Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಕ್ಟೋಬರ್ ಮಾಸ ವೃಶ್ಚಿಕ ರಾಶಿಯವರಿಗೆ ಶುಭವೇ? ಯಾವೆಲ್ಲಾ ವಿಷಯದಲ್ಲಿ ಜಾಗ್ರತೆವಹಿಸಬೇಕು?
ಅಕ್ಟೋಬರ್ ತಿಂಗಳು ವೃಶ್ಚಿಕ ರಾಶಿಯರಿಗೆ ಹೇಗಿರಲಿದೆ? ಈ ತಿಂಗಳಿನಲ್ಲಿ ಗ್ರಹಗಳ ಸ್ಥಾನದಿಂದಾಗಿ ನಿಮ್ಮ ವೃತ್ತಿ ಜೀವನ, ಕುಟುಂಬ ಜೀವನ, ಆರ್ಥಿಕ ಜೀವನ, ಆರೋಗ್ಯದ ಮೇಲೆ ಬೀರುವ ಪ್ರಭಾವವೇನು? ಈ ತಿಂಗಳು ನಿಮ್ಮ ರಾಶಿಯವರಿಗೆ ಹೇಗಿರಲಿದೆ ಎಂದು ನೋಡೋಣ:
ವೃತ್ತಿ ಜೀವನ
ಈ ತಿಂಗಳಿನಲ್ಲಿ ನೀವು ವೃತ್ತಿ ಜೀವನದಲ್ಲಿ ನಕಾರಾತ್ಮಕ, ಧನಾತ್ಮಕ ಎರಡೂ ಫಲಿತಾಂಶವನ್ನು ಪಡೆಯುತ್ತೀರಿ. ಶನಿಯು 4ನೇ ಮನೆಯಲ್ಲಿ ಇರುವುದರಿಂದ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ನೀವು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ, ನೀವು ಕೆಲಸದಲ್ಲಿ ಅಧಿಕ ಗಮನಹರಿಸಬೇಕಾಗುತ್ತದೆ. ನಾಲ್ಕನೇ ಮನೆಯಲ್ಲಿ ಶನಿಯ ಸ್ಥಾನದಿಂದಾಗಿ, ನೀವು ಏಕಾಗ್ರತೆಯ ಕೊರತೆಯನ್ನು ಅನುಭವಿಸಬಹುದು.

ಆರನೇ ಮನೆಯಲ್ಲಿ ಗುರುವಿನ ಸ್ಥಾನವು ನಿಮ್ಮ ವೃತ್ತಿಜೀವನದಲ್ಲಿ ಕೆಲವು ಸವಾಲುಗಳನ್ನು ಉಂಟು ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕೆಲಸದಲ್ಲಿ ನೀವು ತೃಪ್ತರಾಗುವುದಿಲ್ಲ. ಉದ್ಯೋಗ ಬದಲಾವಣೆಯ ಬಗ್ಗೆ ಯೋಚಿಸಬಹುದು. ಅಕ್ಟೋಬರ್ 18ರಿಂದ ಸೂರ್ಯ 12ನೇ ಮನೆಯಲ್ಲಿ ಇರುವುದರಿಂದ ಉದ್ಯೋಗದ ಒತ್ತಡದಿಂದ ವೃತ್ತಿಜೀವನದಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು.
ಈ ಅವಧಿಯಲ್ಲಿ ನೀವು ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಆದರೆ ಈ ತಿಂಗಳ ಕೊನೆಯಲ್ಲಿ ಹನ್ನೊಂದನೇ ಮನೆಯಲ್ಲಿ ಕೇತು ಇರುವುದರಿಂದ, ವೃತ್ತಿಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಗಳು ಕಡಿಮೆ. ಒಟ್ಟಿನಲ್ಲಿ ಕೆಲಸದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ.
