Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಾಸ ರಾಶಿಫಲ ಪ್ರಕಾರ ಅಕ್ಟೋಬರ್ ತಿಂಗಳು ಧನು ರಾಶಿಯವರಿಗೆ ಹೇಗಿರಲಿದೆ?
ಅಕ್ಟೋಬರ್ ತಿಂಗಳು ಧನುರಾಶಿಯರಿಗೆ ಹೇಗಿರಲಿದೆ? ಈ ತಿಂಗಳಿನಲ್ಲಿ ಗ್ರಹಗಳ ಸ್ಥಾನದಿಂದಾಗಿ ನಿಮ್ಮ ವೃತ್ತಿ ಜೀವನ, ಕುಟುಂಬ ಜೀವನ, ಆರ್ಥಿಕ ಜೀವನ, ಆರೋಗ್ಯದ ಮೇಲೆ ಬೀರುವ ಪ್ರಭಾವವೇನು? ಈ ತಿಂಗಳು ನಿಮ್ಮ ರಾಶಿಯವರಿಗೆ ಹೇಗಿರಲಿದೆ ಎಂದು ನೋಡೋಣ:
ವೃತ್ತಿ ಜೀವನ
ಧನು ರಾಶಿಯವರಿಗೆ ವೃತ್ತಿ ಜೀವನದಲ್ಲಿ ಈ ತಿಂಗಳು ಮಿಶ್ರಫಲ. ಶನಿಯು 3ನೇ ಮನೆಯಲ್ಲಿ ಹಿಮ್ಮುಖ ಸ್ಥಾನದಲ್ಲಿದೆ, ಇದರ ಪರಿಣಾಮವಾಗಿ ವೃತ್ತಿಜೀವನದಲ್ಲಿ ನಿಮ್ಮ ಬೆಳವಣಿಗೆ ನಿಧಾನವಾಗುವುದು, ಆದರೆ ಚಿಂತಿಸಬೇಕಾಗಿಲ್ಲ ಯಶಸ್ಸು ಸಿಗಲಿದೆ.

ಕೇತುವು ನಿಮ್ಮ ಹನ್ನೊಂದನೇ ಮನೆಯಲ್ಲಿದೆ, ಈ ಸ್ಥಾನ ನಿನಗೆ ಅನುಕೂಲಕರವಾಗಿದೆ. ಕೇತು ನಿಮ್ಮ ಎಲ್ಲಾ ಆಸೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಕೇತುವಿನ ಈ ಸ್ಥಾನದಿಂದಾಗಿ, ನಿಮ್ಮ ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಇದರೊಂದಿಗೆ, ಈ ತಿಂಗಳಲ್ಲಿ ನೀವು ಬಡ್ತಿ ಮತ್ತು ಇತರ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ರಾಹು 5ನೇ ಸ್ಥಾನದಲ್ಲಿ ಇರುವುದರಿಂದ ನಿಮ್ಮ ಆತ್ಮವಿಶ್ವಾಸ ಚೆನ್ನಾಗಿರಲಿದೆ.
ಸ್ವಂತ ವ್ಯವಹಾರದಲ್ಲಿರುವವರಿಗೆ ಈ ತಿಂಗಳು ತುಂಬಾನೇ ಚೆನ್ನಾಗಿರಲಿದೆ. ಈ ತಿಂಗಳ ಕೊನೆಯಲ್ಲಿ ವ್ಯಾಪಾರಸ್ಥರು ಉತ್ತಮ ಆದಾಯವನ್ನು ಪಡೆಯುತ್ತೀರಿ, ಏಕೆಂದರೆ ಗುರುವಿನ ಸ್ಥಾನವು ಅನುಕೂಲಕರವಾಗಿದೆ. ಸ್ವಂತ ವ್ಯವಹಾರ ಮಾಡುವವರಿಗೆ ಈ ತಿಂಗಳು ಲಾಭದಾಯಕವಾಗಿದೆ. ವಿದೇಶದಲ್ಲಿ ಕೆಲಸ ಮಾಡಲು ಬಯಸುವವರಿಗೆ ಉತ್ತಮ ಅವಕಾಶ ದೊರೆಯಲಿದೆ.
