Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಈ ಜಾಹೀರಾತು ವಿಡಿಯೋದಲ್ಲಿನ ನಟಿ ಯಾರು ಗೊತ್ತಾ? ಈಗ ಈಕೆ ಸೂಪರ್ ಸ್ಟಾರ್!!
ಕೆಲವೊಮ್ಮೆ ಅದೃಷ್ಟ ಅನ್ನೋದು ಯಾರಿಗೆ ಯಾವಾಗ ಒಲಿದು ಬರುತ್ತೆ ಅನ್ನೋದು ಗೊತ್ತೆ ಆಗಲ್ಲ. ಇನ್ನು ಸಿನಿಮಾ ರಂಗದಲ್ಲಿ ಇಂದು ಸ್ಟಾರ್ ಗಳಾಗಿ ಮಿಂಚುತ್ತಿರುವವರು ಹಿಂದೊಮ್ಮೆ ಅವಕಾಶಗಳಿಗಾಗಿ ಅಲೆದಾಡಿದವರು. ಹಾಗೆ ಚಿಕ್ಕಪುಟ್ಟ ಪಾತ್ರಗಳ ಮಾಡಿಕೊಂಡು ಬಂದು ಈಗ ದೊಡ್ಡ ಸ್ಟಾರ್ ಆದವರು ಹಲವರಿದ್ದಾರೆ. ನಾಟಕ, ಜಾಹೀರಾತು, ಮಾಡೆಲಿಂಗ್, ಧಾರವಾಹಿ ಸರಿ ಹಲವು ರಂಗದಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದವರ ಅದೃಷ್ಟ ಬದಲಾಗಿ ಸ್ಟಾರ್ ಆಗಿ ಬದಲಾದ ಹಲವು ಉದಾಹರಣೆಗಳು ನಮ್ಮ ನಡುವೆಯೇ ಇದೆ.
ಈಗ ಇಲ್ಲೊಂದು ವಿಡಿಯೋ ಕೂಡ ಇದೇ ರೀತಿಯ ಅಚ್ಚರಿಗಳಿಗೆ ಕಾರಣವಾಗಿದ್ದು. ವಿಡಿಯೋದಲ್ಲಿರುವ ನಟಿ ಯಾರು ಪ್ರಶ್ನೆಗೆ ಉತ್ತರ ಕಂಡು ಜನರ ಅಚ್ಚರಿಗೆ ಒಳಗಾಗಿದ್ದಾರೆ. ಹಿಂದೊಮ್ಮೆ ಜಾಹೀರಾತಿನಲ್ಲಿ ನಟಿಸುತ್ತಿದ್ದ ಆಕೆ ಈಗ ಸೂಪರ್ ಸ್ಟಾರ್ ಆಗಿ ದಿಗ್ಗಜ ನಟರೊಂದಿಗೆ ನಟಿಸಿ ಕೈತುಂಬಾ ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಈ ಮೇಲಿನ ಫೋಟೋದಲ್ಲಿ ಕಾಣಿಸುತ್ತಿರುವ ಈ ನಟಿ ಯಾರು ಎಂಬುದನ್ನು ನೀವೇನಾದರು ಗುರುತಿಸಬಲ್ಲಿರಾ? ನಿಮಗಿದು ಕಷ್ಟವಾಗುತ್ತಿರಬಹುದು. ಏಕೆಂದರೆ ಆಕೆಯ ಮುಖ ಈಗ ಸಂಪೂರ್ಣ ಬದಲಾಗಿದೆ. ಈ ಫೋಟೋದಲ್ಲಿರುವ ನಟಿ ತೆಲುಗು ಚಿತ್ರರಂಗದ ಸ್ಟಾರ್ ಸಮಂತಾ ರುತು ಪ್ರಭು ಎಂದರೆ ನಂಬುತ್ತೀರಾ? ಹಾಲ್ಗೆನ್ನೆಯ ಚೆಲುವೆ ಆಗ ಹೀಗಿದ್ದರು ಎಂದರೆ ಯಾರು ತಾನೆ ನಂಬುತ್ತಾರೆ. ಆದ್ರೆ ಈ ಚಿತ್ರದಲ್ಲಿರುವುದು ನಟಿ ಸಮಂತಾ.
