Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಅಕ್ಟೋಬರ್ ತಿಂಗಳಿನಲ್ಲಿ ಬರುವ ಪ್ರಮುಖ ಹಬ್ಬಗಳು, ವ್ರತಗಳಿವು
ಅಕ್ಟೋಬರ್ ತಿಂಗಳೆಂದರೆ ನವರಾತ್ರಿ, ದಸರಾ ಸಂಭ್ರಮ. ಮಕ್ಕಳು ಅಕ್ಟೋಬರ್ ತಿಂಗಳು ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ, ಏಕೆಂದರೆ ದಸರಾ ರಜೆಯದ್ದೇ ಕನವರಿಕೆ. ಅಕ್ಟೋಬರ್‌ನಲ್ಲಿ ಬರೀ ದಸರಾ ಹಬ್ಬ ಮಾತ್ರವಲ್ಲ ಇನ್ನೂ ಅನೇಕ ಹಬ್ಬಗಳು, ವ್ರತಗಳಿವೆ. ಅವುಗಳ ಬಗ್ಗೆ ಮಾಹಿತಿ ನೀಡಲಾಗಿದೆ ನೋಡಿ:

ಅಕ್ಟೋಬರ್ 2, ಸೋಮವಾರ: ಸಂಕಷ್ಠಿ ಚತುರ್ಥಿ
ಅಕ್ಟೋಬರ್ 2: ಗಾಂಧಿ ಜಯಂತಿ
ಅಕ್ಟೋಬರ್ 10, ಮಂಗಳವಾರ: ಇಂದಿರಾ ಏಕಾದಶಿ
ಅಕ್ಟೋಬರ್ 11, ಬುಧವಾರ: ಪ್ರದೋಷ ವ್ರತ
ಅಕ್ಟೋಬರ್ 12, ಗುರುವಾರ: ಮಾಸಿಕ ಶಿವರಾತ್ರಿ
ಅಕ್ಟೋಬರ್ 14, ಶನಿವಾರ: ಅಶ್ವಿನಿ ಅಮವಾಸ್ಯೆ
ಅಕ್ಟೋಬರ್ 15, ಭಾನುವಾರ: ಶಾರದೀಯ ನವರಾತ್ರಿ
ಅಕ್ಟೋಬರ್ 18, ಬುಧವಾರ: ತುಲಾ ಸಂಕ್ರಾಂತಿ
ಅಕ್ಟೋಬರ್ 24, ಮಂಗಳವಾರ: ದಸರಾ
ಅಕ್ಟೋಬರ್ 25, ಬುಧವಾರ: ಪಾಪನಾಶನಿ ಏಕಾದಶಿ
ಅಕ್ಟೋಬರ್ 28, ಶನಿವಾರ: ಅಶ್ವಿನಿ ಪೂರ್ಣಿಮಾ ವ್ರತ
ಸಂಕಷ್ಠಿ ಚತುರ್ಥಿ: ಈ ದಿನ ಲಂಬೋದರ ಆರಾಧಿಸಲಾಗುವುದು, ಸಂಕಷ್ಠಿ ಚತುರ್ಥಿಯಂದು ಉಪವಾಸ ಮಾಡಿ ಗಣಪತಿಯನ್ನು ಆರಾಧನೆ ಮಾಡಿದರೆ ಮನದ ಇಷ್ಟಾರ್ಥಗಳು ನೆರವೇರುವುದು.
ಇಂದಿರಾ ಏಕಾದಶಿ: ಇಂದಿರಾ ಏಕಾದಶಿಯಂದು ಶ್ರೀ ವಿಷ್ಣುವಿನ ಆರಾಧನೆ ಮಾಡಲಾಗುವುದು.
ಪ್ರದೋಷ ವ್ರ: ಈ ದಿನ ಶಿವ ಆರಾಧನೆ ಮಾಡಲಾಗುವುದು. ಉಪವಾಸವಿದ್ದು ಸಂಜೆ ಹೊತ್ತು ಅಂದರೆ ಪ್ರದೋಷ ಕಾಲದಲ್ಲಿ ಶಿವನ ಆರಾಧನೆ ಮಾಡಲಾಗುವುದು
ತುಲಾ ಸಂಕ್ರಾಂತಿ: ಸೂರ್ಯ ತನ್ನ ರಾಶಿ ಪಥ ಬದಲಾವಣೆ ಮಾಡುತ್ತಾನೆ. ಸೂರ್ಯನು ಕನ್ಯಾ ರಾಶಿಯಲ್ಲಿದ್ದಾನೆ, ಸೆಪ್ಟೆಂಬರ್ 18ಕ್ಕೆ ಕನ್ಯಾ ರಾಶಿಯನ್ನು ಬಿಟ್ಟು ತುಲಾ ರಾಶಿಯನ್ನು ಪ್ರವೇಶಿಸಲಿದೆ.
ಅಕ್ಟೋಬರ್ 15-24: ದಸರಾ ಸಂಭ್ರಮ
ನವರಾತ್ರಿ ಅಂದರೆ ಕರ್ನಾಟಕದಲ್ಲಿ ಹಬ್ಬ, ಏಕೆಂದರೆ ಆ ದಿನಗಳಲ್ಲಿ ನಾಡಹಬ್ಬ ದಸರಾ ಸಂಭ್ರಮ, ಚಿನ್ನದ ಅಂಬಾರಿ ಹೊತ್ತು ಬರುವ ಆನೆ, ಸಂಪೂರ್ಣವಾಗಿ ಅಲಂಕೃತವಾಗಿರುವ ಮೈಸೂರು, ಇವೆಲ್ಲಾ ನೋಡುವುದೇ ಕಣ್ಣಿಗೆ ಹಬ್ಬ. ಒಂಭತ್ತು ದಿನ ನವದುರ್ಗೆಯರನ್ನು ಆರಾಧಿಸಲಾಗುವುದು, 10ನೇ ದಿನ ದಸರಾ ಹಬ್ಬವನ್ನು ಆಚರಿಸಲಾಗುವುದು.



Click it and Unblock the Notifications