ಆರ್ಥಿಕ ಜೀವನ
ಆರ್ಥಿಕ ದೃಷ್ಟಿಯಿಂದ ಈ ತಿಂಗಳು ಉತ್ತಮವಾಗಿದೆ. ಮೂರನೇ ಮನೆಯಲ್ಲಿ ಶನಿಯ ಉಪಸ್ಥಿತಿಯು ನಿಮ್ಮ ಆರ್ಥಿಕ ಲಾಭವನ್ನು ನೀಡುವುದು. ಇದಲ್ಲದೆ, ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ವಿದೇಶಕ್ಕೆ ಹೋಗಿ ಹಣ ಗಳಿಸುವ ಅವಕಾಶವೂ ಇದೆ. ಈ ತಿಂಗಳು, ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ಗುರು 5ನೇ ಮನೆಯಲ್ಲಿದೆ, ಗುರುವಿನ ಈ ಸ್ಥಾನದಿಂದಾಗಿ ನೀವು ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ.
ಷೇರು ಮಾರುಕಟ್ಟೆಇತ್ಯಾದಿಗಳಲ್ಲಿ ಹೂಡಿಕೆ ಮಾಡಿದ್ದರೆ ಲಾಭ ಪಡೆಯಬಹುದು. ಗ್ರಹಗಳ ಅನುಕೂಲಕರ ಸ್ಥಾನದಿಂದಾಗಿ, ಈ ತಿಂಗಳು ಹಣಕ್ಕೆ ಸಂಬಂಧಿಸಿದ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಈ ನಿರ್ಧಾರಗಳು ನಿಮಗೆ ಭವಿಷ್ಯಕ್ಕಾಗಿ ಭದ್ರತೆಯನ್ನು ನೀಡುತ್ತದೆ. ಶುಕ್ರ ಈ ತಿಂಗಳು ಒಂಬತ್ತನೇ ಮನೆಯಲ್ಲಿದೆ, ಈ ಕಾರಣದಿಂದಾಗಿ ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು.
ಆರೋಗ್ಯ ಜೀವನ
ಆರೋಗ್ಯದ ದೃಷ್ಟಿಯಿಂದ, ಈ ತಿಂಗಳು ನಿಮಗೆ ಉತ್ತಮವಾಗಿದೆ, ಶನಿ, ಗುರು, ಬುಧ ಎಲ್ಲವೂ ನಿಮಗೆ ಅನುಕೂಲಕರ ಸ್ಥಾನದಲ್ಲಿರುವುದರಿಂದ ನೀವು ಉತ್ತಮ ಆರೋಗ್ಯವನ್ನು ಹೊಂದುವಿರಿ.
ಪ್ರೀತಿ, ಮದುವೆ, ಕುಟುಂಬ
ಪ್ರೀತಿ ಮತ್ತು ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಈ ತಿಂಗಳು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ, ಪ್ರೇಮಿಗಳಿಗೆ ಈ ತಿಂಗಳು ಅನುಕೂಲಕವಾಗಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿಯ ನಡುವೆ ಉತ್ತಮ ಹೊಂದಾಣಿಕೆ ಇರಲಿದೆ. ಐದನೇ ಮನೆಯಲ್ಲಿ ಗುರುವಿನ ಸ್ಥಾನದ ಪರಿಣಾಮವಾಗಿ, ಕುಟುಂಬದಲ್ಲಿ ಸಕಾರಾತ್ಮಕ ವಾತಾವರಣ ಇರುತ್ತದೆ. ಈ ತಿಂಗಳಲ್ಲಿ ಕುಟುಂಬ ಸದಸ್ಯರಲ್ಲಿ ಒಗ್ಗಟ್ಟು ಇರುತ್ತದೆ.
ಪರಿಹಾರ
ಗುರುವಾರದಂದು ಬಡವರಿಗೆ ಅನ್ನದಾನ ಮಾಡಿ.
"ಓಂ ಗುರುವೇ ನಮಃ" ಎಂಬ ಮಂತ್ರವನ್ನು ಪ್ರತಿದಿನ 108 ಬಾರಿ ಜಪಿಸಿ.



Click it and Unblock the Notifications