ಸಮಂತಾ ಈಗ ಟಾಲಿವುಡ್‌ನ ಬಹುಬೇಡಿಕೆಯ ನಟಿ. ಆದ್ರೆ ಆಕೆಯ ಆರಂಭಿಕ ದಿನದಲ್ಲಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ವಿಡಿಯೋ ಕೂಡ ಅವರು ಜಾಹೀರಾತು ಮಾಡುತ್ತಿದ್ದ ಕಾಲದಲ್ಲಿ ಸೆರೆಹಿಡಿಯಲಾಗಿದೆ. ಬಹುತೇಕ ಆಕೆಯನ್ನು ಗುರುತಿಸಲಾಗದ ಅವತಾರದಲ್ಲಿ ಸಮಂತಾ ಕಾಣಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಮಂತಾ ಗುಲಾಬಿ ಮತ್ತು ಹಳದಿ ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸೌಂದರ್ಯ ಉತ್ಪನ್ನದ ಜಾಹೀರಾತು ಆಗಿದೆ.
ಆರಂಭದಲ್ಲಿ ಇದು ಸಮಂತಾ ಎಂಬುದನ್ನು ನಂಬಲು ಕೂಡ ಸಾಧ್ಯವಾಗುವುದಿಲ್ಲ. ಈ ವಿಡಿಯೋವನ್ನು ಇನ್ಸ್‌ಸ್ಟಾಗ್ರಾಮ್ ಖಾತೆಯೊಂದರಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿದ ಮಂದಿ ಅಕ್ಷರಶಃ ಶಾಕ್‌ಗೆ ಒಳಗಾಗಿದ್ದಾರೆ. ವಿಡಿಯೋದಲ್ಲಿರುವುದು ನಟಿ ಸಮಂತಾ ಎಂಬುದನ್ನು ಕೆಲವರು ನಂಬಲು ಸಾಧ್ಯವಿಲ್ಲದೆ ಗೊಂದಲ್ಲಕ್ಕೆ ಬಿದ್ದಿದ್ದಾರೆ.
ಆಕೆಯ ಅಭಿಮಾನಿಗಳು ಕಮೆಂಟ್ ಬಾಕ್ಸ್‌ನಲ್ಲಿ ಅಚ್ಚರಿಯ ಕಮೆಂಟ್‌ಗಳ ಹರಿಬಿಟ್ಟಿದ್ದಾರೆ. ಇದು ಸಮಂತಾ ಅಲ್ಲವೇ ಅಲ್ಲ ಎಂಬುದೇ ಹಲವರ ಪ್ರತಿಕ್ರಿಯೆಯಾಗಿದೆ. ಏಕೆಂದರೆ ಈಗಿನ ಸಮಂತಾ ಹಾಗೂ ಅಂದಿನ ವಿಡಿಯೋದಲ್ಲಿರುವ ಸಮಂತಾ ನಡುವೆ ಅಜಗಜಾಂತರ ವ್ಯತ್ಯಾಸ ಇರುವುದು ಇದಕ್ಕೆಲ್ಲ ಕಾರಣವಾಗಿದೆ.
ಹಲವರು ಇದು ನಿಜವಾಗಿಯೂ ಸಮಂತಾ ಅವರ ಹಳೆಯ ವಿಡಿಯೋ ಹೌದಾ? ಈಗ ಇಷ್ಟೊಂದು ಬದಲಾಗಿರುವುದು ನೋಡಿದ್ದರೆ ಇದು ಸುಳ್ಳು ಎನಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ. ಆದರೆ ಈ ವಿಡಿಯೋದಲ್ಲಿ ಇರುವುದು ಸಮಂತಾ ಆಗಿದ್ದಾರೆ. ಸದ್ಯ ಸಮಂತಾ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.



Click it and Unblock the Notifications
