Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಕ್ಟೋಬರ್ ಮಾಸ ತುಲಾ ರಾಶಿಯವರಿಗೆ ಹೇಗಿರಲಿದೆ?
ಅಕ್ಟೋಬರ್ ತಿಂಗಳು ತುಲಾ ರಾಶಿಯರಿಗೆ ಹೇಗಿರಲಿದೆ? ಈ ತಿಂಗಳಿನಲ್ಲಿ ಗ್ರಹಗಳ ಸ್ಥಾನದಿಂದಾಗಿ ನಿಮ್ಮ ವೃತ್ತಿ ಜೀವನ, ಕುಟುಂಬ ಜೀವನ, ಆರ್ಥಿಕ ಜೀವನ, ಆರೋಗ್ಯದ ಮೇಲೆ ಬೀರುವ ಪ್ರಭಾವವೇನು? ಈ ತಿಂಗಳು ನಿಮ್ಮ ರಾಶಿಯವರಿಗೆ ಹೇಗಿರಲಿದೆ ಎಂದು ನೋಡೋಣ:
ವೃತ್ತಿ ಜೀವನ
ಈ ತಿಂಗಳಿನಲ್ಲಿ ನೀವು ನಿಮ್ಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಕಷ್ಟವಾಗುವುದು. ರಾಹು-ಕೇತುಗಳ ಪ್ರತಿಕೂಲ ಸ್ಥಾನದಿಂದಾಗಿ, ನಿಮ್ಮ ವೃತ್ತಿಜೀವನದಲ್ಲಿ ನೀವು ಅಡೆತಡೆಗಳನ್ನು ಎದುರಿಸಬಹುದು. ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳು ಒತ್ತಡವನ್ನು ಹಾಕಬಹುದು, ಕೆಲಸದಲ್ಲಿ ಅಸಮಧಾನ ಉಂಟಾಗುವುದು. ಆದರೆ, ಗುರುವಿನ ಶುಭ ಫಲ ನಿಮ್ಮನ್ನು ನಿಟ್ಟುಸಿರು ಬಿಡುವಂತೆ ಮಾಡುತ್ತದೆ.

ತಿಂಗಳ ದ್ವಿತೀಯಾರ್ಧದ ವೃತ್ತಿ ಜೀವನದಲ್ಲಿನ ಸಮಸ್ಯೆಗಳು ಕಡಿಮೆಯಾಗುವುದು ವೃತ್ತಿ ಜೀವನದಲ್ಲಿಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಈ ತಿಂಗಳು ತಮ್ಮ ಸ್ವಂತ ವ್ಯವಹಾರದಲ್ಲಿರುವವರಿಗೆ ತುಂಬಾ ಫಲಪ್ರದವಾಗಬಹುದು, ಏಕೆಂದರೆ ಗುರುವು ಸ್ಥಾನವು ಅನುಕೂಲಕರವಾಗಿದೆ,ಅದರಿಂದ ನೀವು ಉತ್ತಮ ಲಾಭವನ್ನು ಸಹ ಪಡೆಯಬಹುದು. ವ್ಯಾಪಾರಸ್ಥರಿಗೆ ಈ ಅವಧಿ ಅನುಕೂಲಕರವಾಗಿದೆ.
ಆರ್ಥಿಕ ಜೀವನ
ಅಕ್ಟೋಬರ್ ತಿಂಗಳಿನಲ್ಲಿ ಆರ್ಥಿಕವಾಗಿ ಏರಿಳಿತಗಳನ್ನು ಎದುರಿಸಬೇಕಾಗಬಹುದು, ಏಕೆಂದರೆ ಎರಡನೇ ಮನೆಯ ಅಧಿಪತಿ ಮಂಗಳ ಮೂರನೇ ಮನೆಯಲ್ಲಿ ಸ್ಥಿತವಾಗಿದ್ದಾನೆ, ವ್ಯಾಪಾರ ಕ್ಷೇತ್ರದಲ್ಲಿ ಇರುವವರಿಗೆ ಈ ತಿಂಗಳಲ್ಲಿ ಲಾಭ ಕಡಿಮೆ ಇರಲಿದೆ. ವ್ಯಾಪಾರದಲ್ಲಿ ಕಠಿಣ ಸ್ಪರ್ಧೆಯನ್ನು ಎದುರಿಸಬಹುದು. ಆದರೆ ಶುಕ್ರನ ಸ್ಥಾನ ಅನುಕೂಲಕರವಾಗಿರುವುದರಿಂದ ಆರ್ಥಿಕವಾಗಿ ದೊಡ್ಡ ಸಮಸ್ಯೆ ಕಾಡುವುದಿಲ್ಲ.
ಆರೋಗ್ಯ ಜೀವನ
ತುಲಾ ರಾಶಿಯವರು ಈ ತಿಂಗಳಿನಲ್ಲಿ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು, ಈ ಅವಧಿಯಲ್ಲಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಂಡು ಬರಬಹುದು. ಈ ಅವಧಿಯಲ್ಲಿ ಆತಂಕ ಹೆಚ್ಚಾಗುವುದು. ಸಂಗಾತಿಯ ಆರೋಗ್ಯದಲ್ಲೂ ಸಮಸ್ಯೆ ಕಂಡು ಬರುವುದು. ಆರೋಗ್ಯಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ.
ಪ್ರೀತಿ, ಮದುವೆ, ಕುಟುಂಬ ಜೀವನ
ಏಳನೇ ಮನೆಯಲ್ಲಿ ರಾಹು ಮತ್ತು ಮೊದಲ ಮನೆಯಲ್ಲಿ ಕೇತು ಇರುವುದರಿಂದ, ನಿಮ್ಮ ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ಮಿಶ್ರ ಫಲ. ಆದರೆ ಶುಕ್ರನ ಸ್ಥಾನ ಸಮಸ್ಯೆಗಳು ದೊಡ್ಡದಾಗದಂತೆ ತಡೆಗಟ್ಟುತ್ತದೆ. ವಿವಾಹಕ್ಕೆ ಈ ಸಮಯ ಅನುಕೂಲಕರವಲ್ಲ. ಕುಟುಂಬದ ಜೀವನದಲ್ಲಿ ಏನಾದರೂ ಸಮಸ್ಯೆ ಉಂಟಾದರೆ ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಿ.
ಪರಿಹಾರ
* ಮಂಗಳವಾರ ರಾಹು-ಕೇತು ಮಂತ್ರ ಪಠಣೆ ಮಾಡಿ
* ಶುಕ್ರ ಬೀಜ ಮಂತ್ರ ಪಠಿಸಿ.



Click it and Unblock the Notifications
