಡುವುದು ಇರಲಿ ಎದ್ದು ಓಡಾಡುವುದೂ ಕಷ್ಟವಾಗಬಹುದು ಎಂದು ಒಬ್ಬರು ಹೇಳಿಕೊಂಡಿದ್ದಾರೆ.
ಅವರು ಡ್ಯಾನ್ಸ್ ಮಾಡುತ್ತಿರುವ ಹಿಂದಿ ಹಾಡು 90ರ ದಶಕದಲ್ಲಿ ಫೇಮಸ್ ಸಹ ಆಗಿತ್ತು. ಲಾಮ ಲಾಮ ಘೂಂಗಟ್ ಕಹೇ ಕೋ ಡಾಲಾ ಹಾಡಿಗೆ ಅಜ್ಜಿ ಇಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಅಂದಿನ ಫೇಮಸ್ ಸಂಗೀತ ನಿರ್ದೇಶಕ ರಾಜೇಶ್ ರೋಷನ್ ಸಿ ಹಾಡಿಗೆ ಸಂಗೀತ ನೀಡಿದ್ದರು. ಜೊತೆಗೆ ಇಲಾ ಅರ್ಜುನ್ ಹಾಗೂ ಅಲ್ಕಾ ಯಾಗ್ನಿಕ್ ಹಾಡಿದ್ದರು. 2000ನೇ ಇಸವಿಯಲ್ಲಿ ಈ ಹಾಡು ಭಾರೀ ಫೇಮಸ್ ಆಗಿತ್ತು. ಈಗ ಈ ಅಜ್ಜಿಯಿಂದಾಗಿ ಈ ಹಾಡು ಮತ್ತಷ್ಟು ಫೇಮಸ್ ಆಗುತ್ತಿದೆ.
ಇದಕ್ಕೂ ಮೊದಲು ಮದುವೆ ಸಂಭ್ರಮದಲ್ಲಿ 60 ವರ್ಷದ ಮಹಿಳೆಯೊಬ್ಬರು ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದು ಆನ್‌ಲೈನ್‌ನಲ್ಲಿ ಸುದ್ದಿಯಾಗಿದ್ದರು. ವಯಸ್ಸಾದರೂ ಇಷ್ಟೊಂದು ಚಟುವಟಿಕೆ ಇರುವವರನ್ನು ನೋಡಿ ಕಲಿಯಬೇಕು ಈ ಪೀಳಿಗೆ ಆ ವಯಸ್ಸಿನಲ್ಲಿಯೂ ಎಷ್ಟೊಂದು ಲವಲವಿಕೆಯಿಂದ ಇದ್ದಾರೆ, ಅವರನ್ನು ನೋಡಿ ಈ ಪೀಳಿಗೆಯವರು ಕಲಿಯಬೇಕು, ವಯಸ್ಸಾಯ್ತು ಎಂದು ಮೂಲೆಯಲ್ಲಿ ಏಕೆ ಕೂರಬೇಕು ಅಲ್ವಾ? ಈ ರೀತಿ ಲವಲವಿಕೆಯಿಂದ ಇರಬೇಕು. ಈ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಭೆಯಿದ್ದರೆ ಬೇಗನೆ ಗುರುತಿಸಿಕೊಳ್ಳಬಹುದು. ಇತ್ತ ನೃತ್ಯ ಕಂಡ ಜನರು ಮಾತ್ರ ಅವರು ಆಯಸ್ಸು ಇನ್ನಷ್ಟು ಗಟ್ಟಿಯಾಗಲಿ ಎಲ್ಲರಿಗೂ ಅವರು ಮಾದರಿಯಾಗಲಿದ ಎಂದು ಹರಸುತ್ತಿದ್ದಾರೆ.



Click it and Unblock the Notifications