ಆರ್ಥಿಕ ಜೀವನ
ಆರ್ಥಿಕ ಜೀವನದಲ್ಲಿಯೂ ಈ ತಿಂಗಳಿನಲ್ಲಿ ಮಿಶ್ರಫಲ. ಈ ಅವಧಿಲ್ಲಿ ಖರ್ಚು ಮಾಡುವಾಗ ಜಾಗ್ರತೆವಹಿಸಿ. ಗುರುವು ಆರನೇ ಮನೆಯಲ್ಲಿ ಸ್ಥಿತರಿರುವುದರಿಂದ, ಅಗತ್ಯಗಳನ್ನು ಪೂರೈಸಲು ನೀವು ಭಾರೀ ವೆಚ್ಚವನ್ನು ಎದುರಿಸಬೇಕಾಗಬಹುದು.
ಹನ್ನೆರಡನೇ ಮನೆಯಲ್ಲಿ ಕೇತು ಮತ್ತು ಆರನೇ ಮನೆಯಲ್ಲಿ ಗುರು ಇರಲಿದೆ. ನಿಮ್ಮ ಆರೋಗ್ಯಕ್ಕಾಗಿ ನೀವು ಹಣವನ್ನು ಖರ್ಚು ಮಾಡಬೇಕಾಗಬಹುದು. ನಿಮ್ಮ ಖರ್ಚುಗಳನ್ನು ಪೂರೈಸಲು ನೀವು ಸಾಲವನ್ನು ತೆಗೆದುಕೊಳ್ಳಬೇಕಾಗಬಹುದು.
ವ್ಯಾಪಾರಸ್ಥರು ಈ ತಿಂಗಳಲ್ಲಿ ಸರಾಸರಿ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ನಾಲ್ಕನೇ ಮನೆಯಲ್ಲಿ ಶನಿ ಸ್ಥಿತರಿರುವುದರಿಂದ ನೀವು ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು. ಈ ತಿಂಗಳು ಯಾವುದೇ ಹೊಸ ಪಾಲುದಾರಿಕೆಗಳನ್ನು ಪ್ರವೇಶಿಸದಂತೆ, ವ್ಯವಹಾರಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ನಿಮಗೆ ಸಲಹೆ ನೀಡಲಾಗುವುದು.
ಆರೋಗ್ಯ ಜೀವನ
ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಈ ತಿಂಗಳು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ತಾಯಿಯ ಆರೋಗ್ಯಕ್ಕಾಗಿ ಹಣ ಖರ್ಚಾಗುವುದು.
ಪ್ರೀತಿ, ಮದುವೆ, ಕುಟುಂಬ ಜೀವನ
ಪ್ರೀತಿ, ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಈ ತಿಂಗಳು ನೀವು ತುಂಬಾ ಜಾಗರೂಕರಾಗಿರಬೇಕು. ಸಂಬಂಧದಲ್ಲಿ ಸಾಮರಸ್ಯದ ಕೊರತೆ ಉಂಟಾಗಬಹುದು. ನಾಲ್ಕನೇ ಮನೆಯಲ್ಲಿ ಶನಿ ಇರುವುದರಿಂದ ಹೊಂದಾಣಿಕೆಯಲ್ಲಿ ತೊಂದರೆ ಉಂಟಾಗುವುದು. ಈ ತಿಂಗಳಿನಲ್ಲಿ ವಿವಾಹದ ಬಗ್ಗೆ ಮಾತುಕತೆ ನಡೆಸದಿರುವುದು ಒಳ್ಳೆಯದು. ಕುಟುಂಬ ಸದಸ್ಯರ ನಡುವೆ ಕೂಡ ಕೆಲ ಭಿನ್ನಾಭಿಪ್ರಾಯ ಉಂಟಾಗಬಹುದು. ಕುಟುಂಬದಲ್ಲಿ ಖರ್ಚು ಅಧಿಕವಾಗುವುದರಿಂದ ಇದರಿಂದ ಕೂಡ ಸಮಸ್ಯೆ ಉಂಟಾಗುವುದು.
ಪರಿಹಾರ
* ನಿಮ್ಮ ಕುಲದೇವರನ್ನು ಪ್ರತಿದಿನ ಮನಸ್ಸಿನಲ್ಲಿ ಧ್ಯಾನಿಸಿ
* ಶುಕ್ರ ಬೀಜ ಮಂತ್ರ ಪಠಿಸಿ.



Click it and Unblock the Notifications
